ಕನ್ನಡ ಸುದ್ದಿ  /  ಕರ್ನಾಟಕ  /  Honda Cars; ಹೋಂಡಾ ಕಂಪನಿಯಿಂದ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 'ನಮ್ಮ ಎಲಿವೇಟ್ ನಮ್ಮ ಹೆಮ್ಮೆ' ಜಾಥಾ

Honda Cars; ಹೋಂಡಾ ಕಂಪನಿಯಿಂದ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 'ನಮ್ಮ ಎಲಿವೇಟ್ ನಮ್ಮ ಹೆಮ್ಮೆ' ಜಾಥಾ

Raghavendra M Y HT Kannada

Jan 22, 2024 06:07 PM IST

ಹೋಂಡಾ ಕಾರು ಕಂಪನಿ ಜನವರಿ 22ರ ಸೋಮವಾರ ಬೆಂಗಳೂರಿನಲ್ಲಿ ನಮ್ಮ ಎಲಿವೇಟ್ ನಮ್ಮ ಹೆಮ್ಮೆ ಜಾಥಾವನ್ನು ಹಮ್ಮಿಕೊಂಡಿತ್ತು.

  • ಹೋಂಡಾ ಕಂಪನಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಎಲಿವೇಟ್ ನಮ್ಮ ಹೆಮ್ಮೆ’ ಜಾಥಾದಲ್ಲಿ 100 ಕ್ಕೂ ಅಧಿಕ ಗ್ರಾಹಕರು ಭಾಗವಹಿಸಿದ್ದರು.

ಹೋಂಡಾ ಕಾರು ಕಂಪನಿ ಜನವರಿ 22ರ ಸೋಮವಾರ ಬೆಂಗಳೂರಿನಲ್ಲಿ ನಮ್ಮ ಎಲಿವೇಟ್ ನಮ್ಮ ಹೆಮ್ಮೆ ಜಾಥಾವನ್ನು ಹಮ್ಮಿಕೊಂಡಿತ್ತು.
ಹೋಂಡಾ ಕಾರು ಕಂಪನಿ ಜನವರಿ 22ರ ಸೋಮವಾರ ಬೆಂಗಳೂರಿನಲ್ಲಿ ನಮ್ಮ ಎಲಿವೇಟ್ ನಮ್ಮ ಹೆಮ್ಮೆ ಜಾಥಾವನ್ನು ಹಮ್ಮಿಕೊಂಡಿತ್ತು.

ಬೆಂಗಳೂರು: ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ‘ನಮ್ಮ ಎಲಿವೇಟ್ ನಮ್ಮ ಹೆಮ್ಮೆ’ ಎಂಬ ಜಾಥಾವನ್ನು ಆಯೋಜಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಬೆಂಗಳೂರು ಸಂಚಾರ ಸಲಹೆ; ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ, ಕೆಆರ್‌ಪುರ ಅಪ್‌ ರ‍್ಯಾಂಪ್‌ ಬಂದ್‌, 5 ಪರ್ಯಾಯ ಮಾರ್ಗಗಳ ವಿವರ ಹೀಗಿದೆ

ಭಾನವಾರ (ಜನವರಿ 21) ಹಮ್ಮಿಕೊಂಡಿದ್ದ 50 ಕಿಲೋ ಮೀಟರ್‌ಗಳ ಈ ಜಾಥಾ ನಗರದ ನಂದಿ ಲಿಂಕ್ ರೋಡ್‌ನಿಂದ ಆರಂಭವಾಗಿ ಶಿಲ್ಹಾಂದ್ರ ರೆಸಾರ್ಟ್ ಬಳಿ ಕೊನೆಗೊಂಡಿತು. ಜಾಥಾದ ಜೊತೆಗೆ ಆಯೋಜಿಸಿದ್ದ ಹಲವು ಆಟಗಳು ಹಾಗೂ ಇತರೆ ಚಟುವಟಿಗಳು ಗ್ರಾಹಕರ ಖುಷಿಯನ್ನು ಹೆಚ್ಚಿಸಿತು. ಹೋಂಡಾ ಎಲೆವೇಟ್ ಕಾರು ಖರೀದಿಸಿದ್ದ ನೂರಕ್ಕೂ ಅಧಿಕ ಗ್ರಾಹಕರು ಮತ್ತವರು ಕುಟುಂಬದವರು ಭಾಗವಹಿಸಿದ್ದರು. ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು ಎಂದು ತಮ್ಮ ಸಂಸತವನ್ನು ಹಂಚಿಕೊಂಡಿರು.

ಮಾರಾಟ ವಿಭಾಗದ ಏರಿಯಾ ಮ್ಯಾನೇಜರ್‌ಗಳಾದ ಪ್ರಣೀತ್ ಸಂಚೇಟಿ, ಸುಭದೀಪ್ ಚಟರ್ಜಿ, ಆಪರೇಷನ್ ಸ್ಟ್ಯಾಂಡರ್ಡ್ ಅಂಡ್ ಟ್ರೈನಿಂಗ್ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೇಯಸ್ ಚಂದ್ರನ್, ಆದರ್ಶ, ಡೀಲರ್ ಬ್ಯುಸಿನೆಸ್ ಹೆಡ್ (ವಿಪಿ, ಮ್ಯಾಗ್ನಂ ಹೆೋಂಡಾ), ರಾಮದಾಸ್ (ಬ್ಯುಸಿನೆಸ್ ಹೆಡ್, ವೈಟ್‌ಫೀಲ್ಡ್ ಹೋಂಡಾ), ಮನೋಹರ್ (ಪ್ರಧಾನ ವ್ಯವಸ್ಥಾಪಕ, ಬ್ರಿಗೇಡ್ ಹೋಂಡಾ), ಮನೀಶ್ ಜೈನ್ (ಪ್ರಧಾನ ವ್ಯವಸ್ಥಾಪಕ, ದಕ್ಷಿಣ್ ಹೋಂಡಾ) ಉಪಸ್ಥಿತರಿದ್ದರು.

ಹೋಂಡಾ ಕಂಪನಿಯ ಹೊಸ ಕಾರು ಹೋಂಡಾ ಎಲಿವೇಟ್ ಎಸ್‌ಯುವಿಗೆ ಉತ್ತಮ ಗ್ರಾಹಕ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಎಲಿವೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರೇ ತಿಂಗಳಲ್ಲಿ ಮಾರಾಟದ ಒಟ್ಟು ಪಾಲಿನಲ್ಲಿ ಶೇಕಡಾ 50 ರಷ್ಟು ಹೆಚ್ಚಿಸಿಕೊಂಡಿದೆ.

ಹೋಂಡಾ ಎಲಿವೇಟ್ ಎಸ್‌ಯುವಿ ಕಾರಿನ ವೈಶಿಷ್ಟ್ಯಗಳಿವು

ಈ ಕಾರಿನ ವೈಶಿಷ್ಟ್ಯತೆಗಳನ್ನು ನೋಡುವುದಾರೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, 10.25 ಇಂಚಿನ ಹೆಚ್‌ಡಿ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ವೈರ್‌ವೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ಒಳಭಾಗದಲ್ಲಿ ಡ್ಯುಯಲ್ ಡಿಸ್‌ ಪ್ಲೇ ಡ್ಯಾಶ್, 8 ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ವ್ಯವಸ್ಥೆಯನ್ನು ಹೊಂದಿದೆ. ವೈರ್‌ಲೆಸ್ ಫೋನ್ ಜಾರ್ಜರ್, ಪ್ಲಶ್ ಸೀಟಿಂಗ್, ಎಲೆಕ್ಟ್ರಿಕ್ ಸನ್‌ರೂಫ್, 1.5 ಲೀಟರ್, 4 ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಇಂಜಿನ್, 4,300 rpm ನಲ್ಲಿ 145 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಸೇರಿದಂತೆ ಹಲವು ಸೌಲಭ್ಯಗಳು ಹೋಂಡಾ ಎಲಿವೇಟ್ ಎಸ್‌ಯುವಿ ಕಾರಿನಲ್ಲಿದೆ. ಹೋಂಡಾ ಎಲಿವೇಟ್ ಕಾರಿನ ಎಕ್ಸ್‌ ಶೋರೂಂ ಬೆಲೆ 11,57,900 ರೂಪಾಯಿಗಳಿಂದ ಆರಂಭವಾಗುತ್ತದೆ.

ಭಾರತೀಯ ಮಾರುಕಟ್ಟೆಗೆ ಹೋಂಡಾ ಪ್ಲಾನ್ ಮಾಡಿಕೊಂಡಿರುವ ಐದು ಹೊಸ ಎಸ್‌ಯುವಿಗಳ ಪೈಕಿ ಹೋಂಡಾ ಎಲಿವೇಟ್ ಎಸ್‌ಯುವಿ ಮೊದಲನೆಯದು. ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಹುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿಯ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್‌ಗೆ ಪೈಪೋಟಿ ನೀಡುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ