Republic Day 2024: ಗಣರಾಜ್ಯೋತ್ಸವ ಕುರಿತು ನೀವು ತಿಳಿಯಬೇಕಾದ 15 ಕುತೂಹಲಕಾರಿ ಸಂಗತಿಗಳಿವು
Jan 25, 2024 08:48 PM IST
ಗಣರಾಜ್ಯೋತ್ಸವ ದಿನದಂದು ದೆಹಲಿಯ ಕರ್ತವ್ಯಪಥದಲ್ಲಿ ಭಾರತೀಯ ಸೇನಾಪಡೆಗಳು ಪರೇಡ್ ನಡೆಸಲಿವೆ
1950 ರಿಂದ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಗಣರಾಜ್ಯೋತ್ಸವದಲ್ಲಿ ಸೇನಾಪಡೆಗಳ ಶಕ್ತಿ ಪ್ರದರ್ಶನ ಸೇರಿ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರ: ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತದೆ. ಈ ಬಾರಿ 74ನೇ ಗಣರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳನ್ನು ನಡೆದಿದ್ದು, ನಾಳೆ (ಜನವರಿ 29, ಶುಕ್ರವಾರ) ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಭಾರತೀಯ ಸೇನಾಪಡೆಗಳು ಪರೇಡ್ ಹಾಗೂ ಸೇನೆಯ ಶಕ್ತಿಯನ್ನು ಪ್ರದರ್ಶಿಸುವ ಹಾಗೂ ದೇಶದ ವಿವಿಧ ರಾಜ್ಯಗಳ ಕಲೆ, ಸಾಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. 1950ರ ಜನವರಿ 26 ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು. ಅಂದಿನಿಂದ ಗಣರಾಜ್ಯೋತ್ಸವನ್ನು ಆಚರಿಸುತ್ತಾ ಬರಲಾಗಿದ್ದು, ಈ ಕುರಿತ 15 ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
1. ಪ್ರತಿ ಬಾರಿ ಗಣರಾಜ್ಯೋತ್ಸವನ್ನು ದೆಹಲಿ ಕರ್ತವ್ಯಪಥದಲ್ಲಿ ನಡೆಸಲಾಗುತ್ತದೆ. ಆದರೆ 1950 ರಿಂದ 1954ರ ವರೆಗೆ ಬೇರೆ ಬೇರೆ ಕಡೆಗಳಲ್ಲಿ ಆಚರಿಸಲಾಯಿತು. ಮೊದಲ ನಾಲ್ಕು ಗಣರಾಜೋತ್ಸವಗಳನ್ನು ಕ್ರಮವಾಗಿ ಇರ್ವಿನ್ ಸ್ಟೇಡಿಯಂ (ಈಗಿನ ನ್ಯಾಷನಲ್ ಸ್ಟೇಡಿಯಂ), ಕಿಂಗ್ಸ್‌ವೇ, ಕೆಂಪು ಕೋಟೆ ಹಾಗೂ ರಾಮಲೀಲಾ ಮೈದಾನದಲ್ಲಿ ಆಚರಿಸಲಾಗಿದೆ. 1955ಕ್ಕೂ ಮೊದಲು ರಾಜ್‌ಪಥವನ್ನು ಕಿಂಗ್ಸ್‌ವೇ ಎಂದು ಕರೆಯಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಜ್‌ಪಥವನ್ನು ಕರ್ತವ್ಯಪಥವಾಗಿ ಬದಲಾಯಿಸಿದೆ.
2. ಪ್ರತಿ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತದ ಆಪ್ತ ದೇಶಗಳ ಪ್ರಧಾನಿ, ರಾಷ್ಟ್ರಪತಿ ಅಥವಾ ಆ ದೇಶ ಪ್ರಮುಖ ಗಣ್ಯರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. 1950ರಲ್ಲಿ ಮೊದಲ ಬಾರಿ ಇಂಡೋನೇಷ್ಯಾದ ಅಧ್ಯಕ್ಷ ಡಾ ಸುಕರ್ನೊ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. 1955 ರ ಗಣರಾಜ್ಯೋತ್ಸವಕ್ಕೆ ಪಾಕಿಸ್ತಾನದ ಗವರ್ನರ್ ಜನರಲ್ ಮಲಿಕ್ ಗುಮಾಲ್ ಮೊಹಮ್ಮದ್ ಅವರನ್ನು ಆಹ್ವಾನಿಸಲಾಗಿತ್ತು
3. ಜನವರಿ 26ರ ಗಣರಾಜ್ಯೋತ್ಸವ ಕಾರ್ಯಕ್ರಮ ಈಗಿನ ಕರ್ತವ್ಯಪಥದಲ್ಲಿ ರಾಷ್ಟ್ರಪತಿಗಳ ಆಗಮನದೊಂದಿಗೆ ಆರಂಭವಾಗುತ್ತದೆ. ಸೇನೆಯ ಅಶ್ವದಳದ ಅಂಗರಕ್ಷಕರು ರಾಷ್ಟ್ರಪತಿಗಳನ್ನು ರಾಷ್ಟ್ರಪತಿ ಭವನದಿಂದ ಕರ್ತವ್ಯಪಥಕ್ಕೆ ಕರೆತರುತ್ತಾರೆ. ನಂತರ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆರಂಭವಾಗುತ್ತದೆ. ಗೌರವಾರ್ಥವಾಗಿ 25 ಪಾಂಡರ್ಸ್ ಎಂದು ಕರೆಯಲಾಗುವ ಭಾರತೀಯ ಸೇನೆಯ 7 ಫಿರಂಗಿಗಳನ್ನು 3 ಸುತ್ತುಗಳಲ್ಲಿ ಗುಂಡುಗಳನ್ನು ಸಿಡಿಸಲಾಗುತ್ತದೆ. ಈ ಫಿರಂಗಿಗಳನ್ನು 1941ರಲ್ಲಿ ತಯಾರಿಸಲಾಗಿದೆ. ಗನ್ ಸೆಲ್ಯೂಟ್ ಫೈರಿಂಗ್ ರಾಷ್ಟ್ರಗೀತೆ ಹಾಡುವ ಸರಿಯಾಗಿ ಹೊಂದಾಣಿಕೆಯಾಗುವಂತೆ ಮಾಡಲಾಗುತ್ತದೆ.
4. ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸದ ಪರೇಡ್‌ನಲ್ಲಿ ಭಾಗವಹಿಸುವ ತಂಡಗಳು ಸಮಾರಂಭ ಆರಂಭಕ್ಕೂ 3 ಗಂಟೆಗಳ ಮುಂಚಿತವಾಗಿಯೇ ಸ್ಥಳದಲ್ಲಿ ಹಾಜರಿರಬೇಕು. ಜನವರಿ 26 ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ತಂಡಗಳು ಹಿಂದಿನ ವರ್ಷದ ಜುಲೈನಲ್ಲಿಂದಲೇ ಅಭ್ಯಾಸವನ್ನು ಆರಂಭಿಸುತ್ತಾರೆ. ಸೇನಾ ಪಡೆಗಳು ತಮ್ಮ ರೆಜಿಮೆಂಟ್ ಕೇಂದ್ರಗಳಲ್ಲಿ ಆಗಸ್ಟ್ ಆಗಸ್ಟ್ ವರೆಗೆ ಅಭ್ಯಾಸ ನಡೆಸುತ್ತವೆ. ಪರೇಡ್‌ನಲ್ಲಿ ಭಾಗವಹಿಸುವ ಮುನ್ನ 600 ಗಂಟೆಗಳ ಕಾಲ ಅಭ್ಯಾಸ ನಡೆಸಿರುತ್ತಾರೆ.
5. ಇಂಡಿಯಾ ಗೇಟ್ ಆವರಣದ ಬಳಿ ಆಯೋಜಿಸುವ ವಿಶೇಷ ಶಿಬಿರದಲ್ಲಿ ಸೇನೆಯ ಎಲ್ಲಾ ಟ್ಯಾಂಕರ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಸೇನೆಯ ಎಲ್ಲಾ ಆಧುನಿಕ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಕರ್ತವ್ಯ ಪಥದಲ್ಲೂ ಸಾಗುತ್ತವೆ. ಪ್ರದರ್ಶನದಲ್ಲಿ ಭಾಗವಹಿಸುವ ಶಸ್ತ್ರಾಗಳನ್ನು 10 ಹಂತಗಳಲ್ಲಿ ಪರಿಶೀಲನೆ ಮಾಡಲಾಗಿರುತ್ತದೆ.
6. ಗಣರಾಜ್ಯೋತ್ಸವದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸುವ ಪ್ರತಿ ಗುಂಪು 12 ಕಿಲೋ ಮೀಟರ್ ವರೆಗೆ ಸಾಗುತ್ತದೆ. ಸದ್ಯ ಇದನ್ನು 9 ಕಿಲೋ ಮೀಟರ್‌ಗೆ ಸಮೀತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಭಾಗವಹಿಸಿರುತ್ತಾರೆ.
7. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಜನವರಿ 26 ಗಣರಾಜ್ಯೋತ್ಸವದಲ್ಲಿ ಆರಂಭದಿಂದ ಕೊನೆಯವರೆಗೆ ನಡೆಯುವ ಪ್ರತಿ ಕಾರ್ಯಕ್ರಮವೂ ಮೊದಲೇ ನಿಗದಿಯಾಗಿರುತ್ತದೆ. ಇದಕ್ಕಾಗಿ ತುಂಬಾ ಅಭ್ಯಾಸವನ್ನು ಮಾಡಲಾಗಿರುತ್ತದೆ. ಸಣ್ಣ ದೋಷವೂ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಕಾರ್ಯಕ್ರಮದ ಸಮಾರಂಭದಲ್ಲಿ ಒಂದು ನಿಮಿಷ ವಿಳಂಬವಾದರೂ ಹೆಚ್ಚುವರಿ ವೆಚ್ಚವಾಗುತ್ತದೆ.
8. ಪರೇಡ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸೇನಾ ಸಿಬ್ಬಂದಿಯನ್ನೂ 4 ಹಂತಗಳಲ್ಲಿ ತಪಾಸಣೆಗೆ ಒಳಗಾಗುತ್ತಾರೆ. ಸಿಬ್ಬಂದಿಯ ಕೈಯಲ್ಲಿ ಯಾವುದೇ ಲೈವ್ ಬುಲೆಟ್‌ಗಳು ಇಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ.
9. ಮೆರವಣಿಗೆಯಲ್ಲಿ ಸಾಗುವ ಸೇನಾ ವಾಹನಗಳು, ಸ್ತಬ್ಧಚಿತ್ರಗಳು ವಾಹನಗಳ ಗಂಟೆಗೆ 5 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ. ಇದರಿಂದ ಎಲ್ಲಾ ಸ್ತಬ್ಧಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು. ಮೆರವಣಿಗೆಯಲ್ಲಿ ಭಾಗವಹಿಸುವ ವಾಹನಗಳನ್ನು ಚಾಲಕರ ಸಣ್ಣ ಕಿಟಕಿಗಳ ಮೂಲಕ ಚಾಲನೆ ಮಾಡುತ್ತಾರೆ.
10. ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಆಗಸದಲ್ಲಿ ಸೇನೆಯ ವಿಮಾನಗಳ ಶಕ್ತಿ ಪ್ರದರ್ಶನವೂ ನಡೆಯುತ್ತದೆ. ತ್ರಿರಂಗದ ಮೂಲಕ ವಿಮಾನಗಳು ಕರ್ತವ್ಯಪಥದಲ್ಲಿ ಹಾದು ಹೋಗುತ್ತವೆ. ಸೇನೆಯ ವಿವಿಧ ಕೇಂದ್ರಗಳಿಂದ ಟೇಪ್‌ಆಫ್ ಆಗುವ ವಿಮಾನಗಳು ಸರಿಯಾದ ಸಮಯಕ್ಕೆ ಕರ್ತವ್ಯಪಥದಲ್ಲಿ ಸಾಗುತ್ತವೆ.
11. ಪ್ರತಿ ಗಣರಾಜೋತ್ಸವದಲ್ಲಿ ಅಬೈಡ್ ವಿತ್ ಮಿ ಎಂಬ ಹಾಡನ್ನು ಪ್ಲೇ ಮಾಡಲಾಗುತ್ತದೆ. ಇದು ಮಹಾತ್ಮ ಗಾಂಧಿ ಅವರ ನೆಚ್ಚಿನ ಗೀತೆಯಾಗಿದೆ. ಸದ್ಯಕ್ಕೆ ಈ ಗೀತೆಯನ್ನು ಪ್ಲೇ ಮಾಡುವುದನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ.
12. ಸ್ವದೇಶಿ ನಿರ್ಮಿತ ಐಎನ್‌ಎಸ್‌ಎಎಸ್ ರೈಫಲ್‌ಗಳೊಂದಿಗೆ ಕವಾಯತು ಮೆರವಣಿಗೆಯಲ್ಲಿ ಭಾಗವಹಿಸುವ ಸೇನಾ ಸಿಬ್ಬಂದಿ, ವಿಶೇಷ ಭದ್ರತಾ ಪಡೆಗಳ ಸಿಬ್ಬಂದಿ ಈ ಬಾರಿಯೂ ಇಸ್ರೇಲ್ ನಿರ್ಮಿತ ಟವೋರ್ ರೈಫಲ್‌ಗಳೊಂದಿಗೆ ಪಥ ಸಂಚಲದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
13. 2014ರ ಗಣರಾಜ್ಯೋತ್ಸವಕ್ಕೆ 320 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. 2001 ರಿಂದ 2014ರ ಅವಧಿಯಲ್ಲಿ ಈ ಮೊತ್ತ ಸುಮಾರು 145 ಕೋಟಿ ರೂಪಾಯಿ ಆಗಿತ್ತು. ಇದೀಗ ಈ ಖರ್ಚಿನ ಮೊತ್ತ ಹೆಚ್ಚಾಗಿರುತ್ತದೆ.
14. 1950 ಜನವರಿ 26 ರಿಂದ ಗಣರಾಜ್ಯೋತ್ಸವನ್ನು ನಡೆಸುತ್ತಿದ್ದರೂ 1955 ರಿಂದ ಕರ್ತವ್ಯಪಥದಲ್ಲಿ ಪರೇಡ್‌ಗಳನ್ನು ನಡೆಸಲಾಗುತ್ತಿದೆ.
15. ಭಾರತೀಯ ಸೇನೆ, ವಾಯು ಪಡೆ ಹಾಗೂ ನೌಕಾ ಪಡೆಯು ಜನವರಿ 29 ರಂದು ದೆಹಲಿಯ ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಅನ್ನು ಆಯೋಜಿಸುತ್ತದೆ. ಇದು ಗಣರಾಜ್ಯೋತ್ಸವ ಆಚರಣೆಯ ಮುಕ್ತಾಯದ ಸಂಕೇತವಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com)
ವಿಭಾಗ