ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jammu Kashmir: 7 ದಶಕದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ: ಏನೇನು ಸೌಲಭ್ಯಗಳು ರದ್ದಾಗಲಿವೆ, ಇಲ್ಲಿದೆ ವಿವರ

Jammu Kashmir: 7 ದಶಕದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ: ಏನೇನು ಸೌಲಭ್ಯಗಳು ರದ್ದಾಗಲಿವೆ, ಇಲ್ಲಿದೆ ವಿವರ

Umesha Bhatta P H HT Kannada

Dec 11, 2023 01:51 PM IST

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಪೂರ್ವಾಪರ

    • jammu Kashmir Updates ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹೇಗಿತ್ತು. ಅದು ಹೇಗೆ ಬದಲಾಗಲಿದೆ ಎನ್ನುವ ವಿವರ ಇಲ್ಲಿದೆ. 
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಪೂರ್ವಾಪರ
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಪೂರ್ವಾಪರ

ದೆಹಲಿ: ಭಾರತದ ಭಾಗವೇ ಆಗಿದ್ದರೂ ಹಲವು ವಿಶೇಷ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದ ಹಲವು ಸೌಲಭ್ಯಗಳು ಇನ್ನು ರದ್ದಾಗಲಿವೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

Closing Bell: ಷೇರುಪೇಟೆಗೆ ಬಲ ತುಂಬಿದ ಇಂಧನ-ಆಟೊಮೊಬೈಲ್‌, ಸೆನ್ಸೆಕ್ಸ್‌-ನಿಫ್ಟಿ ಏರಿಕೆ; ಇಂದು ಲಾಭ ಗಳಿಸಿದ ಷೇರುಗಳ ವಿವರ ಹೀಗಿದೆ

ದೇಶದ ಇತರೆ ರಾಜ್ಯಗಳಂತೆ ಜಮ್ಮು ಮತ್ತು ಕಾಶ್ಮೀರವು ಅಧಿಕಾರವನ್ನು ಹೊಂದಿರಲಿದೆ. ಕೇಂದ್ರ ಸರ್ಕಾರಕ್ಕೆ ಹಲವಾರು ವಿಷಯದಲ್ಲಿ ಇದ್ದ ಮಿತಿಗಳು ತೆರೆವುಗೊಳ್ಳಿವೆ. ಕೇಂದ್ರ ಸರ್ಕಾರ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮೇಲೆ ಹಿಡಿತ ಹೊಂದಲಿದೆ.

ಜಮ್ಮು ಮತ್ತು ಕಾಶ್ಮೀರವು ಸಂವಿಧಾನದ 370 ನೇ ವಿಧಿಯ ತಾತ್ಕಾಲಿಕ ನಿಬಂಧನೆಯಡಿ ವಿಶೇಷ ಸ್ಥಾನವನ್ನು ದಶಕಗಳ ಹಿಂದೆಯೇ ಕಲ್ಪಿಸಲಾಗಿತ್ತು.

ಅಂದರೆ ಅದು ಜಮ್ಮು ಮತ್ತು ಕಾಶಮೀರದ ಮಹಾರಾಜರಾಗಿದ್ದ ಹರಿಸಿಂಗ್‌ ಹಾಗೂ ಭಾರತದ ಅಂದಿನ ಪ್ರಧಾನಿ ಜವಹರಲಾಲ್‌ ನೆಹರು ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡಿದ್ದರು. ಆಗ ಅಲ್ಲಿನ ಪ್ರಧಾನಿಯಾಗಿ ಶೇಕ್‌ ಅಬ್ದುಲ್‌ ಅವರನ್ನು ನೇಮಿಸಿ 370 ನೇ ವಿಧಿಯನ್ನು ಸ್ಥಾಪಿಸಿದ್ದರು. ನಿರಂತರ ಮಾತುಕತೆಗಳ ಬಳಿಕ ಈ ವಿಧಿಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದು 1949 ರಲ್ಲಿ. ಈ ವಿಶೇಷ ಸಂವಿಧಾನದಡಿ ಇತರೆ ರಾಜ್ಯಗಳಿಗಿಲ್ಲದ ಸ್ಥಾನಮಾನಗಳನ್ನು ನೀಡಲಾಗಿತ್ತು. ಆನಂತರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಸ್ಥಾನಮಾನವಾಗಿ ಮಾರ್ಪಟ್ಟರೂ ವಿಶೇಷ ಸ್ಥಾನಮಾನ ರದ್ದುಪಡಿಸಲು ಆಗಿರಲಿಲ್ಲ.

ಬಿಜೆಪಿ ನಿರಂತರ ಹೋರಾಟ

ಬಿಜೆಪಿಯು ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದಾಗಿ ಘೋಷಿಸಿತ್ತು. ಭಾರತದ ಮೊದಲ ಪ್ರಧಾನಿ ನೆಹರು ಅವರು ಮಾಡಿದ್ದ ಆ ಐತಿಹಾಸಿಕ ದೋಷವನ್ನು ಸರಿಪಡಿಸುವುದಾಗಿ ಹೇಳಿಕೊಂಡು ಬಂದಿತ್ತು. ಐದು ವರ್ಷದ ಹಿಂದೆ 2018ರ ಡಿಸೆಂಬರ್‌ 18ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸದೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿತ್ತು. ಆನಂತರ ಸಂಸತ್ತಿನಲ್ಲೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನದ ಕುರಿತು ಮಸೂದೆಗೆ ಅನುಮತಿ ಪಡೆದಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿ ನಿರಂತರವಾಗಿ ವಿಚಾರಣೆ ನಡೆದುಕೊಂಡು ಬಂದು ಈಗ ತೀರ್ಪು ಹೊರ ಬಿದ್ದಿದೆ.

ಇದರ ಜತೆಯಲ್ಲಿ ಈ ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಬಲವಾಗಿ ಸಾರ್ವಜನಿಕವಾಗಿ ಹಾಗೂ ನ್ಯಾಯಾಲದಲ್ಲೂ ಬಲವಾಗಿ ಸಮರ್ಥಿಸಿಕೊಂಡಿತ್ತು. ಈ ಸ್ಥಾನಮಾನದಿಂದ ಕಾಶ್ಮೀರದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ಕೇಂದ್ರ ಹೇಳಿಕೊಂಡಿತ್ತು. ವಿಶೇಷ ಸ್ಥಾನಮಾನವನನು 2019ರ ಆಗಸ್ಟ್‌ 5ರಂದು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ. ಉಗ್ರರ ನುಸುಳುವಿಕೆ. ದಾಳಿಗಳು. ಕಲ್ಲು ತೂರಾಟದಂತ ಚಟುವಟಿಕೆ ನಿಗ್ರಹಕ್ಕೆ ಬಂದಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

ವಿಶೇಷ ಸ್ಥಾನಮಾನದ ಮೊದಲು ನಂತರ..

  • ಈ ವಿಧಿಯಡಿ ಜಮ್ಮು ಮತ್ತು ಕಾಶ್ಮೀರವು ಆಡಳಿತಕ್ಕೆ ಪ್ರತ್ಯೇಕತೆಯೇ ಹೊಂದಿತ್ತು. ಪ್ರತ್ಯೇಕ ದೇಶದ ಮಾದರಿಯಲ್ಲಿಯೇ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಧ್ವಜದ ಮಾನ್ಯತೆಯಿತ್ತು.ಇವೆಲ್ಲವೂ ರದ್ದಾಗಿ ಭಾರತದ ಬಾವುಟವೂ ಹಾರಲಿದೆ.
  • ಕೇಂದ್ರ ಸರ್ಕಾರ ಏನೇ ಮಾಡಬೇಕಾದರೂ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನುಮತಿ ಪಡೆಯಬೇಕಿತ್ತು. ಇದು ಇನ್ನು ಇರುವುದಿಲ್ಲ. ಕೇಂದ್ರ ತನ್ನ ಅಧಿಕಾರ ಚಲಾಯಿಸಬಹುದು.
  • ವಿದೇಶಾಂಗ, ರಕ್ಷಣಾ ವಲಯ ಹಾಗೂ ಹಣಕಾಸು ವಲಯದ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳುವ ಅಧಿಕಾರವಿತ್ತು. ಇದನ್ನು ಬಿಟ್ಟರೆ ಅಲ್ಲಿಗೆ ಲೆಫ್ಟಿನೆಂಟ್‌ ಗೌರ್ನರ್‌ ನೇಮಕ, ಅಧಿಕಾರಿಗಳ ನಿಯೋಜನೆಯಿಂದ ಹಿಡಿದು ಯಾವುದೇ ಅಧಿಕಾರ ಕೇಂದ್ರಕ್ಕೆ ಇರಲಿಲ್ಲ.
  • ಈಗ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದ ಮೇಲೂ ಎಲ್ಲ ರಾಜ್ಯಗಳಂತೆ ಚಲಾಯಿಸಲು ಅಧಿಕಾರಾತ್ಮಕ ಹಾಗೂ ಆರ್ಥಿಕ ಹಿಡಿತ ಹೊಂದಲು ಅವಕಾಶವಾಗಲಿದೆ.
  • ಜಮ್ಮು ಮತ್ತು ಕಾಶ್ಮೀರದವರಿಗೆ ಅಲ್ಲಿನ ಪೌರತ್ವದ ಜತೆಗೆ ಭಾರತದ ಪೌರತ್ವದೊಂದಿಗೆ ದ್ವಿಪೌರತ್ವ ಹೊಂದುವ ಅವಕಾಶವಿತ್ತು. ಇದೂ ಕೂಡ ರದ್ದಾಗಿ ಜಮ್ಮು ಮತ್ತು ಕಾಶ್ಮೀರದವರೂ ಭಾರತೀಯ ಪೌರತ್ವ ಮಾತ್ರ ಉಳಿಸಿಕೊಳ್ಳಲಿದ್ದಾರೆ.
  • ವಿಶೇಷ ಸ್ಥಾನ ಮಾನ ಇದ್ದುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಬೇರೆ ಯಾರೂ ಅಲ್ಲಿ ಆಸ್ತಿ ಅಥವಾ ಭೂಮಿಯನ್ನು ಖರೀದಿಸಲು ಅವಕಾಶವೇ ಇರಲಿಲ್ಲ. ಈಗ ಆ ಮಿತಿಯೂ ಹೋಗಲಿದ್ದು, ಇತರೆಡೆ ಇರುವಂತೆ ಯಾರು ಬೇಕಾದರೂ ಕಾಶ್ಮೀರದಲ್ಲಿ ಭೂ ವಹಿವಾಟು ನಡೆಸಬಹುದು.
  • ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದು, ಅಶಾಂತಿ ಮೂಡಿಸುವಂತಹ ಸನ್ನಿವೇಶ ಎದುರಾದಾಗ ಕೇಂದ್ರ ಸರ್ಕಾರ ನೇರವಾಗಿ ನಿಯಂತ್ರಿಸುವ ಅಧಿಕಾರವಿರಲಿಲ್ಲ. ತುರ್ತುಪರಿಸ್ಥಿತಿ ಘೋಷಣೆಯೂ ಅಸಾಧ್ಯವಾಗಿತ್ತು. ಈಗ ಇದು ಕೂಡ ಬದಲಾಗಿ ಕೇಂದ್ರ ಸರ್ಕಾರ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲಿದೆ.
  • ರಾಜ್ಯದ ಉಳಿಕೆ ಅಧಿಕಾರವು ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗದಲ್ಲಿತ್ತೇ ಹೊರತು ಭಾರತದ ಸಂಸತ್ತಿನಲ್ಲಿ ಅಲ್ಲ.
  • ಯುದ್ಧ ಅಥವಾ ಬಾಹ್ಯ ಆಕ್ರಮಣದ ನೆಲೆಯಲ್ಲಿ ಘೋಷಿಸಲಾದ ರಾಷ್ಟ್ರೀಯ ತುರ್ತುಸ್ಥಿತಿಯು ರಾಜ್ಯಕ್ಕೆ ಸ್ವಯಂಚಾಲಿತ ವಿಸ್ತರಣೆಯನ್ನು ಹೊಂದಿತ್ತು.
  • ಸಶಸ್ತ್ರ ದಂಗೆಯ ಆಧಾರದ ಮೇಲೆ ಘೋಷಿಸಲಾದ ರಾಷ್ಟ್ರೀಯ ತುರ್ತು ಪರಿಸ್ಥಿತಿಯು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಯಂಚಾಲಿತ ವಿಸ್ತರಣೆಯನ್ನು ಹೊಂದಿರಲಿಲ್ಲ.
  • ಆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿದ ನಂತರವೇ ರಾಜ್ಯಪಾಲರನ್ನು ನೇಮಿಸಬೇಕು.ರಾಷ್ಟ್ರಪತಿ ಆಳ್ವಿಕೆಯ ಹೊರತಾಗಿ, ಗರಿಷ್ಠ ಆರು ತಿಂಗಳ ಅವಧಿಗೆ ರಾಜ್ಯಪಾಲರ ಆಳ್ವಿಕೆಯನ್ನು ಸಹ ರಾಜ್ಯದಲ್ಲಿ ವಿಧಿಸಬಹುದು ಎನ್ನುವುದು ವಿಶೇಷ ಸ್ಥಾನಮಾನದಲ್ಲಿತ್ತು.
  • ಭಾರತೀಯ ಸಂವಿಧಾನದ 22 ನೇ ವಿಧಿಯಲ್ಲಿ ಉಲ್ಲೇಖಿಸಿರುವ ತಡೆಗಟ್ಟುವ ಬಂಧನ ಕಾನೂನುಗಳು ರಾಜ್ಯಕ್ಕೆ ಸ್ವಯಂಚಾಲಿತ ವಿಸ್ತರಣೆಯನ್ನು ಹೊಂದಿರಲಿಲ್ಲ.
  • ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೆಸರು, ಗಡಿ ಅಥವಾ ಪ್ರದೇಶವನ್ನು ರಾಜ್ಯ ಶಾಸಕಾಂಗದ ಒಪ್ಪಿಗೆಯಿಲ್ಲದೆ ಸಂಸತ್ತು ಬದಲಾಯಿಸಲು ಸಾಧ್ಯವಿರಲಿಲ್ಲ.
  • ಒಟ್ಟಾರೆ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನೀತಿಯ ನಿರ್ದೇಶನ ತತ್ವ ಮತ್ತು ಮೂಲಭೂತ ಕರ್ತವ್ಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಇದು ಭಾರತದ ಸಂಪೂರ್ಣ ಭಾಗವಾಗಿ ಒಂದೇ ಸಂವಿಧಾನದಡಿ ಬರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ