ಕನ್ನಡ ಸುದ್ದಿ  /  ಮನರಂಜನೆ  /  Bachelor Party: ಈ ಪಾರ್ಟಿ ಟ್ರೇಲರ್‌ ಹೀಗಿದ್ರೆ, ಫುಲ್‌ ಫಿಲಂ ಹೇಗಿರ್ಬೋದು ಗುರು? ರಿಷಬ್‌ ಶೆಟ್ಟಿ ಅಚ್ಚರಿಯ ಪ್ರತಿಕ್ರಿಯೆ

Bachelor Party: ಈ ಪಾರ್ಟಿ ಟ್ರೇಲರ್‌ ಹೀಗಿದ್ರೆ, ಫುಲ್‌ ಫಿಲಂ ಹೇಗಿರ್ಬೋದು ಗುರು? ರಿಷಬ್‌ ಶೆಟ್ಟಿ ಅಚ್ಚರಿಯ ಪ್ರತಿಕ್ರಿಯೆ

Praveen Chandra B HT Kannada

Jan 17, 2024 11:54 AM IST

ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ಬಿಡುಗಡೆ

    • Bachelor party Kannada Movie: ರಕ್ಷಿತ್‌ ಶೆಟ್ಟಿ ನಿರ್ಮಾಣದ ದಿಗಂತ್‌, ಯೋಗಿ, ಅಚ್ಯುತ್‌ ಕುಮಾರ್‌ ನಟನೆಯ ಜನವರಿ 26ರಂದು ಬಿಡುಗಡೆಯಾಗಲಿರುವ ಬ್ಯಾಚುಲರ್‌ ಪಾರ್ಟಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿದೆ. ಈ ಟ್ರೇಲರ್‌ ನೋಡಿದ ರಿಷಬ್‌ ಶೆಟ್ಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ಬಿಡುಗಡೆ
ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ ಬ್ಯಾಚುಲರ್‌ ಪಾರ್ಟಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದದು ದಿಗಂತ್‌, ಯೋಗಿ, ಅಚ್ಯುತ್‌ ಕುಮಾರ್‌ ನಟನೆಯ ಸಿನಿಮಾ. ರಿಷಬ್‌ ಶೆಟ್ಟಿ ನಿರ್ಮಾಣದ ಈ ಸಿನಿಮಾ ತನ್ನ ಟ್ರೇಲರ್‌ನಿಂದಲೇ ಬಹುನಿರೀಕ್ಷೆ ಹುಟ್ಟಿಸಿದೆ. ಯೂಟ್ಯೂಬ್‌ನಲ್ಲಿ ಸದ್ಯ ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿರುವ ಈ ಟ್ರೇಲರ್‌ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಸಿನಿಮಾ ಪ್ರೇಮಿಗಳು ಈ ಟ್ರೇಲರ್‌ ಬೊಂಬಾಟಾಗಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ನೋಡಿ ಖುಷಿಪಟ್ಟ ರಿಷಬ್‌ ಶೆಟ್ಟಿ

"ಈ ಪಾರ್ಟಿಯ ಟ್ರೇಲರ್‌  ಹೀಗಿದೆ, ಇನ್ನು ಫುಲ್ ಫಿಲಂ ಹೇಗಿರ್ಬೋದು ಗುರು? ಈ ಸಲ ಪಾರ್ಟಿ ಜೋರು ಅಂತಾ ಆಯಿತು" ಎಂದು ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದು, ಈ ಟ್ರೈಲರ್‌ ಲಿಂಕ್‌ ಹಂಚಿಕೊಂಡಿದ್ದಾರೆ. ನಿನ್ನೆ ರಕ್ಷಿತ್‌ ಶೆಟ್ಟಿ ಕೂಡ ಈ ಟ್ರೈಲರ್‌ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. "ಮತ್ತೆ ಹೇಳ್ತಾ ಇದ್ದೀನಿ.. ಇದು ಬರೀ ಟ್ರೈಲರ್ ಅಷ್ಟೆ! ಪೂರ್ತಿ picture ಇನ್ನೂ ಬಾಕಿ ಇದೆ!" ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದರು.

ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ವೀಕ್ಷಿಸಿ

 

ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ದೂದ್‌ ಪೇಡ ದಿಗಂತ, ಲೂಸ್‌ ಮಾದ ಯೋಗಿ, ಅಚ್ಯುತ್‌ ಕುಮಾರ್‌ ಅವರ ಝಲಕ್‌ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಇದು ಸಖತ್‌ ಕಾಮಿಡಿ ಇರೋ ಸಿನಿಮಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಟ್ರೇಲರ್‌ ನೋಡಿದಾಗಲೇ ಹಲವು ಕಾಮಿಡಿ ಕಿಕ್‌ ಕಾಣಿಸಿಕೊಂಡಿದೆ. ಸ್ನೇಹಿತನಿಗೆ ಮದುವೆ ಫಿಕ್ಸ್‌ ಆದ ಖುಷಿಯಲ್ಲಿ ವಿದೇಶದಲ್ಲಿ ಪಾರ್ಟಿ ಮಾಡಲು ಸ್ನೇಹಿತರು ಅನುಭವಿಸುವ ತೊಂದರೆಯೇ ಬ್ಯಾಚುಲರ್‌ ಪಾರ್ಟಿಯ ಕಥೆ ಎಂದೆನಿಸುತ್ತದೆ. ಬ್ಯಾಂಕಾಕ್‌ಗೆ ಹೋದ ಬಳಿಕ ಏನಾಗುತ್ತದೆ? ಪಾರ್ಟಿ ಗಮ್ಮತ್ತು ಜತೆ ಡಾನ್‌ಗಳೂ ಈ ಸಿನಿಮಾದಲ್ಲಿದ್ದಾರೆ. ಒಟ್ಟಾರೆ ಈ ಬಾರಿ ಪಾರ್ಟಿ ಜೋರು ಎಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ.

ಬ್ಯಾಚುಲರ್‌ ಪಾರ್ಟಿ ಟ್ರೇಲರ್‌ ನೋಡಿ ಫ್ಯಾನ್ಸ್‌ ಏನಂದ್ರು

ಟ್ರೈಲರ್ ನೋಡಿ ಸುಧಾರಿಸಿಕೊಳ್ಳಲು ನಾವ್ ಒಂದ್ ಪಾರ್ಟಿ ಮಾಡ್ಬೆಕು , ಫುಲ್ ಹಾವಳಿ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ತುಂಬಾ ಸಮಯಗಳ ಬಳಿಕ ಒಂದೊಳ್ಳೆ ಹಾಸ್ಯಭರಿತ ಟ್ರೈಲರ್ ನೋಡಿದ್ದು. ನಿಜವಾಗ್ಲೂ ನಿರೀಕ್ಷೆ ಹೆಚ್ಚಾಗಿದೆ ಈ ಸಿನಿಮಾ ನೋಡಲು" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ರಕ್ಷಿತ್ ಶೆಟ್ರ್ ಮೂವಿಗೆ ಎಷ್ಟ್ ಕ್ರೇಜ್ ಇದೆಯೋ ಅವರ ಪ್ರೊಡಕ್ಷನ್ನಲ್ಲಿ ಬರುವ ಮೂವಿ ಗೂ ಅಷ್ಟೇ ಕ್ರೇಜ್ ಇರುತ್ತೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಟ್ರೈಲರ್‌ಗೆ ಈಗಾಗಲೇ ಸಾವಿರದ ಇನ್ನೂರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಬ್ಯಾಚುಲರ್‌ ಪಾರ್ಟಿ ಬಿಡುಗಡೆ ದಿನಾಂಕ

ರಕ್ಷಿತ್‌ ಶೆಟ್ಟಿಯವರ ಪರಂವಃ ಸ್ಟುಡಿಯೋದ ಬ್ಯಾಚುಲರ್‌ ಪಾರ್ಟಿ ಜನವರಿ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಅಭಿಜಿತ್‌ ಮಹೇಶ್‌ ನಿರ್ದೇಶನ ಮಾಡಿದ್ದಾರೆ. ದಿಗಂತ್‌, ಯೋಗಿ ಹಾಗೂ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ಲೂಸಿಯಾ ಪವನ್‌ ಕುಮಾರ್‌, ಮಠ ಗುರುಪ್ರಸಾದ್‌, ನಾ. ಸೋಮೇಶ್ವರ, ಶೈನ್‌ ಶೆಟ್ಟಿ ಹಾಗೂ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಮುಂತಾದ ನಟರು ಈ ಸಿನಿಮಾದಲ್ಲಿದ್ದು, ಪಾರ್ಟಿ ಕಿಕ್‌ ಹೆಚ್ಚಿಸಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ