Iran calls on FIFA: ಫುಟ್ಬಾಲ್ ವಿಶ್ವಕಪ್‌ನಿಂದ ಅಮೆರಿಕವನ್ನು ಹೊರಹಾಕುವಂತೆ ಫಿಫಾಗೆ ಇರಾನ್ ಒತ್ತಾಯ; ಕಾರಣವೇನು?
Nov 28, 2022 01:13 PM IST
ಫಿಫಾ ವಿಶ್ವಕಪ್ ಮೈದಾನದ ಬಳಿ ಇರಾನ್ ಬೆಂಬಲಿಗರು
- USMNT ಖಾತೆಯು ಇರಾನಿನ ಧ್ವಜವನ್ನು ಅದರ ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳು ಮಾತ್ರವೇ ಇರುವ ಸರಳ ಚಿತ್ರವನ್ನು ಹಂಚಿಕೊಂಡಿದೆ. ಆದರೆ ಇದರಲ್ಲಿ ಧ್ವಜದಲ್ಲಿ ಬಹುಮುಖ್ಯ ಭಾಗ ಎನಿಸಿದ ಇಸ್ಲಾಮಿಕ್ ರಿಪಬ್ಲಿಕ್ ಚಿಹ್ನೆ ಇಲ್ಲ. ಇರಾನ್‌ನ ಸರ್ಕಾರಿ ಮಾಧ್ಯಮ ತಸ್ನಿಮ್ ನ್ಯೂಸ್ ಏಜೆನ್ಸಿ ಪ್ರಕಾರ, ಅಮೆರಿಕವು ಫಿಫಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಇರಾನ್ ದೇಶದ ಧ್ವಜದಲ್ಲಿ ಬದಲಾವಣೆ ಮಾಡಿದ ಚಿತ್ರವನ್ನು ಶೇರ್ ಮಾಡಿದ ಹಿನ್ನೆಲೆಯಲ್ಲಿ, ಫಿಫಾ ವಿಶ್ವಕಪ್‌ನಿಂದ USA ಯನ್ನು ಹೊರಹಾಕುವಂತೆ ಇರಾನ್‌ನ ರಾಜ್ಯ ಸಂಯೋಜಿತ ಮಾಧ್ಯಮವು ಒತ್ತಾಯಿಸಿದೆ ಫಿಫಾಗೆ ಮನವಿ ಮಾಡಿದೆ.
ಯುಎಸ್ ರಾಷ್ಟ್ರೀಯ ಫುಟ್ಬಾಲ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯು, ವಿಶ್ವಕಪ್ ಗ್ರೂಪ್ ಬಿಯಲ್ಲಿರುವ ತಂಡಗಳ ಅಂಕಪಟ್ಟಿಯನ್ನು ಚಿತ್ರವನ್ನು ಪೋಸ್ಟ್ ಮಾಡಿದೆ. ಆದರೆ ಈ ವೇಳೆ ಇರಾನ್‌ನ ಮೂರು ಬಣ್ಣಗಳ ಧ್ವಜದಿಂದ ಇಸ್ಲಾಮಿಕ್ ರಿಪಬ್ಲಿಕ್‌ನ "ಅಲ್ಲಾ" ಚಿಹ್ನೆ ಮತ್ತು "ತಕ್ಬೀರ್"ಗಳನ್ನು ತೆಗೆದುಹಾಕಿದೆ. ಇದು ಇರಾನ್ ನಾಗರಿಕರನ್ನು ಕೆರಳಿಸಿದೆ. ಇರಾನ್‌ನ ದೇವಪ್ರಭುತ್ವದ ನಾಯಕತ್ವದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.
USMNT ಖಾತೆಯು ಇರಾನಿನ ಧ್ವಜವನ್ನು ಅದರ ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳು ಮಾತ್ರವೇ ಇರುವ ಸರಳ ಚಿತ್ರವನ್ನು ಹಂಚಿಕೊಂಡಿದೆ. ಆದರೆ ಇದರಲ್ಲಿ ಧ್ವಜದಲ್ಲಿ ಬಹುಮುಖ್ಯ ಭಾಗ ಎನಿಸಿದ ಇಸ್ಲಾಮಿಕ್ ರಿಪಬ್ಲಿಕ್ ಚಿಹ್ನೆ ಇಲ್ಲ. ಇರಾನ್‌ನ ಸರ್ಕಾರಿ ಮಾಧ್ಯಮ ತಸ್ನಿಮ್ ನ್ಯೂಸ್ ಏಜೆನ್ಸಿ ಪ್ರಕಾರ, ಅಮೆರಿಕವು ಫಿಫಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ USMNT, “ಮೂಲ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇರಾನ್‌ನಲ್ಲಿ ಮಹಿಳೆಯರಿಗೆ ಬೆಂಬಲ” ಸೂಚಿಸುವ ಸಲುವಾಗಿ ಈ ಸೂಚಕವನ್ನು ಮಾಡಲಾಗಿದೆ. ಇದು ಏಕಕಾಲದ ಪೋಸ್ಟ್ ಅಷ್ಟೇ. ಮುಂದೆ ಭವಿಷ್ಯದಲ್ಲಿ ಇದನ್ನು ಮತ್ತೆ ಸರಿಪಡಿಸಲಾಗುವುದು ಎಂದು ಹೇಳಿದರು. ಅದರಂತೆಯೇ ಯುಎಸ್ ಬಾವುಟವನ್ನು ಸರಿಪಡಿಸಿ ತಡವಾಗಿ ಪೋಸ್ಟ್ ಮಾಡಿದೆ
"FIFA ನಿಯಮಗಳ ಸೆಕ್ಷನ್ 13ರ ಪ್ರಕಾರ, ದೇಶದ ಘನತೆ ಅಥವಾ ಸಮಗ್ರತೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ, ಅಥವಾ ಜನರ ಗುಂಪನ್ನು ಸೂಕ್ತ ಶಿಸ್ತಿನ ಕ್ರಮದ ಭಾಗವಾಗಿ ಕನಿಷ್ಠ ಹತ್ತು ಪಂದ್ಯಗಳು ಅಥವಾ ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸುವಿಕೆಯೊಂದಿಗೆ ಅನುಮೋದಿಸಲಾಗುತ್ತದೆ," ಎಂದು ಮಾಧ್ಯಮ ಸಂಸ್ಥೆ ಬರೆದುಕೊಂಡಿದೆ.
“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಧ್ವಜದ ವಿರೂಪಗೊಳಿಸಿದ ಚಿತ್ರವನ್ನು ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ, ಯುಎಸ್ ಫುಟ್‌ಬಾಲ್ ತಂಡವು ಫಿಫಾ ನಿಯಮಗಳನ್ನು ಉಲ್ಲಂಘಿಸಿದೆ. ಇದಕ್ಕಾಗಿ ಈ ತಂಡಕ್ಕೆ 10 ಪಂದ್ಯಗಳ ಅಮಾನತು ಸೂಕ್ತ ದಂಡವಾಗಿದೆ. ಯುಎಸ್‌ಎ ತಂಡವನನ್ನು ಫುಟ್ಬಾಲ್ ವಿಶ್ವಕಪ್‌ನಿಂದ ಹೊರಹಾಕಬೇಕು” ಎಂದು ಅದು ಒತ್ತಾಯಿಸಿದೆ.
ದೇಶದಲ್ಲಿ ವ್ಯಾಪಕ ಅಶಾಂತಿ ಮತ್ತು ಉದ್ವಿಗ್ನತೆ ಪರಿಸ್ಥಿತಿ ನಡುವೆಯೂ, ಇರಾನ್ ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಅಭಿಯಾನದಲ್ಲಿ ಪಾಲ್ಗೊಂಡಿದೆ. ಇಸ್ಲಾಮಿಕ್ ಗಣರಾಜ್ಯದ ಕೋರಿಕೆಯ ಮೇರೆಗೆ, 1979ರ ಇಸ್ಲಾಮಿಕ್ ಕ್ರಾಂತಿಯ ಮೊದಲು ಇರಾನ್‌ನ ರಾಷ್ಟ್ರೀಯ ಧ್ವಜವಾಗಿದ್ದ "ಸಿಂಹ ಮತ್ತು ಸೂರ್ಯ"ನ ಚಿತ್ರವಿರುವ ಬಾವುಟವನ್ನು ಇರಾನ್ ಅಭಿಮಾನಿಗಳು ಮೈದಾನಕ್ಕೆ ತರುವುದನ್ನು ಕತಾರ್ ಅಧಿಕಾರಿಗಳು ನಿಷೇಧಿಸಿದ್ದಾರೆ. ಇರಾನ್ ಬಾವುಟದಲ್ಲಿರುವ ಮೂರು ಬಣ್ಣಗಳು ‘ಮಹಿಳೆ, ಜೀವನ, ಸ್ವಾತಂತ್ರ್ಯ’ ಎಂಬ ಸಂದೇಶ ಸಾರುತ್ತವೆ."