ಕನ್ನಡ ಸುದ್ದಿ  /  ಮನರಂಜನೆ  /  Ghost Movie Motion Poster: ‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್;‌ 80ರ ಕಾಲಘಟ್ಟಕ್ಕೆ ಕರೆದೊಯ್ದ ಶಿವಣ್ಣ

Ghost Movie Motion Poster: ‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್;‌ 80ರ ಕಾಲಘಟ್ಟಕ್ಕೆ ಕರೆದೊಯ್ದ ಶಿವಣ್ಣ

Jan 01, 2023 02:29 PM IST

‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್;‌ 80ರ ಕಾಲಘಟ್ಟಕ್ಕೆ ಕರೆದೊಯ್ದ ಶಿವಣ್ಣ

    • ‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ ಗ್ಯಾಂಗ್‌ಸ್ಟರ್‌ ಅವತಾರದಲ್ಲಿ ಎದುರಾಗಿದ್ದಾರೆ. 
‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್;‌ 80ರ ಕಾಲಘಟ್ಟಕ್ಕೆ ಕರೆದೊಯ್ದ ಶಿವಣ್ಣ
‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್;‌ 80ರ ಕಾಲಘಟ್ಟಕ್ಕೆ ಕರೆದೊಯ್ದ ಶಿವಣ್ಣ

Ghost Movie Motion Poster: ಹ್ಯಾಟ್ರಿಕ್‌ ಹೀರೋ ಶಿವಣ್ಣ ಸದ್ಯ ವೇದ ಸಿನಿಮಾ ಯಶಸ್ಸಿನ ಗುಂಗಿನಲ್ಲಿದ್ದಾರೆ. ಸಿನಿಮಾದ ಪ್ರಚಾರ ಕೆಲಸದ ಹಿನ್ನೆಲೆಯಲ್ಲಿ ಅಲ್ಲಿಲ್ಲಿ ಸುತ್ತಾಟ ನಡೆಸಿದ್ದಾರೆ. ಈ ನಡುವೆ ಹೊಸ ವರ್ಷದ ಪ್ರಯುಕ್ತ ಶ್ರೀನಿ ನಿರ್ದೇಶನದ ಬಹುನಿರೀಕ್ಷಿತ ‘ಘೋಸ್ಟ್‌’ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ವಿಶೇಷ ಏನೆಂದರೆ ಈ ಮೋಷನ್‌ ಪೋಸ್ಟರ್‌ನಲ್ಲಿ ಶಿವಣ್ಣ ವಿಂಟೇಜ್‌ ಲುಕ್‌ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭರತ್‌ ಬೋಪಣ್ಣ ಜತೆಗೆ ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ; ಇಲ್ಲಿದೆ ನೋಡಿ ಹೊಸ ಆಲ್ಬಂ ಹಾಡು

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ, 'ಘೋಸ್ಟ್‌' ಸಿನಿಮಾ ಈಗಾಗಲೇ ಫಸ್ಟ್‌ ಲುಕ್‌ ಮೂಲಕವೇ ಗಮನಸೆಳೆದಿತ್ತು. ಇದೀಗ ಶ್ರೀನಿ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ಎರಡನೇ ರಗಡ್‌ ಅವತಾರವನ್ನು ರಿವೀಲ್‌ ಮಾಡಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೂ ಶಿವಣ್ಣನ ಹೊಸ ಲುಕ್‌ ಕುತೂಹಲ ಮೂಡಿಸಿದೆ.

'ಘೋಸ್ಟ್' ಎಂದರೆ ಇದು ಹಾರರ್‌ ಸಿನಿಮಾ ಇರಬಹುದು ಎನ್ನಲಾಗಿತ್ತು. ಅದರೆ ಇದೊಂದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಶಿವಣ್ಣ ಗ್ಯಾಂಗ್‌ಸ್ಟರ್‌ ಅವತಾರದಲ್ಲಿ ಇರಲಿದ್ದಾರೆ ಎಂಬುದನ್ನು ಇದೀಗ ಮೋಷನ್‌ ಪೋಸ್ಟರ್‌ನಲ್ಲಿ ಜಗಜ್ಜಾಹೀರು ಮಾಡಿದ್ದಾರೆ ನಿರ್ದೇಶಕರು. ಇದೆಲ್ಲ ಒಂದೆಡೆಯಾದರೆ, ಕನ್ನಡದಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್‌ ಆಗಲಿದೆ.

ಸದ್ಯ ಮೈಸೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೂರನೇ ಹಂತದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭವಾಗಲಿದೆ‌. ಶಿವರಾಜಕುಮಾರ್ ಸೇರಿದಂತೆ ಅನೇಕ ಕಲಾವಿದರು ದ್ವಿತೀಯ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್‌ ಚಿತ್ರಕ್ಕಿದೆ. ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬಿಜಿ..

ಈ ಸಿನಿಮಾ ಕೆಲಸದ ಜತೆಗೆ ಶಿವರಾಜ್ ಕುಮಾರ್ ಬೇರೆ ಸಿನಿಮಾಗಳಲ್ಲಿಯೂ ಬಿಜಿ ಇದ್ದಾರೆ. ತೆಲುಗಿನ ರವಿ ಧುಲಿಪುಡಿ ನಿರ್ದೇಶನದ ನೀ ಸಿಗೊವರೆಗೂ, ಯೋಗರಾಜ್ ಭಟ್ ಹಾಗೂ ರಿಷಬ್‌ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ನಟಿಸಬೇಕಿದೆ. ರಜನಿಕಾಂತ್‌ ಅವರ ಜೈಲರ್‌ ಸಿನಿಮಾ, ಧನುಷ್‌ ಜತೆಗೆ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ನಿರ್ದೇಶನದ ಚಿತ್ರದಲ್ಲಿಯೂ ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ ಜೊತೆಯಾಗಿ ನಟಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ