ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sahara Refund Portal: ಸಹರಾ ಸಹಕಾರಿ ಸಂಸ್ಥೆಯಿಂದ ಹಣ ಕಳೆದುಕೊಂಡವರಿಗೆ ಗುಡ್‌ನ್ಯೂಸ್‌, ರಿಫಂಡ್‌ ಪೋರ್ಟಲ್‌ ಆರಂಭ, ಇಲ್ಲಿದೆ ಲಿಂಕ್‌

Sahara refund portal: ಸಹರಾ ಸಹಕಾರಿ ಸಂಸ್ಥೆಯಿಂದ ಹಣ ಕಳೆದುಕೊಂಡವರಿಗೆ ಗುಡ್‌ನ್ಯೂಸ್‌, ರಿಫಂಡ್‌ ಪೋರ್ಟಲ್‌ ಆರಂಭ, ಇಲ್ಲಿದೆ ಲಿಂಕ್‌

Praveen Chandra B HT Kannada

Jul 19, 2023 11:06 AM IST

ಕೇಂದ್ರ ಸರಕಾರವು ಸಹರಾ ರಿಫಂಡ್‌ ಪ್ರಕ್ರಿಯೆ ಆರಂಭಿಸಿದೆ. ಸಹರಾ ರಿಫಂಡ್‌ ಪೋರ್ಟಲ್‌ನ ಲಿಂಕ್‌ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

  • CRCS Sahara refund portal: ಸಹಕಾರ ಸಹಕಾರಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡವರಿಗೆ ಶುಭ ಸುದ್ದಿ. ಕೇಂದ್ರ ಸರಕಾರವು ಸಹರಾ ರಿಫಂಡ್‌ ಪ್ರಕ್ರಿಯೆ ಆರಂಭಿಸಿದೆ. ಸಹರಾ ರಿಫಂಡ್‌ ಪೋರ್ಟಲ್‌ನ ಲಿಂಕ್‌ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಕೇಂದ್ರ ಸರಕಾರವು ಸಹರಾ ರಿಫಂಡ್‌ ಪ್ರಕ್ರಿಯೆ ಆರಂಭಿಸಿದೆ. ಸಹರಾ ರಿಫಂಡ್‌ ಪೋರ್ಟಲ್‌ನ ಲಿಂಕ್‌ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
ಕೇಂದ್ರ ಸರಕಾರವು ಸಹರಾ ರಿಫಂಡ್‌ ಪ್ರಕ್ರಿಯೆ ಆರಂಭಿಸಿದೆ. ಸಹರಾ ರಿಫಂಡ್‌ ಪೋರ್ಟಲ್‌ನ ಲಿಂಕ್‌ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಸಹಕಾರ ಸಹಕಾರಿ ಸಂಸ್ಥೆಯಲ್ಲಿ ಹಣ ಠೇವಣಿಯಿಟ್ಟು ಹಣ ಕಳೆದುಕೊಂಡವರಿಗೆ ಶುಭಸುದ್ದಿಯೆಂಬಂತೆ ಇದೀಗ ಸಹರಾ ರಿಫಂಡ್‌ ಪೋರ್ಟಲ್‌ (Sahara refund portal) ಆರಂಭವಾಗಿದೆ. ಕೇಂದ್ರ ಸರಕಾರವು ಸಹರಾ ರಿಫಂಡ್‌ ಪೋರ್ಟಲ್‌ ಆರಂಭಿಸಿದೆ. ಇದರಿಂದ ಹಣ ಕಳೆದುಕೊಂಡವರು ನಿರಾಳವಾಗಬಹುದು. ಈ ರಿಫಂಡ್‌ ಪೋರ್ಟಲ್‌ನಲ್ಲಿ ಕ್ಲೇಮ್‌ ಮಾಡಿದ 45 ದಿನದೊಳಗೆ ಖಾತೆದಾರರ ಅಕೌಂಟ್‌ಗೆ ಹಣದ ಮರುಪಾವತಿಯಾಗಲಿದೆ. ಗೃಹಸಚಿವರಾದ ಅಮಿತ್‌ ಶಾ ಅವರು ಈ ಆನ್‌ಲೈನ್‌ ಪೋರ್ಟಲ್‌ಗೆ ಚಾಲನೆ ನೀಡಿದ್ದು, ಸಹರಾದಲ್ಲಿ ಹಣ ಇನ್ವೆಸ್ಟ್‌ ಮಾಡಿ ಚಿಂತೆಗೀಡಾದವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

ಸಹರಾದಲ್ಲಿ ಜನರು ಸುಮಾರು 5 ಸಾವಿರ ಕೋಟಿ ರೂಪಾಯಿಯಷ್ಟು ಹಣ ಠೇವಣಿ ಇಟ್ಟಿದ್ದರು. ಇಷ್ಟು ಬೃಹತ್‌ ಮೊತ್ತವನ್ನು ಕೇಂದ್ರ ಸರಕಾರ ರಿಫಂಡ್‌ ಮಾಡಲಿದೆ. ಇದಕ್ಕಾಗಿ CRCS-Sahara Refund Portal ಆರಂಭಿಸಿದೆ. "ಠೇವಣಿದಾರರಿಗೆ 5 ಸಾವಿರ ಕೋಟಿ ರೂಪಾಯಿ ವಾಪಸ್‌ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಸಹರಾ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದವರು ಈ ಅವಕಾಶ ಬಳಸಿಕೊಳ್ಳಿ" ಎಂದು ಅಮಿತ್‌ ಶಾ ಹೇಳಿದ್ದಾರೆ.

ಸಹರಾ ರಿಫಂಡ್‌ ಡೈರೆಕ್ಟ್‌ ಲಿಂಕ್‌ ಇಲ್ಲಿದೆ: https://mocrefund.crcs.gov.in

ಸಹರಾ ರಿಫಂಡ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ಸಹರಾ ಗ್ರೂಪ್‌ ಸೊಸೈಟಿಯಲ್ಲಿ ಹಣ ಠೇವಣಿ ಇಟ್ಟವರು ಸಿಆರ್‌ಸಿಎಸ್‌ ಸಹರಾ ರಿಫಂಡ್‌ ಫೋರ್ಟಲ್‌ನಲ್ಲಿ ಹಣ ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು. ಈ ಮುಂದಿನ ಸಹಕಾರಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿರುವವರು ಅರ್ಜಿ ಸಲ್ಲಿಸಬಹುದು.

1)ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿ.

2)ಸಹರಾಯನ್ ಯುನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿ.

3) ಹುಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿ.

4)ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿ

ಅರ್ಜಿ ಸಲ್ಲಿಸುವುದು ಹೇಗೆ?

ಹಣ ಠೇವಣಿ ಇಟ್ಟವರು ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡಿರಬೇಕು. ಜತೆಗೆ, ಹೂಡಿಕೆಗೆ ಸಂಬಂಧಪಟ್ಟ ರಸೀದಿಗಳನ್ನು ಹೊಂದಿರಬೇಕು.

ಹಣ ರಿಫಂಡ್‌ ದೊರಕುವ ಸಮಯ

ಅರ್ಜಿ ಸಲ್ಲಿಸಿದ 45 ದಿನದೊಳಗೆ ರಿಫಂಡ್‌ ದೊರಕಲಿದೆ.

ಯಾರಿಗೆ ಲಾಭವಾಗಲಿದೆ?

ಈ ರಿಫಂಡ್‌ ಪೋರ್ಟಲ್‌ ಸುಮಾರು ಒಂದು ಕೋಟಿ ಹೂಡಿಕೆದಾರರಿಗೆ ಪ್ರಯೋಜನವಾಗಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಈ ಸಂಸ್ಥೆತಲ್ಲಿ 1.78 ಕೋಟಿ ಸಣ್ಣ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ. ಇವರ 30 ಸಾವಿರ ರೂ.ವರೆಗಿನ ಹಣ ಸಹಕಾರಿ ಸಂಸ್ಥೆಯಲ್ಲಿಯೇ ಉಳಿದಿದೆ. ಈ ಹಣ ವಾಪಸ್‌ ಪಡೆಯಲು ಈ ಪೋರ್ಟಲ್‌ ನೆರವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

  1. ಮೊದಲಿಗೆ ಸಿಆರ್‌ಸಿಎಸ್‌ ಸಹರಾ ರಿಫಂಡ್‌ ಪೋರ್ಟಲ್‌ಗೆ ಹೋಗಿ
  2. 12 ಅಂಕಿಗಳ ಸದಸ್ಯತ್ವ ಸಂಖ್ಯೆ ನಮೂದಿಸಿ. ಕೊನೆಯ ನಾಲ್ಕು ಸಂಖ್ಯೆ ನಿಮ್ಮ ಆಧಾರ್‌ ಸಂಖ್ಯೆ. ಆಧಾರ್‌ಗೆ ಲಿಂಕ್‌ ಆಗಿರುವ ಲಿಂಕ್‌ ಆಗಿರುವ 10 ಅಂಕಿಯ ಮೊಬೈಲ್‌ ಸಂಖ್ಯೆ. ಒಟಿಪಿ ಪಡೆಯಿರಿ.
  3. - ದೊರಕಿದ ಒಟಿಪಿ ನಮೂದಿಸಿ.
  4. - ಸಮ್ಮತಿ ಲಿಂಕ್‌ ಕ್ಲಿಕ್‌ ಮಾಡಿ. ಬಳಿಕ 12 ಸಂಖ್ಯೆಯ ಆಧಾರ್‌ ಸಂಖ್ಯೆ ಬರೆಯಿರಿ. ಮತ್ತೆ ಒಟಿಪಿ ಪಡೆಯಿರಿ, ಪಡೆದ ಒಟಿಪಿ ನಮೂದಿಸಿ.
  5. - ಠೇವಣಿಗೆ ಸಂಬಂಧಪಟ್ಟ ವಿವರ ನಮೂದಿಸಿ.
  6. - ಕ್ಲೇಮ್‌ ಸಬ್‌ಮಿಟ್‌ ಮಾಡಿ.
  7. ಎಲ್ಲಾ ವಿವರ ನಮೂದಿಸಿದ ಬಳಿಕ ಪೂರ್ಣವಾಗಿ ಭರ್ತಿಯಾದ ಕ್ಲೇಮ್‌ ಫಾರ್ಮ್‌ ದೊರಕುತ್ತದೆ. ಅದನ್ನು ಪಡೆಯಿರಿ. ಅದಕ್ಕೆ ನಿಮ್ಮ ಫೋಟೊಗ್ರಾಫ್‌ ಮತ್ತು ಸಹಿ ಅಂಟಿಸಿ.
  8. ಅಪ್ಲೋಡ್‌ ಡಾಕ್ಯುಮೆಂಟ್‌ ಎಂದು ಇರುವಲ್ಲಿ ಈ ಕ್ಲೇಮ್‌ಫಾರ್ಮ್‌ ಅನ್ನು ಅಪ್ಲೋಡ್‌ ಮಾಡಿ. 50 ಸಾವಿರ ರೂಗಿಂತ ಹೆಚ್ಚು ಮೊತ್ತ ರಿಫಂಡ್‌ ಪಡೆಯಲು ಪಾನ್‌ ಕಾರ್ಡ್‌ ಇರಬೇಕು.

ಎಷ್ಟು ರಿಫಂಡ್‌ ದೊರಕಲಿದೆ?

ಹತ್ತು ಸಾವಿರ ರೂ.ಗಿಂತ ಹೆಚ್ಚು ಹಣ ಠೇವಣಿ ಮಾಡಿದವರಿಗೆ ಮೊದಲ ಪಾವತಿಯಲ್ಲಿ 10 ಸಾವಿರ ರೂ.ವರೆಗೆ ರಿಫಂಡ್‌ ಮಾಡಲಾಗುತ್ತದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ