ಕನ್ನಡ ಸುದ್ದಿ  /  ಜೀವನಶೈಲಿ  /  ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ

ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ

Reshma HT Kannada

Feb 10, 2024 05:11 PM IST

ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ

    • ವಿದೇಶಗಳಲ್ಲಿ ಓದಬೇಕು ಎಂಬ ಕನಸು ಹಲವರಲ್ಲಿರುತ್ತದೆ. ಪೋಷಕರು ಕೂಡ ನಮ್ಮ ಮಕ್ಕಳ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಓದಲಿ ಎಂಬ ಬಯಕೆ ಇರಿಸಿಕೊಂಡಿರುತ್ತಾರೆ. ಅಂತಹವರಿಗೆ ಇಲ್ಲೊಂದು ಅವಕಾಶವಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಮಾಡಲು ಬಯಸುವವರಿಗೆ ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮೇಳ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.
ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ
ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ (Unplash )

ಬೆಂಗಳೂರು: ಅಮೆರಿಕದಲ್ಲಿ ಓದಬೇಕು ಎಂಬ ಕನಸು ನಿಮಗಿದ್ದು, ಅಲ್ಲಿನ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣಕ್ಕೆ ನೆರವಾಗುವ ಕೋರ್ಸ್‌ಗಳು, ಕಾಲೇಜುಗಳು, ಅಪ್ಲಿಕೇಶನ್‌ ಹಾಕುವ ಬಗ್ಗೆಲ್ಲಾ ನಿಮಗೆ ಸರಿಯಾಗಿ ಮಾಹಿತಿಯಿಲ್ಲ ಎಂದಾದರೆ ನಿಮಗಾಗಿ ಇಲ್ಲೊಂದು ಅವಕಾಶವಿದೆ. ಯುಎಸ್ ಡಿಪಾರ್ಟ್‌ಮೆಂಟ್‌ ಆಫ್ ಕಾಮರ್ಸ್, ಇಂಟರ್‌ನ್ಯಾಷನಲ್‌ ಟ್ರೇಡ್ ಅಡ್ಮಿನಿಸ್ಟ್ರೇಷನ್, ಭಾರತದಲ್ಲಿನ ಯುಎಸ್ ಕಮರ್ಷಿಯಲ್ ಸರ್ವಿಸ್ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ಅಮೆರಿಕ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಫೆಬ್ರುವರಿ 12 ರಿಂದ 20ರವರೆಗೆ ಬೆಂಗಳೂರು, ಮಣಿಪಾಲ, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಎಜುಕೇಶನ್ ಟ್ರೇಡ್ ಮಿಷನ್‌ ಅನ್ನು ಆಯೋಜಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

Garlic Rice: ಅನ್ನ ಮಿಕ್ಕಿದೆ ಅಂತ ವೇಸ್ಟ್‌ ಮಾಡ್ಬೇಡಿ, ಈ ರೀತಿ ಗಾರ್ಲಿಕ್‌ ರೈಸ್‌ ಮಾಡಿಕೊಡಿ, ಎಲ್ರೂ ಇಷ್ಟಪಟ್ಟು ತಿಂತಾರೆ

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ʼಅಮೆರಿಕದಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಓದುತ್ತಿದ್ದು, ಈ ದೇಶವು ಪ್ರಚಂಚದಲ್ಲೇ ಅತಿ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿದೆ. ಇದು ಅಮೆರಿಕನ್ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ವೈವಿಧ್ಯತೆ ಮತ್ತು ನಾವೀನ್ಯತೆಯ ಪ್ರತಿಬಿಂಬಿಸುತ್ತದೆʼ ಎಂದು ಚೆನ್ನೈನಲ್ಲಿರುವ ಯುಎಸ್ ಕಾನ್ಸಲ್ ಜನರಲ್ ಕ್ರಿಸ್ಟೊಫರ್ ಹಾಡ್ಜಸ್ ಹೇಳಿದರು.

ʼಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ ಯುಎಸ್- ಭಾರತ ಉಪಕ್ರಮವು ಹೇಗೆ ವಾಣಿಜ್ಯ ಸ್ಥಳ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಮತ್ತು ಗ್ರೀನ್‌ ಹೈಡ್ರೋಜನ್‌ನಂತಹ ಮುಂದಿನ ಪೀಳಿಗೆಯ ಕ್ಷೇತ್ರಗಳಲ್ಲಿ ಹೊಸ ಪ್ರಗತಿಗಳು ಮತ್ತು ಹೂಡಿಕೆಗಳನ್ನು ಉತ್ತೇಜಿಸುತ್ತದೆʼ ಎಂದು ಅವರು ಹೇಳಿದ್ದಾರೆ.

ʼಚೆನ್ನೈನಲ್ಲಿರುವ ಯುಎಸ್‌ ಕಾನ್ಸುಲೇಟ್ ಜನರಲ್ ಅಮೆರಿಕದ ವಿಶ್ವವಿದ್ಯಾನಿಲಯಗಳನ್ನು ದಕ್ಷಿಣ ಭಾರತದ ವ್ಯಾಪಾರ ಮತ್ತು ಸಂಶೋಧನಾ ಪಾಲುದಾರರೊಂದಿಗೆ ಸಂಪರ್ಕಿಸುವ ಮೂಲಕ ನಮ್ಮ ಎರಡೂ ದೇಶಗಳಲ್ಲಿನ ಅಗಾಧ ಪ್ರತಿಭೆಯನ್ನು ಚಾಲಕ ಶಕ್ತಿಯಾಗಿ ಬಳಸಿಕೊಂಡು ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಾವೀನ್ಯತೆಯನ್ನು ಉತ್ತೇಜಿಸಲು ಬಳಸಿಕೊಳ್ಳುತ್ತದೆ. ನಮ್ಮನ್ನು ಆ ನಿಟ್ಟಿನಲ್ಲಿ ಕೊಂಡೊಯ್ಯುವ ಅತ್ಯುತ್ತಮ ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳನ್ನು ಈ ನಗರಗಳಲ್ಲಿ ಕಾಣುತ್ತೇವೆ. ಅಮೆರಿಕ ಉನ್ನತ ಶಿಕ್ಷಣದ ಶಕ್ತಿಯನ್ನು ಎತ್ತಿ ತೋರುವ ಅಮೆರಿಕ ವಿಶ್ವ ವಿದ್ಯಾಲಯಗಳ ಸಹಭಾಗಿಗಳನ್ನು ದಕ್ಷಿಣ ಭಾರತಕ್ಕೆ ಕರೆತರಲು ಹೆಮ್ಮೆಯಿದೆʼ ಎಂದರು.

ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ನಮ್ಮ ಅಧಿಕೃತ @EducationUSAindia ನೊಂದಿಗೆ ತಮ್ಮ #StudyInTheUS ಕನಸನ್ನು ಯೋಜಿಸಲು ಬೆಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.

ಏನೆಲ್ಲಾ ಮಾಹಿತಿ ಸಿಗುತ್ತೆ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮೇಳವು ತೆರೆದಿರುತ್ತದೆ. ಈ ಶೈಕ್ಷಣಿಕ ಮೇಳದಲ್ಲಿ 18 ಯುಎಸ್ ಉನ್ನತ ಶಿಕ್ಷಣ ಪ್ರತಿನಿಧಿಗಳು, ಸಲಹೆಗಾರರು ಎಜುಕೇಷನ್‌ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈನಿಂದ ವೀಸಾ ಅಧಿಕಾರಿಗಳು/ರಾಜತಾಂತ್ರಿಕರನ್ನು ಭೇಟಿ ಮಾಡಬಹುದಾಗಿದೆ. ಯುಎಸ್ ಉನ್ನತ ಶಿಕ್ಷಣ, ವಿದ್ಯಾರ್ಥಿ ವೀಸಾಗಳ ಕುರಿತು ಅಧಿಕಾರಿಗಳು ಮಾಹಿತಿಯನ್ನು ಪ್ರಸ್ತುತಪಡಿಸುತ್ತಾರೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ಮೇಳಕ್ಕೆ ಪ್ರವೇಶ ಉಚಿತ ಮತ್ತು ಯುಎಸ್ ಉನ್ನತ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ತೆರೆದಿದೆ. ನೋಂದಣಿ ಕಡ್ಡಾಯವಾಗಿದೆ. ನೀವು https://yocket.com/events/graduate-student-fair-a-world-class-education-awaits-you-in-the-us-3533 ನಲ್ಲಿ ನೋಂದಾಯಿಸಿಕೊಳ್ಳಬಹುದು.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅಮೆರಿಕದಲ್ಲಿ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಹೆಚ್ಚುವರಿ ಸಂಪನ್ಮೂಲಗಳಿಗಾಗಿ, EducationUSA ವೆಬ್‌ಸೈಟ್‌ಗೆ ಭೇಟಿ ನೀಡಬಹುದು: https://www.usief.org.in/Study-in-the-US.aspx

ಕಾರ್ಯಕ್ರಮದ ವಿವರ

ಬೆಂಗಳೂರಿನಲ್ಲಿ ವಿದ್ಯಾರ್ಥಿ ಮೇಳ

ದಿನಾಂಕ: ಸೋಮವಾರ, ಫೆಬ್ರವರಿ 12, 2024

ಸಮಯ: ಸಂಜೆ 4 ರಿಂದ ಸಂಜೆ 7ರವರೆಗೆ ನಡೆಯುತ್ತದೆ.

ಸ್ಥಳ: ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್, 24/1, ವಿಠಲ್ ಮಲ್ಯ ರಸ್ತೆ, ಕೆ.ಜಿ.ಹಳ್ಳಿ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001

ಭಾಗವಹಿಸುವ ಯುಎಸ್ ಉನ್ನತ ಶಿಕ್ಷಣ ಸಂಸ್ಥೆಗಳು

1. ಅರಿಝೋನಾ ಸ್ಟೇಟ್ ಯೂನಿವರ್ಸಿಟಿ

2. ಬ್ರ್ಯಾಂಟ್ ಯೂನಿವರ್ಸಿಟಿ

3. ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಅಮೇರಿಕಾ

4. ಸಿಟಿ ಯೂನಿವರ್ಸಿಟಿ ಆಫ್ ಸಿಯಾಟಲ್

5. ಕ್ಲಾರ್ಕ್ಸನ್ ಯೂನಿವರ್ಸಿಟಿ

6. ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ

7. ಕೆನ್ನೆಸಾ ಸ್ಟೇಟ್ ಯೂನಿವರ್ಸಿಟಿ

8. ಮೇರಿಮೌಂಟ್ ಯೂನಿವರ್ಸಿಟಿ

9. ಪಾರ್ಕ್ ಯೂನಿವರ್ಸಿಟಿ

10. ಪೆನ್ ಕಾಲೇಜ್ ಆಫ್ ಟೆಕ್ನಾಲಜಿ

11. ಸೇಂಟ್ ಲೂಯಿಸ್ ಯೂನಿವರ್ಸಿಟಿ

12. ಸೇಂಟ್ ಮೇರಿ ಯೂನಿವರ್ಸಿಟಿ ಟೆಕ್ಸಾಸ್

13. ಸನ್ನಿ ಬಫಲೋ

14. ಯೂನಿವರ್ಸಿಟಿ ಆಫ್‌ ಅರ್ಕಾನ್ಸಾಸ್

15. ಯೂನಿವರ್ಸಿಟಿ ಆಫ್‌ ಸ್ಯಾನ್ ಡಿಯಾಗೋ

16. ಯೂನಿವರ್ಸಿಟಿ ಆಫ್‌ ಟೆಕ್ಸಾಸ್ ಸ್ಯಾನ್ ಆಂಟೋನಿಯೊ

17. ಯೂನಿವರ್ಸಿಟಿ ಆಫ ಉತಾಹ್

18. ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್ ಸ್ಟೌಟ್

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು