ಕನ್ನಡ ಸುದ್ದಿ  /  ಕರ್ನಾಟಕ  /  ಚಿಲುಮೆಯಿಂದ ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ, ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹ; ತನಿಖೆಯಿಂದ ಸಾಬೀತು

ಚಿಲುಮೆಯಿಂದ ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ, ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹ; ತನಿಖೆಯಿಂದ ಸಾಬೀತು

Praveen Chandra B HT Kannada

Apr 17, 2023 09:26 PM IST

ಸಾಂದರ್ಭಿಕ ಚಿತ್ರ

    • Bengaluru voter data theft: ಖಾಸಗಿ ಟ್ರಸ್ಟ್‌ ತಾನು ಸಂಗ್ರಹಿಸಿದ ಮತದಾರರ ಮಾಹಿತಿಗಳ ದತ್ತಾಂಶವನ್ನು ಎಲ್ಲಿ ಇಟ್ಟಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಇಸಿಐ ನಿಯಮ ಉಲ್ಲಂಘಿಸಿ ಈ ಡೇಟಾವನ್ನು ಚೈನೀಸ್‌ ಅಥವಾ ಪೂರ್ವ ಐರೋಪ್ಯ ಸರ್ವರ್‌ಗಳಲ್ಲಿ ಸಂಗ್ರಹಿಸಿರಬಹುದು ಎಂದು ತನಿಖಾ ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ಬೆಂಗಳೂರು: ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಮಾಹಿತಿ ಕಳ್ಳತನದ ಬಗ್ಗೆ ಚುನಾವಣಾ ಆಯೋಗವು ತನಿಖೆ ನಡೆಸಿದೆ. ಬಿಬಿಎಂಪಿ ಅಧಿಕಾರಿಗಳು ಖಾಸಗಿ ಟ್ರಸ್ಟ್‌ ಚಿಲುಮೆಗೆ ಒದಗಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಅವಕಾಶ ನೀಡುವ ಮೂಲಕ ಕಾನೂನುಬಾಹಿರ ಮತ್ತು ಅನುಚಿತ ಅನುಕೂಲ ಒದಗಿಸಿದ್ದರು ಎನ್ನುವ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ. ಟ್ರಸ್ಟ್‌ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದರು ಎನ್ನುವ ಅಂಶವು ತನಿಖೆಯಿಂದ ಬಹಿರಂಗಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ; ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ, ಎಸ್‌ಐಟಿ ಮೂಲ ಹೇಳಿಕೆ

ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿ; ಪ್ರಯಾಣಕ್ಕೆಷ್ಟು ದಿನ, ರೂಟ್ ಯಾವುದು ಶಿವಾನಂದ ಪರೀಟ ಅನುಭವ ಕಥನ

ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ, ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ

Anjali Murder Case; ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ ಭೀಕರ ಹತ್ಯೆ, 10 ಅಂಶಗಳ ವಿವರ ವರದಿ

ದಿ ನ್ಯೂಸ್‌ ಮಿನಿಟ್‌ ಮತ್ತು ಪ್ರತಿಧ್ವನಿಯಲ್ಲಿ ಮೊದಲ ಬಾರಿಗೆ ಈ ಮತದಾರರ ಮಾಹಿತಿ ಕಳ್ಳತನದ ಬಗ್ಗೆ ವರದಿಯಾಗಿತ್ತು. ಈ ಡಿಜಿಟಲ್‌ ಸುದ್ದಿ ತಾಣಗಳು ಪ್ರಕಟಿಸಿದ ಮಾಹಿತಿಯನ್ನು ಚುನಾವಣಾ ಆಯೋಗದ ತನಿಖೆ ಎತ್ತಿ ಹಿಡಿದಿದೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಐಎಎಸ್ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ನಡೆಸಿದ ತನಿಖೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಲವು ಅಧಿಕಾರಿಗಳು ಚಿಲುಮೆ ಎಂಬ ಖಾಸಗಿ ಟ್ರಸ್ಟ್‌ಗೆ ಅಕ್ರಮ ಮತ್ತು ಅನಪೇಕ್ಷಿತ ಅನುಕೂಲಗಳನ್ನು ನೀಡಿ ಮತದಾರರ ಮಾಹಿತಿ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಟ್ರಸ್ಟ್ ವಿರುದ್ಧದ ದೂರನ್ನು ಬುಡಮೇಲು ಮಾಡಲು ಯತ್ನಿಸಿದರು ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ತನಿಖೆಯಿಂದ ಇನ್ನೂ ಹಲವು ಅಂಶಗಳು ಬಹಿರಂಗವಾಗಿವೆ. ಚಿಲುಮೆ ಮತ್ತು ಬಿಜೆಪಿ ಸಚಿವ ಸಿಎನ್ ಅಶ್ವತ್ಥನಾರಾಯಣ್ ನಡುವೆ ಸಂಪರ್ಕ ಹಾಗೂ ಚಿಲುಮೆಗೆ ಸಂಬಂಧಿಸಿದ ಮತ್ತೊಂದು ಕಂಪನಿಯು ಹೊಂಬಾಳೆ ಫಿಲ್ಮ್ಸ್‌ನಿಂದ ತೊಡಗಿಸಿಕೊಂಡಿದೆ ಎನ್ನುವ ಅಂಶವನ್ನೂ ತನಿಖೆ ಬಹಿರಂಗಪಡಿಸಿದೆ. ಕೆಜಿಎಫ್‌ ಮತ್ತು ಕಾಂತಾರವೆಂಬ ಎರಡು ಅತಿಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳ ನಿರ್ಮಾಣವನ್ನು ಹೊಂಬಾಳೆ ಫಿಲ್ಮ್ಸ್‌ ಮಾಡಿದೆ.

ಖಾಸಗಿ ಟ್ರಸ್ಟ್‌ ತಾನು ಸಂಗ್ರಹಿಸಿದ ಮತದಾರರ ಮಾಹಿತಿಗಳ ದತ್ತಾಂಶವನ್ನು ಎಲ್ಲಿ ಇಟ್ಟಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಇಸಿಐ ನಿಯಮ ಉಲ್ಲಂಘಿಸಿ ಈ ಡೇಟಾವನ್ನು ಚೈನೀಸ್‌ ಅಥವಾ ಪೂರ್ವ ಐರೋಪ್ಯ ಸರ್ವರ್‌ಗಳಲ್ಲಿ ಸಂಗ್ರಹಿಸಿರಬಹುದು ಎಂದು ತನಿಖಾ ವರದಿ ತಿಳಿಸಿದೆ.

ನವೆಂಬರ್ 2022 ರಲ್ಲಿ ದಿ ನ್ಯೂಸ್‌ ಮಿನಿಟ್‌ ಮತ್ತು ಪ್ರತಿಧ್ವನಿ ಡಿಜಿಟಲ್‌ ಮಾಧ್ಯಮಗಳು ಬೆಂಗಳೂರು ಮೂಲದ ಉದ್ಯಮಿ ರವಿಕುಮಾರ್ ಕೃಷ್ಣಪ್ಪ ಸ್ಥಾಪಿಸಿದ ಚಿಲುಮೆ ಟ್ರಸ್ಟ್ ಹಗರಣವನ್ನು ಬಯಲಿಗೆ ಎಳೆದಿತ್ತು. ತನ್ನ ಟ್ರಸ್ಟ್‌ನ ಏಜೆಂಟರನ್ನು ಚುನಾವಣಾ ಅಧಿಕಾರಿಗಳಂತೆ ಬಳಸಿ ಬೆಂಗಳೂರಿನ ನಾಗರಿಕರ ಮತದಾರರ ದತ್ತಾಂಶವನ್ನು ಹೇಗೆ ರಹಸ್ಯವಾಗಿ ಸಂಗ್ರಹಿಸಿದೆ ಎಂಬ ಅಂಶವನ್ನು ಬಹಿರಂಗಪಡಿಸಿತ್ತು. ಮತದಾರರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಈ ಟ್ರಸ್ಟ್‌ಗೆ ಅವಕಾಶ ನೀಡಲಾಗಿತ್ತು.

ಬಿಬಿಎಂಪಿ ಜತೆಗಿನ ಒಪ್ಪಂದದ ನಿಯಮಗಳನ್ನು ಚಿಲುಮೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸಮನ್ವಯ ಟ್ರಸ್ಟ್ ಎಂಬ ಎನ್‌ಜಿಒ ಚಿಲುಮೆ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದೆ. ಸಮನ್ವಯ ನೀಡಿದ ದೂರಿನಲ್ಲಿ ಚಿಲುಮೆ ತನ್ನ ಕ್ಷೇತ್ರ ಕಾರ್ಯಕರ್ತರಿಗೆ ‘ಬೂತ್ ಲೆವೆಲ್ ಆಫೀಸರ್’ (ಬಿಎಲ್‌ಒ) ಅಥವಾ ‘ಬೂತ್ ಲೆವೆಲ್ ಕೋಆರ್ಡಿನೇಟರ್’ (ಬಿಎಲ್‌ಸಿ) ಎಂದು ಗುರುತಿಸುವ ನಕಲಿ ಕಾರ್ಡ್‌ಗಳನ್ನು ಹೇಗೆ ವಿತರಿಸಿದೆ ಎಂದು ವಿವರಿಸಲಾಗಿದೆ. (ಸುದ್ದಿ ಮೂಲ: ದಿ ನ್ಯೂಸ್‌ ಮಿನಿಟ್‌).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ