ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uday Kotak Resigns: ಅವಧಿಗೂ ಮೊದಲೇ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

Uday Kotak resigns: ಅವಧಿಗೂ ಮೊದಲೇ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

HT Kannada Desk HT Kannada

Sep 02, 2023 05:17 PM IST

ಉದಯ್ ಕೋಟಕ್‌

  • ಕೋಟಕ್ ಮಹೀಂದ್ರಾ ಬ್ಯಾಂಕಿನ ಆಡಳಿತದಲ್ಲಿ ಬದಲಾವಣೆ ಕಾಲಘಟ್ಟ. ಡಿಸೆಂಬರ್‌ ತನಕ ಈಗಿನ ಚೇರ್ಮನ್‌, ಎಂಡಿ, ಸಿಇಒ, ಜಾಯಿಂಟ್ ಎಂಡಿಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಅದಕ್ಕೂ ಮೂರು ತಿಂಗಳು ಮೊದಲೇ ಬ್ಯಾಂಕಿನ ಸಂಸ್ಥಾಪಕರೂ ಆದ ಉದಯ್ ಕೋಟಕ್‌ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉದಯ್ ಕೋಟಕ್‌
ಉದಯ್ ಕೋಟಕ್‌ (Bloomberg)

ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಗೂ ಮೂರು ತಿಂಗಳು ಮೊದಲೇ ಅವರು ತಮ್ಮ ಸ್ಥಾನ ತೆರವುಗೊಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

ಕೋಟಕ್ ಮಹೀಂದ್ರಾ ಬ್ಯಾಂಕ್ (ಕೊಟಾಕ್‌ ಮಹೀಂದ್ರಾ ಬ್ಯಾಂಕ್‌) ಈ ಸಂಬಂಧ ರೆಗ್ಯುಲೇಟರಿ ಫೈಲಿಂಗ್ ಮಾಡಿದ್ದು, ಅದರಲ್ಲಿ ಉದಯ್ ಕೋಟಕ್‌ ಅವರು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರ ರಾಜೀನಾಮೆ ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಬ್ಯಾಂಕಿನ ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ದೀಪಕ್ ಗುಪ್ತಾ ಅವರು ಹಂಗಾಮಿಯಾಗಿ ಎಂಡಿ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಕ್ಸ್‌ನಲ್ಲಿ ಉದಯ್ ಕೋಟಕ್‌ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ.

ಉದಯ್ ಕೋಟಕ್‌ ಅವರ್ ಎಕ್ಸ್‌ನಲ್ಲಿ ಬರೆದುಕೊಂಡಿರುವುದು ಇಷ್ಟು

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉತ್ತರಾಧಿಕಾರದ ವಿಚಾರ ನನ್ನ ಮನಸ್ಸಿನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ನಮ್ಮ ಅಧ್ಯಕ್ಷರು, ನಾನು ಮತ್ತು ಜಂಟಿ ಎಂಡಿ ಎಲ್ಲರೂ ಈ ವರ್ಷದ ಕೊನೆಗೆ ಸ್ಥಾನ ತೆರವುಗೊಳಿಸಬೇಕಾಗಿತ್ತು. ಈ ನಿರ್ಗಮನಗಳ ಅನುಕ್ರಮವು ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಸ್ವಯಂ ಪ್ರೇರಣೆಯಿಂದ ಸ್ಥಾನ ತೆರವುಗೊಳಿಸಿದ್ದೇನೆ. ನನ್ನಿಂದಲೇ ಈ ಪ್ರಕ್ರಿಯೆ ಶುರುವಾಗುತ್ತಿದೆ.

ಪ್ರಸ್ತಾವಿತ ಉತ್ತರಾಧಿಕಾರಿಯ ನೇಮಕಕ್ಕೆ ಆರ್‌ಬಿಐ ಅನುಮೋದನೆ ಸಿಗುವುದಕ್ಕಾಗಿ ಬ್ಯಾಂಕ್ ಕಾಯುತ್ತಿದೆ. ಮಧ್ಯಂತರದಲ್ಲಿ ನನ್ನ ಆತ್ಮೀಯ ಸಹೋದ್ಯೋಗಿ ದೀಪಕ್ ಗುಪ್ತಾ - ಪ್ರಸ್ತುತ ಜಂಟಿ ಎಂಡಿ ಅವರು ಎಂಡಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಬ್ಯಾಂಕಿನ ಸಂಸ್ಥಾಪಕನಾಗಿ, ನಾನು ಕೊಟಾಕ್‌ ಬ್ರ್ಯಾಂಡ್‌ ಜತೆಗೆ ಹೆಚ್ಚು ಭಾವನಾತ್ಮಕವಾಗಿ ಗುರುತಿಸಿಕೊಂಡಿದ್ದೇನೆ. ಸಂಸ್ಥೆಗೆ ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕ ಮತ್ತು ಮಹತ್ವದ ಷೇರುದಾರನಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಪರಂಪರೆಯನ್ನು ಮುಂದಕ್ಕೆ ಸಾಗಿಸಲು ನಾವು ಅತ್ಯುತ್ತಮ ನಿರ್ವಹಣಾ ತಂಡವನ್ನು ಹೊಂದಿದ್ದೇವೆ. ಸಂಸ್ಥಾಪಕರು ದೂರ ಹೋಗುತ್ತಾರೆ, ಆದರೆ ಸಂಸ್ಥೆಯು ಶಾಶ್ವತವಾಗಿ ಬೆಳೆಯುತ್ತದೆ.

ಬಹಳ ಹಿಂದೆಯೇ, ಜೆಪಿ ಮೋರ್ಗಾನ್ ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳಂತಹ ಹೆಸರುಗಳು ಆರ್ಥಿಕ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿರುವುದನ್ನು ನಾನು ನೋಡಿದೆ ಮತ್ತು ಭಾರತದಲ್ಲಿ ಅಂತಹ ಸಂಸ್ಥೆಯನ್ನು ರಚಿಸುವ ಕನಸು ಕಂಡೆ. ಈ ಕನಸಿನೊಂದಿಗೆ ನಾನು ಮುಂಬೈನ ಫೋರ್ಟ್‌ನಲ್ಲಿರುವ 300 ಚದರ ಅಡಿ ಕಚೇರಿಯಲ್ಲಿ 3 ಉದ್ಯೋಗಿಗಳೊಂದಿಗೆ 38 ವರ್ಷಗಳ ಹಿಂದೆ ಕೋಟಕ್ ಮಹೀಂದ್ರಾವನ್ನು ಪ್ರಾರಂಭಿಸಿದೆ. ಈ ಸ್ಮರಣೀಯ ಪ್ರಯಾಣದ ಪ್ರತಿಯೊಂದು ಕ್ಷಣವನ್ನೂ ಅನುಭವಿಸಿದ್ದೇನೆ. ನನ್ನ ಕನಸಿನಂತೆಯೇ ಜೀವಿಸುತ್ತಿದ್ದೇನೆ.

ನಾವು ಈಗ ಅಗ್ರಗಣ್ಯ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಾಗಿದ್ದು, ನಂಬಿಕೆ ಮತ್ತು ಪಾರದರ್ಶಕತೆಯ ಮೂಲ ತತ್ವಗಳ ಮೇಲೆ ನಮ್ಮ ಸಂಸ್ಥೆಯನ್ನು ರಚಿಸಲಾಗಿದೆ. ನಾವು ನಮ್ಮ ಪಾಲುದಾರರಿಗೆ ಮೌಲ್ಯವನ್ನು ಒದಗಿಸಿದ್ದೇವೆ ಮತ್ತು 1 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿ ನೀಡಿದ್ದೇವೆ. 1985 ರಲ್ಲಿ 10,000 ರೂಪಾಯಿ ಹೂಡಿಕೆಯಿಂದ ಶುರುವಾದ ಸಂಸ್ಥೆ ಇಂದು ಸುಮಾರು 300 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

ಭಾರತೀಯ ಒಡೆತನದ ಈ ಸಂಸ್ಥೆಯು ಭಾರತವನ್ನು ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸುವಲ್ಲಿ ಇನ್ನೂ ಹೆಚ್ಚಿನ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ