ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Narendra Modi: ಮುಂದಿನ ಅವಧಿಗೂ ನರೇಂದ್ರ ಮೋದಿ ಪ್ರಧಾನಿ; ಮೂಡ್ ಆಫ್‌ ದಿ ನೇಶನ್‌ ಹೇಳುವುದೇನು

PM Narendra Modi: ಮುಂದಿನ ಅವಧಿಗೂ ನರೇಂದ್ರ ಮೋದಿ ಪ್ರಧಾನಿ; ಮೂಡ್ ಆಫ್‌ ದಿ ನೇಶನ್‌ ಹೇಳುವುದೇನು

Umesh Kumar S HT Kannada

Aug 25, 2023 03:22 PM IST

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)

  • PM Narendra Modi: ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅನೇಕ ರಾಜಕೀಯ ಲೆಕ್ಕಾಚಾರಗಳು ಸಮೀಕ್ಷೆಗಳು ಗಮನಸೆಳೆಯತ್ತವೆ. ಇಂಡಿಯಾ ಟುಡೇ ಗ್ರೂಪ್‌ ಪ್ರಕಟಿಸಿರುವ ಮೂಡ್ ಆಫ್ ದಿ ನೇಷನ್‌ ಸಮೀಕ್ಷೆ ವಿವರ, ಮುಂದಿನ ಅವಧಿಗೂ ಪ್ರಧಾನಿಯಾಗಿ ಮುಂದುವರಿಯುವ ಸೂಚನೆ ಕೊಟ್ಟಿದೆ. ಮೋದಿಯವರ ಉತ್ತರಾಧಿಕಾರಿ ಯಾರಾಗಬಹುದು ಎಂಬ ಕುರಿತು ಸಮೀಕ್ಷೆಯ ದತ್ತಾಂಶ ಹೇಳುವುದೇನು? 

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)

ಲೋಕಸಭೆ ಚುನಾವಣೆ 2024ಕ್ಕೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ದೇಶ ನಿಧಾನವಾಗಿ ಚುನಾವಣಾ ಮೂಡ್‌ಗೆ ಬದಲಾಗತೊಡಗಿದೆ. ಈ ನಡುವೆ, ಹಲವಾರು ಪ್ರಶ್ನೆಗಳು ಕಾಡುತ್ತಿವೆ. ಎರಡು ಅವಧಿಗೆ ಬಿಜೆಪಿ ಕೇಂದ್ರದಲ್ಲಿ ಆಳ್ವಿಕೆ ನಡೆಸಿದೆ. ಬೆಲೆ ಏರಿಕೆ ಸೇರಿ ಹಲವು ವಿಚಾರಗಳ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆಯೇ? ಈ ರೀತಿ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇಂಡಿಯಾ ಟುಡೇ ಗ್ರೂಪ್‌ ಮತ್ತು ಸಿವೋಟರ್‍‌ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯ ವರದಿ ಪ್ರಕಟವಾಗಿದೆ.

ಟ್ರೆಂಡಿಂಗ್​ ಸುದ್ದಿ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

ಕಳೆದ 10 ವರ್ಷಗಳ ಅವಧಿಯಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲೂ ಏರಿಕೆ ಕಂಡಿದೆ. ಮುಂದಿನ ಚುನಾವಣೆಯ ಬಳಿಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರಾ? ಈ ಪ್ರಶ್ನೆಗೆ ದೇಶದ ಜನ ಯಾವ ರೀತಿ ಉತ್ತರಿಸಿದ್ದಾರೆ ಎಂಬುದನ್ನು ಇಂಡಿಯಾ ಟುಡೆ ಪ್ರಸ್ತುತ ಪಡಿಸಿದೆ. ಇದರಂತೆ, ಮುಂದಿನ ಅವಧಿಗೂ ಪ್ರಧಾನಿಯಾಗಿ ಮುಂದುವರಿಯಲು ನರೇಂದ್ರ ಮೋದಿ ಅವರು ಫಿಟ್ ಎಂದು ಶೇಕಡ 52 ಜನ ಹೇಳಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಶೇಕಡ 16 ಜನ ಬೆಂಬಲ ಸೂಚಿಸಿದ್ದಾರೆ.

ಯಾರಾಗಬಹುದು ಮುಂದಿನ ಪ್ರಧಾನಮಂತ್ರಿ

ಸಮೀಕ್ಷೆಯ ಅವಧಿನರೇಂದ್ರ ಮೋದಿ (ಪರವಾಗಿ ಒಲವು ತೋರಿದವರು ಶೇಕಡ)ರಾಹುಲ್ ಗಾಂಧಿ (ಪರವಾಗಿ ಒಲವು ತೋರಿದವರು)
ಜನವರಿ 20225307
ಆಗಸ್ಟ್ 20225309
ಜನವರಿ  20235314
ಆಗಸ್ಟ್ 20235216

ನರೇಂದ್ರ ಮೋದಿಯೇ ಯಾಕೆ ಪ್ರಧಾನಿಯಾಗಬೇಕು

ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಯಾಕಾಗಬೇಕು, ಯಾವೆಲ್ಲ ವಿಚಾರಗಳು ಅವರ ಪರವಾಗಿ ಕೆಲಸ ಮಾಡುತ್ತಿವೆ. ಮೂಡ್ ಆಫ್ ದಿ ನೇಶನ್ ಹೇಳುವುದೇನು? ಗಮನ ಸೆಳೆಯುವ ಅಂಶಗಳಿವು

  1. ಭಾರತದ ಆರ್ಥಿಕತೆ: ಭಾರತದ ಅರ್ಥವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ನಂಬರ್ 3ಕ್ಕೆ ಏರಲಿದೆ ಎಂಬ ಖಚಿತ ಭರವಸೆ. ಇದನ್ನು ಬೆಂಬಲಿಸಿ ಶೇಕಡ 33 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
  2. ರಾಮ ಮಂದಿರ: ರಾಮಮಂದಿರ ನಿರ್ಮಾಣದ ವಿಚಾರಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತೋರಿದ ಬದ್ಧತೆ ಗಮನಸೆಳೆಯುವಂಥದ್ದು. ಈ ವಿಚಾರವನ್ನು ಶೇಕಡ 17 ಜನ ಪ್ರಸ್ತಾಪಿಸಿದ್ದಾರೆ.
  3. ಏಕರೂಪ ನಾಗರಿಕ ಸಂಹಿತೆ (ಯೂನಿಫಾರ್ಮ್ ಸಿವಿಲ್ ಕೋಡ್) – ಇದರ ಅನುಷ್ಠಾನದ ವಿಚಾರ ಈಗ ಚರ್ಚೆಯಲ್ಲಿದೆ. ಇದು ಶೇಕಡ 12 ಕೆಲಸ ಮಾಡುತ್ತಿದೆ.
  4. ನಿರ್ಣಾಯಕ ಅಂಶಗಳು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಅಂಶಗಳ ಯಾವುದು ಎಂದು ಗಮನಿಸಿದಾಗ ಕಂಡು ಬಂದ ಅಂಶಗಳಿವು. ನರೇಂದ್ರ ಮೋದಿ ನಾಯಕತ್ವಕ್ಕೆ ಶೇಕಡ 44 ಜನ ಬೆಂಬಲ ವ್ಯಕ್ತಪಡಿಸಿದರೆ, ಶೇಕಡ 22 ಜನ ಅಭಿವೃದ್ಧಿಗೆ ಅಂದಿದ್ದಾರೆ. ಇನ್ನು ಶೇಕಡ 14 ಜನ ಹಿಂದುತ್ವಕ್ಕೆ ಮತ ಎಂದಿದ್ದಾರೆ.

ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಯಾರಾಗಬಹುದು

ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆ ರಾಜಕೀಯವಾಗಿ ಚರ್ಚೆಗೆ ಒಳಗಾಗುತ್ತಿದೆ. ಅಮಿತ್ ಶಾ, ಯೋಗಿ ಆದಿತ್ಯನಾಥ ಅವರ ಹೆಸರು ವ್ಯಾಪಕವಾಗಿ ಹರಿದಾಡುತ್ತಿದೆ. ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. ಇದರ ಪ್ರಕಾರ, ಅಮಿತ್ ಶಾ ಪರವಾಗಿ ಶೇಕಡ 29, ಯೋಗಿ ಆದಿತ್ಯನಾಥ ಅವರ ಪರವಾಗಿ ಶೇಕಡ 26, ನಿತಿನ್ ಗಡ್ಕರಿ ಪರವಾಗಿ ಶೇಕಡ 15 ಜನ ಒಲವು ತೋರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ