logo
ಕನ್ನಡ ಸುದ್ದಿ  /  ಕರ್ನಾಟಕ  /  Hsrp: ನಿಮ್ಮ ವಾಹನಗಳಿಗಿನ್ನೂ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಲ್ವ? ಎಚ್ಎ‌ಸ್‌ಆರ್‌ಪಿ ಕುರಿತ ನಿಮ್ಮ ಸಂದೇಹಗಳಿಗೆ ಇಲ್ಲಿದೆ ಉತ್ತರ

HSRP: ನಿಮ್ಮ ವಾಹನಗಳಿಗಿನ್ನೂ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಲ್ವ? ಎಚ್ಎ‌ಸ್‌ಆರ್‌ಪಿ ಕುರಿತ ನಿಮ್ಮ ಸಂದೇಹಗಳಿಗೆ ಇಲ್ಲಿದೆ ಉತ್ತರ

Praveen Chandra B HT Kannada

Feb 08, 2024 01:13 PM IST

google News

ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ ನೋಂದಣಿ

    • HSRP Number Plate Faq: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಕೊನೆದಿನ ಹತ್ತಿರದಲ್ಲಿದ್ದು, ವಾಹನ ಮಾಲೀಕರು ಆನ್‌ಲೈನ್‌  ಮೂಲಕ ನೋಂದಣಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ? ಎಚ್‌ಎಸ್‌ಆರ್‌ಪಿ ಎಂದರೇನು? ಸೇರಿದಂತೆ ನಿಮ್ಮ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ ನೋಂದಣಿ
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ ನೋಂದಣಿ

ಬೆಂಗಳೂರು: 2019ಕ್ಕಿಂತ ಮೊದಲು ವಾಹನ ಖರೀದಿಸಿರುವವರು ತಮ್ಮ ಕಾರು ಬೈಕು ಅಥವಾ ಇತರೆ ವೆಹಿಕಲ್‌ಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಬೇಕೆಂದು ಕಳೆದ ವರ್ಷವೇ ಸೂಚನೆ ನೀಡಲಾಗಿದೆ. ಈ ರೀತಿ ನಂಬರ್‌ ಪ್ಲೇಟ್‌ಗೆ ಅರ್ಜಿ ಸಲ್ಲಿಸಲು ಈ ಹಿಂದೆ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬದಲಾವಣೆ ಮಾಡಿಕೊಳ್ಳದೆ ಇದ್ದರೆ 500-1000 ರೂಪಾಯಿ ದಂಡ ವಿಧಿಸುವ ಅವಕಾಶವಿದೆ.

ಏನಿದು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌?

ಇದು ಅತ್ಯಧಿಕ ಭದ್ರತೆಯ ನೋಂದಣಿ ಪ್ಲೇಟ್‌. ಇದು ಟೆಂಪರ್‌ ಪ್ರೂಪ್‌ ಹೊಂದಿದ್ದು, ನಂಬರ್‌ ಮಾರ್ಪಾಡು ಮಾಡಲಾಗದಂತಹ ಲಾಕ್‌ ಹೊಂದಿದೆ. ಅಂದರೆ, ಒಮ್ಮೆ ಈ ನಂಬರ್‌ ಪ್ಲೇಟ್‌ ಅಳವಡಿಸಿದರೆ ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಲಾಕ್‌ ಅನ್ನು ಒಡೆದು ತೆಗೆಯಬೇಕಷ್ಟೇ. ಎಲ್ಲಾ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಒಂದೇ ರೀತಿಯ ಫಾಂಟ್‌ ಮತ್ತು ವಿನ್ಯಾಸ ಹೊಂದಿರುತ್ತವೆ. ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರ ಇರುತ್ತದೆ. ಉಳಿದಂತೆ ವಾಹನದ ರೀತಿಗೆ ತಕ್ಕಂತೆ ನಂಬರ್‌ ಪ್ಲೇಟ್‌ ಇರುತ್ತದೆ. ಖಾಸಗಿ ವಾಹನಗಳ ನಂಬರ್‌ ಪ್ಲೇಟ್‌ನ ಬ್ಯಾಕ್‌ಗ್ರೌಂಡ್‌ ಕಪ್ಪು ಇರುತ್ತದೆ. ಇದರೊಂದಿಗೆ ಈ ನಂಬರ್‌ ಪ್ಲೇಟ್‌ನಲ್ಲಿ ಇಂಡಿಯಾ ಎಂಬ ಸ್ಟ್ಯಾಂಪ್‌ ಇರುತ್ತದೆ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಕಡ್ಡಾಯವೇ?

1989ರ ಸಿಎಂವಿಆರ್‌ ಕಾಯಿದೆಯ ನಿಯಮ 50ರಡಿ ಎಲ್ಲಾ ವಾಹನಗಳು ಎಚ್‌ಎಸ್‌ಆರ್‌ಪಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನಂಬರ್‌ ಪ್ಲೇಟ್‌ನಲ್ಲಿ ಯಾವೆಲ್ಲ ಮಾಹಿತಿಗಳು ಕೋಡ್‌ ಆಗಿರುತ್ತವೆ?

ನೋಂದಣಿ ಪ್ರಾಧಿಕಾರದ ಹೆಸರು, ವಾಹನದ ನೋಂದಣಿ ಸಂಖ್ಯೆ, ಲೇಸರ್‌ ಬ್ರಾಂಡೆಡ್‌ ಕಾಯಂ ಗುರುತಿನ ಸಂಖ್ಯೆ ಮತ್ತು ವಾಹನ ಮೊದಲು ನೋಂದಣಿಯಾದ ದಿನಾಂಕವನ್ನು ಕೋಡ್‌ ಮಾಡಲಾಗಿರುತ್ತದೆ.

ಎಚ್‌ಎಸ್‌ಆರ್‌ಪಿ ಬುಕ್ಕಿಂಗ್‌ ಮಾಡಲು ಯಾವೆಲ್ಲ ದಾಖಲೆಗಳು ಬೇಕು?

ವಾಹನದ ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ಬೇಕು. ಈ ಮಾಹಿತಿಯು ನಿಮ್ಮ ವಾಹನದ ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ನಲ್ಲಿ ಲಭ್ಯ ಇರುತ್ತವೆ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬುಕ್ಕಿಂಗ್‌ ಮಾಡಲು ಮೊಬೈಲ್‌ ಮತ್ತು ಇಮೇಲ್‌ ಮಾಹಿತಿ ಏಕೆ ಬೇಕು?

ಪಾವತಿಸಿರುವ ಕ್ಯಾಷ್‌ ರಿಸಿಪ್ಟ್‌, ಡೀಲರ್‌ ಪಾಯಿಂಟ್‌, ಒಟಿಪಿ ಇತ್ಯಾದಿ ವಿವರ ಪಡೆಯಲು ಇಮೇಲ್‌ ಮತ್ತು ಮೊಬೈಲ್‌ ಸಂಖ್ಯೆ ನೀಡಬೇಕಾಗುತ್ತದೆ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ಹೇಗೆ ಇರುತ್ತದೆ?

1. ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ.

2. ಬುಕ್‌ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಬೇಕು.

3. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಬೇಕು.

4. ಅದಾದ ಬಳಿಕ ಡೀಲರ್ ಲೊಕೇಶನ್‌ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬೇಕು.

5. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್‌ ಲೊಕೇಶನ್ ಸೆಲೆಕ್ಟ್ ಮಾಡಬೇಕು.

6. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

ನಿಗದಿಪಡಿಸಿದ ದಿನಾಂಕದಂದು ಹೋಗಲಾಗಿಲ್ಲ, ದಿನಾಂಕ ಮರುನಿಗದಿಪಡಿಸಬಹುದೇ?

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಅರ್ಜಿ ಸಲ್ಲಿಸಿದ ಬಳಿಕ ನಿಗದಿಪಡಿಸಿದ ದಿನದಂದು ಅಳವಡಿಸಲು ಸಾಧ್ಯವಾಗದೆ ಇದ್ದರೆ ಮತ್ತೆ ಹೊಸ ದಿನಾಂಕಕ್ಕೆ ರಿ ಶೆಡ್ಯೂಲ್‌ಗೆ ಅರ್ಜಿ ಸಲ್ಲಿಸಬಹುದು.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಸ್ಥಳಕ್ಕಾಗಿ ಬುಕ್ಕಿಂಗ್‌ ಮಾಡಿದ್ದೇನೆ, ಮತ್ತೆ ಆ ಸ್ಥಳ (ಲೊಕೆಷನ್‌) ಬದಲಾಯಿಸಲು ಅವಕಾಶವಿದೆಯೇ?

- ಇಲ್ಲ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ತಾಂತ್ರಿಕ ಸಮಸ್ಯೆ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ಅರ್ಜಿ ಸಲ್ಲಿಸುವಲ್ಲಿ ಕೆಲವರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೊನೆದಿನ ಹತ್ತಿರದಲ್ಲಿರುವುದರಿಂದ ಸಾಕಷ್ಟು ಜನರು ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಇಂತಹ ತಾಂತ್ರಿಕ ಸಮಸ್ಯೆಗಳು ಕಾಣಿಸಿವೆ. ಮರಳಿ ಯತ್ನವ ಮಾಡುವುದು ಉತ್ತಮ. ಕೆಲವೊಂದು ವಾಹನ ಡೀಲರ್‌ಗಳು ನೇರವಾಗಿ ಈ ರೀತಿ ನಂಬರ್‌ ಪ್ಲೇಟ್‌ ಪಡೆಯಲು ಅವಕಾಶ ನೀಡಿದ್ದಾರೆ. ನಿಮ್ಮ ವಾಹನದ ಕಂಪನಿಯ ಹತ್ತಿರದ ಶೋರೂಂಗಳಲ್ಲಿ ಈ ಕುರಿತು ವಿಚಾರಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ