ಕನ್ನಡ ಸುದ್ದಿ  /  ಮನರಂಜನೆ  /  Deepika Padukone: ನಾನು ಹರೆಯದಲ್ಲಿದ್ದಾಗ ಹೊಸ ನಗರದಲ್ಲಿ ತುಂಬಾ ಕಷ್ಟಪಟ್ಟಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ದೀಪಿಕಾ ಪಡುಕೋಣೆ

Deepika Padukone: ನಾನು ಹರೆಯದಲ್ಲಿದ್ದಾಗ ಹೊಸ ನಗರದಲ್ಲಿ ತುಂಬಾ ಕಷ್ಟಪಟ್ಟಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ದೀಪಿಕಾ ಪಡುಕೋಣೆ

Praveen Chandra B HT Kannada

Nov 15, 2023 11:51 AM IST

ದೀಪಿಕಾ ಪಡುಕೋಣೆ

    • Deepika Padukone: ಸದ್ಯ ಬಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಪ್ರಮುಖ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ ಹಿಂದೊಮ್ಮೆ ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ಒಂಟಿತನ ಅನುಭವಿಸಿದ್ದರು. ಈ ಕುರಿತು ವೋಗ್ಯೂ ಇಂಡಿಯಾ ಜತೆಗಿನ ಸಂವಾದದಲ್ಲಿ ಮಾತನಾಡಿದ್ದಾರೆ.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ (Sunil Khandare)

ಬೆಂಗಳೂರು: ಸದ್ಯ ಬಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಪ್ರಮುಖ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ ಹಿಂದೊಮ್ಮೆ ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ಒಂಟಿತನ ಅನುಭವಿಸಿದ್ದರು. ಕರ್ನಾಟಕದ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಮಗಳು ದೀಪಿಕಾ ಪಡುಕೋಣೆ ಅವರು ಸಿನಿಮಾಕ್ಷೇತ್ರಕ್ಕೆ ಕಾಲಿಟ್ಟ ಆರಂಭಿಕ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವೋಗ್ಯೂ ಇಂಡಿಯಾಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನ್ನ ಬದುಕಿನ ಆ ದಿನಗಳ ಕುರಿತು ನೆನಪಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

"ನನಗೆ ಆಗ ಹರೆಯದ ವಯಸ್ಸು. ಈಗಿನಷ್ಟು ಅನುಭವ ಇರಲಿಲ್ಲ. ಹೊಸ ನಗರಕ್ಕೆ ಯಾವ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಇಲ್ಲದೆ ಆಗಮಿಸಿದ್ದೆ. ಸಿನಿಮಾ ಉದ್ಯಮದಲ್ಲಿ ಆಗ ನನಗೆ ಯಾರೂ ಇರಲಿಲ್ಲ. ನನ್ನ ಊಟ, ಸಾರಿಗೆ ಇತ್ಯಾದಿಗಳನ್ನು ನಾನೇ ನಿಭಾಯಿಸಬೇಕಿತ್ತು. ನನ್ನ ಜತೆಗೆ ನನ್ನ ಬ್ಯಾಗ್‌ ಅನ್ನು ನಾನೇ ಕೊಂಡೊಯ್ಯಬೇಕಿತ್ತು" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಮನೆಗೆ ಸುರಕ್ಷಿತವಾಗಿ ಹೋಗುವ ತನಕ ಅಮ್ಮನಿಗೆ ನೆಮ್ಮದಿ ಇರಲಿಲ್ಲ

"ನಾನು ಆಗಾಗ ಕ್ಯಾಬ್‌ನಲ್ಲಿಯೇ ನಿದ್ದೆ ಮಾಡುತ್ತಿದ್ದೆ. ನಾನು ಮನೆಗೆ ಸುರಕ್ಷಿತವಾಗಿ ತಲುಪಿದ್ದೇನೆಯೇ ಎಂದು ಅಮ್ಮ ಚಿಂತೆ ಮಾಡುತ್ತಿದ್ದಳು. ಮನೆಗೆ ನಾನು ತಲುಪಿ ಕಾಲ್‌ ಮಾಡಿದಾಗ ಅಮ್ಮನಿಗೆ ಸಮಧಾನವಾಗುತ್ತಿತ್ತು. ನನ್ನ ಆ ದಿನಗಳ ಬದುಕಿನ ಪ್ರಯಾಣವನ್ನು ನೆನಪಿಸಿಕೊಂಡಾಗ ಅಚ್ಚರಿಯಾಗುತ್ತದೆ. ನಾನೇನ ಅದೆಲ್ಲ ಮಾಡುತ್ತಿದ್ದದ್ದು? ಎಂದು ಆಶ್ಚರ್ಯವಾಗುತ್ತದೆ" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಮೇಡ್‌ ಫಾರ್‌ ಈಚ್‌ ಅದರ್‌ ಜೋಡಿ

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಸದ್ಯ ಬಾಲಿವುಡ್‌ನ ಪ್ರೀತಿಯ ದಂಪತಿ. ಎಲ್ಲೇ ಹೋಗಲಿ ಜತೆಗಿದ್ದು, ಪ್ರೀತಿತೋರುವ ಇವರ ಜೋಡಿಯನ್ನು ನೋಡಿ ಸಾಕಷ್ಟು ಜನರು ಅಚ್ಚರಿಪಟ್ಟಿದ್ದಾರೆ. ಗಂಡ ಹೆಂಡತಿ ಎಷ್ಟು ಅನ್ಯೋನ್ಯತೆಯಿಂದ ಇರಬೇಕು ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಇವರು ವರ್ತಿಸುತ್ತಾರೆ. ಇತ್ತೀಚಿಗೆ ಅವರು ತನ್ನ ವೈವಾಹಿಕ ಜೀವನದ ಕುರಿತೂ ಅವರು ಮಾತನಾಡಿದ್ದಾರೆ.

"ನಾವಿಬ್ರು ನಮಗಾಗಿ ಹೇಗೆ ಸಮಯ ಹೊಂದಿಸುತ್ತೇವೆ" ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ. "ನಾನು ನನ್ನ ಪತಿಯ ಜತೆ ಸಮಯ ಕಳೆಯುವುದು ಬಹಳ ಮುಖ್ಯ. ಇದಕ್ಕಾಗಿ ಸಮಯ ಮೀಸಲಿಡಲೇಬೇಕು. ಅವನು ಮತ್ತು ನಾನು ಒಂಟಿಯಾಗಿರಬಾರದು ಎಂಬ ಪ್ರಯತ್ನವನ್ನು ಮಾಡುತ್ತೇವೆ. ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುತ್ತೇವೆ. ನಾವು ನಮ್ಮ ವೃತ್ತಿಗಾಗಿ ಕೆಲವು ತಿಂಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಕೆಲವೊಮ್ಮೆ ಅವರು ಬರುವಾಗ ತಡರಾತ್ರಿಯಾಗಬಹುದು. ನನಗೆ ಮುಂಜಾನೆ ಬೇಗ ಹೋಗಬೇಕಾಗಬಹುದು. ನಾವಿಬ್ಬರು ಒಂದೇ ಊರಲ್ಲಿ ಇದ್ದರೂ ಪರಸ್ಪರ ಭೇಟಿಯಾಗಲು ಸಮಯ ದೊರಕದೆ ಇರುವ ಸಂದರ್ಭಗಳು ಇವೆ" ಎಂದು ಅವರು ಹೇಳಿದ್ದಾರೆ.

"ನಾವು ಒಟ್ಟಾಗಿ ಇರುವಾಗ ಆ ಸಮಯವನ್ನು ಎಷ್ಟು ಉತ್ತಮವಾಗಿ ಕಳೆಯುತ್ತೇವೆ ಎನ್ನುವುದು ಮುಖ್ಯ. ನಾವು ಇಬ್ಬರೇ ಇದ್ದಾಗ ಎಷ್ಟು ಪ್ರೀತಿಸುತ್ತೇವೆ ಎನ್ನುವುದು ಮುಖ್ಯ. ನಾವು ನಮ್ಮ ಕುಟುಂಬದ ಜತೆ ಸಮಯ ಕಳೆಯಲು ಇಷ್ಟಪಡುತ್ತೇವೆ" ಎಂದು ವೋಗ್‌ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ