Electric Cars: ಗ್ರಾಹಕರ ಆಕರ್ಷಣೆಗೆ 'ಇವಿ' ಪೈಪೋಟಿ; ಅಗ್ರ 10 ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು
Jan 26, 2024 02:59 PM IST
ಟಾಟಾ ಟಿಯಾಗೊ ಇವಿ
ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿನ 10 ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ನಿಧಾನವಾಗಿ ಹೆಚ್ಚಾಗುತ್ತಿದ್ದು, ಸ್ಥಿರವಾದ ವೇಗವನ್ನು ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಇವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಗ್ರಾಹಕರು ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳುತ್ತಿದ್ದಾರೆ. ದೇಶದ ಎಲೆಕ್ಟ್ರಿಕ್ ಕಾರುಗಳು ಮಾರಾಟದಲ್ಲಿ ಪ್ರಮುಖ ಆಟೋಮೊಬೈಲ್ ಸಂಸ್ಥೆ ಟಾಟಾ ಅಗ್ರ ಸ್ಥಾನದಲ್ಲಿದೆ. ದೇಶದ ಅಗ್ರ 10 ಇವಿ ಕಾರುಗಳು, ಬೆಲೆ ಹಾಗೂ ಅವುಗಳ ವೈಶಿಷ್ಟ್ಯಗಳ ವಿವರವನ್ನು ತಿಳಿಯೋಣ.
ಟಾಟಾ ಟಿಯಾಗೊ
ಕೈಗೆಟುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಟಾಟಾ ಆಟೋಮೊಬೈಲ್ ಸಂಸ್ಥೆಯೂ ಒಂದಾಗಿದೆ. ಇವಿಗಳ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿದೆ. ಟಾಟಾದ ಟಿಯಾಗೆೋ ಇವಿ ಹೆಚ್ಚು ಗ್ರಾಹಕರನ್ನು ಆಕರ್ಷಿಸಿರುವ ಕಾರಾಗಿದೆ. ಈ ಕಾರಿನ ಎಕ್ಸ್‌ಶೋರೂಂ ಬೆಲೆ 9.19 ಲಕ್ಷದಿಂದ 12.78 ಲಕ್ಷ ರೂಪಾಯಿವರೆಗೆ ಇದೆ. 7.0-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಹರ್ಮನ್ ಸಿಸ್ಟಮ್ ಮತ್ತು ಸ್ವಯಂಚಾಲಿತ ಹವಾಮಾನ ನಿಯಂತ್ರಣದಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 19.2kWh ಮತ್ತು 24kWh 2 ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.
ಟಾಟಾ ನೆಕ್ಸಾನ್
ಟಾಟಾ ಟಿಯಾಗೋ ನಂತರದ ಸ್ಥಾನದಲ್ಲಿ ಇದೇ ಕಂಪನಿಯ ಟಾಟಾ ನೆಕ್ಸಾನ್ ಇವಿ ಇದೆ. ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬಂದಿದೆ. ನೆಕ್ಸಾನ್ ಪ್ರೈಮ್ ಒಮ್ಮೆ ಚಾರ್ಚ್ ಮಾಡಿದರೆ 312 ಕಿಲೋ ಮೀಟರ್ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಮ್ಯಾಕ್ಸ್ 453 ಕಿಮೀ ಸಾಮರ್ಥ್ಯವನ್ನ ಹೊಂದಿದೆ. ನೆಕ್ಸಾನ್ ಪ್ರೈಮ್‌ನ ಎಕ್ಸ್ ಶೋರೂಂ ಬೆಲೆ 15.48 ಲಕ್ಷದಿಂದ 18.31 ಲಕ್ಷ ರೂಪಾಯಿವರೆಗೆ ಇದೆ. ನೆಕ್ಸಾನ್ ಮ್ಯಾಕ್ಸ್‌ನ ಬೆಲೆ 17.57 ಲಕ್ಷದಿಂದ 20.76 ಲಕ್ಷ ರೂಪಾಯಿ ವರೆಗೆ ಇದೆ.
ಟಾಟಾ ಟಿಗೋರ್
ಭಾರತದ ಅಗ್ರ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಟಾಟಾ ಕಂಪನಿಯ ಟಾಟಾ ಟಿಗೋರ್ 3ನೇ ಸ್ಥಾನದಲ್ಲಿದೆ. ಇವಿ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿರುವ ಈ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಇದು ಒಮ್ಮೆ ಚಾರ್ಜ್ ಮಾಡಿದರೆ 315 ಕಿಲೋ ಮೀಟರ್ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾಟಾ ಟಿಗೋರ್ ಎಕ್ಸ್‌ಯುವಿ 400 ಬೆಲೆ 13.24 ಲಕ್ಷ ದಿಂದ 14.55 ಲಕ್ಷ ರೂಪಾಯಿ ವರೆಗೆ ಇದೆ.
ಮಹೀಂದ್ರ XUV400
ಲೇಟಾದ್ರೂ ಲೇಟೆಸ್ಟ್ ಆಗಿ ಬಂದಿರುವ ಮಹೀಂದ್ರಾ ಇವಿ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇವಿ ವಿಭಾಗದಲ್ಲಿ ಇತ್ತೀಚೆಗೆ ಪಾದಾರ್ಪಣೆ ಮಾಡಿರುವ ಮಹೀಂದ್ರಾ ತನ್ನ ಬ್ರಾಂಡ್ ಮೂಲಕವೇ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು ಸದ್ದು ಮಾಡುತ್ತಿದೆ. XUV300 ಗಿಂತ XUV400 ಉದ್ದವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 456 ಕಿಲೋ ಮೀಟರ್ ವರೆಗೆ ಸಂಚರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಬೆಲೆ 17.03 ಲಕ್ಷ ದಿಂದ 20.21 ಲಕ್ಷ ರೂಪಾಯಿ ವರೆಗೆ ಇದೆ.
ಎಂಜಿ ಕಾಮೆಟ್
ಎಂಜಿ ಕಾಮೆಟ್ ವಿಶಿಷ್ಟ ವಿನ್ಯಾಸ ಹಾಗೂ ಗಾತ್ರದಲ್ಲಿ ತಕ್ಕಮಟ್ಟಿಗೆ ಚೆನ್ನಾಗಿ ಮಾಡಿದೆ. ಇದು ಭಾರತದ ಅತ್ಯಂತ ಚಿಕ್ಕ ಇವಿ ಕಾರು. ಕಾರಿನ ಉದ್ದ 2.9 ಮೀ. 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಸ್‌ಪ್ಲೇ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 230 ಕಿಲೋ ಮೀಟರ್ ವರೆಗೆ ಚಲಿಸುತ್ತದೆ. ಪ್ರೀಮಿಯಂ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಎಂಜಿ ಕಾಮೆಟ್ ಅವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಕಾರಿ ಬೆಲೆ 8.42 ಲಕ್ಷ ದಿಂದ 10.50 ಲಕ್ಷದವರೆಗೆ ಇದೆ.
ಎಂಜಿ ಝಡ್‌ಎಸ್ ಇವಿ
ಎಂಜಿ ಝೆಡ್‌ಎಸ್ ಇವಿ ಒಂದು ಜಾರ್ಜ್‌ಗೆ 461 ಕಿಲೋ ಮೀಟರ್ ವರೆಗೆ ಚಲಿಸುತ್ತೆ ಎಂದು ಕಂಪನಿ ಹೇಳಿಕೊಂಡಿದೆ. 2023ರ 2ನೇ ತ್ರೈಮಾಸಿಕದಲ್ಲಿ ಎಂಜಿ ಝಡ್‌ಎಸ್ ಇವಿ 1,747 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಈ ಕಾರಿನ ಬೆಲೆ 24.85 ಲಕ್ಷ ದಿಂದ 29.06 ಲಕ್ಷ ರೂಪಾಯಿ ವರೆಗೆ ಇದೆ.
ಸಿಟ್ರೊಯೆನ್ eC3
ಸಿಟ್ರೊಯೆನ್ ಇಸಿ3 ಎಲೆಕ್ಟ್ರಿಕ್ ಕಾರನ್ನು 2023ರ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಇದು 29.2kWh ಬ್ಯಾಟರಿ ಹಾಗೂ ಒಮ್ಮೆ ಜಾರ್ಜ್ ಮಾಡಿದರೆ 320 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ. ಸಿಟ್ರೊಯೆನ್ ಕಾರಿನ ಬೆಲೆ 12.20 ಲಕ್ಷ ದಿಂದ 13.17 ಲಕ್ಷ ರೂಪಾಯಿವರೆಗೆ ಇದೆ.
ಹುಂಡೈ IONIQ-5
ಹ್ಯುಂಡೈನ IONIQ-5 ಇವಿ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತ ಸದ್ದು ಮಾಡುತ್ತಿಲ್ಲ. IONIQ-5 ಒಂದು ಚಾರ್ಜ್‌ಗೆ 631 ಕಿಲೋ ಮೀಟರ್ ವರೆಗೆ ಓಡುವ ಸಾಮರ್ಥ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಒಂದೇ ಒಂದು ವೇರಿಯಂಟ್‌ನಲ್ಲಿ ಅನಾವರಗೊಂಡಿರುವ ಈ ಇವಿ ಕಾರಿನ ಬೆಲೆ 48.73 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
BYD Atto 3
ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆಗಳಲ್ಲಿ ಬಿವೈಡಿ ಒಂದಾಗಿದೆ. ಈ ಸಂಸ್ಥೆ Atto 3 ಮತ್ತು e6 ಅನ್ನು ಮಾರಾಟ ಮಾಡುತ್ತಿದೆ. ಒಮ್ಮೆ ಚಾರ್ಜ್ ಮಾಡಿದರೆ 521 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಇವಿ ಕಾರಿನ ಬೆಲೆ 35.96 ಲಕ್ಷ ದಿಂದ 36.48 ಲಕ್ಷ ರೂಪಾಯಿ ವರೆಗೆ ಇದೆ.
ಕಿಯಾ EV6
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ರಾಹಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕಿಯಾ ತನ್ನ ಏಕೈಕ EV EV6 ಅನ್ನು ಬಿಡುಗಡೆ ಮಾಡಿದೆ. Kia EV6 ದೇಶದಲ್ಲೇ ಅತ್ಯಂತ ವಿಶಿಷ್ಟವಾಗಿ ಕಾಣುವ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲೆ ಬರೋಬ್ಬರಿ 65 ಲಕ್ಷದಿಂದ ಆರಂಭವಾಗುತ್ತದೆ. ಒಂದು ಚಾರ್ಜ್‌ಗೆ 708 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. (This copy first appeared in Hindustan Times Kannada website. To read more like this please logon to kannada.hindustantime.com)