ಕನ್ನಡ ಸುದ್ದಿ  /  ಕ್ರೀಡೆ  /  ಸ್ಯಾಫ್ ಅಂಡರ್​-19 ಫೈನಲ್​ನಲ್ಲಿ ಟಾಸ್ ಮೂಲಕ ವಿಜೇತರ ಘೋಷಿಸಿ ವಿವಾದ; ಕಲ್ಲು, ಬಾಟಲಿ ಎಸೆದ ಬಾಂಗ್ಲಾದೇಶ ಅಭಿಮಾನಿಗಳು

ಸ್ಯಾಫ್ ಅಂಡರ್​-19 ಫೈನಲ್​ನಲ್ಲಿ ಟಾಸ್ ಮೂಲಕ ವಿಜೇತರ ಘೋಷಿಸಿ ವಿವಾದ; ಕಲ್ಲು, ಬಾಟಲಿ ಎಸೆದ ಬಾಂಗ್ಲಾದೇಶ ಅಭಿಮಾನಿಗಳು

Prasanna Kumar P N HT Kannada

Feb 09, 2024 01:44 PM IST

ಸ್ಯಾಫ್ ಅಂಡರ್​-19 ಫೈನಲ್​ನಲ್ಲಿ ಟಾಸ್ ಮೂಲಕ ವಿಜೇತರ ಘೋಷಿಸಿ ವಿವಾದ

    • IND vs BAN SAFF U19 Final : ಸ್ಯಾಫ್ ಅಂಡರ್-19 ಮಹಿಳಾ ಚಾಂಪಿಯನ್‌ಶಿಪ್ ಫೈನಲ್​​ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಟಾಸ್ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು. ಇದು ಭಾರಿ ಆಕ್ರೋಶಕ್ಕೆ ಗುರಿಯಾದ ಕಾರಣ ಭಾರತ ಮತ್ತು ಬಾಂಗ್ಲಾದೇಶ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
ಸ್ಯಾಫ್ ಅಂಡರ್​-19 ಫೈನಲ್​ನಲ್ಲಿ ಟಾಸ್ ಮೂಲಕ ವಿಜೇತರ ಘೋಷಿಸಿ ವಿವಾದ
ಸ್ಯಾಫ್ ಅಂಡರ್​-19 ಫೈನಲ್​ನಲ್ಲಿ ಟಾಸ್ ಮೂಲಕ ವಿಜೇತರ ಘೋಷಿಸಿ ವಿವಾದ (ANI)

ಫೆಬ್ರವರಿ 8ರ ಗುರುವಾರ ನಡೆದ ಭಾರತ-ಬಾಂಗ್ಲಾದೇಶ ನಡುವಿನ (India vs Bangladesh Saff U19) ಸ್ಯಾಫ್ ಅಂಡರ್-19 ಮಹಿಳಾ ಚಾಂಪಿಯನ್‌ಶಿಪ್ ಫೈನಲ್​​ ಡ್ರಾ ಸಾಧಿಸಿದ​ ನಂತರ ಟಾಸ್ ಮೂಲಕ ವಿಜೇತರನ್ನು ಘೋಷಿಸಲಾಯಿತು. ಆದರೆ ಇದು ವಿವಾದಕ್ಕೆ ದಾರಿ ಮಾಡಿಕೊಟ್ಟಿತು. ಫಲಿತಾಂಶವನ್ನು ನಿರ್ಧರಿಸುವ ರೆಫರಿಯ ಅಸಾಂಪ್ರದಾಯಿಕ ವಿಧಾನದ ಬಗ್ಗೆ ಬಾಂಗ್ಲಾದೇಶದ ಆಟಗಾರ್ತಿಯರು ಮತ್ತು ಪ್ರೇಕ್ಷಕರನ್ನು ಕೆರಳಿಸಿತು.

ಟ್ರೆಂಡಿಂಗ್​ ಸುದ್ದಿ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್​ ನದಿಯಲ್ಲಿ ಉದ್ಘಾಟನಾ ಸಮಾರಂಭ

11-11 ಗೋಲುಗಳಿಂದ ಸಮಬಲ

ಮೈದಾನದಲ್ಲಿ ರೆಫರಿ ನಿರ್ಧಾರದ ವಿರುದ್ಧ ಬಾಂಗ್ಲಾ ಅಭಿಮಾನಿಗಳು, ಬಾಟಲಿ ಮತ್ತು ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುನ್ನಚ್ಚರಿಕೆಯ ಸಲುವಾಗಿ ಭಾರತೀಯ ಆಟಗಾರ್ತಿಯರನ್ನು ಮೈದಾನ ತೊರೆಯುವಂತೆ ಅಧಿಕಾರಿಗಳು ಸೂಚಿಸಿದರು. ಫೈನಲ್ ಪಂದ್ಯದಲ್ಲಿ 11-11 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಈ ವೇಳೆ ವಿಜೇತರನ್ನು ನಿರ್ಧರಿಸಲು ರೆಫ್ರಿ ಟಾಸ್ ಮೊರೆ ಹೋದರು.

ಜಂಟಿ ವಿಜೇತರೆಂದು ಘೋಷಣೆ

ಟಾಸ್​ ಪ್ರಕ್ರಿಯೆಯಲ್ಲಿ ಗೆದ್ದ ಭಾರತ ತಂಡವನ್ನು ವಿಜೇತರೆಂದು ಘೋಷಿಸಲಾಯಿತು. ಪಂದ್ಯದ ಅಧಿಕಾರಿಗಳು ಮತ್ತು ಸಂಘಟಕರು ಕೆಲ ಹೊತ್ತು ಚರ್ಚೆ ನಡೆಸಿದರು. ತದನಂತರ ಭಾರತ ತಂಡದೊಂದಿಗೆ ಸಮಾಲೋಚನೆ ನಡೆಸಿದರು. ಆ ಬಳಿಕ ಬಾಂಗ್ಲಾದೇಶ ಮತ್ತು ಭಾರತವನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಆ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಯಿತು. ಪೊಲೀಸರು ಮಧ್ಯ ಪ್ರವೇಶಿಸಿದರು.

ಪೆನಾಲ್ಟಿಯಲ್ಲೂ ಸಮಬಲ

ಬಾಂಗ್ಲಾ ಮತ್ತು ಭಾರತ ನಡುವಿನ ಫೈನಲ್ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಹೀಗಾಗಿ ಆಟ ಕೊನೆಯ ಕ್ಷಣದವರೆಗೂ ಸಾಗಿತು. ನಿಗದಿತ ಸಮಯದಲ್ಲಿ ಪಂದ್ಯವು 1-1 ಅಂತರದಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಸಮಯದಲ್ಲಿ ಭಾರತ ಮುನ್ನಡೆ ಸಾಧಿಸಿತ್ತು. ಆದರೆ ನಿಗದಿತ 90ನಿಮಿಷಕ್ಕೂ ಮುನ್ನ 4 ನಿಮಿಷಗಳ ಕಾಲ ಹೆಚ್ಚುವರಿ ಸಮಯ ನೀಡಲಾಗಿತ್ತು. ಈ ಅವಧಿಯಲ್ಲಿ ಬಾಂಗ್ಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿತು. ಆ ಬಳಿಕ ಹೆಚ್ಚುವರಿ ನೀಡಲು ಅವಕಾಶ ಇರಲಿಲ್ಲ.

ಹೀಗಾಗಿ ಪೆನಾಲ್ಟಿ ಶೂಟೌಟ್​ ಮೊರೆ ಹೋಗಬೇಕಾಯಿತು. ಆದರೆ ಈ ವೇಳೆಯೂ 10-10 ಗೋಲುಗಳಿಂದ ಪಂದ್ಯವು ಸಮಬಲ ಸಾಧಿಸಿತು. ಹಾಗಾಗಿ ಕೊನೆಯಲ್ಲಿ ರೆಫರಿ ಟಾಸ್ ಮೂಲಕ ವಿಜೇತರನ್ನು ನಿರ್ಧರಿಸಿದರು. ಆದರೆ ಇದು ಕ್ರೋಶಕ್ಕೆ ಕಾರಣವಾಯಿತು. ಬಾಂಗ್ಲಾ ಅಭಿಮಾನಿಗಳು ಭಾರತವನ್ನು ಬಹಿಷ್ಕರಿಸಿ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದರು. ವಿವಾದ ಭುಗಿಲೇಳುತ್ತಿದ್ದಂತೆ ಜಂಟಿ ವಿಜೇತರನ್ನು ಘೋಷಿಸಲಾಯಿತು.

ಬ್ಲೂ ಕಾರ್ಡ್ ರೂಲ್​​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ

ಫುಟ್ಬಾಲ್ ಕ್ಷೇತ್ರದಲ್ಲಿ (Football) ಒಂದು ಕ್ರಾಂತಿಕಾರಿ ನಿಯಮದ ಬದಲಾವಣೆಗೆ ಸಿದ್ಧವಾಗಿದೆ. ಫುಟ್ಬಾಲ್ ಪ್ರಪಂಚವು ಹಳದಿ ಮತ್ತು ಕೆಂಪು ಕಾರ್ಡ್‌ಗಳ ಜೊತೆಗೆ ಮೂರನೇ ಕಾರ್ಡ್- ನೀಲಿ ಕಾರ್ಡ್‌ ನಿಮಯ (Blue Card rule) ಪರಿಚಯಿಸಲು ಚಿಂತನೆ ನಡೆಸಿದೆ. ‘ಬ್ಲೂ ಕಾರ್ಡ್‌’ ನಿಯಮ ಪರಿಚಯಿಸುವ ಮೂಲಕ ಕ್ರೀಡೆಯಲ್ಲಿ ಶಾಶ್ವತ ಬದಲಾವಣೆ ತರಲು ಚಿಂತನೆ ನಡೆದಿದೆ. ಈ ನಿಮಯದ ಪರಿಚಯಕ್ಕೆ ಸಹಿ ಹಾಕಲಾಗಿದ್ದು, ಶೀಘ್ರದಲ್ಲೇ ಪ್ರಯೋಗ ನಡೆಸಲಾಗುತ್ತದೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ