ಕನ್ನಡ ಸುದ್ದಿ  /  ಜೀವನಶೈಲಿ  /  Republic Day 2024: ಗಣರಾಜ್ಯೋತ್ಸವಕ್ಕೆ ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾಗಳು

Republic Day 2024: ಗಣರಾಜ್ಯೋತ್ಸವಕ್ಕೆ ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾಗಳು

HT Kannada Desk HT Kannada

Jan 19, 2024 08:00 AM IST

ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಲು ಐಡಿಯಾ (ಸಂಗ್ರಹ ಚಿತ್ರ)

    • Republic Day Fancy Dress: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಾಲೆ, ಸಂಘ ಮುಂತಾದ ಕಡೆಗಳಲ್ಲಿ ಮಕ್ಕಳಿಗಾಗಿಯೇ ಫ್ಯಾನ್ಸಿ ಡ್ರೆಸ್‌, ವಿವಿಧ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಯಾವ ದೇಶಭಕ್ತರ ವೇಷ ಹಾಕಿಸುವುದು ಎಂಬ ಯೋಚನೆಯಿಂದ ಅಂತಹ ಕಾರ್ಯಕ್ರಮದಿಂದ ದೂರವಿರಬೇಡಿ. ನಿಮಗೆ ಸಹಾಯವಾಗಲೆಂದು ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ. 
ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಲು ಐಡಿಯಾ (ಸಂಗ್ರಹ ಚಿತ್ರ)
ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಲು ಐಡಿಯಾ (ಸಂಗ್ರಹ ಚಿತ್ರ)

ಇಂದು ನಾವೆಲ್ಲರೂ ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರೇ ಕಾರಣ. ಅಂತಹ ಮಹಾನ್‌ ವೀರರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಲು ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಕ್ಕಿಂತ ಉತ್ತಮ ಸಂದರ್ಭ ಬೇರೊಂದಿಲ್ಲ. ಇದರಿಂದ ನಮ್ಮ ಮಕ್ಕಳ ಮನಸ್ಸಿನಲ್ಲಿ ದೇಶ ಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಪುರುಷರ ಬಗ್ಗೆ ಗೌರವ ಹೆಚ್ಚುವುದಲ್ಲದೆ, ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವವೂ ಅರ್ಥವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ದೇಶಭಕ್ತರ ವೇಷ ತೊಡಿಸುವುದರ ಮೂಲಕ ಅವರಲ್ಲೂ ದೇಶಾಭಿಮಾನ ಮೂಡಿಸಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

Weight Loss: ವರ್ಕೌಟ್‌ ಮಾಡದೇ ವೈಟ್‌ಲಾಸ್‌ ಆಗ್ಬೇಕಾ; ಬೇಸಿಗೆಯಲ್ಲಿ ಬೆವರು ಹರಿಯದೇ ತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಸಲಹೆ

Personality Test: ಮಹಿಳೆಯ ಮುಖ, ಅರಳಿರುವ ಹೂ ಎರಡರಲ್ಲಿ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ವ್ಯಕ್ತಿತ್ವ ತಿಳಿಸುತ್ತೆ ಚಿತ್ರ

Brain Teaser: 3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?

ಪ್ರತಿದಿನ ಮೀನು ತಿನ್ನುವ ಅಭ್ಯಾಸ ನಿಮಗಿದ್ಯಾ, ಮೀನು ಪ್ರಿಯರು ತಿಳಿದಿರಲೇಬೇಕಾದ ಮಹತ್ವದ ವಿಚಾರಗಳಿವು

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಾಲೆ, ಸಂಘ ಮುಂತಾದ ಕಡೆಗಳಲ್ಲಿ ಮಕ್ಕಳಿಗಾಗಿಯೇ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಯಾವ ದೇಶ ಭಕ್ತರ ವೇಷ ಹಾಕಿಸುವುದು ಎಂಬ ಯೋಚನೆಯಿಂದ ಅಂತಹ ಕಾರ್ಯಕ್ರಮದಿಂದ ದೂರವಿರಬೇಡಿ. ನಿಮಗೆ ಸಹಾಯವಾಗಲೆಂದು ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ನಿಮ್ಮ ಮಗುವನ್ನು ಅದೇ ರೀತಿ ತಯಾರುಮಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಅವರ ಜೀವನದ ಅಮೂಲ್ಯ ಕ್ಷಣಗಳನ್ನು ನೀವೂ ಆನಂದಿಸಿ.

ಮಹಾತ್ಮಾ ಗಾಂಧಿ

ನಿಮ್ಮ ಮಗುವಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ವೇಷ ಹಾಕಿಸಬಹುದು. ಅದಕ್ಕಾಗಿ ಒಂದು ಬಿಳಿ ಧೋತಿ ಉಡಿಸಿ. ಮೈಮೇಲೆ ಬಿಳಿ ಶಾಲು ಹಾಕಿ. ಕೈಗೊಂದು ಕೋಲು, ಕನ್ನಡಕ ಹಾಕಿ. ತಲೆಗೆ ಬಿಳಿ ಬಣ್ಣದ ರಬ್ಬರ ಟೋಪಿ ತೊಡಿಸಿ. ಗಾಂಧೀಜಿಯವರ ಹಾವಭಾವ ಹೇಳಿಕೊಡಿ. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗವನ್ನು ಹೇಗೆ ಆಯ್ದುಕೊಂಡರು ಎಂಬ ಕಥೆ ಹೇಳಿ.

ಭಗತ್ ಸಿಂಗ್

ನಿಮ್ಮ ಪುಟ್ಟ ಮಗುವಿಗೆ ಭಗತ್ ಸಿಂಗ್‌ ವೇಷ ಹಾಕಿಸಬೇಕೆಂಬ ಬಯಕೆ ನಿಮ್ಮಲ್ಲಿದ್ದರೆ ಅದಕ್ಕೆ ಹೀಗೆ ಮಾಡಿ. ಕುರ್ತಾ-ಪೈಜಾಮಾ ಅಥವಾ ಧೋತಿ-ಕುರ್ತಾವನ್ನು ಹಾಕಿ. ಭಗತ್ ಸಿಂಗ್ ಅವರಂತೆಯೇ ತಲೆಯ ಮೇಲೆ ಪೇಟ ಅಥವಾ ಕಪ್ಪು ಬಣ್ಣದ ಅಗಲವಾದ ಟೋಪಿ ಹಾಕಿ. ಐಲೈನರ್ ಅಥವಾ ಮಸ್ಕರಾ ಸಹಾಯದಿಂದ ಮೀಸೆ ಬಿಡಿಸಿ. ಕೈಗೊಂದು ಆಟದ ಪಿಸ್ತೂಲ್‌ ಕೊಡಿ. ಜೊತೆಗೆ ಭಗತ್ ಸಿಂಗ್ ಅವರ ಶೌರ್ಯದ ಒಂದೆರಡು ವಾಕ್ಯಗಳನ್ನು ಹೇಳಿಕೊಡಿ.

ಚಂದ್ರಶೇಖರ್ ಆಜಾದ್

ನಿಮ್ಮ ಮಗುವಿಗೆ ಬ್ರಿಟೀಷರ ನಿದ್ದೆಗೆಡಿಸಿದ ದೇಶಭಕ್ತ ಚಂದ್ರಶೇಖರ್‌ ಆಜಾದ್ ಅವರಂತೆಯೂ ವೇಷ ಹಾಕಿಸಬಹುದು. ಅದಕ್ಕೆ ಬಿಳಿಯ ಬಣ್ಣದ ಧೋತಿ ಮತ್ತು ಕುರ್ತಾ ಹಾಕಿ. ಮೇಲಿನಿಂದ ಕಪ್ಪು ಬಣ್ಣದ ಕೋಟ್‌ ಅಥವಾ ಜಾಕೆಟ್‌ ಅನ್ನು ತೊಡಿಸಿ. ಐಲೈನರ್ ಅಥವಾ ಮಸ್ಕರಾ ಸಹಾಯದಿಂದ ಮೀಸೆ ಬಿಡಿಸಿ. ಕಾಲಿಗೆ ಕಪ್ಪು ಬೂಟು ಹಾಕಿ. ತಲೆಯ ಮೇಲೊಂದು ಪೇಟ ಇರಲಿ. ಬ್ರಿಟೀಷರ ಎದುರು ತಲೆಬಾಗದೇ ಹೇಗೆ ವೀರತ್ವವನ್ನು ತೋರಿದ ಕಥೆ ಹೇಳಿ. ಅದೇ ರೀತಿ ಮುಖಭಾವವನ್ನು ಮಾಡುವುದು ಹೇಗೆ ಎಂದು ಹೇಳಿಕೊಡಿ.

ಸುಭಾಷ್ ಚಂದ್ರ ಬೋಸ್

ನಿಮ್ಮ ಮಗುವನ್ನು ಸುಭಾಷ್ ಚಂದ್ರ ಬೋಸ್​​ರನ್ನಾಗಿಸಬಹುದು. ನೀವು ನಿಮ್ಮ ಮಗುವಿನ ಅಳತೆಯ ಬೋಸ್‌ರ ಡ್ರೆಸ್‌ ಖರೀದಿಸಿ. ಇದು ಬಟ್ಟೆ ಅಂಗಡಿಗಳಲ್ಲಿ ಸುಲಭಾಗಿ ಸಿಗುತ್ತದೆ. ಮಗುವಿಗೆ ಬೋಸ್ ಅವರಂತೆ ರೌಂಡ್ ಫ್ರೇಮ್ ನ ಕನ್ನಡಕ ಖರೀದಿಸಿ. ಬೋಸ್ ಅವರ ಪ್ರಸಿದ್ಧ ಘೋಷಣೆ ಹೇಳಿಕೊಡಿ.

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ

ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯಂತೆ ನಿಮ್ಮ ಮುದ್ದು ಮಗಳನ್ನು ನೀವು ತಯಾರಿಸಬಹುದು. ಇದಕ್ಕಾಗಿ ನೀವು ಅವಳಿಗೆ ಕಚ್ಚೆ ಸೀರೆ ಉಡಿಸಿ. ರಟ್ಟಿನಿಂದ ಕತ್ತಿ, ಗುರಾಣಿ ತಯಾರಿಸಿ. ಆಭರಣಗಳನ್ನು ತೊಡಿಸಿ. ಕತ್ತಿ ಮತ್ತು ಗುರಾಣಿಯನ್ನು ಕೈಯಲ್ಲಿ ಹಿಡಿಯುವುದು ಹೇಗೆ ಎಂದು ಹೇಳಿ ಕೊಡಿ. ಲಕ್ಷ್ಮೀ ಬಾಯಿಯ ಶೌರ್ಯ, ಪರಾಕ್ರಮದ ಕಥೆ ಹೇಳಿ.

ಕಿತ್ತೂರು ರಾಣಿ ಚೆನ್ನಮ್ಮ

ನಿಮ್ಮ ಮುದ್ದು ಮಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನ ವೇಷವನ್ನೂ ಹಾಕಿಸಬಹುದು. ಅದಕ್ಕೆ ಜರಿ ಪಟ್ಟಿಯಿರುವ ಸೀರೆ ತೆಗೆದುಕೊಳ್ಳಿ. ಅದನ್ನು ಕಚ್ಚೆ ಸೀರೆಯಾಗಿ ಉಡಿಸಿ. ಸೊಂಟದ ಪಟ್ಟಿ, ಬಳೆ, ಸರಗಳನ್ನು ಹಾಕಿ. ಹಣೆಗೆ ವಿಭೂತಿ ಹಚ್ಚಿ. ಮಧ್ಯೆ ಸ್ವಲ್ಪ ಅಗಲವಾದ ಬಿಂದಿ ಇಡಿ. ರಟ್ಟಿನಿಂದ ಕತ್ತಿ ಗುರಾಣಿ ತಯಾರಿಸಿ. ಕೈಯಲ್ಲಿ ಹಿಡಿದುಕೊಳ್ಳುವುದು ಹೇಗೆ ಎಂದು ಹೇಳಿಕೊಡಿ. ಕಿತ್ತೂರು ರಾಣಿ ಚೆನ್ನಮ್ಮ ಹೇಗೆ ಬ್ರಿಟೀಷರ ವಿರುದ್ಧ ಶೌರ್ಯದಿಂದ ಹೋರಾಡಿದಳು ಎಂಬ ಕಥೆ ಹೇಳಿ. ಮುಖದಲ್ಲಿ ವೀರಾವೇಶದ ಭಾವ ಬರುವಂತೆ ಹೇಳಿಕೊಡಿ.

ಇವಿಷ್ಟೇ ಅಲ್ಲದೇ ನಿಮ್ಮ ಮಕ್ಕಳಿಗೆ ನೆಹರೂ, ಲಾಲ್‌ ಬಹದ್ದೂರ್‌ ಶಾಸ್ತ್ರೀ, ಸಂಗೊಳ್ಳಿ ರಾಯಣ್ಣ ಮುಂತಾದ ದೇಶಭಕ್ತರ ವೇಷ ಹಾಕಿಸಬಹುದು.

    ಹಂಚಿಕೊಳ್ಳಲು ಲೇಖನಗಳು