Sudeep Campaign in Shiggaon: ಹಾವೇರಿಗೆ ಕಿಚ್ಚನ ಪ್ರಯಾಣ; ಸಿಎಂ ತವರಿನಿಂದಲೇ ಇಂದಿನಿಂದ ಪ್ರಚಾರ ಕಾರ್ಯ ಆರಂಭ
ಕನ್ನಡ ಸುದ್ದಿ  /  ಮನರಂಜನೆ  /  Sudeep Campaign In Shiggaon: ಹಾವೇರಿಗೆ ಕಿಚ್ಚನ ಪ್ರಯಾಣ; ಸಿಎಂ ತವರಿನಿಂದಲೇ ಇಂದಿನಿಂದ ಪ್ರಚಾರ ಕಾರ್ಯ ಆರಂಭ

Sudeep Campaign in Shiggaon: ಹಾವೇರಿಗೆ ಕಿಚ್ಚನ ಪ್ರಯಾಣ; ಸಿಎಂ ತವರಿನಿಂದಲೇ ಇಂದಿನಿಂದ ಪ್ರಚಾರ ಕಾರ್ಯ ಆರಂಭ

ಸುದೀಪ್‌ ಇಂದು ವಿಶೇಷ ಹೆಲಿಕಾಪ್ಟರ್‌ ಮೂಲಕ ಶಿಗ್ಗಾಂವಿಗೆ ಪ್ರಯಾಣ ಬೆಳೆಸಿದ್ದು ಇಂದಿನ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಭಾಗಿಯಾಗಲಿದ್ದಾರಂತೆ. ಜೊತೆಗೆ ಅಲ್ಲಿ ನಡೆಯಲಿರುವ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಮೆಚ್ಚಿನ ನಟನನ್ನು ನೋಡಲು, ಸ್ವಾಗತಿಸಲು ಈಗಾಗಲೇ ಅಭಿಮಾನಿಗಳು ಸಜ್ಜಾಗಿದ್ದಾರೆ.

ಸಿಎಂ ತವರು ಶಿಗ್ಗಾಂವಿಯಿಂದ ಚುನಾವಣೆ ಪ್ರಚಾರ ಆರಂಭಿಸಲಿರುವ ಸುದೀಪ್
ಸಿಎಂ ತವರು ಶಿಗ್ಗಾಂವಿಯಿಂದ ಚುನಾವಣೆ ಪ್ರಚಾರ ಆರಂಭಿಸಲಿರುವ ಸುದೀಪ್

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇತ್ತೀಚೆಗೆ, ಸಿಎಂ ಬೊಮ್ಮಾಯಿ ಅವರನ್ನು ಬೆಂಬಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಕಿಚ್ಚ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಾದರೂ ನಾನು ಪಕ್ಷ ಸೇರುವುದಿಲ್ಲ, ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಆದ್ದರಿಂದ ನಾನು ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದಿದ್ದರು. ಕಿಚ್ಚ ಈಗ ಆಡಿದ ಮಾತಿನಂತೆ ಇಂದಿನಿಂದ (ಏ.19) ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ.

ಇಂದು ಬಸವರಾಜಬೊಮ್ಮಾಯಿ ತಮ್ಮ ಕ್ಷೇತ್ರವಾದ ಹಾವೇರಿಯ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಸುದೀಪ್‌ ಕೂಡಾ ಈ ವೇಳೆ ಉಪಸ್ಥಿತರಿದ್ದು ಇಂದಿನಿಂದಲೇ ಅಧಿಕೃತವಾಗಿ ಶಿಗ್ಗಾಂವಿಯಿಂದಲೇ ಪ್ರಚಾರ ಆರಂಭಿಸಲಿದ್ದಾರಂತೆ. ಸುದೀಪ್‌ ಇಂದು ವಿಶೇಷ ಹೆಲಿಕಾಪ್ಟರ್‌ ಮೂಲಕ ಶಿಗ್ಗಾಂವಿಗೆ ಪ್ರಯಾಣ ಬೆಳೆಸಿದ್ದು ಇಂದಿನ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಭಾಗಿಯಾಗಲಿದ್ದಾರಂತೆ. ಜೊತೆಗೆ ಅಲ್ಲಿ ನಡೆಯಲಿರುವ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಮೆಚ್ಚಿನ ನಟನನ್ನು ನೋಡಲು, ಸ್ವಾಗತಿಸಲು ಈಗಾಗಲೇ ಅಭಿಮಾನಿಗಳು ಸಜ್ಜಾಗಿದ್ದಾರೆ.

ಸೋಮವಾರ ಶ್ರೀರಂಗಪಟ್ಟಣದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದ ದರ್ಶನ್‌

ನಟ ದರ್ಶನ್‌ ಕೂಡಾ ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ತಮ್ಮ ಆಪ್ತ ಇಂಡುವಾಳು ಸಚ್ಚಿದಾನಂದ ಪರ ದರ್ಶನ್‌ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಅವರು ಸೋಮವಾರ ತಮ್ಮ ಹುಟ್ಟುಹಬ್ಬದ ದಿನದಂದು ನಾಮಪತ್ರ ಸಲ್ಲಿಸಿದ್ದಾರೆ. ಶ್ರೀರಂಗಪಟ್ಟಣದ ಬೀದಿ ಬೀದಿಗಳಲ್ಲಿ ಬಿಜೆಪಿ ಬಾವುಟ ರಾರಾಜಿಸುತ್ತಿತ್ತು. ಅಂದು ತಾಲೂಕಿನ ವಿವಿಧೆಡೆ ದರ್ಶನ್‌ ತೆರೆದ ವಾಹನದಲ್ಲಿ ನಡೆದ ರ್ಯಾಲಿಯಲ್ಲಿ ಭಾಗಹಿಸಿದ್ದರು. ತಮ್ಮ ಗೆಳೆಯ ಸಚ್ಚಿದಾನಂದ ಪರ ಮತ ಯಾಚನೆ ಮಾಡಿದರು.

ನಾಮಪತ್ರ ಸಲ್ಲಿಸುವ ವೇಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ರಾಜ್ಯ ಕಾರ್ಯಕರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ. ಎಸ್. ನಂಜುಡೇಗೌಡ ಹಾಗೂ ಮಂಡ್ಯ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಮೇಳಾಪುರ ಶ್ರೀಧರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.‌

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ

ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸೀಸನ್‌ 19 ಟ್ರೋಫಿ ಗೆದ್ದ ಗ್ರಾಮೀಣ ಪ್ರತಿಭೆ ಪ್ರಗತಿ

ಜೀ ಕನ್ನಡದ ಖ್ಯಾತ ಕಾರ್ಯಕ್ರಮ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸೀಸನ್‌ 19 ಗ್ರ್ಯಾಂಡ್‌ ಫಿನಾಲೆ ಮುಗಿದಿದೆ. ಈ ಬಾರಿ ಕೂಡಾ ಕಾರ್ಯಕ್ರಮದಲ್ಲಿ ಜೀ ವಾಹಿನಿಯು ಕರ್ನಾಟಕದ ಮೂಲೆ ಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಕರೆ ತಂದು ಕನ್ನಡಿಗರಿಗೆ ಪರಿಚಯಿಸಿತ್ತು. ಶನಿವಾರ ಹಾಗೂ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆ ಪ್ರಗತಿ ಬಡಿಗೇರ್‌ ಈ ಬಾರಿ ಚಾಂಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮಗನಿಗೆ ಇಷ್ಟವಾದ ಗೋವುಗಳೊಂದಿಗೆ 4ನೇ ವರ್ಷದ ಬರ್ತ್‌ಡೇ ಆಚರಿಸಿದ ರಿಷಬ್‌ ಶೆಟ್ಟಿ: ವಿಡಿಯೋ

ಮಾರ್ಚ್‌ ತಿಂಗಳಲ್ಲಿ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ತಮ್ಮ ಮಗಳು ರಾಧ್ಯಾ ಮೊದಲ ಹುಟ್ಟುಹಬ್ಬ ಆಚರಿಸಿದ್ದರು. ಬರ್ತ್‌ಡೇ ಪಾರ್ಟಿಗೆ ರವಿಚಂದ್ರನ್‌, ಉಪೇಂದ್ರ, ರಮೇಶ್‌ ಅರವಿಂದ್‌, ದರ್ಶನ್‌, ಅಭಿಷೇಕ್‌ ಅಂಬರೀಶ್‌, ಮನುರಂಜನ್‌ ಸೇರಿ ಅನೇಕ ಮಂದಿ ಆಗಮಿಸಿದ್ದರು. ಇದೀಗ ಡಿವೈನ್‌ ಸ್ಟಾರ್‌, ತಮ್ಮ ಮಗ ರಣ್ವಿತ್‌ ಹುಟ್ಟುಹಬ್ಬ ಆಚರಿಸಿದ್ದು ಬರ್ತ್‌ಡೇ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಲು ಈ ಲಿಂಕ್‌ ಒತ್ತಿ.

Whats_app_banner