ಕನ್ನಡ ಸುದ್ದಿ  /  ಜೀವನಶೈಲಿ  /  Fertility Diet: ಫಲವಂತಿಕೆ ಸಮಸ್ಯೆಯಿಂದ ಮಕ್ಕಳಾಗ್ತಿಲ್ವಾ; ಹಾಗಾದ್ರೆ ತಜ್ಞರು ಸಲಹೆ ನೀಡಿದ ಈ ಡಯೆಟ್‌ ಟಿಪ್ಸ್‌ ಫಾಲೋ ಮಾಡಿ

Fertility Diet: ಫಲವಂತಿಕೆ ಸಮಸ್ಯೆಯಿಂದ ಮಕ್ಕಳಾಗ್ತಿಲ್ವಾ; ಹಾಗಾದ್ರೆ ತಜ್ಞರು ಸಲಹೆ ನೀಡಿದ ಈ ಡಯೆಟ್‌ ಟಿಪ್ಸ್‌ ಫಾಲೋ ಮಾಡಿ

Reshma HT Kannada

Nov 16, 2023 06:00 PM IST

ಫಲವಂತಿಕೆಗೆ ಸಹಾಯ ಮಾಡುವ ಡಯೆಟ್‌ ಕ್ರಮಗಳು

    • ಗರ್ಭಿಣಿಯಾಗಲು ಪ್ರಯತ್ನ ಮಾಡುತ್ತಿರುವವರು ಫಲವಂತಿಕೆಗೆ ನೆರವಾಗುವ ಆಹಾರ ಸೇವಿಸುವುದು ಅವಶ್ಯ. ಈ ಆಹಾರಪದ್ಧತಿಯು ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ದೇಹವನ್ನು ಗರ್ಭಧಾರಣೆಗೆ ಸಿದ್ಧ ಪಡಿಸುತ್ತದೆ ಎನ್ನುತ್ತಾರೆ ತಜ್ಞರು.
ಫಲವಂತಿಕೆಗೆ ಸಹಾಯ ಮಾಡುವ ಡಯೆಟ್‌ ಕ್ರಮಗಳು
ಫಲವಂತಿಕೆಗೆ ಸಹಾಯ ಮಾಡುವ ಡಯೆಟ್‌ ಕ್ರಮಗಳು

ಮದುವೆಯಾದ ಮೇಲೆ ದಂಪತಿಗಳು ಮಕ್ಕಳ ಕನಸು ಕಾಣುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಮಕ್ಕಳಾಗುವುದು ಸಮಸ್ಯೆಯಾಗಿದೆ. ಆದರೆ ಮಕ್ಕಳಾಗಲು ಫಲವಂತಿಕೆಗೆ ಸಹಾಯ ಮಾಡುವ ಆಹಾರ ಪದ್ಧತಿಗಳನ್ನು ಸೇವಿಸುವ ರೂಢಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಈ ಆಹಾರಗಳು ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಫಲಿವಂತಿಕೆಯ ವಿಚಾರದಲ್ಲಿ ವೈಯಕ್ತಿಕ ಅಂಶಗಳು ಕೊಡುಗೆ ನೀಡುತ್ತವೆಯಾದರೂ ಕೂಡ ಸಮತೋಲಿತ ಹಾಗೂ ಪೌಷ್ಟಿಕಾಂಶಭರಿತ ಆಹಾರವು ಫಲವಂತಿಕೆಯ ಪ್ರಮಾಣ ಹೆಚ್ಚಲು ಸಹಾಯ ಮಾಡುತ್ತದೆ. ಹಾಗಾದರೆ ಫಲವಂತಿಕೆ ಸುಧಾರಿಸಲು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದಕ್ಕೆ ತಜ್ಞರ ಸಲಹೆ ಹೀಗಿದೆ.

ಟ್ರೆಂಡಿಂಗ್​ ಸುದ್ದಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

Garlic Rice: ಅನ್ನ ಮಿಕ್ಕಿದೆ ಅಂತ ವೇಸ್ಟ್‌ ಮಾಡ್ಬೇಡಿ, ಈ ರೀತಿ ಗಾರ್ಲಿಕ್‌ ರೈಸ್‌ ಮಾಡಿಕೊಡಿ, ಎಲ್ರೂ ಇಷ್ಟಪಟ್ಟು ತಿಂತಾರೆ

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಸಸ್ಯಜನ್ಯ ಪ್ರೋಟಿನ್‌ ಸೇವನೆಗೆ ಒತ್ತು ನೀಡಿ

ಸಸ್ಯ ಆಧಾರಿತ ಪ್ರೋಟಿನ್‌ಗಳು ಫಲವಂತಿಕೆಯನ್ನು ಹೆಚ್ಚಿಸುವ ಆಹಾರದ ಮೂಲಧಾರವಾಗಿದೆ. ದ್ವಿದಳ ಧಾನ್ಯಗಳು, ಬೀಜಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಸೇರಿಸಿ. ಏಕೆಂದರೆ ಅವುಗಳಲ್ಲಿ ಸಂತಾನೋತ್ಪತ್ತಿ ಆರೋಗ್ಯಕ್ಕೆ ಅಗತ್ಯವಾದ ಅಮೈನೊ ಆಮ್ಲಗಳಿವೆ. ವಿವಿಧ ರೀತಿಯ ಪೋಷಕಾಂಶಗಳು, ಹಾರ್ಮೋನ್‌ ಸಮತೋಲನ ಮತ್ತು ಒಟ್ಟಾರೆ ಯೋಗಕ್ಷೇಮ ಸುಧಾರಿಸಲು ಕ್ವಿನೋವಾ, ಮಸೂರ ಬೆಳೆ ಹಾಗೂ ಕಡಲೆಗಳನ್ನು ಸೇರಿಸಿಕೊಳ್ಳಿ.

ಆರೋಗ್ಯಕರ ಕೊಬ್ಬಿನಾಂಶ

ಫಲವಂತಿಕೆಗೆ ದೇಹದಲ್ಲಿ ಆರೋಗ್ಯಕರ ಕೊಬ್ಬಿನಾಂಶ ಇರುವುದು ಮುಖ್ಯವಾಗುತ್ತದೆ. ಸಾಲ್ಮನ್‌, ಮ್ಯಾಕೆರೆಲ್‌ನಂತಹ ಕೊಬ್ಬಿನಾಂಶ ಇರುವ ಮೀನುಗಳಲ್ಲಿ ಹೇರಳವಾಗಿರುವ ಒಮೆಗಾ -3 ಕೊಬ್ಬಿನಾಮ್ಲಗಳಿದ್ದು ಇದು ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ. ಮೀನು ತಿನ್ನದೇ ಇರುವವರು ಅಗಸೆಬೀಜ ಹಾಗೂ ವಾಲ್‌ನಟ್‌ಗಳನ್ನು ಸೇವಿಸಬಹುದು. ಆರೋಗ್ಯಕರ ಕೊಬ್ಬಿನಾಂಶವು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ಗರ್ಭಾಶಯ ವಾತಾವರಣ ಉತ್ತೇಜಿಸಲು ನೆರವಾಗುತ್ತದೆ.

ಉತ್ಕರ್ಷಣ ನಿರೋಧಕ ಅಂಶ ಇರುವ ಆಹಾರಗಳು

ಆಂಟಿಆಕ್ಸಿಡೆಂಟ್‌ಗಳು ಫಲವಂತಿಕೆಗೆ ಅಡ್ಡಿ ಪಡಿಸುವ ಫ್ರಿ ರಾಡಿಕಲ್‌ಗಳನ್ನು ತಟಸ್ಥವಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಬೆರ್ರಿ ಹಣ್ಣುಗಳು, ಪಾಲಕ್‌ ಮತ್ತು ಕೇಲ್‌ನಂತಹ ವರ್ಣರಂಜಿತ ಹಣ್ಣು, ತರಕಾರಿಗಳು ನಿಮ್ಮ ಆಹಾರಪದ್ಧತಿಯಲ್ಲಿ ಹೆಚ್ಚಿರಲಿ. ಇವು ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸುವುದ ಮಾತ್ರವಲ್ಲ ವೀರ್ಯವನ್ನು ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ಫಲವಂತಿಕೆಯ ವಾತಾವರಣವನ್ನು ಉತ್ತೇಜಿಸುತ್ತದೆ.

ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು

ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿರುವಂತೆ ನೋಡಿಕೊಳ್ಳಲುಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಅಂಶ ಇರುವ ಧಾನ್ಯಗಳನ್ನು ಆರಿಸಿ. ಬ್ರೌನ್‌ ರೈಸ್‌, ಕ್ವಿನೋವಾ ಮತ್ತು ಓಟ್ಸ್‌ ಶಕ್ತಿ ಬಿಡುಗಡೆಯ ಜೊತೆಗೆ ಹಾರ್ಮೋನ್‌ ಸಮತೋಲವನ್ನು ಬೆಂಬಲಿಸುವ ಅತ್ಯುತ್ತಮ ಆಯ್ಕೆಗಳಾಗಿವೆ. ಸಿಹಿ ತಿನಿಸುಗಳು ಹಾಗೂ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ. ಯಾಕೆಂದರೆ ಅವು ಇನ್ಸುಲಿನ್‌ ಮಟ್ಟಕ್ಕೆ ಅಡ್ಡಿ ಪಡಿಸಬಹುದು ಮತ್ತು ಫಲವಂತಿಕೆಯ ಮೇಲೆ ಪರಿಣಾಮ ಬೀರಬಹುದು.

ಫೋಲಿಕ್‌ ಆಮ್ಲ

ಗರ್ಭ ಧರಿಸುವ ಆರಂಭದ ಹಂತ ಹಾಗೂ ಅದಕ್ಕೂ ಮೊದಲಿನ ಹಂತಗಳಲ್ಲಿ ಫೋಲಿಕ್‌ ಆಮ್ಲವು ನಿರ್ಣಾಯಕ ಪೋಷಕಾಂಶವಾಗಿದೆ. ಹಸಿರು ಸೊಪ್ಪು, ಸಿಟ್ರಸ್‌ ಹಣ್ಣುಗಳು ಮತ್ತು ಬಲವರ್ಧಿತ ಸಿರಿಧಾನ್ಯಗಳು ವಿಟಮಿನ್‌ ಬಿಯ ಅತ್ಯುತ್ತಮ ಮೂಲಗಳಾಗಿವೆ. ಇದು ಅಭಿವೃದ್ಧಿಶೀಲ ಭ್ರೂಣದಲ್ಲಿ ನರ ಕೊಳವೆಯ ದೋಷಗಳನ್ನು ತಡೆಗಟ್ಟಲು ಹೆಸರುವಾಸಿಯಾಗಿದೆ. ಗರ್ಭಧಾರಣೆಯ ಮೊದಲು ಫೋಲಿಕ್‌ ಆಮ್ಲದ ಅಂಶ ಇರುವ ಆಹಾರಗಳನ್ನು ಸಾಕಷ್ಟು ಸೇವಿಸಿ. ಇದು ಆರೋಗ್ಯಕರ ಗರ್ಭಧಾರಣೆಗೆ ಬಹಳ ಅವಶ್ಯ.

ಕೆಫಿನ್‌ ಹಾಗೂ ಆಲ್ಕೋಹಾಲ್‌ ಸೇವನೆಗೆ ಕಡಿವಾಣ ಹಾಕಿ

ಅತಿಯಾದ ಕೆಫಿನ್‌ ಅಂಶ ಇರುವ ಆಹಾರಗಳು ಹಾಗೂ ಆಲ್ಕೋಹಾಲ್‌ ಸೇವನೆಯು ಫಲವಂತಿಕೆಗೆ ಅಡ್ಡಿಯಾಗಬಹುದು. ಕೆಫಿನ್‌ ಅಂಶ ಇರುವ ಕಾಫಿ ಅಥವಾ ಟೀ ಸೇವನೆಯನ್ನು ದಿನಕ್ಕೆ ಒಂದು ಅಥವಾ ಎರಡು ಕಪ್‌ಗಳಿಗೆ ಸೀಮಿತಗೊಳಿಸಿ. ಆಲ್ಕೊಹಾಲ್‌ ಸೇವನೆಯನ್ನು ತಪ್ಪಿಸುವುದು ಉತ್ತಮ.

ಹೈಡ್ರೇಟ್‌ ಆಗಿರುವುದು

ಫಲವಂತಿಕೆಯ ವಿಚಾರಕ್ಕೆ ಬಂದಾಗ ನೀರು ಕುಡಿಯುವುದು ಸಹ ಮುಖ್ಯವಾಗುತ್ತದೆ. ಹಾರ್ಮೋನ್‌ ನಿಯಂತ್ರಣ ಹಾಗೂ ಅಗತ್ಯ ಪೋಷಕಾಂಶಗಳ ಸಾಗಣೆ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳಲ್ಲಿ ನೀರು ನಿರ್ಣಾಯಕ ಪಾತ್ರ ವಹಿಸುತ್ತದೆ. ದಿನದಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ.

ಪೌಷ್ಟಿಕಾಂಶ ಪೂರಕ ಆಹಾರ ಸೇವಿಸಿ

ಕೆಲವೊಮ್ಮೆ ಆಹಾರದಿಂದಷ್ಟೇ ಪೌಷ್ಟಿಕಾಂಶಗಳು ಸಾಲುವುದಿಲ್ಲ. ಅಂತಹ ಸಂದರ್ಭದಲ್ಲಿ ಅಂದರೆ ಹೆಚ್ಚುವರಿ ಪೌಷ್ಟಿಕಾಂಶದ ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯಿರಿ. ಕಬ್ಬಿಣಾಂಶ, ವಿಟಮಿನ್‌ ಡಿ, ಒಮೆಗಾ 3 ಕೊಬ್ಬಿನಾಮ್ಲ ಈ ಎಲ್ಲವೂ ಪರಿಗಣಿಸಬೇಕಾದ ಪ್ರಮುಖ ಪೋಷಕಾಂಶಗಳಲ್ಲಿ ಸೇರಿವೆ. ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

ಈ ಎಲ್ಲದರ ಜೊತೆಗೆ ಜೀವನಶೈಲಿಗೆ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ. ದೈಹಿಕ ಚಟುವಟಿಕೆಗೂ ಆಧ್ಯತೆ ನೀಡಿ.

    ಹಂಚಿಕೊಳ್ಳಲು ಲೇಖನಗಳು