ಕನ್ನಡ ಸುದ್ದಿ  /  latest news  /  ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ, ಯಾರವರು?

ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ, ಯಾರವರು?

HT Kannada Desk HT Kannada

Jan 06, 2024 07:43 AM IST

ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ; ರಂಗಸ್ವಾಮಿ ಮೂಕನಹಳ್ಳಿ ಬರಹ

    • ಜಗತ್ತಿನ ಮುಕ್ಕಾಲು ಪಾಲು ಜನ ಈತನ ಹೆಸರು ಕೇಳಿರಲು ಸಾಧ್ಯವಿಲ್ಲ. ಆದರೆ ಇವತ್ತು ನಾವು ಉಪಯೋಗಿಸುತ್ತಿರುವ ಮತ್ತು ನೆನಗುದಿಗೆ ಬಿದ್ದಿರುವ ಹಲವಾರು ವಸ್ತುಗಳ ಜನಕನೀತ ! ಡಾ. ನಕಮತ್ಸು ಜಪಾನ್ ದೇಶದ ಮಹಾನ್ ಅನ್ವೇಷಕ . ಈತನ ಹೆಸರಲ್ಲಿ ೩೩೦೦ ವಸ್ತುಗಳನ್ನ ಅನ್ವೇಷಿಸಿದ ದಾಖಲೆ ಪೇಟೆಂಟ್ ರೂಪದಲ್ಲಿದೆ. ಅವರ ಕುರಿತು ರಂಗಸ್ವಾಮಿ ಮೂಕನಹಳ್ಳಿ ಬರಹ ಇಲ್ಲಿದೆ. 
ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ; ರಂಗಸ್ವಾಮಿ ಮೂಕನಹಳ್ಳಿ ಬರಹ
ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ; ರಂಗಸ್ವಾಮಿ ಮೂಕನಹಳ್ಳಿ ಬರಹ

Yoshiro Nakamatsu: ಸಂಶೋಧನೆ ನಾಲ್ಕಕ್ಷರದ ಪದವಿರಬಹುದು, ಅದರ ಆಳ ಸಮುದ್ರಕ್ಕಿಂತ ಹೆಚ್ಚು. ಅನ್ವೇಷಣೆ ಎಂಬುಂದು ಅದೊಂದು ಇಂಗದ ದಾಹ, ತುಂಬದ ಹೊಟ್ಟೆ. ಕೆದಕಿದಷ್ಟು ಸಿಗುವ ನಿಧಿ. ಅದರಲ್ಲೂ ವಿಜ್ಞಾನ ಮುಂದುವರಿದ ರೀತಿ ಕಂಡರೆ, ಅಚ್ಚರಿಗಳ ಗುಚ್ಛಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಊಹಿಸಲೂ ಆಗದ ವಿಚಾರಗಳು ಕಣ್ಣಮುಂದೆ ತೇಲಿಹೋಗುತ್ತವೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ, ಸಾವಿರ ಅಲ್ಲ, ಬರೋಬ್ಬರಿ 3300ಕ್ಕೂ ಅಧಿಕ ವಸ್ತುಗಳನ್ನು ಸಂಶೋಧಿಸಿದ್ದಾರೆ. ಆ ಅಸಹಜ ವ್ಯಕ್ತಿಯ ಕುರಿತ ಕಿರು ವರದಿ ಇಲ್ಲಿದೆ. ರಂಗಸ್ವಾಮಿ ಮೂಕನಹಳ್ಳಿ ತಮ್ಮ ಬರಹದಲ್ಲಿ ಅವರನ್ನು ಕಿರಿದಾಗಿ ಪರಿಚಯಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

kalaburgi News: ಟ್ರಾಕ್ಟರ್‌ ಹತ್ತಿಸಿ ಪೊಲೀಸ್‌ ಹತ್ಯೆ: ಮರಳು ದಂಧೆ ತಡೆಯಲು ಹೋದಾಗ ಕಲಬುರಗಿ ಜಿಲ್ಲೆಯಲ್ಲಿ ಕೃತ್ಯ

KCET Results: ಸಿಇಟಿ ಫಲಿತಾಂಶ ಪ್ರಕಟ; ಯಾವ ವಿಷಯದಲ್ಲಿ ಯಾರು ಟಾಪರ್‌

Free bus service: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ ಶುರು; ಮೊದಲ ದಿನವೇ ರಶ್‌

Kodi Mutt Swamiji: ಭಾರತಕ್ಕೆ ಇನ್ನೊಂದು ಗಂಡಾಂತರ ಕಾದಿದೆ; ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

"ಜಗತ್ತಿನ ಮುಕ್ಕಾಲು ಪಾಲು ಜನ ಈತನ ಹೆಸರು ಕೇಳಿರಲು ಸಾಧ್ಯವಿಲ್ಲ. ಆದರೆ ಇವತ್ತು ನಾವು ಉಪಯೋಗಿಸುತ್ತಿರುವ ಮತ್ತು ನೆನಗುದಿಗೆ ಬಿದ್ದಿರುವ ಹಲವಾರು ವಸ್ತುಗಳ ಜನಕನೀತ ! ಡಾ. ನಕಮತ್ಸು ಜಪಾನ್ ದೇಶದ ಮಹಾನ್ ಅನ್ವೇಷಕ . ಈತನ ಹೆಸರಲ್ಲಿ 3300ವಸ್ತುಗಳನ್ನ ಅನ್ವೇಷಿಸಿದ ದಾಖಲೆ ಪೇಟೆಂಟ್ ರೂಪದಲ್ಲಿದೆ . ಫ್ಲಾಪಿ ಡಿಸ್ಕ್ , ಸಿಡಿ , ಡಿವಿಡಿ , ಟ್ಯಾಕ್ಸಿ ಮೀಟರ್ , ಡಿಜಿಟಲ್ ವಾಚ್ , ಕರೋಕೆ ಮಷೀನ್ , ಸಿನಿಮಾಸ್ಕೋಪ್, ಹೀಗೆ ಒಟ್ಟು ೩೩೦೦ ವಸ್ತುಗಳ ಹೆಸರು ಬರೆಯುವ ಶಕ್ತಿ ನನಗಿಲ್ಲ , ಐ ಆಮ್ ಶೂರ್ ನಿಮಗೆ ಓದುವ ವ್ಯವಧಾನ ಕೂಡ ಇರುವುದಿಲ್ಲ !! ಅಂತಹುದರಲ್ಲಿ ಈ ವ್ಯಕ್ತಿ ಅಷ್ಟು ವಸ್ತುಗಳನ್ನ ಅನ್ವೇಷಿಸಿದ್ದಾನೆ ಅಂದರೆ .... ಟೈಮ್ ಇಲ್ಲ ಎನ್ನುವ ನಮ್ಮದು ಎಂತಹ ಮನೋಭಾವ ಎನ್ನುವುದರ ಅರಿವಾಗುತ್ತದೆ . ಇರಲಿ .

ಎಲ್ಲಕ್ಕಿಂತ ಈ ವ್ಯಕ್ತಿ ಅಚ್ಚರಿ ಮೂಡಿಸಿದ್ದು ಏಕೆ ಗೊತ್ತೇ ? ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆ ನಲವತ್ತು ವರ್ಷದಿಂದ ತಾನು ತಿಂದ ಎಲ್ಲಾ ತಿನಿಸುಗಳ ಫೋಟೋ ಕೂಡ ತೆಗೆದು ದಾಖಲೆಯಾಗಿ ಇಟ್ಟಿದ್ದಾನಂತೆ ಈ ಪುಣ್ಯಾತ್ಮ !!. ೨೬ ಜೂನ್ ೧೯೨೮ ರಲ್ಲಿ ಜನಿಸಿದ ಈತನಿಗೆ ಈಗ ಬರೋಬ್ಬರಿ 95 ವರ್ಷವಷ್ಟೇ .

ಜಗತ್ತು ಅಚ್ಚರಿಗಳ ಆಗರ . ಇಲ್ಲಿ ಎಂತೆಂತಹ ಜನರು ಬಾಳಿ ಹೋಗಿದ್ದಾರೆ , ಬಾಳುತ್ತಿದ್ದಾರೆ ಎನ್ನುವುದು ತಿಳಿದಾಗ ಕೂಡ ಅಚ್ಚರಿಯಾಗುತ್ತದೆ . ನನ್ನ ಮನಸ್ಸಿನ ಇರುವ ಬೌಂಡರಿ ಇನ್ನಷ್ಟು ವಿಶಾಲವಾಗುತ್ತದೆ . ಈ ವ್ಯಕ್ತಿ ಹೇಳುವ ಮಾತು ಎಂತಹ ಪ್ರೇರಣೆ ಗೊತ್ತೇ ? ಇಷ್ಟೆಲ್ಲಾ ಹೇಗೆ ಅನ್ವೇಷಣೆ ಮಾಡಿದಿರಿ , ಇಂತಹವುಗಳನ್ನ ಅನ್ವೇಷಿಸಲು ಸಾಧ್ಯ ಎಂದು ನಿಮಗೇಗೆ ಅನ್ನಿಸಿತು ಎಂದು ಕೇಳಿದರೆ ., ' ಮೊದಲು ಇಷ್ಟಲ್ಲಾ ಮಾಡಲು ನನ್ನಿಂದ ಸಾಧ್ಯ ಎನ್ನುವ 'ನಿಮ್ಮ ' ಅನ್ವೇಷಣೆ ಮಾಡಿಕೊಳ್ಳಿ ಉಳಿದದ್ದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ . ಈತನಿಂದ ಒಂದಷ್ಟು ಕಲಿಯೋಣವೇ ? ಸದಾ ಅದಿಲ್ಲ ಇದಿಲ್ಲ , ಸರಿಯಿಲ್ಲ ಎಂದು ಗೊಣುಗುವುದ ಬಿಟ್ಟು ' ನಮ್ಮ ' ಅನ್ವೇಷಣೆ ಮಾಡಿಕೊಳ್ಳೋಣವೇ ? ಶುಭವಾಗಲಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ