ಕನ್ನಡ ಸುದ್ದಿ  /  ಕರ್ನಾಟಕ  /  Karnataka Economy: ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು; ದಕ್ಷಿಣದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

Karnataka Economy: ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು; ದಕ್ಷಿಣದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

HT Kannada Desk HT Kannada

Jul 19, 2023 05:28 PM IST

ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು; ದಕ್ಷಿಣದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ.

    • ದೇಶಾದ್ಯಂತ ಒಟ್ಟಾರೆ 19,030 ಕೋಟಿ ರೂ ವಹಿವಾಟಿನಲ್ಲಿ ಕರ್ನಾಟಕದ ಪಾಲು 5.9% ರಷ್ಟಿದೆ. ಈ ಪೈಕಿ ಕರ್ನಾಟಕದಲ್ಲಿ 34 ಸಾವಿರ ಮಹಿಳೆಯತು 1128 ಕೋಟಿ ರೂಪಾಯಿ ವಹಿವಾಟು ನಡೆಸಿ, 9.09% ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ ಎಂದು ಭಾರತೀಯ ನೇರ ಮಾರಾಟ ಒಕ್ಕೂಟ [ಐಡಿಎಸ್ಎ] ತಿಳಿಸಿದೆ.
ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು; ದಕ್ಷಿಣದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ.
ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು; ದಕ್ಷಿಣದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ.

ಬೆಂಗಳೂರು: ದೇಶದಲ್ಲಿ ನೇರ ಮಾರಾಟ ವಲಯದಲ್ಲಿ 78 ಸಾವಿರ ಮಂದಿ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಈ ಪೈಕಿ ಕರ್ನಾಟಕದಲ್ಲಿ 34 ಸಾವಿರ ಮಹಿಳೆಯತು 1128 ಕೋಟಿ ರೂಪಾಯಿ ವಹಿವಾಟು ನಡೆಸಿ, 9.09% ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ ಎಂದು ಭಾರತೀಯ ನೇರ ಮಾರಾಟ ಒಕ್ಕೂಟ [ಐಡಿಎಸ್ಎ] ತಿಳಿಸಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದಕ್ಕೂ ಹಿಂದಿನ ವರ್ಷ 1034 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಕೋವಿಡ್ 19 ಎರಡನೇ ಅಲೆಯಿಂದ ವ್ಯಾಪಾರ ವಹಿವಾಟು ಭಾಗಶಃ ಪ್ರಭಾವಕ್ಕೊಳಗಾಗಿದ್ದರೂ ನೇರ ಮಾರಾಟ ಉದ್ಯಮ ಪ್ರಬಲವಾಗಿ ಹೊರ ಹೊಮ್ಮಿದೆ. ಈ ಅವಧಿಯಲ್ಲಿ ಬೊಕ್ಕಸಕ್ಕೆ ಸುಮಾರು 170 ಕೋಟಿ ರೂಪಾಯಿ ಜಿ.ಎಸ್.ಟಿ ಮೂಲಕ ಕೊಡುಗೆ ನೀಡಿದೆ. ಇದೇ ಸಮಯದಲ್ಲಿ ದೇಶಾದ್ಯಂತ 19,030 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಕರ್ನಾಟಕದ ಪಾಲು 5.90% ರಷ್ಟಿದೆ ಭಾರತೀಯ ನೇರ ಮಾರಾಟ ಒಕ್ಕೂಟ [ಐಡಿಎಸ್ಎ] ದ ಅಧ್ಯಕ್ಷ ರಜತ್ ಬ್ಯಾನರ್ಜಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 13: ಬೆಂಗಳೂರಿನಲ್ಲಿ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆ; ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಇಂದು ವರುಣನ ಕೃಪೆ ಸಾಧ್ಯತೆ

Chikkamagaluru News: ಚಿಕ್ಕಮಗಳೂರಿನಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಶಾಕ್‌ ಗೆ ಬಲಿ

Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಶಕ್ತಿ ಯೋಜನೆ ನಂತರವೂ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ, ದೂರದ ಪ್ರಯಾಣ ಬೆಳೆಸುವ ಮಹಿಳೆಯರ ಬೇಡಿಕೆಗಳೇನು?

“ನೇರಮಾರಾಟ ವಲಯದಲ್ಲಿ ಕರ್ನಾಟಕ ಪ್ರಮುಖ ಮಾರುಕಟ್ಟೆಯಾಗಿದ್ದು, ಕೋವಿಡ್ ಸಾಂಕ್ರಾಮಿಕದ ನಂತರದ ಮೊದಲ ತ್ರೈಮಾಸಿಕದಲ್ಲಿ ಶೇ 9 ಕ್ಕೂ ಹಚ್ಚು ಪ್ರಗತಿ ಸಾಧಿಸಿತ್ತು. ನೇರಮಾರಾಟ ವಲಯ ದೇಶದ 84 ಲಕ್ಷ ಜನರಿಗೆ ಸುಸ್ಥಿರ ಸ್ವಯಂ ಉದ್ಯೋಗದ ಜೊತೆಗೆ ಸೂಕ್ಷ್ಮ ವಲಯದಲ್ಲಿ ಉದ್ಯಮ ಶೀಲತೆ ಉತ್ತೇಜಿಸುವುದನ್ನು ಪ್ರತಿಬಿಂಬಿಸುತ್ತದೆ. ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ನೇರ ಮಾರಾಟ ವಲಯ ಸುಮಾರು 13 ರಷ್ಟು ಪ್ರಗತಿ ಸಾಧಿಸಿದೆ. ಐಡಿಎಸ್ಎ ನ 19 ಸದಸ್ಯ ಕಂಪೆನಿಗಳು ಗ್ರಾಹಕರ ಹಿತಾಸಕ್ತಿ ಮತ್ತು ರಾಜ್ಯದ 78 ಸಾವಿರ ನೇರ ಮಾರಾಟಗಾರರ ಹಿತಾಸಕ್ತಿಗಳನ್ನು ಯಶಸ್ವಿಯಾಗಿ ರಕ್ಷಿಸುತ್ತಿದೆ” ಎಂದರು. ಈ ವರ್ಷ ಐಡಿಎಸ್ಎ ಮತ್ತು ಇತರೆ ಪ್ರಧಾನ ಸಂಸ್ಥೆಗಳ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಫಲವನ್ನು ನಾವೀಗ ಕಾಣುತ್ತಿದ್ದೇವೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗಿದ್ದು, 2021 ರಲ್ಲಿ ಗ್ರಾಹಕ ರಕ್ಷಣೆ [ನೇರಮಾರಾಟ] ನಿಯಮಗಳನ್ನು ರಚಿಸಲಾಗಿದೆ. ಇದು ದೇಶದಲ್ಲಿ ನೇರ ಮಾರಾಟ ಘಟಕಗಳ ಕಾರ್ಯಾಚರಣೆಗಳ ಮೇಲೆ ನಿಯಂತ್ರಣ ತರುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ಮಹಾ ನಗರ ಮಾಜಿ ಪೊಲೀಸ್ ಆಯುಕ್ತ ಶಂಕರ ಬಿದರಿ ಮಾತನಾಡಿ, ಸ್ವಯಂ ಉದ್ಯೋಗದ ಮೂಲಕ ನಿರುದ್ಯೋಗ ನಿವಾರಣೆ ಮಾಡಬಹುದಾಗಿದ್ದು, ಇದರಿಂದ ಗ್ರಾಹಕರಿಗೆ ಸುಲಭದರದಲ್ಲಿ ಉತ್ಪನ್ನಗಳು ದೊರೆಯಲಿದ್ಉದ, ಗ್ರಾಹಕ ಸಂತೃಪ್ತಿಯಾಗುತ್ತಾನೆ. ಪ್ರಪಂಚದ ಎಲ್ಲ ದೇಶದಲ್ಲಿ ನೇರ ಮಾರಾಟ ಉದ್ಯಮವಿದ್ದು, ಗ್ರಾಹಕನಿಗೆ ಇಷ್ಟವಾದ ಮತ್ತು ಗುಣಮಟ್ಟದ ವಸ್ತುಗಳು ನೇರ ಮಾರಾಟದಲ್ಲಿ ದೊರೆಯುತ್ತದೆ. 80ರಷ್ಟು ಅಂದರೆ 50ಲಕ್ಷ ಮಹಿಳೆಯರು ಈ ವಲಯದಲ್ಲಿ ಕಾರ್ಯನಿರ್ವಹಿಸಿ ಸ್ವಾವಲಂಬಿಯಾಗಿದ್ದಾರೆ ಎಂದು ಹೇಳಿದರು.

ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕಿ ಪ್ರೀತಿ ಚಂದ್ರಶೇಖರ್ ಅವರು ಮಹಿಳಾ ಸಾಧಕಿಯರನ್ನು ಸನ್ಮಾನಿಸಿದರು.

ಐಡಿಎಸ್ಎ ಉಪಾಧ್ಯಕ್ಷ ವಿವೇಕ್ ಕಟೋಚಿ, ಕಾರ್ಯಾದರ್ಶಿ ಅಪ್ರಜಿತ ಸರ್ಕಾರ್ ಪ್ರಧಾನ ವ್ಯವಸ್ಥಾಪಕ ಚೇತನ್ ಭಾರದ್ವಾಜ್ , ಮತ್ತಿತರರು ಉಪಸ್ಥಿತರಿದ್ದರು.

(ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ