ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Deflation: ದೇಶಾದ್ಯಂತ ಬೇಡಿಕೆ ದುರ್ಬಲ, ಹಿಮ್ಮುಖ ಹಣದುಬ್ಬರ ಸಂಕಷ್ಟದತ್ತ ಜಾರಿದ ಚೀನಾ, ಏನಿದು ಹಣದುಬ್ಬರವಿಳಿತ

China deflation: ದೇಶಾದ್ಯಂತ ಬೇಡಿಕೆ ದುರ್ಬಲ, ಹಿಮ್ಮುಖ ಹಣದುಬ್ಬರ ಸಂಕಷ್ಟದತ್ತ ಜಾರಿದ ಚೀನಾ, ಏನಿದು ಹಣದುಬ್ಬರವಿಳಿತ

Praveen Chandra B HT Kannada

Aug 09, 2023 11:07 AM IST

ಹಿಮ್ಮುಖ ಹಣದುಬ್ಬರ ಸಂಕಷ್ಟದತ್ತ ಜಾರಿದ ಚೀನಾ

    • China slips into deflation: ಇದೇ ಮೊದಲ ಬಾರಿಗೆ ಚೀನಾದಲ್ಲಿ ಹಿಮ್ಮುಖ ಹಣದುಬ್ಬರ ಅಥವಾ ಹಣದುಬ್ಬರವಿಳಿತ ಕಾಣಿಸಿಕೊಂಡಿದೆ. 2021ರ ಬಳಿಕ ಮೊದಲ ಬಾರಿಗೆ ಚೀನಾದಲ್ಲಿ ಗ್ರಾಹಕ ಮತ್ತು ಉತ್ಪಾದಕರ ಬೆಲೆ ಸಂಕುಚಿತವಾಗಿದೆ. ಇದು ಡಿಪ್ಲೇಷನ್‌ (deflation) ಸೂಚನೆಯಾಗಿದೆ. ಹಣದುಬ್ಬರವಿಳಿತ ಎಂದರೇನು ಅಥವಾ ಹಿಮ್ಮುಖ ಹಣದುಬ್ಬರ ಎಂದರೇನು ಎಂಬ ಮಾಹಿತಿಯೂ ಇಲ್ಲಿದೆ.
ಹಿಮ್ಮುಖ ಹಣದುಬ್ಬರ ಸಂಕಷ್ಟದತ್ತ ಜಾರಿದ ಚೀನಾ
ಹಿಮ್ಮುಖ ಹಣದುಬ್ಬರ ಸಂಕಷ್ಟದತ್ತ ಜಾರಿದ ಚೀನಾ

ಬೀಜಿಂಗ್‌: ಚೀನಾದ ಆರ್ಥಿಕ ಸ್ಥಿತಿ ಮತ್ತೊಂದು ಮಜಲು ತಲುಪಿದೆ. ಇಲ್ಲಿಯವರೆಗೆ ಹಣದುಬ್ಬರದ ಆತಂಕವಿದ್ದ ಆ ದೇಶಕ್ಕೆ ಈಗ ಹಣದುಬ್ಬರವಿಳಿತದ ಆತಂಕ ಎದುರಾಗಿದೆ. ಇದೇ ಮೊದಲ ಬಾರಿಗೆ ಚೀನಾದಲ್ಲಿ ಹಿಮ್ಮುಖ ಹಣದುಬ್ಬರ ಅಥವಾ ಹಣದುಬ್ಬರವಿಳಿತ ಕಾಣಿಸಿಕೊಂಡಿದೆ. 2021ರ ಬಳಿಕ ಮೊದಲ ಬಾರಿಗೆ ಚೀನಾದಲ್ಲಿ ಗ್ರಾಹಕ ಮತ್ತು ಉತ್ಪಾದಕರ ಬೆಲೆ ಸಂಕುಚಿತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ಜುಲೈ ತಿಂಗಳಲ್ಲಿ ಚೀನಾದ ಗ್ರಾಹಕ ಬೆಲೆ ಸೂಚ್ಯಂಕವು ಶೇಕಡ 0.3 ರಷ್ಟು ಕುಸಿದಿದೆ ಎಂದು ನ್ಯಾಷನಲ್ ಬ್ಯೂರೊ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂಕಿಅಂಶಗಳಿಂದ ತಿಳಿದುಬಂದಿದೆ. ಶೇಕಡಾ 0.4 ರಷ್ಟು ಕುಸಿತವನ್ನು ಬ್ಲೂಮ್‌ಬರ್ಗ್‌ ನಿರೀಕ್ಷಿಸಿತ್ತು. ದೇಶದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕೊರೊನಾ ಬಳಿಕದ ಆರ್ಥಿಕ ಚೇತರಿಕೆಗೆ ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಉತ್ಪಾದಕರ ಬೆಲೆ ಸೂಚ್ಯಂಕವು ಗಮನಾರ್ಹವಾಗಿ ಇಳಿಕೆ ಕಂಡಿದೆ. ದೇಶದ ಉತ್ಪಾದಕರು ಪಡೆದ ಔಟ್‌ಪುಟ್‌ಗಳು ಮತ್ತು ಮಾರಾಟದ ಬೆಲೆಗಳ ನಡುವೆ ಬದಲಾವಣೆಯನ್ನು ಈ ಸೂಚ್ಯಂಕ ಸೂಚಿಸುತ್ತದೆ. ಜುಲೈ ತಿಂಗಳಲ್ಲಿ ಉತ್ಪಾದಕರ ಬೆಲೆ ಸೂಚ್ಯಂಕವು ಶೇಕಡ 4.4ರಷ್ಟು ಕುಸಿದಿದೆ. ಶೇಕಡಾ 4.1ರಷ್ಟು ಕುಸಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಿಂತಲೂ ಹೆಚ್ಚು ಕುಸಿತ ದಾಖಲಿಸಿದೆ.

ಇದೇ ಸಂದರ್ಭದಲ್ಲಿ ಶಾಂಘೈ ಕಾಂಪೋಸಿಟ್ ಶೇಕಡಾ 0.29 ಮತ್ತು ಶೆನ್‌ಜೆನ್ ಕಾಂಪೊನೆಂಟ್ ಶೇಕಡಾ 0.21 ರಷ್ಟು ಕಡಿಮೆಯಾಗಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡಾ 0.42 ರಷ್ಟು ಕುಸಿದಿದೆ.

ಬೀಜಿಂಗ್‌ನ ರಫ್ತುವಹಿವಾಟು ಕಳೆದ ತಿಂಗಳು ವೇಗವಾಗಿ ಕುಸಿದಿವೆ. ಇದು ಮೂರು ವರ್ಷಗಳಲ್ಲಿಯೇ ಪ್ರಮುಖ ಕುಸಿತ. ಈ ವರದಿ ಬಿಡುಗಡೆಯಾದ ಬಳಿಕ ಎನ್‌ಬಿಎಸ್‌ ಅಂಕಿಅಂಶಗಳ ಪ್ರಕಟವಾಗಿದೆ. ಗ್ರಾಹಕರು ಸರಕುಗಳ ಮೇಲೆ ಖರ್ಚು ಮಾಡಲು ನಿರಾಕರಿಸಿದ ಕಾರಣ ಸತತ ಒಂಬತ್ತನೇ ತಿಂಗಳಿಗೆ ಆಮದು ಕೂಡ ಕಡಿಮೆಯಾಗಿದೆ. ಜನರು ಖರೀದಿಯಿಂದ ವಿಮುಖರಾಗುತ್ತಿರುವುದು ಆಮದು ವ್ಯವಹಾರದ ಮೇಲೆ ಪರಿಣಾಮ ಬೀರಿದೆ.

ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಕಂಪನಿಗಳು ತಮ್ಮ ಉತ್ಪಾದನೆಯನ್ನೂ ಕಡಿಮೆ ಮಾಡಿವೆ. ಹೊಸ ಉದ್ಯೋಗ ನೇಮಕಾತಿಯೂ ಕಡಿಮೆಯಾಗಿದೆ. ಅನಿವಾರ್ಯವಾಗಿ ತಮ್ಮಲ್ಲಿರುವ ಉತ್ಪನ್ನಗಳನ್ನು ವಿನಾಯಿತಿ ದರದಲ್ಲಿ ಮಾರಾಟ ಮಾಡುವ ಒತ್ತಡವು ಇವರ ಮೇಲೆ ಇದೆ. ಈ ಮೂಲಕ ಕೊಂಚವಾದರೂ ಲಾಭ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಮೆರಿಕದ ಫಿಚ್‌ ರೇಟಿಂಗ್‌ ಚೀನಾದ ರೇಟಿಂಗ್‌ ಕಡಿಮೆ ಮಾಡಿತ್ತು. ಇದರ ಬದಲು ಭಾರತದ ರೇಟಿಂಗ್‌ ಉತ್ತಮ ಪಡಿಸಿತ್ತು. ಭಾರತಕ್ಕೆ ಓವರ್‌ವೈಟ್‌ ರೇಟಿಂಗ್‌ ನೀಡಿತ್ತು. ಭಾರತದ ಆರ್ಥಿಕತೆ ಭವಿಷ್ಯದಲ್ಲಿ ಇನ್ನಷ್ಟು ಉತ್ತಮಗೊಳ್ಳುವ ಸೂಚನೆಯನ್ನು ಫಿಚ್‌ ರೇಟಿಂಗ್‌ ವ್ಯಕ್ತಪಡಿಸಿದೆ.

ಹಿಮ್ಮುಖ ಹಣದುಬ್ಬರ ಅಥವಾ ಹಣದುಬ್ಬರವಿಳಿತ ಎಂದರೇನು?

ಇದು ಹಣದುಬ್ಬರಕ್ಕೆ ವಿರುದ್ಧ. ದೇಶಾದ್ಯಂತ ಅಥವಾ ಒಟ್ಟಾರೆ ಅರ್ಥವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಆಗುವ ಸಾಮಾನ್ಯ ಕುಸಿತಕ್ಕೆ ಹಿಮ್ಮುಖ ಹಣದುಬ್ಬರ ಅಥವಾ ಹಣದುಬ್ಬರವಿಳಿತ ಎಂದು ಕರೆಯಲಾಗುತ್ತದೆ. ಹಣ ಮತ್ತು ಸಾಲದ ಪೂರೈಕೆಯಲ್ಲಿ ಆಗುವ ತೊಂದರೆಯೂ ಹೌದು. ಇದರಿಂದ ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಇದು ಹಣದುಬ್ಬರಕ್ಕೆ ವಿರುದ್ಧವಾಗಿದೆ ಮತ್ತು ದೇಶವೊಂದಕ್ಕೆ ಕೆಟ್ಟ ಪರಿಸ್ಥಿತಿಯ ಸೂಚನೆ ಎನ್ನಲಾಗುತ್ತದೆ. ಇದರಿಂದ ಆರ್ಥಿಕ ಬಿಕ್ಕಟ್ಟೂ ಉಂಟಾಆಗಬಹುದು. ಡಿಪ್ಲೇಶನ್‌ ಬಗ್ಗೆ ಸಕಾರಾತ್ಮಕ ಅಭಿಪ್ರಾಯವೂ ಇದೆ. ಇದು ತಂತ್ರಜ್ಞಾನದ ಪ್ರಗತಿಯ ಸಂಕೇತವೂ ಹೌದು ಎಂದು ಅರ್ಥೈಸಲಾಗುತ್ತದೆ. ಗ್ರಾಹಕರು ತಮ್ಮ ಸಹಜ ಆದಾಯದಲ್ಲಿ ಹೆಚ್ಚು ಸರಕು ಮತ್ತು ಸೇವೆ ಪಡೆಯಲು ಸಾಧ್ಯವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ