ಆಟೋ, ಕಾರು ಆಯ್ತು ಈಗ ಬೈಕ್ ಸರದಿ; 2025ಕ್ಕೆ ರಸ್ತೆಗಳಿಯಲಿದೆ ಬಜಾಜ್ ಸಿಎನ್‌ಜಿ ದ್ವಿಚಕ್ರ ವಾಹನ
ಕನ್ನಡ ಸುದ್ದಿ  /  ಜೀವನಶೈಲಿ  /  ಆಟೋ, ಕಾರು ಆಯ್ತು ಈಗ ಬೈಕ್ ಸರದಿ; 2025ಕ್ಕೆ ರಸ್ತೆಗಳಿಯಲಿದೆ ಬಜಾಜ್ ಸಿಎನ್‌ಜಿ ದ್ವಿಚಕ್ರ ವಾಹನ

ಆಟೋ, ಕಾರು ಆಯ್ತು ಈಗ ಬೈಕ್ ಸರದಿ; 2025ಕ್ಕೆ ರಸ್ತೆಗಳಿಯಲಿದೆ ಬಜಾಜ್ ಸಿಎನ್‌ಜಿ ದ್ವಿಚಕ್ರ ವಾಹನ

ಸಿಎನ್‌ಜಿ ಆಟೋ, ಕಾರುಗಳನ್ನು ನೋಡಿದ್ದೀರಿ. ಆದರೆ ಇದೀಗ ಭಾರತದಲ್ಲೂ ಸಿಎನ್‌ಜಿ ಬೈಕ್‌ಗಳು ರಸ್ತೆಗಿಳಿಯಲಿವೆ. ಬಜಾಜ್ ಕಂಪನಿ ಸಿಎನ್‌ಜಿ ಬೈಕ್‌ಗಳ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಬಜಾಜ್ ಆಟೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ (Representative image)
ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಬಜಾಜ್ ಆಟೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ (Representative image)

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ ಬಜಾಜ್ ಆಟೋ, ಸಿಎನ್‌ಜಿ ಮೋಟಾರ್‌ಸೈಕಲ್‌ಗಳನ್ನು (CNG Bike) ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 2025ರ ಹಣಕಾಸು ವರ್ಷದಲ್ಲಿ ಇವು ಮಾರುಕಟ್ಟೆ ಪ್ರವೇಶಿಸಲಿವೆ ಎಂದು ವರದಿಯಾಗಿದೆ. ಈ ಬೈಕ್‌ಗಳು ಪೆಟ್ರೋಲ್ ಜೊತೆಗೆ ಸಿಎನ್‌ಜಿಯಲ್ಲೂ ಚಲಿಸಲಿವೆ. ಬಜಾಜ್ ಆಟೋ ಸಿಎನ್‌ಜಿ ಬೈಕ್‌ಗಳ ಸದ್ಯಕ್ಕೆ ಲಭ್ಯವಾಗಿರುವ ವಿವರಗಳನ್ನು ತಿಳಿಯೋಣ.

ಬಜಾಜ್ ಕಂಪನಿಯ ತ್ರಿಚಕ್ರ ವಾಹನಗಳಾದ ಆಟೋಗಳಲ್ಲಿ ಅಳವಡಿಸಿರುವ ಸಿಎನ್‌ಜಿ ಅತ್ಯಂತ ಯಶಸ್ವಿಯಾಗಿದೆ. ಇದೀಗ ಸಿಎನ್‌ಜಿ ಬೈಕ್‌ಗಳತ್ತ ಗಮನ ಹರಿಸಿದೆ. ಇದಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆಯಂತೆ. ಈ ಹೊಸ ಸಿಎನ್‌ಜಿ ಬೈಕ್‌ಗಳಿಗೆ ವಿಶೇಷ ಬ್ರಾಂಡ್ ಅನ್ನು ರಚಿಸಲಾಗುತ್ತಿದೆ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.

ಪೆಟ್ರೋಲ್, ಸಿಎನ್‌ಜಿ 2 ಆಯ್ಕೆಗಳಿರುವ ಟ್ಯಾಂಕ್

ಪೆಟ್ರೋಲ್ ಆಧಾರಿತ ಬೈಕ್‌ಗಳಿಗೆ ಹೋಲಿಸಿದರೆ ಈ ಸಿಎನ್ ಜಿ ಬೈಕ್‌ಗಳ ಬೆಲೆ ಕೊಂಚ ಹೆಚ್ಚಾಗಿರಲಿದೆ ಎಂದು ಮಾರುಕಟ್ಟೆಯ ಮೂಲಗಳು ಭಾವಿಸಿವೆ. ಉತ್ಪಾದನಾ ವೆಚ್ಚ ಅಧಿಕವಾಗಿರುವುದು ಇದಕ್ಕೆ ಒಂದು ಕಾರಣ. ಸಿಎನ್‌ಜಿ ಬೈಕ್‌ಗಳಿಗಾಗಿ ಪೆಟ್ರೋಲ್ ಟ್ಯಾಂಕ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಬೇಕು. ಈ ಇಂಧನ ಟ್ಯಾಂಕ್ ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ಆಯ್ಕೆಗಳನ್ನು ಹೊಂದಿರಬೇಕು. ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಸಿಎನ್‌ಜಿ ಬೈಕ್‌ಗಳು ಹೊಸದಾಗಿ ಮಾರುಕಟ್ಟೆಗೆ ಬರುತ್ತವೆಯೇ? ಇಲ್ಲವೇ ಈಗಾಗಲೇ ಇರುವ ಪೆಟ್ರೋಲ್ ಆಧಾರಿತ ಬೈಕ್‌ಗಳಿಗೆ ಹೊಸ ಟಚ್ ನೀಡಲಾಗುತ್ತದೆಯೇ ಸದ್ಯಕ್ಕೆ ಇದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಸಿಎನ್‌ಜಿ ಆಟೋಗಳು ಹಾಗೂ ಕಾರುಗಳು ಲಭ್ಯಇವೆ. ಬಹುತೇಕ ಎಲ್ಲಾ ಐಸಿಇ ಇಂಜಿನ್ ಮಾದರಿಗೆಗಳಿಗೆ ಸಿಎನ್‌ಜಿ ಟಚ್ ನೀಡಲಾಗಿದೆ.

ಬಜಾಜ್ ಸಂಸ್ಥೆ ಬೈಕ್ ಬಿಡುಗಡೆ ಮಾಡುತ್ತಿರುವ ಸಿಎನ್‌ಜಿ ಬೈಕ್ ಬೆಲೆ ಎಷ್ಟು? ಹಾಗೆ ನೋಡಿದರೆ ವಿವಿಧ ಬಗೆಯ ಸಿಎನ್‌ಜಿ ಬೈಕ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವ ತಂತ್ರವನ್ನು ಕಂಪನಿ ಹೊಂದಿದೆಯಂತೆ. ಇಂಧನ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿಎನ್‌ಜಿ ಬೈಕ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಪೆಟ್ರೋಲ್ ಬೈಕ್‌ಗಳಿಗಿಂತ ಈ ಮಾದರಿಯ ಬೈಕ್‌ಗಳ ಬೆಲೆ ಸ್ವಲ್ಪ ಜಾಸ್ತಿಯೇ ಇರಲಿದೆ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ಶರ್ಮಾ ಹೇಳಿದರು.

ಬೈಕ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ತಂತ್ರಜ್ಞಾನ, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಬೆಲೆಯಂತಹ ವಿವರಗಳನ್ನು ಯಾವಾಗ ಬಹಿರಂಗಪಡಿಸಲಾಗುತ್ತದೆ? ಈ ಮಾಹಿತಿ ಲಭ್ಯವಾದ ಕೂಡಲೇ ಓದುಗರಿಗೆ ತಿಳಿಸುವ ಪ್ರಯತ್ನವನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಮಾಡಲಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner