ಕನ್ನಡ ಸುದ್ದಿ  /  ಕ್ರೀಡೆ  /  Blue Card Rule: ಬ್ಲೂ ಕಾರ್ಡ್ ರೂಲ್​​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ

Blue Card rule: ಬ್ಲೂ ಕಾರ್ಡ್ ರೂಲ್​​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ

Prasanna Kumar P N HT Kannada

Feb 09, 2024 11:12 AM IST

ಬ್ಲೂ ಕಾರ್ಡ್ ರೂಲ್​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ

    • Blue Card rule : ಫುಟ್ಬಾಲ್ ಕ್ಷೇತ್ರದಲ್ಲಿ ನೂತನ ನಿಯಮ ಬ್ಲೂ ಕಾರ್ಡ್ ಪರಿಚಯಿಸಲು ಇಂಟರ್‌ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ ​​ಬೋರ್ಡ್ ಮುಂದಾಗಿದೆ. ಆದರೆ ಇನ್ನೂ ಪ್ರಯೋಗದ ಭಾಗವಾಗಿದೆ.
ಬ್ಲೂ ಕಾರ್ಡ್ ರೂಲ್​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ
ಬ್ಲೂ ಕಾರ್ಡ್ ರೂಲ್​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ

ಫುಟ್ಬಾಲ್ ಕ್ಷೇತ್ರದಲ್ಲಿ (Football) ಒಂದು ಕ್ರಾಂತಿಕಾರಿ ನಿಯಮದ ಬದಲಾವಣೆಗೆ ಸಿದ್ಧವಾಗಿದೆ. ಫುಟ್ಬಾಲ್ ಪ್ರಪಂಚವು ಹಳದಿ ಮತ್ತು ಕೆಂಪು ಕಾರ್ಡ್‌ಗಳ ಜೊತೆಗೆ ಮೂರನೇ ಕಾರ್ಡ್- ನೀಲಿ ಕಾರ್ಡ್‌ ನಿಮಯ (Blue Card rule) ಪರಿಚಯಿಸಲು ಚಿಂತನೆ ನಡೆಸಿದೆ. ‘ಬ್ಲೂ ಕಾರ್ಡ್‌’ ನಿಯಮ ಪರಿಚಯಿಸುವ ಮೂಲಕ ಕ್ರೀಡೆಯಲ್ಲಿ ಶಾಶ್ವತ ಬದಲಾವಣೆ ತರಲು ಚಿಂತನೆ ನಡೆದಿದೆ. ಈ ನಿಮಯದ ಪರಿಚಯಕ್ಕೆ ಸಹಿ ಹಾಕಲಾಗಿದ್ದು, ಶೀಘ್ರದಲ್ಲೇ ಪ್ರಯೋಗ ನಡೆಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಇಂಟರ್‌ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ ​​ಬೋರ್ಡ್ (IFAB: International Football Association Board) ಪ್ರಯೋಗದ ಭಾಗವಾಗಿ ನೀಲಿ ಕಾರ್ಡ್ ಪರಿಚಯಿಸಲಾಗುತ್ತಿದೆ. ಫೆಬ್ರವರಿ 9ರಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ನಿಯಮ ಬದಲಾವಣೆ ಜಾರಿಗೆ ಬಂದರೆ, 50 ವರ್ಷಗಳ ನಂತರ ಮೊದಲ ಬಾರಿಗೆ ಫುಟ್ಬಾಲ್​ನಲ್ಲಿ ಹೊಸ ನಿಯಮ ಜಾರಿಗೆ ಬಂದಂತಾಗುತ್ತದೆ. ಈ ಹಿಂದೆ ಅಂದರೆ 1970ರ ಫಿಫಾ ವಿಶ್ವಕಪ್​ನಲ್ಲಿ ಹಳದಿ, ಬಿಳಿ ಮತ್ತು ಕೆಂಪು ಕಾರ್ಡ್‌ಗಳನ್ನು ಫುಟ್‌ಬಾಲ್‌ನಲ್ಲಿ ಅಂತಹ ಯಾವುದೇ ಕ್ರಮವನ್ನು ಕೊನೆಯ ಬಾರಿಗೆ ಪರಿಚಯಿಸಲಾಯಿತು.

ನೀಲಿ ಕಾರ್ಡ್ ಏನು ಮಾಡುತ್ತದೆ?

ಹಾಕಿ ಮತ್ತು ರಗ್ಬಿಯಲ್ಲಿ ನೀಲಿ ಕಾರ್ಡ್‌ ಬಳಕೆ ಜಾರಿಯಲ್ಲಿದೆ. ಫುಟ್ಬಾಲ್ ಮೈದಾನದಲ್ಲಿ ಅನುಚಿತವಾಗಿ ವರ್ತಿಸುವ ಆಟಗಾರರನ್ನು ಪರೀಕ್ಷಿಸಲು ಹೊಸ ನೀಲಿ ಕಾರ್ಡ್ ಬಳಕೆ ಮಾಡಲಾಗುತ್ತದೆ. ಈ ಕಾರ್ಡ್ ಸಹಾಯದಿಂದ, ಆಟಗಾರನನ್ನು 10 ನಿಮಿಷಗಳ ಕಾಲ ಮೈದಾನದಿಂದ ಹೊರಗೆ ಕಳುಹಿಸಬಹುದು. ಫುಟ್‌ಬಾಲ್‌ನಲ್ಲಿ ಈಗಾಗಲೇ ಹಳದಿ, ಕೆಂಪು ಮತ್ತು ಬಿಳಿ ಕಾರ್ಡ್‌ಗಳಿದ್ದರೆ, ಈಗ ಹೊಸ ನೀಲಿ ಕಾರ್ಡ್ ಅನ್ನು ಪರಿಚಯಿಸಲಾಗುತ್ತಿದೆ.

ಹಲವಾರು ದಶಕಗಳಿಂದ ಫುಟ್ಬಾಲ್‌ನಲ್ಲಿ ಹಳದಿ ಮತ್ತು ಕೆಂಪು ಕಾರ್ಡ್‌ಗಳನ್ನು ಬಳಸಲಾಗುತ್ತಿದೆ ಎಂದು ಅಭಿಮಾನಿಗಳಿಗೆ ತಿಳಿದಿದೆ. ಆಟಗಾರನು ಮೈದಾನದಲ್ಲಿ ಗಂಭೀರ ತಪ್ಪು ಎಸಗಿದರೆ ಅಥವಾ ರೆಫರಿಯೊಂದಿಗೆ ದುಷ್ಕ್ಯತ್ಯಕ್ಕೆ ಮುಂದಾದರೆ, ರೆಫರಿಗಳು ನೀಲಿ ಕಾರ್ಡ್ ಮೂಲಕ ಆಟಗಾರನನ್ನು 10 ನಿಮಿಷಗಳ ಕಾಲ ಹೊರಗೆ ಕಳುಹಿಸುವ ಅವಕಾಶ ಪಡೆಯುತ್ತಾರೆ. ಇದಲ್ಲದೆ, ಒಂದೇ ಪಂದ್ಯದಲ್ಲಿ ಎರಡು ಬಾರಿ ನೀಲಿ ಕಾರ್ಡ್ ತೋರಿಸಿದರೆ ಅಥವಾ ನೀಲಿ ಕಾರ್ಡ್ ಮತ್ತು ಹಳದಿ ಕಾರ್ಡ್ ತೋರಿಸಿದರೆ, ಆ ಆಟಗಾರನಿಗೆ ಆ ಪಂದ್ಯದಲ್ಲಿ ರಿಂಗ್ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

ನೀಲಿ ಕಾರ್ಡ್‌ಗಳನ್ನು ಯಾವಾಗ ಪರಿಚಯಿಸಲಾಗುತ್ತದೆ?

ಈ ನೀಲಿ ಕಾರ್ಡ್ ಅನ್ನು ಮೊದಲು ಸ್ಥಳೀಯ ಪಂದ್ಯಗಳಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ನಂತರ ನಿಧಾನವಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತರಲಾಗುವುದು. ಈ ನೀಲಿ ಕಾರ್ಡ್ ಪರೀಕ್ಷೆಯು ಫುಟ್ಬಾಲ್ ಅಸೋಸಿಯೇಷನ್ ಕಪ್ ಮತ್ತು ಮಹಿಳೆಯರ ಫುಟ್ಬಾಲ್ ಅಸೋಸಿಯೇಷನ್ ಕಪ್ ಪಂದ್ಯಾವಳಿಗಳಲ್ಲಿ ಪ್ರಾರಂಭವಾಗಬಹುದು. ಆದರೆ ಈ ಕಾರ್ಡ್ ಅನ್ನು ಈಗಾಗಲೇ ವೇಲ್ಸ್‌ನಲ್ಲಿ ನಡೆದ ಸಣ್ಣ ಫುಟ್ಬಾಲ್ ಪಂದ್ಯದಲ್ಲಿ ಬಳಸಲಾಗಿದೆ. ವರದಿಯ ಪ್ರಕಾರ, ಹಳದಿ ಮತ್ತು ಕೆಂಪು ಬಣ್ಣಗಳಿಗೆ ಸಂಪೂರ್ಣವಾಗಿ ವಿಭಿನ್ನವಾದ ಈ ನೀಲಿ ಕಾರ್ಡ್ ಅನ್ನು ಆಯ್ಕೆ ಮಾಡಲಾಗಿದೆ.

ಫಿಫಾ ಏನು ಹೇಳಿದೆ?

ಉನ್ನತ ಸ್ಪರ್ಧೆಗಳಲ್ಲಿ ನೀಲಿ ಕಾರ್ಡ್‌ ಬಳಕೆಗೆ ಫಿಫಾ ನಿರಾಕರಿಸಿದೆ. ಫುಟ್‌ಬಾಲ್‌ನ ಪ್ರಸಿದ್ಧ ಟೂರ್ನಿಗಳಲ್ಲಿ 'ಬ್ಲೂ ಕಾರ್ಡ್' ಬಳಕೆ ಇಲ್ಲ. ಇದು ಅಕಾಲಿಕವಾಗಿದೆ ಎಂದು ಫಿಫಾ ಸ್ಪಷ್ಟಪಡಿಸಿದೆ. ಅಂತಹ ಯಾವುದೇ ಪ್ರಯೋಗಗಳನ್ನು ಕಾರ್ಯಗತಗೊಳಿಸಿದರೆ, ಕೆಳ ಹಂತಗಳಲ್ಲಿ ಜವಾಬ್ದಾರಿಯುತ ರೀತಿಯಲ್ಲಿ ಪರೀಕ್ಷೆಗೆ ಸೀಮಿತವಾಗಿರಬೇಕು. ಮಾರ್ಚ್ 1 ರಂದು ಐಎಫ್​ಎಬಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ