ಕನ್ನಡ ಸುದ್ದಿ  /  ಕರ್ನಾಟಕ  /  Salary Hike: Ksrtc ನೌಕರರಿಗೆ ಶೇ. 15, Kptcl ನೌಕರರಿಗೆ ಶೇ.20 ವೇತನ ಹೆಚ್ಚಳ; ಇಂದಿನಿಂದಲೇ ಅನ್ವಯಿಸುವಂತೆ ಜಾರಿ ಎಂದ ಮುಖ್ಯಮಂತ್ರಿ

Salary Hike: KSRTC ನೌಕರರಿಗೆ ಶೇ. 15, KPTCL ನೌಕರರಿಗೆ ಶೇ.20 ವೇತನ ಹೆಚ್ಚಳ; ಇಂದಿನಿಂದಲೇ ಅನ್ವಯಿಸುವಂತೆ ಜಾರಿ ಎಂದ ಮುಖ್ಯಮಂತ್ರಿ

HT Kannada Desk HT Kannada

Mar 16, 2023 05:05 PM IST

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ

  • Salary Hike: ಕೆಎಸ್‌ಆರ್‌ಟಿಸಿ ನೌಕರರಿಗೆ ಶೇಕಡ 15, ಕೆಪಿಟಿಸಿಎಲ್‌ ನೌಕರರಿಗೆ ಶೇಕಡ 20 ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದ್ದಾರೆ.

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ
KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಯುಗಾದಿ ಹಬ್ಬಕ್ಕೆ ಮುಂಚಿತವಾಗಿ ಉಡುಗೊರೆಯಂತೆ ಈ ಎರಡೂ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

Hassan Scandal: 6 ದಿನ ಜೈಲು ವಾಸದ ನಂತರ ಜಾಮೀನಿನ ಮೇಲೆ ರೇವಣ್ಣ ಬಿಡುಗಡೆ

ಕೆಎಸ್‌ಆರ್‌ಟಿಸಿ ನೌಕರರಿಗೆ ಶೇಕಡ 15, ಕೆಪಿಟಿಸಿಎಲ್‌ ನೌಕರರಿಗೆ ಶೇಕಡ 20 ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದ್ದಾರೆ.

ಎರಡೂ ಸಂಸ್ಥೆಗಳ ನೌಕರರ ಬಹುದಿನಗಳ ಬೇಡಿಕೆ ಇದು. ಕಳೆದ ಎರಡುಮೂರು ವರ್ಷಗಳಿಂದ ಸಾರಿಗೆ ನೌಕರರು ತಮ್ಮ ವೇತನವನ್ನು ಪರಿಷ್ಕರಣೆ ಮಾಡಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಹೀಗಾಗಿ ನಿಗಮದ ಎಲ್ಲ ವ್ಯವಸ್ಥಾಪಕ ನಿರ್ದೇಶಕರು, ಮತ್ತಿತರ ಜತೆ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಕೊನೆಗೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಕುರಿತ ಹೊಸ ಆದೇಶವನ್ನು ಗುರುವಾರವೇ ಅಂದರೆ ಇಂದೇ ಹೊರಡಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಕೆಪಿಟಿಸಿಎಲ್ ನೌಕರರ ವೇತನವನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ. ಇವರ ವೇತನವನ್ನು ಶೇ.20ರಷ್ಟು ಪರಿಷ್ಕರಣೆ ಮಾಡಲಾಗಿದ್ದು, ನೌಕರರು ಪ್ರತಿಭಟನೆಯನ್ನು ನಡೆಸಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡರು.

ವಿಫಲವಾಗಿತ್ತು ಸಾರಿಗೆ ನೌಕರರ ಜತೆಗಿನ ಮಾತುಕತೆ

ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಸಂಘಗಳೊಂದಿಗೆ ಸಚಿವ ಬಿ.ಶ್ರೀರಾಮುಲು ಬುಧವಾರ ನಡೆಸಿದ ಎರಡನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿತ್ತು. ಹೀಗಾಗಿ, ಮುಖ್ಯಮಂತ್ರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ. ಬೇಡಿಕೆ ಈಡೇರಿಕೆಗೆ ಸಂಘಗಳು ಮಾ.21ರೊಳಗೆ ಗಡುವು ವಿಧಿಸಿದ್ದವು.

ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಕರೆದಿದ್ದ ಸಭೆಯಲ್ಲಿ ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಸೇರಿ ಇತರ ಮೂರು ನಿಗಮಗಳ ಎಂಡಿಗಳು ಮತ್ತು ಆರು ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ಅಧಿಕಾರಿಗಳು ಮತ್ತು ಸಂಘದ ಮುಖಂಡರು ಒಮ್ಮತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.

ಸಾರಿಗೆ ಕಾರ್ಯಕರ್ತ ಮತ್ತು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್‌ವಿ ಅನಂತ ಸುಬ್ಬರಾವ್ ಮಾತನಾಡಿ, ಮಾರ್ಚ್ 8 ರ ಸಭೆಯಲ್ಲಿ ಸಾರಿಗೆ ಸಚಿವರು ಶೇಕಡಾ 8-10 ರಷ್ಟು ವೇತನ ಹೆಚ್ಚಳಕ್ಕೆ ಮುಂದಾಗಿದ್ದರೆ, ಕೆಎಸ್‌ಆರ್‌ಟಿಸಿ ಎಂಡಿ ಶೇಕಡಾ 10-14 ರಷ್ಟು ಹೆಚ್ಚಳ ನೀಡಲು ಮುಂದಾಗಿದ್ದರು. ನಮ್ಮ ಆರಂಭಿಕ ಬೇಡಿಕೆಯು ಕನಿಷ್ಟ 25 ಶೇಕಡಾ ಹೆಚ್ಚಳವಾಗಿದ್ದರೂ, ನಾವು ಅದನ್ನು ಶೇಕಡಾ 20 ಕ್ಕೆ ಇಳಿಸಿದ್ದೇವೆ.

ಆದರೆ, “ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಇನ್ನೂ ಆರ್ಥಿಕ ಚೇತರಿಕೆಯ ಹಂತದಲ್ಲಿದೆ” ಎಂದು ಎಂಡಿ ಹೇಳಿದ್ದರು.

ಆದರೆ ಸರ್ಕಾರವು ಸರ್ಕಾರಿ ನೌಕರರಿಗೆ ಶೇಕಡ 17 ಮತ್ತು ಕೆಪಿಟಿಸಿಎಲ್ ಕಾರ್ಮಿಕರಿಗೆ ಶೇಕಡ 20 ರಷ್ಟು ಮಧ್ಯಂತರ ಪರಿಹಾರವನ್ನು ನೀಡಿದೆ ಎಂದು ಕಾರ್ಮಿಕ ಸಂಘದ ಮುಖಂಡರು ಉಲ್ಲೇಖಿಸಿದ್ದರು.

ಮಾತುಕತೆ ತಿರಸ್ಕರಿಸಿದ ಕೆಪಿಟಿಸಿಎಲ್‌ ನೌಕರರು

ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕೆಪಿಟಿಸಿಎಲ್‌ ನೌಕರರು ಕೊಟ್ಟ ಮುಷ್ಕರದ ಕರೆಯು ರಾಜ್ಯ ಸರ್ಕಾರವನ್ನು ಸಂಕಟಕ್ಕೆ ಒಳಗಾಗಿಸಿತ್ತು. ಉತ್ತಮ ವೇತನಕ್ಕಾಗಿ ಆಗ್ರಹಿಸಿ ಮಾರ್ಚ್ 21 ರಿಂದ ಮುಷ್ಕರ ನಡೆಸುವುದಾಗಿ ಕೆಎಸ್ಆರ್‌ಟಿಸಿ ನೌಕರರು ಘೋಷಿಸಿದ್ದರು. ನಮ್ಮದು ಮಾತುಕತೆ ಏನೂ ಇಲ್ಲ. ನಾವೂ ಮುಷ್ಕರಕ್ಕೆ ಇಳಿಯುವವರೇ ಎಂದು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಂಘ ಮತ್ತು ಸಂಘದ ಅಧ್ಯಕ್ಷ ಆರ್.ಎಚ್.ಲಕ್ಷ್ಮೀಪತಿ ಘೋಷಿಸಿದ್ದರು. ಸಚಿವ ವಿ.ಸುನಿಲ್‌ ಕುಮಾರ್‌ ಮಾತುಕತೆಗೆ ಆಹ್ವಾನ ನೀಡಿದ ನಂತರದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ