ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mahindra Xuv300: ಎಕ್ಸ್‌ಯುವಿ 300 ಕಾರಿನ ಎರಡು ಅಗ್ಗದ ಆವೃತ್ತಿಗಳನ್ನು ಪರಿಚಯಿಸಿದ ಮಹೀಂದ್ರ, ದರ 7.99 ಲಕ್ಷ ರೂಪಾಯಿಯಿಂದ ಆರಂಭ

Mahindra XUV300: ಎಕ್ಸ್‌ಯುವಿ 300 ಕಾರಿನ ಎರಡು ಅಗ್ಗದ ಆವೃತ್ತಿಗಳನ್ನು ಪರಿಚಯಿಸಿದ ಮಹೀಂದ್ರ, ದರ 7.99 ಲಕ್ಷ ರೂಪಾಯಿಯಿಂದ ಆರಂಭ

Praveen Chandra B HT Kannada

Aug 11, 2023 11:58 AM IST

ಎಕ್ಸ್‌ಯುವಿ 300 ಕಾರಿನ ಎರಡು ಅಗ್ಗದ ಆವೃತ್ತಿಗಳನ್ನು ಪರಿಚಯಿಸಿದ ಮಹೀಂದ್ರ

    • Mahindra XUV300 variants: ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಎಕ್ಸ್‌ಯುವಿ 300 ಕಾರಿನ ಎರಡು ಆರಂಭಿಕ ಆವೃತ್ತಿಗಳನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಹತ್ತು ಲಕ್ಷ ರೂಪಾಯಿಗಿಂತ ಕಡಿಮೆ ದರದ ಎಸ್‌ಯುವಿ ಖರೀದಿಸಲು ಬಯಸುವವರಿಗೆ ಇದು ಸೂಕ್ತವಾಗಿದೆ.
ಎಕ್ಸ್‌ಯುವಿ 300 ಕಾರಿನ ಎರಡು ಅಗ್ಗದ ಆವೃತ್ತಿಗಳನ್ನು ಪರಿಚಯಿಸಿದ ಮಹೀಂದ್ರ
ಎಕ್ಸ್‌ಯುವಿ 300 ಕಾರಿನ ಎರಡು ಅಗ್ಗದ ಆವೃತ್ತಿಗಳನ್ನು ಪರಿಚಯಿಸಿದ ಮಹೀಂದ್ರ

ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಎಕ್ಸ್‌ಯುವಿ 300 ಕಾರಿನ ಎರಡು ಆರಂಭಿಕ ಆವೃತ್ತಿಗಳನ್ನು ಪರಿಚಯಿಸಿದೆ. W2 ಪೆಟ್ರೋಲ್‌ ಆವೃತ್ತಿಗೆ 7.99 ಲಕ್ಷ ರೂಪಾಯಿ ಇದೆ. ಇನ್ನೊಂದು ಟರ್ಬೊ ಸ್ಪೋರ್ಟ್‌ ಟಿಎಂ ಸರಣಿಯ W4 ಕಾರಿನ ದರ 9.29 ಲಕ್ಷ ರೂಪಾಯಿ ಇದೆ. ಇವೆರಡೂ ಎಕ್ಸ್‌ಶೋರೂಂ ದರ. ಹತ್ತು ಲಕ್ಷ ರೂಪಾಯಿಗಿಂತ ಕಡಿಮೆ ಎಕ್ಸ್‌ ಶೋರೂಂ ದರದಲ್ಲಿ ಇವೆರಡು ಕಾರುಗಳು ದೊರಕುತ್ತವೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

ಈ ಎರಡು ಕಾರುಗಳಲ್ಲಿMahindra XUV300 W4 ಆವೃತ್ತಿಯು ಸ್ಪೋರ್ಟಿಯಾಗಿದೆ. ಇದು 1.2 ಲೀಟರ್‌ನ ಹೈ ಪರ್ಫಾಮೆನ್ಸ್‌ ಎಂಎಸ್ಟಾಲಿನ್‌ ಟಿಜಿಡಿಐ ಪೆಟ್ರೊಲ್‌ ಎಂಜಿನ್‌ ಹೊಂದಿದೆ. ಇದಕ್ಕೂ ಮೊದಲು ಡಬ್ಲ್ಯು6 ಬಳಿಕದ ಎಂಜಿನ್‌ಗಳಲ್ಲಿ ಎಕ್ಸ್‌ಯುವಿ 300 ದೊರಕುತ್ತಿತ್ತು. ನೂತನ W4 ಆವೃತ್ತಿಯು ಕೇವಲ 5 ಸೆಕೆಂಡ್‌ನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಇದು 230 ಎನ್‌ಎಂ ಪೀಕ್‌ ಟಾರ್ಕ್‌ ಮತ್ತು 96 ಕಿಲೋವಾಟ್‌ ಪವರ್‌ ಬಿಡುಗಡೆ ಮಾಡುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ w4 ಆವೃತ್ತಿಗಳಲ್ಲಿ ಸನ್‌ರೂಪ್‌ ಕೂಡ ಇದೆ.

ಇನ್ನೊಂದು ಕಡಿಮೆ ದರದ ಎಕ್ಸ್‌ಯುವಿ ಹೇಗಿದೆ ನೋಡೋಣ. W2 ಆವೃತ್ತಿಯ ಆರಂಭಿಕ ದರ 7.99 ಲಕ್ಷ ರೂಪಾಯಿ. ಇದಕ್ಕೆ ಈ ಮೊದಲು 8.65 ಲಕ್ಷ ರೂಪಾಯಿ ಇತ್ತು. ಡಬ್ಲ್ಯು8 ಮಾದರಿಯ ಟರ್ಬೊ ಡಿಸೇಲ್‌ನ ಆಟೋಶಿಫ್ಟ್‌ ಗಿಯರ್‌ ಆವೃತ್ತಿಗೆ 14.59 ಲಕ್ಷ ರೂಪಾಯಿವರೆಗೆ ಇದೆ.

ನೂತನ ಮಹೀಂದ್ರ ಎಕ್ಸ್‌ಯುವಿ 300 ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ಗಳಲ್ಲಿ ಲಭ್ಯ. ಇವು ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗಿಯರ್‌ ಆಯ್ಕೆಗಳಲ್ಲಿ ದೊರಕುತ್ತದೆ. ಕಂಪನಿಯ ಪ್ರಕಾರ ಇದು ತನ್ನ ಸೆಗ್ಮೆಂಟ್‌ನಲ್ಲಿಯೇ ಅತ್ಯಧಿಕ ಇಂಧನ ದಕ್ಷತೆ ಒದಗಿಸುತ್ತದೆ. ಇದರಲ್ಲಿ ಎಲ್ಲಾ ನಾಲ್ಕು ಚಕ್ರಗಳಿಗೂ ಡಿಸ್ಕ್‌ ಬ್ರೇಕ್‌ಗಳಿವೆ. ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲು ಈ ರೀತಿ ನಾಲ್ಕು ಚಕ್ರಗಳಿಗೆ ಡಿಸ್ಕ್‌ ಬ್ರೇಕ್‌ ದೊರಕಿದೆ. ಡ್ಯೂಯೆಲ್‌ ಝೋನ್‌ ಆಟೋಮ್ಯಾಟಿಕ್‌ ಏಸಿ ಇದೆ. ಈ ಐದು ಸೀಟಿನ ಎಸ್‌ಯುವಿಯಲ್ಲಿ ವಿಶಾಲ ಕ್ಯಾಬಿನ್‌ ಸ್ಥಳಾವಕಾಶವಿದೆ.

ಮಹೀಂದ್ರದಿಂದ ಹಲವು ಎಸ್‌ಯುವಿ ಕಾರುಗಳು

ಮುಂದಿನ ದಿನಗಳಲ್ಲಿ ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಹಲವು ಎಸ್‌ಯುವಿಗಳನ್ನು ಪರಿಚಯಿಸಲು ಯೋಜಿಸಿದೆ. ಮುಂದಿನ ಐದು ವರ್ಷಗಳಲ್ಲಿ ಮಹೀಂದ್ರ ಕಂಪನಿಯ ಒಟ್ಟು ಎಸ್‌ಯುವಿಗಳಲ್ಲಿ ಶೇಕಡ 20-30 ಎಲೆಕ್ಟ್ರಿಕ್‌ ಎಸ್‌ಯುವಿಗಳನ್ನು ಹೊಂದುವ ನಿರೀಕ್ಷೆಯಿದೆ. ಇವುಗಳಲ್ಲಿ ನಾಲ್ಕು ಎಸ್‌ಯುವಿಗಳು 2024- 2026ರ ನಡುವೆ ರಸ್ತೆಗಿಳಿಯಲಿದೆ. ಎಕ್ಸ್‌ಯುವಿ ಮತ್ತು ಬಿಇ ಎಂಬ ಎರಡು ಬ್ರಾಂಡ್‌ಗಳಡಿ ಐದು ಎಲೆಕ್ಟ್ರಿಕ್‌ ಎಸ್‌ಯುವಿ ಮಾಡೆಲ್‌ಗಳನ್ನು ರಸ್ತೆಗಿಳಿಸಲು ಮಹೀಂದ್ರ ಯೋಜಿಸಿದೆ. ಹಳೆಯ ಎಸ್‌ಯುವಿಗಳ ಎಲೆಕ್ಟ್ರಿಕ್‌ ರೂಪಾಂತರವು ಎಕ್ಸ್‌ಯುವಿ ಬ್ರಾಂಡ್‌ನಡಿ ಆಗಮಿಸಲಿದೆ. ಹೊಚ್ಚ ಹೊಸ ಎಲೆಕ್ಟ್ರಿಕ್‌ ಎಸ್‌ಯುವಿಗಳು ಬಿಇ ಬ್ರಾಂಡ್‌ನಡಿ ರಸ್ತೆಗಿಳಿಯಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ