ಕನ್ನಡ ಸುದ್ದಿ  /  ಮನರಂಜನೆ  /  Durga Puja: ಕೋಲ್ಕತ್ತದಲ್ಲೂ ಕಾಂತಾರ ಥೀಮ್‌ನ ದುರ್ಗಾ ಪೂಜೆ, ಪಂಡಾಲ್‌ನಲ್ಲಿ ಪಂಜುರ್ಲಿ ಮೂರ್ತಿ, ದೈವ- ದೇವರ ಪೂಜಾ ವ್ಯತ್ಯಾಸ ಕುರಿತು ಚರ್ಚೆ

Durga Puja: ಕೋಲ್ಕತ್ತದಲ್ಲೂ ಕಾಂತಾರ ಥೀಮ್‌ನ ದುರ್ಗಾ ಪೂಜೆ, ಪಂಡಾಲ್‌ನಲ್ಲಿ ಪಂಜುರ್ಲಿ ಮೂರ್ತಿ, ದೈವ- ದೇವರ ಪೂಜಾ ವ್ಯತ್ಯಾಸ ಕುರಿತು ಚರ್ಚೆ

HT Kannada Desk HT Kannada

Oct 24, 2023 04:01 PM IST

ದುರ್ಗಾ ಪೂಜೆ ಪಂಡಾಲ್‌ನಲ್ಲಿ ಕಂಡ ಪಂಜುರ್ಲಿ ಮುಖ ಮತ್ತು ದೈವದ ಮೂರ್ತಿ.

  • ಕೋಲ್ಕತ್ತಾದಲ್ಲಿ ಕಾಂತಾರ ಥೀಮ್‌ನ ದುರ್ಗಾ ಪಂಡಾಲ್‌ ಮತ್ತು ವಿಗ್ರಹವನ್ನು ಇರಿಸಲಾಗಿದೆ. ದುರ್ಗಾ ಪೂಜೆ ಪಂಡಾಲ್‌ನಲ್ಲಿ ಕಾಂತಾರ ಥೀಮ್‌ನ ಪಂಡಾಲ್ ಮತ್ತು ಕಾಂತಾರ ವಿಗ್ರಹಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿ, ದೈವ- ದೇವರ ಪೂಜಾ ಪದ್ಧತಿ ವಿಚಾರ ಚರ್ಚೆಗೆ ಒಳಗಾಗಿದೆ.

ದುರ್ಗಾ ಪೂಜೆ ಪಂಡಾಲ್‌ನಲ್ಲಿ ಕಂಡ ಪಂಜುರ್ಲಿ ಮುಖ ಮತ್ತು ದೈವದ ಮೂರ್ತಿ.
ದುರ್ಗಾ ಪೂಜೆ ಪಂಡಾಲ್‌ನಲ್ಲಿ ಕಂಡ ಪಂಜುರ್ಲಿ ಮುಖ ಮತ್ತು ದೈವದ ಮೂರ್ತಿ. (ran0filams)

ನವದೆಹಲಿ: ಭಾರತೀಯ ಚಿತ್ರರಂಗದ ಅತಿದೊಡ್ಡ ಬಾಕ್ಸ್ ಆಫೀಸ್ ಬ್ಲಾಕ್‌ಬಸ್ಟರ್‌ಗಳ ಪೈಕಿ ಹೊಂಬಾಳೆ ಫಿಲಂಸ್‌ನ ಕನ್ನಡ ಆಕ್ಷನ್-ಥ್ರಿಲ್ಲರ್ ಸಿನಿಮಾ 'ಕಾಂತಾರ' ಮುಖ್ಯವಾದುದು. ಭಾರತದ ಉದ್ದಗಲಕ್ಕೂ ಈ ಸಿನಿಮಾ ಸೃಷ್ಟಿಸಿದ ಕ್ರೇಜ್‌ ಇನ್ನೂ ಕಡಿಮೆ ಆಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ರಿಷಭ್‌ ಶೆಟ್ಟಿ ನಿರ್ದೇಶನ ಸಿನಿಮಾ ತೆರೆ ಕಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ಸಿನಿಮಾ ನಿಧಾನವಾಗಿ ತನ್ನ ಛಾಯೆಯನ್ನು ದೇಶವ್ಯಾಪಿ ಪಸರಿಸಿತ್ತು. ಪ್ರಾದೇಶಿಕ ಸಂಸ್ಕೃತಿಗಳ ಜತೆಗೆ ಬೆಸೆದುಕೊಂಡ ಸಿನಿಮಾ, ಸಮಾಜದ ಮೇಲೆ ಬೀರಿದ ಪ್ರಭಾವ ಗಮನಾರ್ಹ. ಗಣಪತಿ ಹಬ್ಬದ ಸಂದರ್ಭದಲ್ಲಿ ಕೂಡ ಈ ಕ್ರೇಜ್ ಕಂಡುಬಂತಿತ್ತು. ಕಾಂತಾರ ಥೀಮ್‌ನಲ್ಲಿ ಗಣೇಶ ಮೂರ್ತಿ, ಪೆಂಡಾಲ್‌ಗಳು ಗಮನಸೆಳೆದಿದ್ದವು. ಈಗ ಇಂಥದ್ದೇ ಕ್ರೇಜ್‌ ನವರಾತ್ರಿ ಸಂದರ್ಭದಲ್ಲೂ ಗೋಚರಿಸಿದೆ. ಕರ್ನಾಟಕದಲ್ಲಿ ಅಲ್ಲ. ಆದರೆ ದೂರದ ಪಶ್ಚಿಮ ಬಂಗಾಳದಲ್ಲಿ.

ಭಾರತದ ಉದ್ದಗಲಕ್ಕೂ ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವಾಗ, ಕೋಲ್ಕತ್ತಾದಲ್ಲಿ ಕಾಂತಾರ ಥೀಮ್‌ನ ದುರ್ಗಾ ಪಂಡಾಲ್‌ ಮತ್ತು ವಿಗ್ರಹವನ್ನು ಇರಿಸಲಾಗಿದೆ. ದುರ್ಗಾ ಪೂಜೆ ಪಂಡಾಲ್‌ನಲ್ಲಿ ಕಾಂತಾರ ಥೀಮ್‌ನ ಪಂಡಾಲ್ ಮತ್ತು ಕಾಂತಾರ ವಿಗ್ರಹಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ.

ದೈವ- ದೇವರ ಪೂಜಾ ವ್ಯತ್ಯಾಸ ಕುರಿತು ಚರ್ಚೆ

ಬಿಪಾಶಾ ಘೋಷ್ ಎಂಬುವವರು ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದು, ಇದು ತಪ್ಪು. ದೈವ (ದೈವ ಕೋಲ ಎಂಬುದು ವೈದಿಕೇತರ ಆಚರಣೆ. ಇಲ್ಲಿ ಭೂತಗಳು ಅಥವಾ ದೈವಗಳ (ಪಾಲಕರು ಮತ್ತು ಪೂರ್ವಜರ) ಆರಾಧನೆ ನಡೆಯುತ್ತದೆ. ಆದಿಶಕ್ತಿಯ ಪೂಜೆಗೂ ಇದಕ್ಕೂ ಸಂಬಂಧ ಇಲ್ಲ. ಆಚರಣೆ ಏನಿದೆಯೂ ಅದನ್ನು ಅನುಸರಿಸಬೇಕು. ಬಂಗಾಳಿಯಾಗಿ ಈ ಕೃತ್ಯವನ್ನು ವಿರೋಧಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿದ್ಯಾ ಕೋಟ್ಯಾನ್ ಎಂಬುವವರು ಕೂಡ ಪ್ರತಿಕ್ರಿಯಿಸಿದ್ದು, ಇದು ತುಳುನಾಡಿನ ಸಂಸ್ಕೃತಿ. ಈ ರೀತಿ ಮಾಡುವ ಮೂಲಕ ಆ ಸಂಸ್ಕೃತಿಯನ್ನು ಅವಮಾನಿಸಿದಂತಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದು ನಮ್ಮ ಸಹವಾಸಿಗಳಾದ ದೇಶದ ಇತರೆ ಭಾಗದ ಜನರ ಭಾವನೆಗಳಿಗೆ ನೋವು ಉಂಟುಮಾಡುವ ವಿಚಾರ. ನಾವು ಬಂಗಾಳಿಗಳು ವಿಪರೀತ ಸೃಜನಶೀಲರು ಎಂದು ಟೀಕೆ ಮಾಡಿದ್ದಾರೆ ಮತ್ತೊಬ್ಬರು.

ಕಾಂತಾರಾ ಸಿನಿಮಾ ತೆರೆಕಂಡದ್ದು 2022ರಲ್ಲಿ

ಭಾರತದ ಉದ್ದಗಲಕ್ಕೂ ಸಂಚಲನ ಮೂಡಿಸಿದ ಕನ್ನಡ ಸಿನಿಮಾ 'ಕಾಂತಾರ' 2022 ರಲ್ಲಿ ಬಿಡುಗಡೆಯಾಯಿತು. ದೇಶ, ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿತು. ಅದುವರೆಗಿನ ದಾಖಲೆಗಳನ್ನೆಲ್ಲ ಮುರಿದು ಚಿತ್ರರಂಗಗಳು ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಹಿಂದಿ ಭಾಷೆಯಲ್ಲಿ ಚಿತ್ರ 100 ಕೋಟಿ ರೂಪಾಯಿ ಆದಾಯದ ಗಡಿ ದಾಟಿತ್ತು.

ಇದಲ್ಲದೆ, ಹೊಂಬಾಳೆ ಫಿಲ್ಮ್ಸ್ ಪ್ರಸ್ತುತ 'ಕಾಂತಾರ'ದ ಮುಂದಿನ ಭಾಗ ನಿರ್ಮಿಸಲು ಕೆಲಸ ಮಾಡುತ್ತಿದೆ. ಇದರ ಹೊರತಾಗಿ ಅವರು ತೆಲುಗು ಆಕ್ಷನ್-ಥ್ರಿಲ್ಲರ್ 'ಸಲಾರ್: ಭಾಗ 1 - ಕದನ ವಿರಾಮ', ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ