ಕನ್ನಡ ಸುದ್ದಿ  /  ಮನರಂಜನೆ  /  ಕರಟಕ ದಮನಕ ಸಿನೆಮಾ ಬಿಡುಗಡೆ ದಿನಾಂಕ ಪ್ರಕಟ, ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಶಿವರಾತ್ರಿ ಜಾಗರಣೆ

ಕರಟಕ ದಮನಕ ಸಿನೆಮಾ ಬಿಡುಗಡೆ ದಿನಾಂಕ ಪ್ರಕಟ, ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ಶಿವರಾತ್ರಿ ಜಾಗರಣೆ

Praveen Chandra B HT Kannada

Jan 24, 2024 03:26 PM IST

ಕರಟಕ ದಮನಕ ಸಿನೆಮಾ ಬಿಡುಗಡೆ ದಿನಾಂಕ ಪ್ರಕಟ, ಮಾರ್ಚ್‌ 8ರಂದು ಶಿವರಾಜ್‌ ಕುಮಾರ್‌ ಸಿನೆಮಾ ಬಿಡುಗಡೆ

    • Karataka Damanaka Kannada movie: ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಅಭಿನಯದ ಯೋಗರಾಜ್‌ ಭಟ್‌ ನಿರ್ದೇಶನದ ಕರಟಕ ದಮನಕ ಸಿನೆಮಾವು ಶಿವರಾತ್ರಿಯಂದು ಅಂದರೆ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ಇನ್ನು ಒಂದೂವರೆ ತಿಂಗಳಲ್ಲಿ ತೆರೆ ಕಾಣಲಿರುವ ಚಿತ್ರದ ಕುರಿತು ಶಿವಣ್ಣನ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ.
ಕರಟಕ ದಮನಕ ಸಿನೆಮಾ ಬಿಡುಗಡೆ ದಿನಾಂಕ ಪ್ರಕಟ, ಮಾರ್ಚ್‌ 8ರಂದು ಶಿವರಾಜ್‌ ಕುಮಾರ್‌ ಸಿನೆಮಾ ಬಿಡುಗಡೆ
ಕರಟಕ ದಮನಕ ಸಿನೆಮಾ ಬಿಡುಗಡೆ ದಿನಾಂಕ ಪ್ರಕಟ, ಮಾರ್ಚ್‌ 8ರಂದು ಶಿವರಾಜ್‌ ಕುಮಾರ್‌ ಸಿನೆಮಾ ಬಿಡುಗಡೆ

ಬೆಂಗಳೂರು: ಕರಟಕ ದಮನಕ ಸಿನೆಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಪ್ರಕಟಿಸಿದ್ದಾರೆ. ಕಾಟೇರ ಸಿನೆಮಾದ ಯಶಸ್ಸಿನ ಬಳಿಕ ಕರಟಕ ದಮನಕ ಯಶಸ್ಸಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್‌ ಇದೆ. ಶಿವರಾತ್ರಿ ಹಬ್ಬದಂದು ಅಂದರೆ ಮಾರ್ಚ್‌ 8ರಂದು ಶಿವರಾಜ್‌ ಕುಮಾರ್‌ ನಟನೆಯ ಕರಟಕ ದಮನಕವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಶಿವಣ್ಣನ ಅಭಿಮಾನಿಗಳಿಗೆ ಶಿವರಾತ್ರಿ ಹಬ್ಬದ ಸಂಭ್ರಮ ಹೆಚ್ಚಾಗಲಿದೆ.

ಟ್ರೆಂಡಿಂಗ್​ ಸುದ್ದಿ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ಪತಿ ಸುಕು ಪೂರ್ವಜ್‌ ಜತೆ ನಟಿ ಜ್ಯೋತಿ ರೈ ದೇಗುಲ ದರ್ಶನ; ವೈರಲ್‌ ವಿಡಿಯೋ ಬೆನ್ನಲ್ಲೆ ತಿರುಪತಿ, ಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿದ ದಂಪತಿ

ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ; ಕಗ್ಗಲಿಪುರ ಸಮೀಪ ನಡೆದ ಘಟನೆ ಕುರಿತು ಇಂಚಿಂಚು ವಿವರ ನೀಡಿದ ನಟ

ಕರಟಕ ದಮನಕ ಪ್ಯಾನ್‌ ಇಂಡಿಯಾ ಸಿನೆಮಾ

ಕರಟಕ ದಮನಕ ಸಿನೆಮಾವು ಭಾರತದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಭುದೇವ್‌ ಮತ್ತು ಶಿವರಾಜ್‌ ಕುಮಾರ್‌ ಜೋಡಿಯ ಈ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ರಾಕ್‌ಲೈನ್‌ ವೆಂಕಟೇಶ್‌ ನಿರ್ಧರಿಸಿದ್ದಾರೆ. ಕಾಟೇರ ಸಿನೆಮಾ ಪ್ಯಾನ್‌ ಇಂಡಿಯ ಸಿನೆಮಾವಾಗದೆ ಇದ್ದರೂ ದೇಶ-ವಿದೇಶಗಳಲ್ಲಿ ಜನಪ್ರಿಯತೆ ಪಡೆದಿದೆ. ಇದೇ ಸಂದರ್ಭದಲ್ಲಿ ಕರಟಕ ದಮನಕವನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ರಾಕ್‌ಲೈನ್‌ ಪ್ಲಾನ್‌ ಮಾಡಿದ್ದಾರೆ.

ಕರಟಕ ದಮನಕ ತಂಡ

ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.

ಕರಟಕ ದಮನಕ ಹಾಸ್ಯ ಚಿತ್ರ ಎನ್ನಲಾಗಿದೆ. ಯೋಗರಾಜ್‌ ಭಟ್‌ ಅವರು ಶಿವಣ್ಣ ಮತ್ತು ಪ್ರಭುದೇವ್‌ ಅವರನ್ನು ಗಮನದಲ್ಲಿಟ್ಟುಕೊಂಡು ಹಾಸ್ಯ ಪ್ರದಾನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ಯೋಗರಾಜ್‌ ಭಟ್ರ ಸಾಹಿತ್ಯದ ಮೋಡಿ ಕರಟಕ ದಮನಕದಲ್ಲಿ ಹೆಚ್ಚೇ ಇರುವ ನಿರೀಕ್ಷೆಯಿದೆ.

ಎರಡು ನರಿಗಳ ಕಥೆ

ಕರಟಕ ದಮನಕ ಎನ್ನುವುದು ಪಂಚತಂತ್ರದ ಎರಡು ನರಿಗಳ ಹೆಸರು. ಎರಡು ವಿಭಿನ್ನ ಸ್ವಭಾವದ ನರಿಗಳಿವು. ತಂತ್ರ ಮತ್ತು ಕುತಂತ್ರಕ್ಕೆ ಹೆಸರು ವಾಸಿ. ಇದೇ ಹೆಸರನ್ನು ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸುಂದರವಾದ ಸಿನಿಮಾ ಮಾಡುತ್ತಿದ್ದಾರೆ ಯೋಗರಾಜ್‌ ಭಟ್‌. ಈ ಸಿನೆಮಾದ ಕುರಿತು ಯೋಗರಾಜ್‌ ಭಟ್‌ ಅಂದೊಮ್ಮೆ ಹೀಗೆ ಹೇಳಿದ್ದರು. ಶಿವಣ್ಣ+ ಪ್ರಭುದೇವ+ ರಾಕ್‌ಲೈನ್+ ಯೋಗರಾಜ್= ಕರಟಕ ದಮನಕ ಎಂದು ವಿವರಣೆ ಮಾಡಿದ್ದಾರೆ. ಕರಟಕದ ಮುಂದೆ K, ದಮನಕದ ಮುಂದೆ D ಎಂದು ಇಂಗ್ಲೀಷ್‌ ಅಕ್ಷರಗಳನ್ನೂ ಜೋಡಿಸಿದ್ದಾರೆ. KD ಶಾರ್ಟ್‌ ಅರ್ಥವೂ ಈ ಸಿನಿಮಾಕ್ಕಿದೆ.

ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದಾರೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಹ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ, ಈ ಶಿವರಾತ್ರಿ ಹಬ್ಬಕ್ಕೆ ಶಿವಣ್ಣನ ಅಭಿಮಾನಿಗಳಿಗೆ ಕರಟಕ ದಮನಕದ ಹಬ್ಬ ಇರಲಿದೆ. ಈ ಸುದ್ದಿ ಕೇಳಿ ಶಿವಣ್ಣನ ಅಭಿಮಾನಿಗಳು ಈಗಿನಿಂದಲೇ ಜಾಗರಣೆ ಶುರು ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantime.com )

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ