ಕನ್ನಡ ಸುದ್ದಿ  /  ಕರ್ನಾಟಕ  /  Bjp Star Campaigners: ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ, ಯಾರೆಲ್ಲಾ ಇದ್ದಾರೆ ನೋಡಿ

BJP Star Campaigners: ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ, ಯಾರೆಲ್ಲಾ ಇದ್ದಾರೆ ನೋಡಿ

Meghana B HT Kannada

Apr 19, 2023 11:39 AM IST

ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ)

    • ಪ್ರಧಾನಿ ಮೋದಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಯೋಗಿ ಆದಿತ್ಯನಾಥ್​, ನಿರ್ಮಲಾ ಸೀತಾರಾಮನ್​ ಸೇರಿದಂತೆ 40 ಮಂದಿ ಬಿಜೆಪಿ ನಾಯಕರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲಿದ್ದಾರೆ. 
ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ)
ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ)

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಪಕ್ಷದ ನಾಯಕರ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಈ ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ ಬನ್ನಿ.

ಟ್ರೆಂಡಿಂಗ್​ ಸುದ್ದಿ

MLC Elections2024: ಪರಿಷತ್‌ ಚುನಾವಣೆ, ನೈರುತ್ಯ- ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ಗೆ ಬಂಡಾಯ ಬಿಸಿ

Hassan Scandal: ಪ್ರಜ್ವಲ್‌ ಬೆಂಗಳೂರಿಗೆ ವಾಪಾಸ್‌ ಆಗುತ್ತಿಲ್ಲ ಯಾಕೆ, ವಿಳಂಬದ ಹಿಂದಿನ ತಂತ್ರವೇನು?

Hassan Scandal: ಬೆಂಗಳೂರಿಗೆ ಬಾರದ ಪ್ರಜ್ವಲ್‌ ರೇವಣ್ಣ, ಕಾದು ಕಾದು ಸುಸ್ತಾದ ಪೊಲೀಸರು

Bangalore News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ: ಬೆಂಗಳೂರಿನ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ಅಧಿವೇಶನದಲ್ಲಿ ಸಲಹೆ

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಪಕ್ಷದ ನಾಯಕರು

1. ನರೇಂದ್ರ ಮೋದಿ

2. ಜೆಪಿ ನಡ್ಡಾ

3. ರಾಜನಾಥ್ ಸಿಂಗ್​

4. ಅಮಿತ್​ ಶಾ

5. ನಿತಿನ್​ ಗಡ್ಕರಿ

6. ಬಿ ಎಸ್​ ಯಡಿಯೂರಪ್ಪ

7. ನಳಿನ್​ ಕುಮಾರ್ ಕಟೀಲ್​

8. ಬಸವರಾಜ ಬೊಮ್ಮಾಯಿ

9. ಪ್ರಲ್ಹಾದ್​ ಜೋಶಿ

10. ಡಿ ವಿ ಸದಾನಂದ ಗೌಡ

11. ಕೆ ಎಸ್​ ಈಶ್ವರಪ್ಪ

12. ಗೋವಿಂದ ಕಾರಜೋಳ

13. ಆರ್​ ಅಶೋಕ್​

14. ನಿರ್ಮಲಾ ಸೀತಾರಾಮನ್​​

15. ಸ್ಮೃತಿ ಇರಾನಿ

16. ಧರ್ಮೇಂದ್ರ ಪ್ರಧಾನ್​​

17. ಮನ್ಸುಕ್​ ಮಾಂಡವಿಯಾ

18. ಕೆ. ಅಣ್ಣಾಮಲೈ

19. ಅರುಣ್​ ಸಿಂಗ್​

20. ಡಿ ಕೆ ಅರುಣ

21. ಸಿ ಟಿ ರವಿ

22. ಯೋಗಿ ಆದಿತ್ಯನಾಥ್​

23. ಶಿವರಾಜ್​ ಸಿಂಗ್​ ಚೌಹಾಣ್​

24. ಹೇಮಂತ್ ಬಿಸ್ವಾ ಶರ್ಮಾ

25. ದೇವೇಂದ್ರ ಫಡ್ನವಿಸ್​

26. ಪ್ರಭಾಕರ್ ಕೋರೆ

27. ಶೋಭ ಕರಂದ್ಲಾಜೆ

28. ಎ ನಾರಾಯಣಸ್ವಾಮಿ

29. ಭಗವಂತ್​ ಖೂಬಾ

30. ಅರವಿಂದ್​ ಲಿಂಬಾವಳಿ

31. ಶ್ರೀರಾಮುಲು

32. ಕೋಟ ಶ್ರೀನಿವಾಸ ಪೂಜಾರಿ

33. ಬಸನಗೌಡ ಪಾಟೀಲ್​ ಯತ್ನಾಳ್​

34. ಉಮೇಶ್​ ಜಾದವ್​

35. ಛಲವಾದಿ ನಾರಾಯಣಸ್ವಾಮಿ

36. ಎನ್​ ರವಿಕುಮಾರ್​

37. ಜಿ ವಿ ರಾಜೇಶ್​

38. ಜಗ್ಗೇಶ್​

39. ಶೃತಿ

40. ತಾರಾ ಅನುರಾಧ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಮೂರನೇ ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಒಟ್ಟು 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಇಂದಿನಿಂದ ನಟ ಸುದೀಪ್​ ಪ್ರಚಾರ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ನಾನು ಪಕ್ಷ ಸೇರುವುದಿಲ್ಲ, ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಆದ್ದರಿಂದ ನಾನು ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ಇಂದಿನಿಂದ (ಏ.19) ಸುದೀಪ್​ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಇಂದು ಬಸವರಾಜ ಬೊಮ್ಮಾಯಿ ತಮ್ಮ ಕ್ಷೇತ್ರವಾದ ಹಾವೇರಿಯ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಸುದೀಪ್‌ ಕೂಡಾ ಈ ವೇಳೆ ಉಪಸ್ಥಿತರಿದ್ದು ಇಂದಿನಿಂದಲೇ ಅಧಿಕೃತವಾಗಿ ಶಿಗ್ಗಾಂವಿಯಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ