ಕನ್ನಡ ಸುದ್ದಿ  /  ಜೀವನಶೈಲಿ  /  Energy Conservation Day; ಇಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ; ವಿದ್ಯುತ್‌ ಉಳಿತಾಯ ಮಾಡಿ, ನಿಮ್ಮ ಮಕ್ಕಳಿಗೂ ತಿಳಿ ಹೇಳಿ

Energy Conservation Day; ಇಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ; ವಿದ್ಯುತ್‌ ಉಳಿತಾಯ ಮಾಡಿ, ನಿಮ್ಮ ಮಕ್ಕಳಿಗೂ ತಿಳಿ ಹೇಳಿ

HT Kannada Desk HT Kannada

Dec 14, 2023 07:43 AM IST

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ 2023

  • National Energy Conservation Day 2023: ಪ್ರತಿ ವರ್ಷ ಡಿಸೆಂಬರ್‌ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು, ಅದನ್ನು ಪರಿಣಾಮಕಾರಿಯಾಗಿ ಬಳಸುವಂತೆ ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. 

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ 2023
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ 2023 (PC: Pixabay)

National Energy Conservation Day 2023: ಪ್ರತಿಯೊಬ್ಬರಿಗೂ ವಿದ್ಯುತ್‌ ಬೇಕು. ವಿದ್ಯುತ್‌ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂಬುವಷ್ಟರ ಮಟ್ಟಿಗೆ ನಾವು ಅದಕ್ಕೆ ಒಗ್ಗಿಹೋಗಿದ್ದೇವೆ. ಆದರೆ ಅದು ಪೋಲಾಗದಿರುವಂತೆ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಇದೇ ದೃಷ್ಟಿಯಿಂದ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣೆ ದಿನವನ್ನು ಆಚರಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

Personality Test: ಮನುಷ್ಯನ ಮುಖ, ಬಂಡೆ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ಗುಪ್ತ ಸ್ವಭಾವ ತಿಳಿಸುತ್ತೆ ಈ ಚಿತ್ರ

ಕಂದಮ್ಮನ ತ್ವಚೆಗೆ ಫೇಸ್‌ಕ್ರೀಮ್‌ ಬಳಕೆ ಸುರಕ್ಷಿತವೇ? ಮಗುವಿನ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಲೇಬೇಕಾದ ಅಂಶಗಳಿವು

ದೋಸೆ, ಇಡ್ಲಿ ಮಾತ್ರವಲ್ಲ; ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಮಹತ್ವ

ಇಂಧನ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಉದ್ದೇಶವಾಗಿದೆ. ಶಕ್ತಿಯ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಪಾತ್ರ ವಹಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಬಳಸಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಇದು ನಮಗೆ ನೆನಪಿಸುತ್ತದೆ. ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದಂದು, ಸೆಮಿನಾರ್‌, ಕಾರ್ಯಾಗಾರಗಳು ಮತ್ತು ಇಂಧನ ಉಳಿತಾಯ ಅಭಿಯಾನಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗಿದೆ. ಶಕ್ತಿಯ ವ್ಯರ್ಥವನ್ನು ಕಡಿಮೆ ಮಾಡಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ಮುಂದಿನ ಪೀಳಿಗೆಗೆ ಹಸಿರು ಜಗತ್ತನ್ನು ಸೃಷ್ಟಿಸುವ ಪ್ರಯತ್ನಗಳನ್ನು ಗುರುತಿಸಲು ಮತ್ತು ಆಚರಿಸಲು ಇದು ಒಂದು ವಿಶೇಷ ದಿನವಾಗಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಇತಿಹಾಸ

1990 ರ ದಶಕದ ಆರಂಭದಲ್ಲಿ ಶಕ್ತಿ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳ ತುರ್ತು ಅಗತ್ಯವನ್ನು ದೇಶವು ಗುರುತಿಸಿತು. ಭಾರತ ಸರ್ಕಾರವು, ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಮೂಲಕ ಇಂಧನ ದಕ್ಷತೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಆರಂಭಿಸಿತು. ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನದ ಅಧಿಕೃತ ಸ್ಥಾಪನೆಯು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಕಾಯ್ದೆ2001ಕ್ಕೆ ಕಾರಣವಾಗಿದೆ. ಭಾರತದಲ್ಲಿ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕ್ರಮಗಳಿಗಾಗಿ ಕಾನೂನು ಚೌಕಟ್ಟನ್ನು ಒದಗಿಸಲು ಕಾಯ್ದೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾಯ್ದೆ ಅಡಿಯಲ್ಲಿ, ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಅನ್ನು ಔಪಚಾರಿಕವಾಗಿ 2002 ರಲ್ಲಿ ಸ್ಥಾಪಿಸಲಾಯಿತು. ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು 14 ಡಿಸೆಂಬರ್ 2001 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.

ಇಂಧನ ಉಳಿತಾಯ ಪ್ರತಿಯೊಬ್ಬರ ಕರ್ತವ್ಯ

ಇಂಧನ ಪ್ರತಿಯೊಬ್ಬರಿಗೂ ಬಹಳ ಅಮೂಲ್ಯವಾದುದು. ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಇಂಧನವನ್ನು ವ್ಯರ್ಥ ಮಾಡುವುದರಿಂದ ಹಣದ ವೆಚ್ಚ ಮಾತ್ರವಲ್ಲ, ಇಂಧನ ಕೊರತೆಯ ಅಪಾಯವೂ ಇದೆ. ಅಷ್ಟೇ ಅಲ್ಲ ವಾಯು ಮಾಲಿನ್ಯ, ಇಂಧನಗಳ ಹೆಚ್ಚಿನ ಬಳಕೆಯು ಸಸ್ಯಗಳು, ಪ್ರಾಣಿಗಳು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಹಾನಿಗೊಳಿಸುತ್ತದೆ. ನದಿಗಳು ಬತ್ತಿಹೋಗುವುದು, ಓಝೋನ್ ಪದರದ ಮತ್ತಷ್ಟು ರಂಧ್ರಗಳಂತಹ ವಿಪತ್ತುಗಳ ಜೊತೆಗೆ, ಹವಾಮಾನ ಮಾಲಿನ್ಯ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಇಂಧನ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ.

ಹಾಗೇ ಇಂಧನ ಉಳಿತಾಯದ ಬಗ್ಗೆ ಮಕ್ಕಳಿಗೂ ತಿಳಿಸಿಕೊಡುವುದು ಮುಖ್ಯ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕೆಂದರೆ ಇಂಧನ ಉಳಿತಾಯದ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ನೀರು ಪೋಲು ಮಾಡಬಾರದು, ಅನಾವಶ್ಯಕ ವಿದ್ಯುತ್‌ ಬಳಸಬಾರದು, ಒಂದು ವೇಳೆ ಹಾಗೆ ಮಾಡಿದರೆ ಏನೆಲ್ಲಾ ಸಮಸ್ಯೆ ಆಗಬಹುದು ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಬೇಕು.

    ಹಂಚಿಕೊಳ್ಳಲು ಲೇಖನಗಳು