ಕನ್ನಡ ಸುದ್ದಿ  /  ಕರ್ನಾಟಕ  /  Kashi Yatra: ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನಕ್ಕೆ ಶೀಘ್ರವೇ ಬುಕ್ಕಿಂಗ್‌ ಶುರು; ನವೆಂಬರ್‌ನಲ್ಲಿ ಮೊದಲ ರೈಲು- ವಿವರ ಇಲ್ಲಿದೆ ನೋಡಿ

Kashi Yatra: ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನಕ್ಕೆ ಶೀಘ್ರವೇ ಬುಕ್ಕಿಂಗ್‌ ಶುರು; ನವೆಂಬರ್‌ನಲ್ಲಿ ಮೊದಲ ರೈಲು- ವಿವರ ಇಲ್ಲಿದೆ ನೋಡಿ

HT Kannada Desk HT Kannada

Oct 20, 2022 05:17 PM IST

ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ

    • Kashi Darshana: ಬೆಂಗಳೂರಿಂದ ವಾರಾಣಸಿ (Bengaluru to Varanasi)ಗೆ ಮೊದಲ ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ (Karnataka Bharat Gaurav Kashi Darshan) ರೈಲು ನವೆಂಬರ್‌ ಮೊದಲ ವಾರ ಹೊರಡಲಿದೆ. ಇದಕ್ಕೆ ಸಂಬಂಧಿಸಿದ ಬುಕ್ಕಿಂಗ್‌ ಕೂಡ ಶೀಘ್ರವೇ ನಡೆಯಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಗುರುವಾರ ತಿಳಿಸಿದ್ದಾರೆ. 
ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ
ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ

ಬೆಂಗಳೂರು: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಕಾಶಿ ದರ್ಶನ ಯೋಜನೆಗೆ ʻಕರ್ನಾಟಕ - ಭಾರತ್‌ ಗೌರವ್‌ ಕಾಶಿ ದರ್ಶನʼ (Karnataka Bharat Gaurav Kashi Darshan) ಎಂಬ ಹೆಸರು ಅಂತಿಮಗೊಳಿಸಲಾಗಿದೆ. ನವೆಂಬರ್‌ ಮೊದಲ ವಾರದಲ್ಲಿ ಮೊದಲ ಭಾರತ್‌ ಗೌರವ ರೈಲು ಬೆಂಗಳೂರಿಂದ ವಾರಾಣಸಿಗೆ ಹೊರಡಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಗುರುವಾರ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಅವರು ಇಂದು, ಬೆಂಗಳೂರಿನ ವಿಕಾಸಸೌಧದಲ್ಲಿ ಐಆರ್‌ಸಿಟಿಸಿ, ಕೆಎಸ್‌ಟಿಡಿಸಿ ಮತ್ತು ರೈಲ್ವೇ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕರ್ನಾಟಕ - ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರಾ ಸಿದ್ದತೆಯನ್ನು ಅಕ್ಟೋಬರ್‌ 30ರ ಒಳಗೆ ಮುಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಭವ್ಯ ಕಾಶಿ – ದಿವ್ಯ ಕಾಶಿ ಯ ಭವ್ಯತೆಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆನಂದಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಬಜೆಟ್‌ ನಲ್ಲಿ ರಿಯಾಯಿತಿ ದರದ ಪ್ಯಾಕೇಜ್‌ ಪ್ರವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ಈ ಹಿನ್ನಲೆಯಲ್ಲಿ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅವರ ಮುತುವರ್ಜಿಯಲ್ಲಿ ಭಾರತ್‌ ಗೌರವ್‌ ಯೋಜನೆಯ ವಿಶೇಷ ರೈಲನ್ನು ಸಿದ್ದಗೊಳಿಸಲಾಗಿದೆ. ಈ ಸಿದ್ದತೆಗಳು ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ರೈಲು ಉದ್ಘಾಟನೆಗೆ ಸಿದ್ದವಾಗಲಿದೆ.

ನವೆಂಬರ್‌ ಮೊದಲ ವಾರ ಮೊದಲ ರೈಲು

ನವೆಂಬರ್‌ ಮೊದಲ ವಾರದಲ್ಲಿ ಈ ಯೋಜನೆಯ ಮೊದಲ ರೈಲನ್ನು ಪ್ರಾರಂಭಿಸಲು ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. “ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ” ಎಂಬ ಹೆಸರನ್ನು ಅಂತಿಮಗೊಳಿಸಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ಈ ವಿಷಯ ತಂದಿದ್ದೇನೆ. ಈ ಯೋಜನೆಯ ಅಡಿಯಲ್ಲಿ ಪ್ರವಾಸ ಕೈಗೊಳ್ಳುವ ಯಾತ್ರಾರ್ಥಿಗಳಿಗೆ 5 ಸಾವಿರ ರೂಪಾಯಿಗಳ ಸಹಾಯಧನವನ್ನೂ ನೀಡಲಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಹೇಳಿದರು.

KSTDC ಹಾಗೂ IRCTC ಯಿಂದ ಶೀಘ್ರದಲ್ಲೇ ಬುಕ್ಕಿಂಗ್‌

“ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ” ರೈಲಿನಲ್ಲಿ ಯಾತ್ರೆಯನ್ನು ಕೈಗೊಳ್ಳಲು ಬುಕ್ಕಿಂಗ್‌ ನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಸಂಸ್ಥೆಗಳು ಈ ಬಗ್ಗೆ ವೆಬ್‌ಸೈಟ್‌ ಹಾಗೂ ಇನ್ನಿತರೆ ಅಗತ್ಯ ವಿಷಯಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವಂತೆ ಸಚಿವರು ಸೂಚನೆ ನೀಡಿದರು.

ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಮಹತ್ವಕಾಂಕ್ಷಿ ಯೋಜನೆ ಪ್ರಾರಂಭಕ್ಕೆ ಇದ್ದಂತಹ ಕೆಲವು ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೇ ಇಲಾಖೆಯಿಂದ ಕೆಲಸಗಳಿಗೆ ಚುರುಕು ದೊರಕಿದೆ. ಇಂದು ಈ ಯೋಜನೆಗೆ ಸಂಬಂಧಿಸಿ ಎಲ್ಲ ಪ್ರಮುಖರೊಂದಿಗೆ ಸಭೆಯನ್ನು ನಡೆಸಿದ್ದೇನೆ. ಯೋಜನೆ ಸಿದ್ದಗೊಳಿಸುವ ನಿಟ್ಟಿನಲ್ಲಿ ಅಂತಿಮ ಸೂಚನೆಗಳನ್ನು ನೀಡಿದ್ದೇನೆ.

ಅಲ್ಲದೇ, ಯೋಜನೆಗೆ “ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ” ಎಂದು ಹೆಸರನ್ನು ಅಂತಿಮಗೊಳಿಸಿದ್ದೇವೆ. ಅಕ್ಟೋಬರ್‌ 30 ರ ಒಳಗಾಗಿ ರೈಲು ಎಲ್ಲಾ ರೀತಿಯಲ್ಲೂ ಸಜ್ಜಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಪ್ರತಿ ದಿನ ಈ ಯೋಜನೆಯ ಪ್ರಗತಿಯ ಬಗ್ಗೆ ವರದಿಯನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ