ಕನ್ನಡ ಸುದ್ದಿ  /  ಮನರಂಜನೆ  /  ರಶ್ಮಿಕಾ ಮಂದಣ್ಣ ಜತೆ ಸಂಪರ್ಕದಲ್ಲಿದ್ದೀರಾ? ಯೂಟ್ಯೂಬರ್‌ ಪ್ರಶ್ನೆಗೆ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಅಚ್ಚರಿಯ ಉತ್ತರ

ರಶ್ಮಿಕಾ ಮಂದಣ್ಣ ಜತೆ ಸಂಪರ್ಕದಲ್ಲಿದ್ದೀರಾ? ಯೂಟ್ಯೂಬರ್‌ ಪ್ರಶ್ನೆಗೆ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಅಚ್ಚರಿಯ ಉತ್ತರ

ಕಿರಿಕ್‌ ಪಾರ್ಟಿ ಬಳಿಕ ಟಾಲಿವುಡ್‌ಗೆ ನೆಗೆದ ರಶ್ಮಿಕಾ ಮಂದಣ್ಣರ ಜತೆ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಈಗಲೂ ಸಂಪರ್ಕದಲ್ಲಿದ್ದಾರ? ಈ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ ಸ್ವತಃ ಹೌದು ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಜತೆ ಸಂಪರ್ಕದಲ್ಲಿದ್ದೀರಾ? ಯೂಟ್ಯೂಬರ್‌ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ ಉತ್ತರ
ರಶ್ಮಿಕಾ ಮಂದಣ್ಣ ಜತೆ ಸಂಪರ್ಕದಲ್ಲಿದ್ದೀರಾ? ಯೂಟ್ಯೂಬರ್‌ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ ಉತ್ತರ

ತನ್ನ ಮಾಜಿ ಪ್ರೇಯಸಿ ರಶ್ಮಿಕಾ ಮಂದಣ್ಣರ ಕುರಿತು ಅಪರೂಪದ ಹೇಳಿಕೆಯೊಂದನ್ನು ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ನೀಡಿದ್ದಾರೆ. ಸದ್ಯ ಅನಿಮಲ್‌ ಚಿತ್ರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣರ ಜತೆ ರಕ್ಷಿತ್‌ ಶೆಟ್ಟಿಗೆ 2017ರಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೆ, ಮದುವೆಗೆ ಮೊದಲೇ ಈ ಸಂಬಂಧ ಮುರಿದುಬಿದ್ದಿತ್ತು. ಇದಾದ ಬಳಿಕ ರಶ್ಮಿಕಾ ಮಂದಣ್ಣರೆಂದರೆ ಸಾಕಷ್ಟು ಕನ್ನಡಿಗರು ಉರಿದು ಬೀಳುತ್ತಿದ್ದರು. ರಕ್ಷಿತ್‌ ಶೆಟ್ಟಿಯೂ ರಶ್ಮಿಕಾ ಕುರಿತು ಯಾವುದೇ ಹೇಳಿಕೆ ನೀಡುತ್ತಿರಲಿಲ್ಲ. ಆದರೆ, ರಶ್ಮಿಕಾ ಜತೆ ರಕ್ಷಿತ್‌ ಶೆಟ್ಟಿ ಈಗಲೂ ಸಂಪರ್ಕದಲ್ಲಿದ್ದಾರೆ ಎನ್ನುವ ವಿಷಯ ಇತ್ತೀಚಿನ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಬಹಿರಂಗವಾಗಿದೆ.

ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎಯ ತೆಲುಗು ಅವತರಣಿಕೆಯ ಪ್ರಮೋಷನ್‌ ಸಮಯದಲ್ಲಿ ಯೂಟ್ಯೂಬರ್‌ವೊಬ್ಬರು "ನೀವು ಈಗಲೂ ರಶ್ಮಿಕಾ ಮಂದಣ್ಣರ ಜತೆ ಸಂಪರ್ಕದಲ್ಲಿದ್ದೀರಾ?" ಎಂಬ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ "ಹೌದು" ಎಂದಿದ್ದಾರೆ. "ಹೌದು, ನಾನು ಈಗಲೂ ಅವರ ಜತೆ ಸಂಪರ್ಕದಲ್ಲಿರುವೆ. ಆಕೆಗೆ ಸಿನಿಮಾ ಜಗತ್ತಿನ ಕುರಿತು ದೊಡ್ಡ ಕನಸುಗಳಿವೆ. ಆಕೆ ಆಕೆಯ ಕನಸಿನತ್ತ ಪ್ರಯಾಣಿಸುತ್ತಿದ್ದಾರೆ. ಆಕೆಗೆ ತನ್ನ ಕನಸು ಈಡೇರಿಸಿಕೊಳ್ಳುವ ಇಚ್ಛಾಶಕ್ತಿಯಿದೆ. ಆಕೆಯ ಸಾಧನೆಗೆ ನಾವು ಬೆನ್ನುತಟ್ಟಬೇಕು" ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ತನ್ನ ಸಿನಿ ಪ್ರಯಾಣ ಆರಂಭಿಸಿದ್ದಾರೆ. ಕಾಂತರ ನಟ ರಿಷಬ್‌ ಶೆಟ್ಟಿ ನಿರ್ದೇಶಿಸಿದ ಈ ಚಿತ್ರ ಸಖತ್‌ ಹಿಟ್‌ ಆಗಿತ್ತು. ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿದ್ದರು. ಈ ಸಿನಿಮಾದ ಸಂದರ್ಭದಲ್ಲಿ ಇವರಿಬ್ಬರಿಗೂ ಲವ್‌ ಆಗಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ರಶ್ಮಿಕಾ ಮಂದಣ್ಣರ ಜತೆ ರಕ್ಷಿತ್‌ ಶೆಟ್ಟಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು. ಆದರೆ, ಕೆಲವು ತಿಂಗಳಲ್ಲಿಯೇ ಇವರಿಬ್ಬರ ಸಂಬಂಧ ಹಳಸಿತ್ತು. ಆದರೆ, ಮದುವೆ ಮುರಿದುಬೀಳಲು ಕಾರಣ ಏನೆಂದು ಬಹಿರಂಗವಾಗಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಇದಾದ ಬಳಿಕ ಕಳೆದ ವರ್ಷ ಇವರಿಬ್ಬರು ಮತ್ತೆ ಸುದ್ದಿಯಲ್ಲಿದ್ದರು. ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ತನ್ನ ಕರಿಯರ್‌ ಆರಂಭಕ್ಕೆ ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಕಾರಣರಲ್ಲ ಎಂದು ಅವರು ಹೇಳಿದ್ದರು. ಸಂದರ್ಶನವೊಂದರಲ್ಲಿ ಅವರು ರಕ್ಷಿತ್‌ ಶೆಟ್ಟಿ ಮತ್ತು ಅವರ ಪ್ರೊಡಕ್ಷನ್‌ ಹೌಸ್‌ಗೆ ಸರಿಯಾದ ಕ್ರೆಡಿಟ್‌ ನೀಡಿರಲಿಲ್ಲ. ಇದಕ್ಕೆ ರಿಷಬ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು.

ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ

ಸದ್ಯ ರಶ್ಮಿಕಾ ಮಂದಣ್ಣ ಅವರು ಅನಿಮಲ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಗ್ಯಾಂಗ್‌ಸ್ಟಾರ್‌ ಸಿನಿಮಾ. ಇಲ್ಲಿ ರಣಬೀರ್‌ ಕಪೂರ್‌ ಸಾಹಸ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಅಪ್ಪ ಮಗನ ಸಂಬಂಧದ ಕುರಿತೂ ಈ ಸಿನಿಮಾ ಬೆಳಕು ಚೆಲ್ಲಲಿದೆ. ಅನಿಲ್‌ ಕಪೂರ್‌ ಅವರು ರಣಬೀರ್‌ ಕಪೂರ್‌ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಅವರು ರಣಬೀರ್‌ ಕಪೂರ್‌ ಪ್ರೇಯಸಿಯಾಗಿರಲಿದ್ದಾರೆ.