ಕನ್ನಡ ಸುದ್ದಿ  /  ಕರ್ನಾಟಕ  /  Earthquake: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಮತ್ತೆ ಭೂಕಂಪನ; ಹೆಚ್ಚಿದ ಆತಂಕ

Earthquake: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಮತ್ತೆ ಭೂಕಂಪನ; ಹೆಚ್ಚಿದ ಆತಂಕ

HT Kannada Desk HT Kannada

Jul 01, 2022 11:09 AM IST

ಸಾಂದರ್ಭಿಕ ಚಿತ್ರ

    • ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 1.8 ದಾಖಲಾಗಿದೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ತಜ್ಙರಾದ ಅನನ್ಯಾ ವಾಸುದೇವ್‌ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದೆ. ಎರಡು ಜಿಲ್ಲೆಗಳ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಸರಣಿ ಭೂಕಂಪದಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಕೇಸ್ ಏನಾಯಿತು, ಇದುವರೆಗಿನ 10 ವಿದ್ಯಮಾನ

Viral Video: ಕುದುರೆ ಬದಲು ಏಥರ್ ರಿಝ್ತಾ ಮೇಲೇರಿ ಬಂದ ಬೆಂಗಳೂರು ಮದುಮಗನ ವರಯಾತ್ರೆ ಸಂಭ್ರಮ, ಫೋಟೋ ವಿಡಿಯೋ ವೈರಲ್‌

ಕರ್ನಾಟಕ ಹವಾಮಾನ ಮೇ 15; ಬಾಗಲಕೋಟೆ, ಬೀದರ್ ಸೇರಿ 6 ಜಿಲ್ಲೆ ಬಿಟ್ಟು ಉಳಿದ ಜಿಲ್ಲೆಗಳ ಕೆಲವೆಡೆ ಮಳೆ ನಿರೀಕ್ಷೆ, ಉಳಿದಂತೆ ಒಣಹವೆ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

ಸುಳ್ಯದ ಸಂಪಾಜೆ, ಪೆರಾಜಿ, ಗೂನಡ್ಕ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳಲ್ಲಿ ವಿವಿಧ ಕಡೆ ಗುರುವಾರ ತಡರಾತ್ರಿ 1ರಿಂದ 2 ಗಂಟೆಯ ಸುಮಾರಿಗೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರ ಬಳಿಕ ಇಂದು ಬೆಳಗ್ಗೆ ಮತ್ತೆ ಭೂಕಂಪನವಾಗಿದೆ. ಸುಳ್ಯ ತಾಲೂಕಿನ ಉಬರಡ್ಕ ಚೆಂಬು, ಗೂನಡ್ಕದಲ್ಲಿ 10:45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು ಜನತೆ ಆತಂಕದಿಂದ ಇದ್ದಾರೆ. ಇಲ್ಲಿಗೆ ಈ ಭಾಗದಲ್ಲಿ ಐದನೇ ಬಾರಿ ಭೂಕಂಪಿಸಿದಂತಾಗಿದೆ.

ರಾತ್ರಿ ಸಂಭವಿಸಿದ ಭೂಕಂಪದಿಂದ ವೇಳೆ ಮಲಗಿದ್ದ ಜನರು ಆತಂಕದಿಂದ ತಬ್ಬಿಬ್ಬಾಗಿದ್ದಾರೆ. ಏಕಾಏಕಿ ಉಂಟಾದ ಶಬ್ದ ಗಾಢ ನಿದ್ರೆಯಲ್ಲಿದ್ದ ಜನರನ್ನು ಬಡಿದೆಬ್ಬಿಸಿದೆ. ಮೊದಲಿಗೆ ಭಾರಿ ಶಬ್ದ ಕೇಳಿ ಬಂದಿದ್ದು, ನಂತರ ಸುಮಾರು 2 ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶಬ್ದ ಕೇಳಿ ಕೆಲವರು ಹೆದರಿ ಮನೆಯಿಂದ ಹೊರಗಡೆ ಬಂದಿದ್ದಾರೆ. ಕಳೆದ ಒಂದು ವಾರದಲ್ಲಿ ಕೊಡಗು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ಐದನೇ ಬಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ವಾರದೊಳಗೆ ಐದು ಬಾರಿ ಭೂಕಂಪನ ಸಂಭವಿಸಿರುವುದರಿಂದ ಸಹಜವಾಗಿಯೇ ಇಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

ರಾತ್ರಿ ವೇಳೆ ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 1.8 ದಾಖಲಾಗಿದೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ತಜ್ಙರಾದ ಅನನ್ಯಾ ವಾಸುದೇವ್‌ ತಿಳಿಸಿದ್ದಾರೆ.

ಭೂಕಂಪನದಿಂದಾಗಿ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದರಿಂದ ಅಪಾಯ ಇಲ್ಲ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಜನರಲ್ಲಿ ಆತಂಕ ಮೂಡುತ್ತಿದೆ.

ಕೊಡಗು ಜಿಲ್ಲೆ ಝೋನ್‌ 3ರಲ್ಲಿ ಬರುತ್ತದೆ. ವೈಜ್ಞಾನಿಕವಾಗಿ ಭೂಕಂಪನದ ಅನುಭವವು ಸುತ್ತಲಿನ 30 ಕಿಲೋ ಮೀಟರ್‌ ಪ್ರದೇಶ ವ್ಯಾಪ್ತಿಯವರೆಗೂ ಅನುಭವವಾಗುತ್ತದೆ. ಈ ಕಂಪನದಿಂದ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ವೈಬ್ರೇಶನ್‌ ರೀತಿಯಲ್ಲಿ ಮನೆಯಲ್ಲಿರುವ ವಸ್ತುಗಳು ಅಲುಗಾಡಬಹುದು. ಅದರ ಹೊರತಾಗಿ ಯಾವುದೇ ಅಪಾಯವಿಲ್ಲ ಎಂದು ಅನನ್ಯಾ ವಾಸುದೇವ್‌ ತಿಳಿಸಿದ್ದಾರೆ.

ಜೂನ್‌ 28ರಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯಲ್ಲಿ ಭೂಕಂಪನದ ಅನುಭವವಾಗಿತ್ತು. ರಿಕ್ಟರ್​ ಮಾಪಕದಲ್ಲಿ 3.0ರಷ್ಟು ತೀವ್ರತೆ ಇತ್ತು ಎನ್ನಲಾಗಿದ್ದು, ಜನರು ಭಯಭೀತರಾಗಿದ್ದರು. ಅದೇ ದಿನ ಸಂಜೆ 4.40 ರ ವೇಳೆಗೆ ಸಂಪಾಜೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಭೂಕಂಪನದ ಅನುಭವವಾಗಿರುವ ಬಗ್ಗೆ ಜನರು ಒಬ್ಬರಿಗೊಬ್ಬರು ಕರೆ ಮಾಡಿ ಹೇಳಿಕೊಂಡಿದ್ದಾರೆ.

ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಗಡಿಯಲ್ಲಿರುವ ಸುಳ್ಯ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಇದರಿಂದಾಗಿ ಮನೆಯೊಳಗಿದ್ದ ಜನರೆಲ್ಲ ಹೊರಗೆ ಓಡಿ ಬಂದು ಕೆಲಕಾಲ ನಿಂತುಕೊಂಡಿದ್ದರು ಎಂದು ವರದಿ ಹೇಳಿದೆ. ತೊಡಿಕಾನ, ಮಿತ್ತೂರು, ಸಂಪಾಜೆ, ಅರಂತೋಡು,‌ ಉಬರಡ್ಕ ಪೆರಾಜೆ, ಜಾಲ್ಸೂರು ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

ಈ ಭಾಗದಲ್ಲಿ ಜೂನ್‌ 25 ರಂದು ಕೂಡಾ ಭೂಕಂಪನದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು. ಭೂಕಂಪನವಾದಾಗ ಅಲುಗಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ