ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Akshaya Tritiya: ಅಕ್ಷಯ ತೃತೀಯದಂದು ಡಿಜಿಟಲ್‌ ಚಿನ್ನ ಖರೀದಿಸುವ ಮುನ್ನ ಈ ಮೂರು ಅಂಶ ಗಮನದಲ್ಲಿರಲಿ

Akshaya Tritiya: ಅಕ್ಷಯ ತೃತೀಯದಂದು ಡಿಜಿಟಲ್‌ ಚಿನ್ನ ಖರೀದಿಸುವ ಮುನ್ನ ಈ ಮೂರು ಅಂಶ ಗಮನದಲ್ಲಿರಲಿ

Praveen Chandra B HT Kannada

Apr 22, 2023 07:11 AM IST

Akshaya Tritiya: ಅಕ್ಷಯ ತೃತೀಯದಂದು ಡಿಜಿಟಲ್‌ ಚಿನ್ನ ಖರೀದಿಸುವ ಮುನ್ನ ಈ ಮೂರು ಅಂಶ ಗಮನದಲ್ಲಿರಲಿ

  • ಇಂದು ಅಕ್ಷಯ ತೃತೀಯ (Akshaya Tritiya 2023). ಚಿನ್ನ ಖರೀದಿಸುವುದು ಸಮೃದ್ಧಿ, ಸಂಪತ್ತು ಹೆಚ್ಚಲು ಪೂರಕವೆಂಬ ನಂಬಿಕೆ ಇರುವವರು ಇಂದು ಭೌತಿಕ ಚಿನ್ನ ಮಾತ್ರವಲ್ಲದೆ ಡಿಜಿಟಲ್‌ ಗೋಲ್ಡ್‌ (Digital Gold) ಖರೀದಿಸಬಹುದು. 

Akshaya Tritiya: ಅಕ್ಷಯ ತೃತೀಯದಂದು ಡಿಜಿಟಲ್‌ ಚಿನ್ನ ಖರೀದಿಸುವ ಮುನ್ನ ಈ ಮೂರು ಅಂಶ ಗಮನದಲ್ಲಿರಲಿ
Akshaya Tritiya: ಅಕ್ಷಯ ತೃತೀಯದಂದು ಡಿಜಿಟಲ್‌ ಚಿನ್ನ ಖರೀದಿಸುವ ಮುನ್ನ ಈ ಮೂರು ಅಂಶ ಗಮನದಲ್ಲಿರಲಿ

ಇಂದು ಅಕ್ಷಯ ತೃತೀಯ (Akshaya Tritiya 2023). ಚಿನ್ನಾಭರಣ ಮಾರಾಟಗಾರರು ಇಂದು ವಿವಿಧ ಆಫರ್‌ಗಳು, ಆಮೀಷಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಚಿನ್ನಾಭರಣ ಖರೀದಿಸಿದರೆ ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ. ಆದರೆ, ಈ ಡಿಜಿಟಲ್‌ ಜಗತ್ತಿನಲ್ಲಿ ಡಿಜಿಟಲ್‌ ಪ್ರವೀಣರು ಡಿಜಿಟಲ್‌ ಚಿನ್ನ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. ಭೌತಿಕ ರೂಪದಲ್ಲಿದ್ದರೂ, ಡಿಜಿಟಲ್‌ ರೂಪದಲ್ಲಿದ್ದರೂ ಅಥವಾ ಯಾವುದೇ ರೂಪದಲ್ಲಿದ್ದರೂ ಚಿನ್ನ ಚಿನ್ನವೇ, ಅದರ ಬೆಲೆ ಮಂಕಾಗದು. ಈ ಅಕ್ಷಯ ತೃತೀಯದ ಶುಭ ದಿನದಂದು ಡಿಜಿಟಲ್‌ ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಲ್ಲೊಂದಿಷ್ಟು ಸಲಹೆಗಳಿವೆ.

ಟ್ರೆಂಡಿಂಗ್​ ಸುದ್ದಿ

Mumbai Dust Storm 2024: ಮುಂಬೈನಲ್ಲಿ ಭಾರೀ ಗಾಳಿಗೆ ಹೋರ್ಡಿಂಗ್‌ ಕುಸಿದು ನಾಲ್ವರ ಸಾವು, ಹಲವರ ಸ್ಥಿತಿ ಗಂಭೀರ, ಹೇಗಿತ್ತು ಸನ್ನಿವೇಶ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಡಿಜಿಟಲ್‌ ಚಿನ್ನ ಎಂದರೇನು?

ಜನರಿಗೆ ಆನ್‌ಲೈನ್‌ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ನೀಡುವ ಡಿಜಿಟಲ್‌ ಗೋಲ್ಡ್‌ ಕುರಿತು ಬಹುತೇಕರಿಗೆ ತಿಳಿದಿರಬಹುದು. ಗೂಗಲ್‌ ಪೇ, ಫೋನ್‌ ಪೇ ಮುಂತಾದ ಕಡೆ 50 ರೂಪಾಯಿಯ ಡಿಜಿಟಲ್‌ ಗೋಲ್ಡ್‌ ಕೂಡ ಖರೀದಿಸಬಹುದು. ಒಂದು ರೂಪಾಯಿಯ ಚಿನ್ನವನ್ನೂ ಖರೀದಿಸಬಹುದು. ಇಂತಿಷ್ಟೇ ಖರೀದಿಸಬೇಕೆಂದು ಯಾವುದೇ ನಿಯಮವಿಲ್ಲ. ಇನ್‌ಶ್ಯೂರ್ಡ್‌ ವಾಲ್ಟ್‌ನಲ್ಲಿ ಭೌತಿಕ ಚಿನ್ನ ಇರುತ್ತದೆ. ಗ್ರಾಹಕರು ಅದನ್ನು ಡಿಜಿಟಲ್‌ ರೂಪದಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ, ಡಿಜಿಟಲ್‌ ಗೋಲ್ಡ್‌ ಅನ್ನು ಯಾವುದೇ ಸರಕಾರದ ಅಂಗಸಂಸ್ಥೆ, ಸೆಬಿ, ಎಸ್‌ಬಿಐ ಇತ್ಯಾದಿಗಳು ಮಾನಿಟರ್‌ ಮಾಡುವುದಿಲ್ಲ. ಆದರೆ, ಡಿಜಿಟಲ್‌ ಗೋಲ್ಡ್‌ಗೆ ರಿಯಲ್‌ ಚಿನ್ನದಷ್ಟೇ ಮೌಲ್ಯವೂ ಇರುತ್ತದೆ, ಅಷ್ಟೇ ತೆರಿಗೆಯೂ ಇರುತ್ತದೆ.

ಡಿಜಿಟಲ್‌ ಗೋಲ್ಡ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?

ಸ್ಪೇರ್‌8 ಸಹ ಸ್ಥಾಪಕರಾದ ರೋಹಿತ್‌ ಹರ್ಸಿನಿಘನಿ ಅವರು ಹಳದಿ ಲೋಹವನ್ನು ಡಿಜಿಟಲ್‌ ರೂಪದಲ್ಲಿ ಖರೀದಿಸುವುದರಿಂದ ಇರುವ ಪ್ರಯೋಜನಗಳನ್ನು ತಿಳಿಸಿದ್ದಾರೆ.

1. ಭದ್ರತೆ

ಕಳೆದ ಹಲವು ವರ್ಷಗಳಿಂದ ಜನರು ಡಿಜಿಟಲ್‌ ಗೋಲ್ಡ್‌ನಲ್ಲಿ ಧೈರ್ಯವಾಗಿ ಹೂಡಿಕೆ ಮಾಡುತ್ತಿದ್ದಾರೆ. ಇದು ಭದ್ರತೆ ಹೊಂದಿರುವುದು ಜನರ ನಂಬಿಕೆಗೆ ಕಾರಣ. ಡಿಜಿಟಲ್‌ ಗೋಲ್ಡ್‌ಗೆ ವಿಮೆಯೂ ಇರುತ್ತದೆ.

2) ಮೇಲಾಧಾರವಾಗಿ ಬಳಸಬಹುದು

ಬಳಕೆದಾರರು ತಮ್ಮ ಡಿಜಿಟಲ್ ಚಿನ್ನವನ್ನು ಮೇಲಾಧಾರವಾಗಿಡಲು ಮತ್ತು ಅದರಿಂದ ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವಿಷಯ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಅಂದರೆ, ನಿಮ್ಮ ಡಿಜಿಟಲ್‌ ಗೋಲ್ಡ್‌ ಅನ್ನು ಅಡಮಾನವಾಗಿಟ್ಟು ಸಾಲವನ್ನೂ ಪಡೆಯಬಹುದು.

3. ಲೀಸಿಂಗ್‌

ಇದೊಂದು ರೀತಿ ಆಸ್ತಿ ಭೋಗ್ಯಕ್ಕೆ ಪಡೆಯುವಂತಾಗಿದೆ. ಈ ಮೂಲಕ ಜನರು ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕಡಿಮೆಯೆಂದರೆ, ಒಂದು ರೂಪಾಯಿಯ ಡಿಜಿಟಲ್‌ ಗೋಲ್ಡ್‌ ಖರೀದಿಸಲು ಸಾಧ್ಯವಿದೆ. ಅದಕ್ಕೆ ವರ್ಷಕ್ಕೆ ಶೇಕಡ 14ರವರೆಗೆ ಬಡ್ಡಿಯನ್ನೂ ಪಡೆಯಬಹುದು. ಸುರಕ್ಷಿತ ಕಮಾನುಗಳಲ್ಲಿ ಸಂಗ್ರಹಿಸಲಾದ ಭೌತಿಕ ಚಿನ್ನವನ್ನು ಸಣ್ಣ ಆಭರಣ ವ್ಯಾಪಾರಿಗಳಿಗೆ ಗುತ್ತಿಗೆ ನೀಡಲಾಗುತ್ತದೆ. ಬಳಿಕ ಅದನ್ನು ಡಿಜಿಟಲ್‌ ರೂಪದಲ್ಲಿ ಖರೀದಿಸಿರುವ ಗ್ರಾಹಕರಿಗೆ ಬಡ್ಡಿ ರೂಪದಲ್ಲಿ ನೀಡಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಡಿಜಿಟಲ್‌ ಗೋಲ್ಡ್‌ಗೆ ವಾರ್ಷಿಕ ಶೇಕಡ 12ರಷ್ಟು ಬಡ್ಡಿದರ ದೊರಕುತ್ತಿದೆ. ಹೀಗಾಗಿ ಇದು ಲಾಭದಾಯಕವೆಂದು ಹೂಡಿಕೆದಾರರು ಪರಿಗಣಿಸುತ್ತಿದ್ದಾರೆ.

ಈ ಅಂಶ ಗಮನದಲ್ಲಿರಲಿ

ಡಿಜಿಟಲ್‌ ಗೋಲ್ಡ್‌ ಎಂದರೆ ತಕ್ಷಣ ಲಾಭ ಬರುವಂತದ್ದಲ್ಲ. ನೀವು ಗೂಗಲ್‌ ಪೇ ಅಥವಾ ಫೋನ್‌ ಪೇಯಲ್ಲಿ ಒಂದು ಸಾವಿರ ರೂ. ನೀಡಿ ಡಿಜಿಟಲ್‌ ಗೋಲ್ಡ್‌ ಖರೀದಿಸಿ ಆಗಲೇ ಮಾರಾಟಕ್ಕೆ ಮುಂದಾದರೆ ನಿಮಗೆ ಐವತ್ತು ನೂರು ರೂಪಾಯಿ ನಷ್ಟವಾಗಬಹುದು. ಟ್ಯಾಕ್ಸ್‌ ಕಡಿತವಾಗಿ ಆ ಮೌಲ್ಯ ಕಡಿಮೆಯಾಗಿರುತ್ತದೆ. ಆದರೆ, ಹಲವು ವರ್ಷ ಕಾದರೆ, ಚಿನ್ನದ ದರ ಹೆಚ್ಚಳವಾಗುವುದಕ್ಕೆ ತಕ್ಕಂತೆ ನಿಮ್ಮ ಡಿಜಿಟಲ್‌ ಗೋಲ್ಡ್‌ ಮೌಲ್ಯ ಹೆಚ್ಚಾಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ