ಕನ್ನಡ ಸುದ್ದಿ  /  ಜೀವನಶೈಲಿ  /  ಸದ್ದಿಲ್ಲದೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನಲ್ಲಿದ್ದ ಕೆಲ ವೈಶಿಷ್ಟ್ಯಗಳಿಗೆ ಕತ್ತರಿ; ಏನೆಲ್ಲಾ ಬದಲಾಗಿದೆ -Mahindra Scorpio N

ಸದ್ದಿಲ್ಲದೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನಲ್ಲಿದ್ದ ಕೆಲ ವೈಶಿಷ್ಟ್ಯಗಳಿಗೆ ಕತ್ತರಿ; ಏನೆಲ್ಲಾ ಬದಲಾಗಿದೆ -Mahindra Scorpio N

Raghavendra M Y HT Kannada

Feb 07, 2024 10:02 PM IST

ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನ ವೈಶಿಷ್ಟ್ಯಗಳನ್ನು ಕಡಿತ ಮಾಡಿದ ಕಂಪನಿ

  • Mahindra Scorpio N Features: 2024ರ ಜನವರಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಬೆಲೆಯನ್ನ ಏರಿಸಲಾಯ್ತು. ಈಗ ಕಂಪನಿ ಹಲವು ವೇರಿಯಂಟ್‌ಗಳಲ್ಲಿ ಕೆಲವೊಂದು ವೈಶಿಷ್ಟ್ಯಗಳನ್ನ ಕಡಿತಗೊಳಿಸಿದ ಮಾಹಿತಿ ಇದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನ ವೈಶಿಷ್ಟ್ಯಗಳನ್ನು ಕಡಿತ ಮಾಡಿದ ಕಂಪನಿ
ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನ ವೈಶಿಷ್ಟ್ಯಗಳನ್ನು ಕಡಿತ ಮಾಡಿದ ಕಂಪನಿ

Mahindra Scorpio N Features Revised: ಕಳೆದ ಕೆಲವು ದಿನಗಳ ಹಿಂದಷ್ಟೇ ಸ್ಕಾರ್ಪಿಯೊ ಎನ್ ಕಾರಿನ ಬೆಲೆಯನ್ನು ಹೆಚ್ಚಿಸಿದ್ದ ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಮಹೀಂದ್ರಾ ಅಂಡ್ ಮಹೀಂದ್ರಾ ಇದೀಗ ಈ ಎಸ್‌ಯುವಿಯಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ಸೈಲೆಂಟ್ ಆಗಿ ಕಡಿತಗೊಳಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧ ದಾಖಲೆ ಸೋರಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

Parenting Tips: ನಿಮ್ಮ ಮಗು ಮೊದಲ ಬಾರಿ ಶಾಲೆಗೆ ಹೋಗ್ತಾ ಇದ್ಯಾ? ಮಗುವಿನ ಆತಂಕ ದೂರಾಗಿಸಿ ಆತ್ಮವಿಶ್ವಾಸ ಹೆಚ್ಚಿಸಲು ಪೋಷಕರಿಗೆ ಸಲಹೆ

ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋದು ಹೇಗೆ ನೋಡಿ

Relationship Tips: ಸುಖ ದಾಂಪತ್ಯಕ್ಕೆ 10 ಸೂತ್ರಗಳು; ಜಗಳವಿಲ್ಲದೇ ದಾಂಪತ್ಯ ಕಲಹ ದೂರಾಗಿಸಲು ಹೆಂಡತಿಗೆ ಸಲಹೆ

ಕನಸಿಗೊಂದು ಅರ್ಥವಿದೆಯೇ? ಕಾಡುವ ಕನಸುಗಳ ಬಗ್ಗೆ ಮನಃಶಾಸ್ತ್ರ ಹೇಳುವುದೇನು? ನಿಮ್ಮ ಕನಸಿನ ಅರ್ಥ ತಿಳಿಯುವ ಆಸೆಯಿದ್ದರೆ ಈ ಬರಹ ಓದಿ -ಕಾಳಜಿ

ಮಹೀಂದ್ರಾದ ಇಂಟಿಗ್ರೇಟೆಡ್ ಮೆಟೀರಿಯಲ್ ವೆಚ್ಚ ಕಡಿತ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2024ರ ಜನವರಿ 1 ರ ನಂತರ ಸ್ವೀಕರಿಸಿದ ಬುಕಿಂಗ್‌ಗಳಿಗೆ ಇತ್ತೀಚಿನ ಬದಲಾವಣೆಗಳು ಅನ್ವಯಿಸುತ್ತವೆ. ಹಾಗಾದರೆ ಯಾವ ವೇರಿಯಂಟ್‌ನಲ್ಲಿ ಯಾವ ವೈಶಿಷ್ಟ್ಯಗಳು ಬದಲಾಗಿವೆ ಅನ್ನೋದನ್ನು ತಿಳಿಯೋಣ.

ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನಲ್ಲಿ ಕಡಿತವಾದ ವೈಶಿಷ್ಟ್ಯಯಾವುದು

ಮಹೀಂದ್ರಾ ಸ್ಕಾರ್ಪಿಯೊ ಎನ್ ಎಂಟ್ರಿ ಲೆವೆಲ್ ವೆರಿಯಂಟ್ ಝೆಡ್2 ಅನ್ನು ಮುಟ್ಟಿಲ್ಲ. ಕೋಲ್ಡ್ ಗ್ಲೋವ್ ಬಾಕ್ಸ್ ಇನ್ನು ಮುಂದೆ Z4 ಮತ್ತು Z6 ವೇರಿಯಂಟ್‌ಗಳಲ್ಲಿ ಲಭ್ಯ ಇರುವುದಿಲ್ಲ. ಎಸ್‌ಯುವಿ ಯ Z6 ವೇರಿಯಂಟ್‌ನಲ್ಲಿ ಮಹೀಂದ್ರಾ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹಿಂದೆ ಇದ್ದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ಈಗಲ ಇಲ್ಲ. ಇದು Z4 ನಲ್ಲಿ ಕಂಡುಬರುವ ಉಪಕರಣ ಕ್ಲಸ್ಟರ್ ಅನ್ನು ಮಾತ್ರ ಒಳಗೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ಫೀಚರ್ಸ್ ಕಡಿತ: ಮತ್ತೊಂದೆಡೆ ಮಹೀಂದ್ರಾ ಸ್ಕಾರ್ಪಿಯೊ ಎನ್‌ Z4 ವೈಶಿಷ್ಟ್ಯಗಳಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಅಡ್ರಿನೊಎಕ್ಸ್‌ಸೂಟ್, ಬಿಲ್ಟ್‌-ಇನ್ ಅಲೆಕ್ಸಾ, ಈ ಹಿಂದೆ ಬಂದಿದ್ದ ಬಣ್ಣದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಈ ಕಾರಿನಲ್ಲಿ ಕಾಣಿಸುತ್ತಿಲ್ಲ.

ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಘೋಷಿಸಿದ ಕೆಲವು ದಿನಗಳ ನಂತರ, ವೈಶಿಷ್ಟ್ಯಗಳನ್ನು ಕಡಿತಗೊಳಿಸಲಾಗಿದೆ ಎಂಬುದು ಗಮನಾರ್ಹವಾಗಿದೆ. ಜನವರಿಯಲ್ಲಿ ಸ್ಕಾರ್ಪಿಯೊ ಎನ್ ಬೆಲೆಯನ್ನು 39,300 ರೂಪಾಯಿ ಅನ್ನು ಮಹೀಂದ್ರಾ ಹೆಚ್ಚಿಸಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ವೈಶಿಷ್ಟ್ಯಗಳು: ಹೀಂದ್ರಾ ಕಂಪನಿಯು ಮಹೀಂದ್ರಾ ಸ್ಕಾರ್ಪಿಯೊಗೆ ಹಲವು ಬದಲಾವಣೆಗಳನ್ನು ಮಾಡಿದೆ. ಸ್ಕಾರ್ಪಿಯೊ ಎನ್ ಎನ್ನು ತಂದಿದೆ. 2022ರ ಜೂನ್‌ನಲ್ಲಿ ಮಾರುಕಟ್ಟೆಗೆ ಈ ಹೊಸ ಕಾರನ್ನು ಪ್ರಾರಂಭಿಸಲಾಯಿತು. ಇದುವರೆಗೆ 1 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದೆ. ಲೆಜೆಂಡರಿ ಆಟೋಮೊಬೈಲ್ ಕಂಪನಿಯು ಸ್ಕಾರ್ಪಿಯೊ ಕ್ಲಾಸಿಕ್ ಜೊತೆಗೆ ಈ ಮಾದರಿಯನ್ನು ಬಿಡುಗಡೆ ಮಾಡಿದೆ.

ಮಹೀಂದ್ರ ಸ್ಕಾರ್ಪಿಯೊ ಎನ್‌ 6 ವೇರಿಯಂಟ್‌ಗಳಲ್ಲಿವೆ. ಈ ಎಸ್‌ಯುವಿ ಯ ಎಕ್ಸ್‌ ಶೋ ರೂಂ ಬೆಲೆ 13.60 ಲಕ್ಷ ರೂಪಾಯಿಯಿಂದ 20.62 ಲಕ್ಷ ರೂಪಾಯಿವರೆಗೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಯಲ್ಲಿ ಲಭ್ಯವಿದ್ದು, 5 ಬಣ್ಣದ ಆಯ್ಕೆಗಳನ್ನು ಸಹ ಹೊಂದಿದೆ. ಮಾರುಕಟ್ಟೆಯಲ್ಲಿ ಮಹೀಂದ್ರ ಸ್ಕಾರ್ಪಿಯೊ ಎನ್‌ಗೆ ಉತ್ತಮ ಬೇಡಿಕೆಯಿದೆ. ದೇಶದ ಅಗ್ರ ಆಟೋಮೊಬೈಲ್ ಸಂಸ್ಥೆಗಳಲ್ಲಿ ಮಹೀಂದ್ರಾ ಕೂಡ ಒಂದಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು