ಕನ್ನಡ ಸುದ್ದಿ  /  ಜೀವನಶೈಲಿ  /  Captain Pranjal: ಚಾರಣಪ್ರಿಯ ಕ್ಯಾಪ್ಟನ್‌ ಪ್ರಾಂಜಲ್‌ಗೆ ಬಾಲ್ಯದಲ್ಲೇ ಇತ್ತು ದೇಶ ಸೇವೆಯ ತುಡಿತ : ಗೆಳೆಯರ ಸ್ಮರಣೆ

Captain Pranjal: ಚಾರಣಪ್ರಿಯ ಕ್ಯಾಪ್ಟನ್‌ ಪ್ರಾಂಜಲ್‌ಗೆ ಬಾಲ್ಯದಲ್ಲೇ ಇತ್ತು ದೇಶ ಸೇವೆಯ ತುಡಿತ : ಗೆಳೆಯರ ಸ್ಮರಣೆ

HT Kannada Desk HT Kannada

Nov 24, 2023 10:11 AM IST

ಬಾಲ್ಯದಲ್ಲಿ ಚಾರಣ ಸಹಿತ ಹಲವು ಚಟುವಟಿಕೆಗಳ ಮೂಲಕ ಸಕ್ರಿಯವಾಗಿದ್ದ ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ವೆಂಕಟೇಶ್‌.

    • Martyr Captain Pranjal ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡುವ ಎನ್ನುವ ಮಾತಿನಿಂದ ಶಾಲಾ ದಿನಗಳಲ್ಲೇ ಸೇನೆ ಸೇರುವ ಬಗ್ಗೆ ಮಾತನಾಡುತ್ತಿದ್ದ ಕ್ಯಾಪ್ಟನ್‌ ವೆಂಕಟೇಶ್‌ ನಂತರ ಅದನ್ನು ಸಾಧಿಸಿ ತೋರಿಸಿದ್ದರು. ದೇಶದ ಪರವಾಗಿ ಹೋರಾಡುವಾಗಲೇ ಹುತಾತ್ಮರಾದರು.
ಬಾಲ್ಯದಲ್ಲಿ ಚಾರಣ ಸಹಿತ ಹಲವು ಚಟುವಟಿಕೆಗಳ ಮೂಲಕ ಸಕ್ರಿಯವಾಗಿದ್ದ ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ವೆಂಕಟೇಶ್‌.
ಬಾಲ್ಯದಲ್ಲಿ ಚಾರಣ ಸಹಿತ ಹಲವು ಚಟುವಟಿಕೆಗಳ ಮೂಲಕ ಸಕ್ರಿಯವಾಗಿದ್ದ ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ವೆಂಕಟೇಶ್‌.

ಮಂಗಳೂರು: ಎಲ್ಲ ಮಕ್ಕಳಂತೆ ಏನಾದರೂ ಆಗಬೇಕು ಎನ್ನುವ ಬಯಕೆ ಅವರ ಬಾಲ್ಯದಲ್ಲಿಯೇ ಇತ್ತು. ಆದರೆ ದೇಶ ಸೇವೆಯನ್ನು ಮಾಡುತ್ತೇನೆ ಎನ್ನುವ ಛಲವಂತೂ ಇತ್ತು. ಅದರಂತೆ ದೇಶ ಸೇವೆಯ ಪವಿತ್ರ ಕಾಯಕ ಆರಿಸಿಕೊಂಡ ಈ ಸೇನಾಧಿಕಾರಿ ಅದನ್ನು ಮಾಡಿ ತೋರಿಸಿದರು. ದೇಶಕ್ಕಾಗಿಯೇ ಕೆಲಸ ಮಾಡುವಾಗ ಮಾರ್ಗ ಮಧ್ಯೆದಲ್ಲೇ ನಿರ್ಗಮಿಸಿದರು. ನಿಜಕ್ಕೂ ಹುತಾತ್ಮರಾದರು. ಎಷ್ಟೋ ಮಂದಿಗೆ ಪ್ರೇರಣೆಯೂ ಆದರು.

ಟ್ರೆಂಡಿಂಗ್​ ಸುದ್ದಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಸೈಲೆಂಟ್ ಕಿಲ್ಲರ್ ವಿರುದ್ಧ ಹೋರಾಡುವುದು: ಮೈಕ್ರೋ ಲ್ಯಾಬ್ಸ್ ರಾಷ್ಟ್ರವ್ಯಾಪಿ ಅಧಿಕ ರಕ್ತದೊತ್ತಡ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತದೆ

ಟೂರ್ ಎಂಜಾಯ್ ಮಾಡುವ ಆಸೆ ಇರುವವರಿಗೆ ಅರ್ಥ ಮಾಡಿಕೊಳ್ಳಲೇಬೇಕಾದ 10 ಅಂಶಗಳು: ಹೀಗೆ ಮಾಡಿದ್ರೆ ನಿಮಗೂ ಖುಷಿ, ಜೊತೆಗೆ ಬಂದವರಿಗೂ ನೆಮ್ಮದಿ

Parenting Tips: ನಿಮ್ಮ ಮಗು ಮೊದಲ ಬಾರಿ ಶಾಲೆಗೆ ಹೋಗ್ತಾ ಇದ್ಯಾ? ಮಗುವಿನ ಆತಂಕ ದೂರಾಗಿಸಿ ಆತ್ಮವಿಶ್ವಾಸ ಹೆಚ್ಚಿಸಲು ಪೋಷಕರಿಗೆ ಸಲಹೆ

ಇದು ಕಾಶ್ಮೀರದಲ್ಲಿ ಉಗ್ರರೊಂದಿಗೆ ಕಾದಾಟದ ವೇಳೆ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್‌ ಪ್ರಾಂಜಲ್‌ ವೆಂಕಟೇಶ್‌ ಅವರ ಅಲ್ಪ ಬದುಕಿನಲ್ಲೇ ಅಮರರಾದ ಬೇಸರದ ಕ್ಷಣಗಳು.

ಮಂಗಳೂರಿನ ಎಂ.ಆರ್.ಪಿ.ಎಲ್. ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮತ್ತು ಅನುರಾಧ ದಂಪತಿಯ ಏಕೈಕ ಪುತ್ರ ಕ್ಯಾಪ್ಟನ್ ಪ್ರಾಂಜಲ್ ದೇಶ ಸೇವೆ ಸಂದರ್ಭ ಹುತಾತ್ಮರಾದರು. ಈ ಮೂಲಕ ಜನ ಮಾನಸದಲ್ಲೂ ಉಳಿದು ಹೋಗಿದ್ದಾರೆ.

ಅವರ ಬಾಲ್ಯದ ದಿನಗಳು, ಅವರು ಆಡುತ್ತಿದ್ದ ಮಾತುಗಳು, ಚಟುವಟಿಕೆಗಳನ್ನು ಗೆಳೆಯರು ಹಲವರು ಹಂಚಿಕೊಂಡಿದ್ದಾರೆ. ನಿಜಕ್ಕೂ ಪ್ರಾಂಜಲ ಮನಸಿನಿಂದಲೇ ದೇಶ ಸೇವೆಗೆ ಹೋದ ಪ್ರಾಂಜಲ್‌ ಅವರ ಬಾಲ್ಯದ ಕ್ಷಣಗಳನ್ನು ಆಲಿಸಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಚಾರಣಪ್ರಿಯರೂ ಆಗಿದ್ದರು

ಎಳವೆಯಲ್ಲಿ ಅವರು ಎಂ.ಆರ್.ಪಿ.ಎಲ್. ಬಳಿಯ ಡಿಪಿಎಸ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸಹಪಾಠಿಗಳೊಂದಿಗೆ ಬೆರೆಯಲು ವಾಟ್ಸಾಪ್ ಬಳಗ ರಚಿಸಿಕೊಂಡಿದ್ದರು. ತಾನು ಕಲಿತ ಶಾಲೆಯ ರೀಯೂನಿಯನ್ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದರು ಎಂದು ಪ್ರಾಂಜಲ್ ಸಹಪಾಠಿಗಳು ಸ್ಮರಿಸಿಕೊಳ್ಳುತ್ತಾರೆ.

ದೇಶಸೇವೆ ಸಂದರ್ಭ ವೀರಮರಣವನ್ನಪ್ಪಿದ ಕ್ಯಾ. ಪ್ರಾಂಜಲ್ ಎಳವೆಯಲ್ಲೇ ಚಾರಣಪ್ರಿಯರೂ ಆಗಿದ್ದರು.ಈ ಕುರಿತು ಚಾರಣಿಗ ಹಾಗೂ ಪರಿಸರವಾದಿ ದಿನೇಶ್ ಹೊಳ್ಳ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕೆಲವು ನೆನಪುಗಳು ತುಂಬಾ ಮಧುರವಾಗಿರುತ್ತವೆ, ಹಿಂದೊಮ್ಮೆ ನಮ್ಮ ಜೊತೆ ಚಾರಣಕ್ಕೆ ಬಂದವರನ್ನು ಮತ್ತು ಆ ದಿನಗಳನ್ನು ಯೋಚಿಸಿದರೆ ಅದು ಮರೆಯಲಾಗದ ದಿನಗಳು. 2008 ರಲ್ಲಿ ನಮ್ಮ ಜೊತೆ ದೊಡ್ಡೇರಿಬೆಟ್ಟಕ್ಕೆ ಚಾರಣಕ್ಕೆ ಬಂದಿರುವ ಕ್ಯಾಪ್ಟನ್ ಪ್ರಾಂಜಲ್ ನಿನ್ನೆ ಕಾಶ್ಮೀರ ದಲ್ಲಿ ದೇಶ ಸೇವೆ ಮಾಡುತ್ತಿರುವಾಗ ಹತ್ಯೆಯಾದರೆಂಬ ಸುದ್ದಿ ತುಂಬಾ ನೋವನ್ನು ನೀಡಿತು. ನಮ್ಮ ದೇಶದ ಯೋಧರೇ ನಮ್ಮ ದೇಶದ ಬಹು ದೊಡ್ಡ ಸಂಪತ್ತು.ಕ್ಯಾಪ್ಟನ್ ಪ್ರಾಂಜಲ್ ಮರೆಯಲಾಗದ ನೆನಪುಗಳ ಸಂಕೀರ್ಣ...ಚಿರಸ್ಮರಣೆ.’’ ಎಂದು ಬರೆದಿರುವ ಹೊಳ್ಳ, ಪ್ರಾಂಜಲ್ ಚಾರಣಕ್ಕೆ ಆಗಮಿಸಿದ ಸಂದರ್ಭದ ನೆನಪುಗಳ ಫೊಟೋಗಳನ್ನು ಹಾಕಿದ್ದಾರೆ.

ಸ್ಕೌಟ್ಸ್ ನಲ್ಲಿ ಸಕ್ರಿಯ, ದೇಶಸೇವೆಯ ಛಲ

ಚಿಕ್ಕಂದಿನಲ್ಲೇ ಪ್ರಾಂಜಲ್ ಕಬ್ಸ್, ಬಳಿಕ ಸ್ಕೌಟ್ ನಲ್ಲಿ ಸಕ್ರಿಯರಯರಾಗಿದ್ದವರು. ದೇಶಸೇವೆ ಮಾಡಬೇಕು ಎಂಬ ಛಲ ಹುಟ್ಟಿನಿಂದಲೇ ಬಂದಿತ್ತು ಎಂದು ಅವರ ಸಹಪಾಠಿಗಳು ನೆನಪಿಸಿಕೊಳ್ಳುತ್ತಾರೆ. ಚುರುಕುಮತಿಯಾಗಿದ್ದ ಪ್ರಾಂಜಲ್, ಸ್ಕೌಟ್ಸ್ ಮೂಲಕ ಶಿಸ್ತು ಹಾಗೂ ಗುರಿಯನ್ನು ಕಂಡುಕೊಂಡು ಮುಂದಿದ್ದರು. ಸೈನ್ಯ ಸೇರುವ ಕನಸು ಎಳವೆಯಲ್ಲೇ ಹುಟ್ಟಿಕೊಂಡಿತ್ತು.

ಲಕ್ಷ್ಯ ಸಿನಿಮಾದ ಹಾಡು ಪ್ರಾಂಜಲ್ ಗೆ ತುಂಬಾ ಇಷ್ಟವಾಗಿತ್ತು ಎಂದು ಸ್ನೇಹಿತರು ಹೇಳುತ್ತಾರೆ. ಈ ಸಿನಿಮಾ ನೋಡಿಕೊಂಡೇ ಬೆಳೆದಿದ್ದ ಪ್ರಾಂಜಲ್ ಸೈನಿಕನಾಗುವ ಆಸೆಯನ್ನು ಸ್ನೇಹಿತರಲ್ಲಿ ವ್ಯಕ್ತಪಡಿಸಿದ್ದರು. ಕೊನೆಗೆ ಆ ಆಸೆಯೂ ಈಡೇರಿತ್ತು.

ಕಲಿತ ಶಾಲೆಗೆ ರಜೆ

ಮಂಗಳೂರಿನ ಡಿಪಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, (ಸುರತ್ಕಲ್ ಸಮೀಪ ಕುತ್ತೆತ್ತೂರು) ಶಾಲೆಯನ್ನು ಮರೆತಿರಲಿಲ್ಲ. ಊರಿಗೆ ಬಂದಾಗಲೆಲ್ಲಾ ಶಾಲೆಗೆ ಭೇಟಿ ನೀಡುತ್ತಿದ್ದರು. ಕಳೆದ ಜೂನ್ ತಿಂಗಳಲ್ಲಿ ತಂದೆ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದಾಗಲೂ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದರು. ಹೀಗಾಗಿ ಪ್ರಾಂಜಲ್ ಹುತಾತ್ಮರಾದ ಸಂದರ್ಭ ಶಾಲೆಗೆ ರಜೆ ನೀಡಲಾಗಿತ್ತು.

( ವಿಶೇಷ ವರದಿ: ಹರೀಶ್‌ ಮಾಂಬಾಡಿ. ಮಂಗಳೂರು)

ಇದನ್ನೂ ಓದಿರಿ

    ಹಂಚಿಕೊಳ್ಳಲು ಲೇಖನಗಳು