ಕನ್ನಡ ಸುದ್ದಿ  /  ಜೀವನಶೈಲಿ  /  ನಾಸಾದಲ್ಲಿ ಅಕ್ಷತಾ ಕೃಷ್ಣಮೂರ್ತಿ ಅಪರೂಪದ ಸಾಧನೆ; ಮಂಗಳನಲ್ಲಿ ರೋವರ್ ನಿರ್ವಹಿಸಿದ ಮೊದಲ ಭಾರತೀಯ ವಿಜ್ಞಾನಿಯ ಲೈಫ್​ ಜರ್ನಿ ಹೀಗಿತ್ತು

ನಾಸಾದಲ್ಲಿ ಅಕ್ಷತಾ ಕೃಷ್ಣಮೂರ್ತಿ ಅಪರೂಪದ ಸಾಧನೆ; ಮಂಗಳನಲ್ಲಿ ರೋವರ್ ನಿರ್ವಹಿಸಿದ ಮೊದಲ ಭಾರತೀಯ ವಿಜ್ಞಾನಿಯ ಲೈಫ್​ ಜರ್ನಿ ಹೀಗಿತ್ತು

Reshma HT Kannada

Dec 07, 2023 10:43 AM IST

ನಾಸಾದಲ್ಲಿ ಸಾಧನೆ ಮಾಡಿದ ಭಾರತದ ಅಕ್ಷತಾ ಕೃಷ್ಣಮೂರ್ತಿ

    • ಡಾ. ಅಕ್ಷತಾ ಕೃಷ್ಣಮೂರ್ತಿ ಮಂಗಳ ಗ್ರಹದ ಪರ್ಸೆವೆರೆನ್ಸ್‌ ರೋವರ್‌ ಅನ್ನು ನಿರ್ವವಹಿಸುವ ಮೊದಲ ಭಾರತದ ಪ್ರಜೆಯಾಗಿದ್ದಾರೆ. ಪ್ರಸ್ತುತ ನಾಸಾ-ಇಸ್ರೊ ಸಿಂಥೆಟಿಕ್‌ ಅಪಾರ್ಚರ್‌ ರಾಡಾರ್‌ಗಾಗಿ ಮಿಷನ್‌ ಸೈನ್ಸ್‌ ಫೇಸ್‌ನ ಲೀಡ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾಸಾದಲ್ಲಿ ಸಾಧನೆ ಮಾಡಿದ ಭಾರತದ ಅಕ್ಷತಾ ಕೃಷ್ಣಮೂರ್ತಿ
ನಾಸಾದಲ್ಲಿ ಸಾಧನೆ ಮಾಡಿದ ಭಾರತದ ಅಕ್ಷತಾ ಕೃಷ್ಣಮೂರ್ತಿ (Instagram )

ಬಾಹಾಕ್ಯಾಶ ವಿಭಾಗದಲ್ಲಿ ಈಗಾಗಲೇ ಹಲವು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಬಾಹ್ಯಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ಭಾರತೀಯ ಹೆಸರು ಅಗ್ರಸ್ಥಾನದಲ್ಲಿದೆ. ಇದೀಗ ಭಾರತೀಯರೊಬ್ಬರು ಇನ್ನೊಂದು ಪ್ರಮುಖ ಬಾಹ್ಯಾಕಾಶ ಕ್ಷೇತ್ರ ವಿಭಾಗದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ನಾಸಾ ವಿಜ್ಞಾನಿಗಳು ಸದ್ಯ ಪ್ರಾಚೀನ ಜೀವನದ ಕುರುಹುಗಳನ್ನು ಹುಡುಕುತ್ತಿದ್ದಾರೆ. ಮಂಗಳದಲ್ಲಿ ಜೀವಿಗಳು ವಾಸವಿದ್ದ ಬಗ್ಗೆ ನಾಸಾ ಅಧ್ಯಯನ ನಡೆಸುತ್ತಿದೆ. ಪರ್ಸೆವೆರೆನ್ಸ್‌ ರೋವರ್‌ ಮೂಲಕ ಮಂಗಳ ಗ್ರಹದಲ್ಲಿ ಬಂಡೆಗಳ ಮಾದರಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ ನಾಸಾ. ಈ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರು ಡಾ. ಅಕ್ಷತಾ ಕೃಷ್ಣಮೂರ್ತಿ. ರೋವರ್‌ ಅನ್ನು ನಿರ್ವಹಿಸಿದ ಮೊದಲ ಭಾರತೀಯ ಪ್ರಜೆ ಇವರು. 13 ವರ್ಷಗಳ ಹಿಂದೆ ಉನ್ನತ ಅಧ್ಯಯನಕ್ಕಾಗಿ ಇವರ ಅಮೆರಿಕಕ್ಕೆ ತೆರಳಿದ್ದರು. ಬಾಹಾಕ್ಯಾಶ ವಿಜ್ಞಾನದಲ್ಲಿ ವಿಭಾಗದಲ್ಲಿ ಈಕೆ ತನ್ನ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಹಲವು ಕಷ್ಟಗಳನ್ನು ಎದುರಿಸಿದ್ದಾರೆ.

ʼನಾನು 13ವರ್ಷಗಳ ಹಿಂದೆ ಏನೂ ಇಲ್ಲದೆ ಕೇವಲ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ಬಂದಿದ್ದೆ. ಆಗಲೂ ನನಗಿದ್ದಿದ್ದು ನಾಸಾದಲ್ಲಿ ಕೆಲಸ ಮಾಡುವ ಹಾಗೂ ಮಂಗಳ ಗ್ರಹದಲ್ಲಿ ಸೈನ್ಸ್‌ ಅಂಡ್‌ ರೊಬೊಟಿಕ್‌ ಕಾರ್ಯಚರಣೆಯನ್ನು ಮುನ್ನೆಡಸುವ ಕನಸು. ಆದರೆ ನಾನು ಭೇಟಿ ಮಾಡಿದ ಪ್ರತಿಯೊಬ್ಬರೂ ವೀಸಾ ಪಡೆದ ವಿದೇಶದಿಂದ ಬರುವವರಿಗೆ ಇದು ಅಸಾಧ್ಯ ಎಂದೇ ಹೇಳುತ್ತಿದ್ದರು. ಕೆಲವರು ಪ್ಲಾನ್‌ ಬಿ ಇರಬೇಕು ಅಥವಾ ಸಂಪೂರ್ಣವಾಗಿ ಈ ಕ್ಷೇತ್ರವನ್ನೇ ತ್ಯಜಿಸಬೇಕುʼ ಎಂದೆಲ್ಲಾ ಹೇಳುತ್ತಿದ್ದರು ಎಂದು ಅಕ್ಷತಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಬರೆದಿದ್ದಾರೆ.

ಈಕೆ ಎಂಐಟಿಯಲ್ಲಿ ಡಾಕ್ಟರೇಟ್‌ ಪಡೆಯುವ ಮೊದಲು ಇಲಿನಾಯ್ಸ್‌ ಅರ್ಬಾನಾ ಚಾಂಪೇನ್‌ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಕೆಲವು ದಿನಗಳ ಕಾಲ ಇವರು ಎಂಐಟಿಯಲ್ಲಿ ಕೆಲಸ ಮಾಡಿದ್ದರು. ನಾಸಾದಲ್ಲಿ ಪೂರ್ಣವಧಿಗೆ ಕೆಲಸ ಗಿಟ್ಟಿಸಿಕೊಳ್ಳಲು ನಾನು 100 ಬಾಗಿಲುಗಳನ್ನು ಬಡಿರಬಹುದುʼ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅಕ್ಷತಾ ಅವರ ಲಿಂಕ್ಡ್‌ಇನ್‌ ಪ್ರೊಫೈಲ್‌ ಪ್ರಕಾರ ಡಾ. ಕೃಷ್ಣಮೂರ್ತಿ ಅವರು ನಾಸಾದ ಜೆಟ್‌ ಪ್ರೊಪಲ್ಷನ್‌ ಲ್ಯಾಬ್‌ನಲ್ಲಿ ಪ್ರಧಾನ ತನಿಖಾಧಿಕಾರಿ ಮತ್ತು ಮಿಷನ್‌ ಸೈನ್ಸ್‌ ಹಂತದ ಮುಖ್ಯಸ್ಥರಾಗಿದ್ದಾರೆ. ಅವರು NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್‌ಗೆ ಮಿಷನ್ ಸೈನ್ಸ್ ಹಂತದ ಪ್ರಮುಖರಾಗಿದ್ದಾರೆ ಮತ್ತು ಮಾರ್ಸ್ 2020 ಪರ್ಸೆವೆರೆನ್ಸ್ ರೋವರ್ ಸರ್ಫೇಸ್ ಆಪರೇಷನ್ಸ್ ಸ್ಯಾಂಪ್ಲಿಂಗ್ ಮತ್ತು ಕ್ಯಾಶಿಂಗ್ ತಂಡದಲ್ಲಿ ರೊಬೊಟಿಕ್ಸ್ ಸಿಸ್ಟಮ್ಸ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.

ʼಇಂದು, ನಾನು ಭೂಮಿಗೆ ಮರಳಿ ತರಲು ಮಾದರಿಗಳನ್ನು ಸಂಗ್ರಹಿಸುವ ಪರ್ಸೆವೆರೆನ್ಸ್ ರೋವರ್ ಸೇರಿದಂತೆ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತೇನೆ. ಯಾವುದೇ ಕನಸಾಗಲೇ ಎಂದಿಗೂ ಅದು ಅಸಾಧ್ಯವೇನಲ್ಲ, ಜೊತೆಗೆ ಕನಸು ಕಾಣುವುದು ಹುಂಬತನವೂ ಅಲ್ಲ. ನಿಮ್ಮ ಮೇಲೆ ನೀವು ನಂಬಿಕೆ ಇರಿಸಬೇಕು. ಕನಸುಗಳನ್ನು ತೆರೆದು, ಅದರ ಮೇಲೆ ಕೆಲಸ ಮಾಡುತ್ತಿರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನಿಮ್ಮಿಷ್ಟದ ವೃತ್ತಿಯಲ್ಲಿ ನಿಮ್ಮ ದೃಢವಾಗ ಹೆಜ್ಜೆ ಇರಿಸುವುದು ಖಂಡಿತʼ ಎಂದು ಅವರು ಹೇಳುತ್ತಾರೆ.

SSPI ಸೊಸೈಟಿ ಆಫ್ ಸ್ಯಾಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಪ್ರೊಫೈಲ್ ಡಾ.ಕೃಷ್ಣಮೂರ್ತಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳು ಮತ್ತು ಫೆಲೋಶಿಪ್‌ಗಳನ್ನು ಗೆದ್ದಿದ್ದಾರೆ ಎಂಬುದನ್ನು ತಿಳಿಸುತ್ತದೆ.

ಪ್ರಮುಖ ವೈಜ್ಞಾನಿಕ ಸಂಶೋಧನೆಗಳನ್ನು ಸಾಧಿಸಲು ಕ್ಯೂಬ್‌ಸ್ಯಾಟ್‌ನ ಚತುರ ಬಳಕೆಗಾಗಿ ನಾಸಾ ಹಾನರ್ ಗ್ರೂಪ್ ಅಚೀವ್‌ಮೆಂಟ್ ಪ್ರಶಸ್ತಿ, ಉದಯೋನ್ಮುಖ ಬಾಹ್ಯಾಕಾಶ ನಾಯಕ ಪ್ರಶಸ್ತಿ ಮತ್ತು 2017 ರಲ್ಲಿ ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್‌ನಿಂದ ಲುಯಿಗಿ ಜಿ ನ್ಯಾಪೊಲಿಟಾನೊ ಪ್ರಶಸ್ತಿ ಮುಂತಾದುವನ್ನು ಈಕೆ ಪಡೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು