ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶೇಕಡಾ 88 ರಷ್ಟು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬ್ಯಾಂಕ್‌ಗಳು; ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ

ಶೇಕಡಾ 88 ರಷ್ಟು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬ್ಯಾಂಕ್‌ಗಳು; ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ

HT Kannada Desk HT Kannada

Aug 02, 2023 12:06 PM IST

ಶೇ.88 ರಷ್ಟು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬ್ಯಾಂಕ್‌ಗಳು; ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ.

    • 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ 03, ಜುಲೈ 2023 ರಿಂದ ಪ್ರಾರಂಭವಾಗಿದ್ದು ಇಲ್ಲಿಯವರೆಗೆ ಬ್ಯಾಂಕ್‌ಗಳು ಶೇ.88 ರಷ್ಟು ನೋಟುಗಳನ್ನು ಹಿಂಪಡೆದಿದೆ. ಈಗ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಕೇವಲ 0.42 ಲಕ್ಷ ಕೋಟಿ ರೂಪಾಯಿಗಳು ಮಾತ್ರ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶವಿರುತ್ತದೆ
ಶೇ.88 ರಷ್ಟು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬ್ಯಾಂಕ್‌ಗಳು; ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ.
ಶೇ.88 ರಷ್ಟು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಬ್ಯಾಂಕ್‌ಗಳು; ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ 19-05-2023 ರಂದು ಆದೇಶ ಹೊರಡಿಸಿತ್ತು. 19, ಮಾರ್ಚ್ 2023 ದಿನಾಂಕಕ್ಕೆ 3.62 ಲಕ್ಷ ಕೋಟಿ ಬೆಲೆಯ 2000 ರೂ ಮುಖ ಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. 19, ಮೇ 2023 ರ ವೇಳೆಗೆ ಇವುಗಳ ಸಂಖ್ಯೆ 3.56 ಲಕ್ಷ ಕೋಟಿ ರೂ.ಗಳಿಗೆ ಇಳಿದಿತ್ತು. 03, ಜುಲೈ 2023ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಪ್ರಕಟಣೆ ಹೊರಡಿಸಿತ್ತು.

ಟ್ರೆಂಡಿಂಗ್​ ಸುದ್ದಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಬ್ಯಾಂಕ್‌ಗಳು ನೀಡಿರುವ ಮಾಹಿತಿಯ ಪ್ರಕಾರ 31, ಜುಲೈ 2023 ರವರೆಗೆ ಹಿಂಪಡೆದಿರುವ ಚಲಾವಣೆಯಲ್ಲಿರುವ 2000 ರೂ ಮುಖಬೆಲೆಯ ನೋಟುಗಳ ಮೌಲ್ಯ 3.14 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಇದೇ ದಿನಾಂಕಕ್ಕೆ ಚಲಾವಣೆಯಲ್ಲಿರುವ 2000 ರೂ ಮುಖಬೆಲೆಯ ನೋಟುಗಳ ಮೌಲ್ಯ ಕೇವಲ 0.42 ಲಕ್ಷ ಕೋಟಿ ರೂ.ಗಳು ಮಾತ್ರ. 19, ಮೇ 2023ರಂದು ಚಲಾವಣೆಯಲ್ಲಿದ್ದ 2000 ರೂ ಮುಖ ಬೆಲೆಯ ನೋಟುಗಳಲ್ಲಿ ಶೇ.88ರಷ್ಟು ನೋಟುಗಳನ್ನು ಸಾರ್ವಜನಿಕರಿಂದ ಬ್ಯಾಂಕ್ ಗಳು ಹಿಂಪಡೆದಿವೆ. ಪ್ರಮುಖ ಬ್ಯಾಂಕ್ ಗಳು ನೀಡಿರುವ ಅಂಕಿಅಂಶಗಳ ಪ್ರಕಾರ ಶೇ.87ರಷ್ಟು ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣ ಇಡಲಾಗಿದೆ ಮತ್ತು ಉಳಿದ ಶೇ.13ರಷ್ಟು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ. ಸಾರ್ವಜನಿಕರು ಮುಂದಿನ ಎರಡು ತಿಂಗಳ ಅವಧಿಯನ್ನು ಬಳಸಿಕೊಂಡು 2000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಮನವಿ ಸುತ್ತೋಲೆ ಹೊರಡಿಸಿದೆ. 30, ಸೆಪ್ಟಂಬರ್ 2023 ರಂದು ರೂ.2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಕೊನೆಯ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ಒತ್ತಡವನ್ನು ಅನುಭವಿಸುವುದಕ್ಕೆ ಬದಲಾಗಿ ಈಗಲೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್ ಬಿಐ ಸಲಹೆ ನೀಡಿದೆ.

2023, ಮೇ 23 ರಿಂದ ಆರ್‌ಬಿಐ 2000 ರೂ. ಮುಖಬೆಲೆಯ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಇದಕ್ಕೆ ಯಾವುದೆ ನಿಯಮಗಳನ್ನು ಪಾಲಿಸುವ ಅವಶ್ಯಕತೆ ಇರಲಿಲ್ಲ. ಅರ್ಜಿ ಸಲ್ಲಿಸುವಿಕೆ, ಶುಲ್ಕ ಪಾವತಿ, ಗುರುತಿನ ಚೀಟಿ ತೋರಿಸುವ ಅವಶ್ಯಕತೆ ಇರಲಿಲ್ಲ. ಸುಗಮ ಮತ್ತು ಅಡಚಣೆ ರಹಿತವಾಗಿ ವಿನಿಮಯ ಪ್ರಕ್ರಿಯೆ ನಡೆಸಲು ಅಗತ್ಯ ಸಹಕಾರ ತೋರುವಂತೆ ಎಲ್ಲ ಬ್ಯಾಂಕ್ ಗಳ ಶಾಖೆಗಳಿಗೆ ಆರ್ ಬಿ ಐ ಸೂಚನೆ ನೀಡಿತ್ತು. ಒಂದು ಬಾರಿಗೆ ರೂ.20,000 ದವರೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗಲೂ ಇದೇ ನಿಯಮ ಜಾರಿಯಲ್ಲಿದೆ.

ಈ ಆದೇಶ ಜಾರಿಯಾದ ನಂತರ ಸಾರ್ವಜನಿಕರು ಸಣ್ಣಪುಟ್ಟ ವ್ಯವಹಾರಗಳಿಗೂ 2000 ರೂ. ಮುಖಬೆಲೆಯ ನೋಟುಗಳನ್ನು ನೀಡುತ್ತಿದ್ದರಿಂದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿತ್ತು ಮತ್ತು ಚಿಲ್ಲರೆ ಸಮಸ್ಯೆ ತಲೆದೋರುತ್ತಿತ್ತು. 2000 ರೂ. ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ನಂತರ ಬ್ಯಾಂಕ್ ಗಳಲ್ಲಿ ಠೇವಣ ಪ್ರಮಾಣ ಹೆಚ್ಚಳವಾಗಿದೆ. ವಿನಿಮಯಕ್ಕೆ ಬದಲಾಗಿ ಸಾರ್ವಜನಿಕರು ಬ್ಯಾಂಕ್ ಗಳಲ್ಲಿ ಠೇವಣ ಇಡುವ ಆಯ್ಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜುಲೈ 19ರವರೆಗೆ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಗಳ ಠೇವಣ ಪ್ರಮಾಣ 191.6 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬ್ಯಾಂಕುಗಳಲ್ಲಿನ ಠೇವಣ ಪ್ರಮಾಣ 6 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

2000 ರೂ ಮುಖಬೆಲೆಯ ನೊಟುಗಳನ್ನು 2016 ನವಂಬರ್ ತಿಂಗಳಲ್ಲಿ ದೇಶಕ್ಕೆ ಪರಿಚಯಿಸಲಾಗಿತ್ತು. ನೋಟು ಅಮಾನ್ಯೀಕರಣ ಮಾಡಿದ ಆ ಸಂದರ್ಭದಲ್ಲಿ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ಹಿಂಪಡೆದ ಕಾರಣ 2000 ರೂ. ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಲಾಗಿತ್ತು. ರೂ. 2000 ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಂದ ನಂತರ 2018ರಲ್ಲಿ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.

(ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ