ಕನ್ನಡ ಸುದ್ದಿ  /  ಜೀವನಶೈಲಿ  /  Cuet 2024: ವಿದ್ಯಾರ್ಥಿಗಳೇ ಗಮನಿಸಿ; 2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 26

CUET 2024: ವಿದ್ಯಾರ್ಥಿಗಳೇ ಗಮನಿಸಿ; 2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 26

Rakshitha Sowmya HT Kannada

Mar 17, 2024 08:00 AM IST

2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕ

  • CUET 2024: ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮಾನಾವಕಾಶ ಕಲ್ಪಿಸುವ ಉಪಯುಕ್ತವಾದ ಗುಣಮಟ್ಟ, ವಿಶ್ವಾಸಾರ್ಹತೆ ಹಾಗೂ ರಾಷ್ಟ್ರೀಯ ಮಟ್ಟದ ಪ್ರಮುಖ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್‌ 26 ಕೊನೆಯ ದಿನಾಂಕವಾಗಿದೆ.

2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕ
2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕ

CUET 2024: ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿಯ ಬಹಳಷ್ಟು ಅರ್ಹ ವಿದ್ಯಾರ್ಥಿಗಳು ಸಿಯುಇಟಿ ಬಗ್ಗೆ ಇರುವ ಮಾಹಿತಿಯ ಕೊರತೆಯಿಂದ ತಮಗಿರುವ ಅನೇಕ ರಾಷ್ಟ್ರಮಟ್ಟದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

2022ರವರೆಗೆ ಪ್ರತಿ ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮ ಪದವಿ ಕೋರ್ಸುಗಳಿಗೆ ಪ್ರವೇಶ ತೆಗೆದುಕೋಳ್ಳಲು ತಮ್ಮದೇ ಆದ ವಿಭಿನ್ನ ಕಾರ್ಯ ವಿಧಾನವನ್ನು ಹೊಂದಿದ್ದವು. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಕೀಕರಿಸಲು ಶಿಕ್ಷಣ ಸಚಿವಾಲಯ ಯುಜಿಸಿಯೊಂದಿಗೆ(ಯೂನಿರ್ವಸಿಟಿ ಗ್ರಾಂಟ್ಸ್ ಕಮೀಷನ್) ಸಿಯುಇಟಿ ಎಂಬ ವಿನೂತನ ಪರೀಕ್ಷೆಯನ್ನು ಪರಿಚಯಿಸಿದೆ.

ಅತ್ಯಂತ ಮಹತ್ವದ ಪರೀಕ್ಷೆ ಸಿಯುಇಟಿ

ಇದು ಭಾರತದ ಎಲ್ಲಾ ಕೇಂದ್ರೀಯ ಮತ್ತು ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪರೀಕ್ಷೆಯಾಗಿದೆ. ಪ್ರಾರಂಭದಲ್ಲಿ 90 ವಿಶ್ವವಿದ್ಯಾಲಯಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 240ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸಿಯುಇಟಿಗೆ ತಮ್ಮ ಸಹಭಾಗಿತ್ವ ನೀಡಿವೆ. ಹಾಗಾಗಿಯೇ ದೇಶದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಪದವಿಗಾಗಿ ಪ್ರವೇಶ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಸಿಯುಇಟಿ ಅತ್ಯಂತ ಮಹತ್ವದ ಪರೀಕ್ಷೆಯಾಗಿದೆ. ದ್ವಿತೀಯ ಪಿಯುಸಿ ನಂತರ ಬಹಳಷ್ಟು ಸ್ಪರ್ಧಾತಕ ಪ್ರವೇಶ ಪರೀಕ್ಷೆಗಳು ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿರುವುದನ್ನು ಗಮನಿಸಿದ್ದೇವೆ. ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಸಿಯುಇಟಿ ಕಲ್ಪಿಸಿಕೊಡುತ್ತಿದೆ. ಮೂರೂ ವಿಭಾಗಗಳಲ್ಲೂ ಪದವಿ ಕೋರ್ಸುಗಳ ಜೊತೆಗೆ ಅನೇಕ ಸಮಗ್ರ ಪದವಿಗಳಿಗೂ(ಇಂಟೆಗ್ರೇಟೆದ್ ಡಿಗ್ರಿ) ಅವಕಾಶವಿದೆ.

ನಮ್ಮ ದೇಶದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಸಿ) ಜೊತೆಗೆ ಅನೇಕ ರಾಜ್ಯ ಶಿಕ್ಷಣ ಮಂಡಳಿಗಳಿವೆ. ಈ ಹಿಂದೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ತಮ್ಮದೇ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದಾಗ ಸಿಬಿಎಸ್‌ಸಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಮೇಲುಗೈ ಸಾಧಿಸಿದಾಗ, ಬೇರೆ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದರು. ಎಲ್ಲರಿಗೂ ಸಿಬಿಎಸ್‌ಸಿ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ಸಿಗುವುದಿಲ್ಲ. ಹಾಗಾಗಿ ಸಿಯುಇಟಿ ಪರೀಕ್ಷೆಯಲ್ಲಿ ಕೇವಲ ಎನ್‌ಸಿಇಆರ್‌ಟಿ ಸಿಲಬಸ್‌ಗೆ ಮಾನ್ಯತೆ ನೀಡಲಾಗಿರುವುದರಿಂದ ಎಲ್ಲಾ ಬೋರ್ಡಿನ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ದೊರೆಯುತ್ತದೆ.

ಆಯಾ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ

ಪ್ರತ್ಯೇಕ ಪರೀಕ್ಷೆಗಳಿದ್ದಾಗ ಪರೀಕ್ಷಾ ದಿನಾಂಕಗಳಲ್ಲಿಯೂ ಗೊಂದಲ ಉಂಟಾಗುವುದರ ಜೊತೆಗೆ, ಪ್ರತಿಯೊಂದು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಪ್ರತ್ಯೇಕ ಶುಲ್ಕವಿರುತ್ತಿತ್ತು. ಸಿಯುಇಟಿ ಪರೀಕ್ಷೆಯಿಂದ ಏಕ ದಿನ ಪರೀಕ್ಷೆಯ ಜೊತೆಗೆ ಒಂದೇ ಶುಲ್ಕದಿಂದಾಗಿ ಆರ್ಥಿಕ ಹಿಂಜರಿತಕ್ಕೂ ಕಡಿವಾಣ ಹಾಕಿದಂತಾಗಿದೆ. ಪರೀಕ್ಷಾ ಕೇಂದ್ರಗಳೂ ಸಹ ಭಾರತದಾತ್ಯಂತ ಎಲ್ಲಾ ಸ್ಥಳಗಳಲ್ಲಿಯೂ ಏಕ ಸಮಯದಲ್ಲಿ ಕಾರ್ಯನಿರ್ವಹಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣದ ಖರ್ಚು ಹಾಗೂ ಆಯಾಸವೂ ತಗ್ಗಿದಂತಾಗಿದೆ. ಉದಾಹರಣೆಗೆ ಈ ಹಿಂದೆ ತುಮಕೂರಿನ ವಿದ್ಯಾರ್ಥಿ ದೆಹಲಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ದೆಹಲಿಗೇ ಹೋಗಬೇಕಿತ್ತು, ಈಗ ತುಮಕೂರಿನಲ್ಲೇ ಕುಳಿತು ಪರೀಕ್ಷೆ ಬರೆಯಬಹುದು.

ದ್ವಿತೀಯ ಪಿಯುಸಿಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳು, ಅವುಗಳ ಪ್ರವೇಶ ಪರೀಕ್ಷೆ, ದಿನಾಂಕ, ಪಠ್ಯಕ್ರಮ, ಪ್ರಶ್ನೆಗಳ ರೀತಿಗಳ ಬಗೆಗಿನ ಮಾಹಿತಿ ಕೊರತೆಯಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದರು. ಸಿಯುಇಟಿ ಪರೀಕ್ಷೆಯನ್ನು ಪರಿಚಯಿಸಿದ ಮೇಲೆ ಒಂದೇ ಬುಲೆಟಿನ್‌ನಲ್ಲಿ ಈ ಎಲ್ಲಾ ಮಾಹಿತಿಗಳನ್ನೂ ಒದಗಿಸುವುದರಿಂದ ವಿದ್ಯಾರ್ಥಿಯು ಕೇಂದ್ರೀಯ ವಿಶ್ವವಿದ್ಯಾಲಯಗಳ ಹಾಗೂ ಅವುಗಳು ಒದಗಿಸುವ ಕೋರ್ಸಗಳ ಪಟ್ಟಿಯೊಂದಿಗೆ ತನ್ನ ಅರ್ಹತೆ ಹಾಗೂ ಇಚ್ಛೆಗನುಗುಣವಾಗಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದಾಗ ಕೆಲವು ವಿಶ್ವವಿದ್ಯಾಲಯಗಳು ಒಎಂಆರ್ ಬಳಸಿದರೆ ಹಲವು ವಿಶ್ವವಿದ್ಯಾಲಯಗಳು ಲಿಖಿತ ಮಾದರಿಯಲ್ಲಿ ನಡೆಸುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಸ್ವರೂಪ ಅರಿಯುವುದರಲ್ಲೇ ಗೊಂದಲವಾಗುತ್ತಿತ್ತು. ಹಲವು ಬಾರಿ ಪ್ರಶ್ನೆಪತ್ರಿಕೆಗಳ ಸೋರಿಕೆಯ ಘಟನೆಗಳೂ ಇವೆ. ಸಿಯುಇಟಿ ಪರೀಕ್ಷೆಯನ್ನು ಎನ್‌ಟಿಎ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುತ್ತಿದ್ದು ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಸರಿಯಾದ ಸಮಯದಲ್ಲಿ ಲಾಗಿನ್ ಆದರೆ ಮಾತ್ರ ಪ್ರಶ್ನೆಪತ್ರಿಕೆ ಗೋಚರಿಸುವುದು.

ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಪರೀಕ್ಷೆ

ರಾಷ್ಟ್ರೀಯ ಮಟ್ಟದಲ್ಲಿ ಸಿಯುಇಟಿ ಎಂಬ ಏಕರೂಪ ಪರೀಕ್ಷೆಯನ್ನು ಪರಿಚಯಿಸಿರುವುದರಿಂದ ಪರೀಕ್ಷೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಪ್ರಾಮುಖ್ಯತೆ ಹೆಚ್ಚಾಗಿ ವಿದ್ಯಾರ್ಥಿ ಸ್ನೇಹಿಯಾಗಿದೆ. ಎಲ್ಲಾ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಗಮನಿಸಬೇಕಿರುವ ಪ್ರಮುಖ ವಿಷಯವೆಂದರೆ ಈ ವರ್ಷದ ಸಿಯುಇಟಿ ಪರೀಕ್ಷೆಗೆ ಅರ್ಜಿ ಭರ್ತಿಮಾಡಲು ಕೊನೆಯ ದಿನಾಂಕ ಮಾರ್ಚ್ 26. ವಿಶ್ವವಿದ್ಯಾನಿಲಯಗಳು ಹಾಗೂ ಕೋರ್ಸುಗಳ ಪಟ್ಟಿ, ಹತ್ತನೇ ತರಗತಿ ಹಾಗೂ ಪಿಯುಸಿ ರಿಜಿಸ್ಟ್ರೇಷನ್‌ ನಂಬರ್, ಸ್ಕ್ಯಾನ್ ಮಾಡಿದ ಭಾವಚಿತ್ರ ಹಾಗೂ ಸಹಿ ಅರ್ಜಿ ಭರ್ತಿಮಾಡಲು ಅವಶ್ಯವಿದೆ.

ನೋಟ್: ಐಸಿಎಆರ್(ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್) ಮಾನ್ಯತೆ ಪಡೆದ ದೇಶದ ಕೇಂದ್ರ / ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪದವಿಗೆ ಪ್ರವೇಶ ಬಯಸುವವರು ಸಿಯುಇಟಿ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ. ಸಿಇಟಿ ಮೂಲಕ ಕರ್ನಾಟಕ ರಾಜ್ಯದ 6 ಕೃಷಿವಿಶ್ವವಿದ್ಯಾಲಯಗಳಲ್ಲಿ ಸೀಟ್ ಪಡೆಯಲು ವಿಫಲರಾದಲ್ಲಿ, ರಾಷ್ಟ್ರಮಟ್ಟದ 63 ಕೃಷಿ ವಿಶ್ವವಿದ್ಯಾಲಯಗಳಲ್ಲಿ(ರಾಜ್ಯದ 6 ಕೃಷಿವಿಶ್ವವಿದ್ಯಾಲಯಗಳೂ ಸೇರಿ) ಸೀಟ್ ಪಡೆದುಕೊಳ್ಳಲು ಸಿಯುಇಟಿ ಪರೀಕ್ಷೆ ಅವಕಾಶಮಾಡಿಕೊಡುತ್ತದೆ.

-ನಾಗೇಂದ್ರ ಟಿ ಸಿ

ಸಂಸ್ಥಾಪಕರು ಹಾಗೂ ಸಿಇಒ

ಪ್ರಣವಸ್ಯ ಅಕಾಡೆಮಿ, ತುಮಕೂರು

9483846333

    ಹಂಚಿಕೊಳ್ಳಲು ಲೇಖನಗಳು