ಕನ್ನಡ ಸುದ್ದಿ  /  ಕ್ರೀಡೆ  /  Csk News: ನಾಯಕತ್ವದಿಂದ ಕೈಬಿಟ್ಟಿದ್ದಕ್ಕೆ ಹೊರನಡೆದಿದ್ದ ಜಡೇಜಾ!, ಸುದೀರ್ಘ ಸಂಧಾನ ನಡೆಸಿದ್ರು ಮಾಹಿ: ವರದಿ ಹೇಳಿದ್ದೇನು?

CSK News: ನಾಯಕತ್ವದಿಂದ ಕೈಬಿಟ್ಟಿದ್ದಕ್ಕೆ ಹೊರನಡೆದಿದ್ದ ಜಡೇಜಾ!, ಸುದೀರ್ಘ ಸಂಧಾನ ನಡೆಸಿದ್ರು ಮಾಹಿ: ವರದಿ ಹೇಳಿದ್ದೇನು?

HT Kannada Desk HT Kannada

Mar 26, 2023 02:50 PM IST

ಧೋನಿ-ಜಡೇಜಾ

  • ಜಡೇಜಾ ಮತ್ತು ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ಈಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿರುವಂತಿದೆ.

ಧೋನಿ-ಜಡೇಜಾ
ಧೋನಿ-ಜಡೇಜಾ (BCCI)

ರವೀಂದ್ರ ಜಡೇಜಾ ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈಗಾಗಲೇ ಫ್ರ್ಯಾಂಚೈಸಿಯ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳಲ್ಲಿ ಜಡ್ಡು ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ವಿವಿಧ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಅವರು ನಗುತ್ತಾ ಓಡಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್​ ನದಿಯಲ್ಲಿ ಉದ್ಘಾಟನಾ ಸಮಾರಂಭ

2022ರಲ್ಲಿ ನಡೆದ ಕಳೆದ ಋತುವಿನ ಐಪಿಎಲ್‌ನಲ್ಲಿ, ಸಿಎಸ್‌ಕೆ ಹೀನಾಯವಾಗಿ ಸೋತು ಅಂಕಪಟ್ಟಿಯಲ್ಲಿ ಕೆಳಪಂಕ್ತಿಯಲ್ಲಿತ್ತು. ಆರಂಭದ ಪಂದ್ಯಗಳಲ್ಲಿ ಜಡೇಜಾ ತಂಡದ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ಸತತ ಸೋಲಿನ ಸುಳಿಗೆ ಸಿಕ್ಕ ತಂಡವು, ಬಳಿಕ ನಾಯಕತ್ವ ಬದಲಾವಣೆಯ ಮೊರೆ ಹೋಗಿತ್ತು. ಹೀಗಾಗಿ ಸಿಎಸ್‌ಕೆ ಜೊತೆಗಿನ ಜಡೇಜಾ ಅವರ ನಂಟಿನ ಕುರಿತು ಎಂಟಾರು ಪ್ರಶ್ನೆಗಳು ಎದ್ದಿದ್ದವು. ಜಡೇಜಾ ಮತ್ತು ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ಈಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿರುವಂತಿದೆ.

ಕಳೆದ ವರ್ಷದ ಋತುವಿನ ಆರಂಭಕ್ಕೆ ಕೇವಲ ಎರಡು ದಿನ ಮುಂಚಿತವಾಗಿ ಜಡೇಜಾರನ್ನು ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಅವರ ನಾಯಕತ್ವದಲ್ಲಿ ತಂಡವು ಸೋಲಿನ ಸುಳಿಯಲ್ಲಿ ಸಿಲುಕಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡನೇ ಬಾರಿಗೆ ನಾಕೌಟ್‌ ಸ್ಪರ್ಧೆಯಿಂದ‌ ತಂಡ ಹೊರಬಿದ್ದಿತು. ಅದರ ಬೆನ್ನಲ್ಲೇ ಜಡೇಜಾರನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು. ಹಳೆಯ ಸೀಸನ್‌ನಂತೆ ಮತ್ತೆ ಎಂಎಸ್‌ ಧೋನಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯ್ತು. ಐಪಿಎಲ್‌ನ ಮೊದಲ ಸೀಸನ್‌ನಿಂದಲೂ ತಂಡದ ನಾಯಕರಾಗಿರುವ ಮಾಹಿ, ನಾಲ್ಕು ಬಾರಿ ತಂಡವನ್ನು ಟ್ರೋಫಿ ಗೆಲ್ಲುವತ್ತ ಮುನ್ನಡೆಸಿದ್ದರು. 2022ರ ಆವೃತ್ತಿಗೂ ಮೊದಲು ಒಂದು ಋತುವಿನಲ್ಲಿ ಮಾತ್ರ ತಂಡ ಪ್ಲೇ-ಆಫ್‌ ಹಂತ ತಲುಪಲು ವಿಫಲವಾಗಿತ್ತು. ಧೋನಿಗೆ ನಾಯಕತ್ವ ಹಸ್ತಾಂತರಿಸಿದ ಬೆನ್ನಲ್ಲೇ, ಋತುವಿನ ಕೊನೆಯ ಕೆಲ ಪಂದ್ಯಗಳಿಂದ ಜಡೇಜಾರನ್ನು ಹೊರಗಿಡಲಾಯ್ತು. ಗಾಯವನ್ನು ಉಲ್ಲೇಖಿಸಿ ಫ್ರಾಂಚೈಸಿಯು ಅವರನ್ನು ತಂಡದಿಂದ ಕೈಬಿಟ್ಟಿತು.

ಜಡೇಜಾ ಅವರು ಕಳೆದ ಋತುವಿನ ಕೊನೆಯ ಹಂತಗಳಲ್ಲಿ ತಂಡದ ಹೋಟೆಲ್‌ನಿಂದ ಹೊರನಡೆದಿದ್ದರು ಎಂದು ವರದಿಯಾಗಿದೆ. ಕ್ರಿಕ್‌ಬಜ್ ವರದಿ ಪ್ರಕಾರ, ಧೋನಿ ಮತ್ತು ಸಿಇಒ ಕಾಸಿ ವಿಶ್ವನಾಥನ್ ಅವರು ಜಡೇಜಾರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರಂತೆ. ಈ ವೇಳೆ ಫ್ರಾಂಚೈಸಿ ಹಾಗೂ ಜಡೇಜಾ ನಡುವಿನ ಎಲ್ಲಾ ಭಿನ್ನಾಭಿಪ್ರಾಯ ಹಾಗೂ ತಪ್ಪು ತಿಳುವಳಿಕೆಗೆ ಅಂತ್ಯ ಹಾಡಲಾಯ್ತು ಎನ್ನಲಾಗಿದೆ. ಇದೇ ವೇಳೆ ತನ್ನನ್ನು ಕೆರಳಿಸಿದ ಮತ್ತು ಅಸಮಾಧಾನಕ್ಕೆ ಕಾರಣವಾದ ಎಲ್ಲಾ ಅಂಶಗಳ ಕುರಿತು ಜಡೇಜಾ ಅವರು ಧೋನಿ ಮತ್ತು ವಿಶ್ವನಾಥನ್‌ಗೆ ವಿವರಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ತಂಡದಿಂದ ತಾನು ಏನನ್ನು ನಿರೀಕ್ಷಿಸುತ್ತೇನೆ ಎಂಬುದರ ಕುರಿತಾಗಿಯೂ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಮೂವರೂ ಎರಡು ಬಾರಿ ಒಟ್ಟು ಸೇರಿ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಅಸಮಾಧಾನಕ್ಕೆ ಕಾರಣವಾದ ಒಂದೆರಡು ಅಂಶಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ಮೊದಲನೆಯದ್ದು ನಾಯಕತ್ವವನ್ನು ಅವರಿಂದ ಕಿತ್ತುಕೊಂಡಿರುವುದು. ಎರಡನೆಯದು ಅವರು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂಬುದಾಗಿದೆ.

ಸಾಮಾನ್ಯವಾಗಿ ಬ್ಯಾಟಿಂಗ್, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲೂ ಸಿಎಸ್‌ಕೆ ತಂಡದ ಪ್ರಬಲ ಆಟಗಾರನಾಗಿರುವ ಜಡೇಜಾ, ಕಳೆದ ಆವೃತ್ತಿಯಲ್ಲಿ 19ರ ಸರಾಸರಿಯಲ್ಲಿ 116 ರನ್ ಮಾತ್ರ ಗಳಿಸಿದ್ದರು. 7.52ರ ಎಕಾನಮಿ ದರದಲ್ಲಿ ಬೌಲಿಂಗ್‌ ಮಾಡಿ ಐದು ವಿಕೆಟ್‌ಗಳನ್ನು ಪಡೆದಿದ್ದರು. ‌ನಾಯಕತ್ವದ ಹೊರೆಯಿಂದಾಗಿ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಆ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳಲಾಯ್ತು ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಸಿಎಸ್‌ಕೆ ತಂಡವು ಮಾರ್ಚ್ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧಕಣಕ್ಕಿಳಿಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ