ಕನ್ನಡ ಸುದ್ದಿ  /  ಕ್ರೀಡೆ  /  Watch: ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಕಾಲು‌ ಮುಟ್ಟಿ ನಮಸ್ಕರಿಸಿದ ವಿರಾಟ್ ಕೊಹ್ಲಿ; ಅಭಿಮಾನಿಗಳ ಮನಗೆದ್ದ ವಿಡಿಯೋ

Watch: ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಕಾಲು‌ ಮುಟ್ಟಿ ನಮಸ್ಕರಿಸಿದ ವಿರಾಟ್ ಕೊಹ್ಲಿ; ಅಭಿಮಾನಿಗಳ ಮನಗೆದ್ದ ವಿಡಿಯೋ

Jayaraj HT Kannada

May 06, 2023 09:07 PM IST

ಕೋಚ್‌ ಪಾದ ಮುಟ್ಟಿದ ವಿರಾಟ್‌ ಕೊಹ್ಲಿ

    • ಕಾಲಿಗೆ ನಮಸ್ಕರಿಸುವ ಯೋಚನೆಯಲ್ಲಿ ಬಂದ ವಿರಾಟ್‌ ತಮ್ಮ ಕೈಯಲ್ಲಿದ್ದ ಗ್ಲೌಸ್‌ ತೆಗೆಯುತ್ತಾರೆ. ಹಾಗೆಯೇ ಮುಂದೆ ಬಂದು ಕೋಚ್‌ ಅವರ ಪಾದವನ್ನು ಬರಿಗೈಯಿಂದ ಸ್ಪರ್ಷಿಸಿ ನಮಸ್ಕರಿಸುತ್ತಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ.
ಕೋಚ್‌ ಪಾದ ಮುಟ್ಟಿದ ವಿರಾಟ್‌ ಕೊಹ್ಲಿ
ಕೋಚ್‌ ಪಾದ ಮುಟ್ಟಿದ ವಿರಾಟ್‌ ಕೊಹ್ಲಿ

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಮೈದಾನದಲ್ಲಿ ಅಪರೂಪದ ಕ್ಷಣವೊಂದು ನಡೆದಿದೆ. ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ (Virat Kohli) ತಮ್ಮ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ (Rajkumar Sharma) ಅವರನ್ನು ಮೈದಾನದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಗೌರವ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಈ ವಿಡಿಯೋವನ್ನು ಐಪಿಎಲ್‌ ತನ್ನ ಅಧಿಕೃತ ಟ್ವಿಟರ್ ಹಾಗೂ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಮೈದಾನದಲ್ಲಿ ಬಾಲ್ಯದ ಕೋಚ್‌ ರಾಜ್‌ಕುಮಾರ್ ಶರ್ಮಾರನ್ನು ನೋಡಿದ ಕೊಹ್ಲಿ ಅವರತ್ತ ವೇಗವಾಗಿ ನಡೆದುಕೊಂಡು ಬರುತ್ತಾರೆ. ಬರುವ ವೇಳೆ ಅವರ ಕಾಲಿಗೆ ನಮಸ್ಕರಿಸುವ ಯೋಚನೆಯಲ್ಲಿ ಬಂದ ವಿರಾಟ್‌ ತಮ್ಮ ಕೈಯಲ್ಲಿದ್ದ ಗ್ಲೌಸ್‌ ತೆಗೆಯುತ್ತಾರೆ. ಹಾಗೆಯೇ ಮುಂದೆ ಬಂದು ಕೋಚ್‌ ಅವರ ಪಾದವನ್ನು ಬರಿಗೈಯಿಂದ ಸ್ಪರ್ಷಿಸಿ ನಮಸ್ಕರಿಸುತ್ತಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಕಾಲಿಗೆ ನಮಸ್ಕರಿಸುವಾಗ ಕೈಯಲ್ಲಿದ್ದ ಗ್ಲೌಜ್‌ ತೆಗೆದಿರುವುದು ಅಭಿಮಾನಿಗಳ ಮನಗೆದ್ದಿದೆ.

ಕೊಹ್ಲಿಗೆ ಕೋಚಿಂಗ್‌ ನೀಡಿದ ಘಟನೆಯನ್ನು ನೆನಪಿಸಿಕೊಂಡ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ತಮ್ಮ ಆರಂಭಿಕ ದಿನಗಳಲ್ಲಿ ಹಿರಿಯ ವಯಸ್ಸಿನ ಆಟಗಾರರೊಂದಿಗೆ ಅಭ್ಯಾಸ ಮಾಡಲು ಕೊಹ್ಲಿ ಇಷ್ಟಪಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ಅವನು ಮೊದಲು ನನ್ನ ಬಳಿ ಬಂದಾಗ, ನಾನು ಅವನನ್ನು ಅಂಡರ್‌ 11 ತಂಡದೊಂದಿಗೆ ಹಾಕಿದ್ದೆ. ಆದರೆ, ಅವನು ಆತನಿಗಿಂತ ಜೂನಿಯರ್‌ಗಳೊಂದಿಗೆ ಆಡಲು ಇಷ್ಟಪಡುತ್ತಿರಲಿಲ್ಲ. ತಾನು ತನಗಿಂತ ಹಿರಿಯರೊಂದಿಗೆ ಆಡಲು ಬಯಸುವುದಾಗಿ ಹೇಳುತ್ತಿದ್ದ. ನೀನು ತುಂಬಾ ಚಿಕ್ಕವನಾಗಿರುವುದರಿಂದ ನಿನ್ನ ವಯಸ್ಸಿನ ಮಕ್ಕಳೊಂದಿಗೆ ಆಟವಾಡಬೇಕು ಎಂದು ನಾನು ಹೇಳುತ್ತಿದ್ದೆ. ಆದರೆ ಅವರು ನನ್ನನ್ನು ಔಟ್‌ ಮಾಡಲು ಸಾಧ್ಯವಿಲ್ಲ. ಅವರ ವಿರುದ್ಧ ನಾನು ಸುಲಭವಾಗಿ ಆಡಬಲ್ಲೆ ಎಂದು ಅವನು ಹೇಳುತ್ತಿದ್ದ” ಎಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ರಾಜ್‌ಕುಮಾರ್ ಆರ್‌ಸಿಬಿಗೆ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಈ ದಿನದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವನ್ನು ಎದುರಿಸುತ್ತಿದೆ. ಡೆಲ್ಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ