ಕನ್ನಡ ಸುದ್ದಿ  /  ಜೀವನಶೈಲಿ  /  Maruti Suzuki Ertiga: 10 ಲಕ್ಷ ಕಾರುಗಳು ಮಾರಾಟ; ಹೊಸ ದಾಖಲೆ ಬರೆದ ಮಾರುತಿ ಸುಜುಕಿ ಎರ್ಟಿಗಾ

Maruti Suzuki Ertiga: 10 ಲಕ್ಷ ಕಾರುಗಳು ಮಾರಾಟ; ಹೊಸ ದಾಖಲೆ ಬರೆದ ಮಾರುತಿ ಸುಜುಕಿ ಎರ್ಟಿಗಾ

Raghavendra M Y HT Kannada

Feb 09, 2024 10:30 PM IST

10 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಹೊಸ ದಾಖಲೆ ಬರೆದಿದೆ.

  • Maruti Suzuki Ertiga: 7 ಸೀಟುಗಳ ವಿಭಾಗದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಮಾರುತಿ ಸುಜುುಕಿ ಎರ್ಟಿಗಾ ಮತ್ತೊಂದು ದಾಖಲೆ ಬರೆದಿದೆ. ಭಾರತದಲ್ಲಿ 10 ಲಕ್ಷ ಎರ್ಟಿಗಾ ಕಾರುಗಳ ಮಾರಾಟ ಮೈಲುಗಲ್ಲು ಸಾಧಿಸಿದೆ.

10 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಹೊಸ ದಾಖಲೆ ಬರೆದಿದೆ.
10 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಹೊಸ ದಾಖಲೆ ಬರೆದಿದೆ.

Maruti Suzuki Ertiga Sales in India: ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಯ ಎರ್ಟಿಗಾ ಭಾರತದಲ್ಲಿ 10 ಲಕ್ಷ ಕಾರುಗಳನ್ನು ಮಾರಾಟವನ್ನು ದಾಟಿದ ವೇಗದ ಎಂವಿಪಿ ಎಂಬ ಮೈಲಿಗಲ್ಲು ಸಾಧಿಸಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ರೆನಾಲ್ಟ್ ಟ್ರೈಬರ್ ಮತ್ತು ಕಿಯಾ ನ್ಯಾರೆನ್ಸ್‌ನಂತಹ ಪ್ರತಿಸ್ಪರ್ಧಿಗಳಿಗೆ ಎರ್ಟಿಗಾ ಪ್ರಬಲ ಪೈಪೋಟಿ ನೀಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡಬಹುದು ನೂರಾರು ಸಮಸ್ಯೆ; ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Mango Recipe: ಮ್ಯಾಂಗೋ ಕೇಕ್‌ನಿಂದ ಕುಲ್ಫಿವರೆಗೆ; ಬೇಸಿಗೆಗೆ ಬೆಸ್ಟ್‌ ಎನ್ನಿಸುವ ಮಾವಿನಹಣ್ಣಿನ ರೆಸಿಪಿಗಳಿವು, ನೀವೂ ಟ್ರೈ ಮಾಡಿ

Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?

Weight Loss: ವರ್ಕೌಟ್‌ ಮಾಡದೇ ವೈಟ್‌ಲಾಸ್‌ ಆಗ್ಬೇಕಾ; ಬೇಸಿಗೆಯಲ್ಲಿ ಬೆವರು ಹರಿಯದೇ ತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಸಲಹೆ

ಪ್ರಸ್ತುತ, ಎರ್ಟಿಗಾ ಈ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಮಾಡೆಲ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಎರ್ಟಿಗಾ ದೇಶದಲ್ಲಿ ಮಾರಾಟವಾಗುವ ಎಲ್ಲಾ ಬಹುಪಯೋಗಿ ವಾಹಿನಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ.

2012ರಲ್ಲಿ ಮಾರುತಿ ಸುಜುಕಿ ಮೂರು ಸಾಲುಗಳ ಆಸನಗೊಂದಿಗೆ ಎಂವಿಪಿ ವಿಭಾಗದಲ್ಲಿ ಎರ್ಟಿಗಾವನ್ನು ಬಡುಗಡೆ ಮಾಡಿತ್ತು. 2022ರಲ್ಲಿ ಹೊಸ ಪೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಮಾರುತಿ ಸುಜುಕಿಯ ಕಾರುಗಳ ಮಾರಾಟವನ್ನು ಹೆಚ್ಚಿಸವಲ್ಲಿ ಎರ್ಟಿಗಾ ಪ್ರಮುಖ ಪಾತ್ರ ವಹಿಸಿದೆ.

ಸರಾಸರಿ ತಿಂಗಳಿಗೆ 10,000 ಎರ್ಟಿಗಾ ಕಾರುಗಳು ಮಾರಾಟ

ಸರಾಸರಿ ಮಾಸಿಕ 10,000 ಯೂನಿಟ್‌ಗಳ ಮಾರಾಟದೊಂದಿಗೆ ಇದು ಎರ್ಟಿಗಾ, ಎಕ್ಸ್‌ಎಲ್ 6 ಮತ್ತು ಇನ್ವಿಕ್ಟೊಗಳೊಂದಿಗೆ ಸ್ಪರ್ಧಿಸುತ್ತದೆ. ಎರ್ಟಿಗಾ (ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ)ಗೆ ಸಿಎನ್‌ಜಿ ಆವೃತ್ತಿಯನ್ನು ಸೇರಿಸುವುದರೊಂದಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿದೆ. ಸಿಎನ್‌ಜಿ ಆವೃತ್ತಿ ಬಂದ ನಂತರ ಎರ್ಟಿಗಾ ಕಾರಿನ ಮಾರಾಟವೂ ಗಮನಾರ್ಹವಾಗಿ ಹೆಚ್ಚಾಗಿದೆ.

ಮಾರುಕಟ್ಟೆಗೆ ಬಂದು 12 ವರ್ಷಗಳಲ್ಲಿ 10 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಎರ್ಟಿಗಾ ತನ್ನ ಆಧುನಿಕ ಆಕರ್ಷಣೆ ಮತ್ತು ತಾಂತ್ರಿಕ ಪ್ರಗತಿಗಾಗಿ ಪ್ರಶಂಸೆಗೆ ಪಾತ್ರವಾಗಿದೆ. ಎರ್ಟಿಗಾ ವಿಶೇಷವಾಗಿ ಸಣ್ಣ ಪಟ್ಟಣಗಳ ಗ್ರಾಹಕರನ್ನೂ ಆಕರ್ಷಿಸಿದೆ. ಶೇಕಡಾ 41 ರಷ್ಟು ಎರ್ಟಿಗಾ ಖರೀದಿದಾರರರು ಈ ವರ್ಗಕ್ಕೆ ಸೇರಿದ್ದಾರೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಇದು ಫ್ಯಾಮಿಲಿ ಕಾರು ಆಗಿಯೂ ಪ್ರಸಿದ್ಧವಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ನಗರ ಪ್ರದೇಶ ಹಾಗೂ ಗ್ರಾಮೀಣ ಮಾರುಕಟ್ಟೆಗಳಲ್ಲಿ ಶೇಕಡಾ 37.5 ರಷ್ಟು ಪಾಲನ್ನು ಹೊಂದಿದೆ. ಎರ್ಟಿಗಾ ಎಂಪಿವಿ 11 ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದು ಮೂರು ಸ್ವಯಂಚಾಲಿತ ಆಯ್ಕೆಗಳನ್ನು (VXi, Zxi, ಮತ್ತು ZXi+) ಹೊಂದಿದೆ. ಅಲ್ಲದೆ, ಎರಡು ಸಿಎನ್‌ಜಿ ವೇರಿಯಂಟ್‌ಗಳೂ ಲಭ್ಯ ಇವೆ.

ಮಾರುತಿ ಸುಜುಕಿ ಎರ್ಟಿಗಾ ಟಾಪ್ ಎಂಡ್ ವೇರಿಯಂಟ್ ಎಕ್ಸ್‌ ಶೋರೂಂ ಬೆಲೆ 8.69 ಲಕ್ಷ ರೂಪಾಯಿ ಪ್ರಾರಂಭವಾಗುತ್ತದೆ. ಎರ್ಟಿಗಾ ಕೆ-ಸರಣಿಯು 1.5 ಲೀಟರ್ ಡ್ಯುಯಲ್ ವಿವಿಟಿ ಎಂಜಿನಿಂದ ನಿಯಂತ್ರಿಸಲ್ಪಡುತ್ತದೆ. ಇದು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಇದ್ದು, 6 ಸ್ಪೀಡ್ ಆಟೋಮಿಟಿಕ್ ಯೂನಿಟ್ ಕೂಡ ಇದೆ. ಕೆಲವೊಂದು ಮಾಡೆಲ್‌ಗಳಲ್ಲಿ ಪ್ಯಾಡಲ್ ಶಿಫ್ಟರ್‌ಗಳ ಹೆಚ್ಚುವರಿ ಅನುಕೂಲತೆಯನ್ನು ಎರ್ಟಿಗಾ ಕಾರು ಹೊಂದಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು