ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Morgan Stanley: ಚೀನಾವನ್ನು ಕೆಳಮಟ್ಟಕ್ಕೆ ಇಳಿಸಿ ಭಾರತದ ರೇಟಿಂಗ್‌ ಹೆಚ್ಚಿಸಿದ ಮೋರ್ಗಾನ್ ಸ್ಟಾನ್ಲಿ, ಭಾರತಕ್ಕೆ ಈಗ ಓವರ್‌ವೈಟ್‌ ರೇಟಿಂಗ್‌

Morgan Stanley: ಚೀನಾವನ್ನು ಕೆಳಮಟ್ಟಕ್ಕೆ ಇಳಿಸಿ ಭಾರತದ ರೇಟಿಂಗ್‌ ಹೆಚ್ಚಿಸಿದ ಮೋರ್ಗಾನ್ ಸ್ಟಾನ್ಲಿ, ಭಾರತಕ್ಕೆ ಈಗ ಓವರ್‌ವೈಟ್‌ ರೇಟಿಂಗ್‌

Praveen Chandra B HT Kannada

Aug 03, 2023 11:53 AM IST

Morgan Stanley: ಚೀನಾವನ್ನು ಕೆಳಮಟ್ಟಕ್ಕೆ ಇಳಿಸಿ ಭಾರತದ ರೇಟಿಂಗ್‌ ಹೆಚ್ಚಿಸಿದ ಮೋರ್ಗಾನ್ ಸ್ಟಾನ್ಲಿ

    • Morgan Stanley Upgrades India: ಅಮೇರಿಕನ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿಯಾದ ಮೋರ್ಗಾನ್‌ ಸ್ಟಾನ್ಲಿಯು ಭಾರತಕ್ಕೆ ಉತ್ತಮ ಶ್ರೇಯಾಂಕ ನೀಡಿದೆ. ಇದೇ ಸಮಯದಲ್ಲಿ ಚೀನಾದ ಸ್ಟೇಟಸ್‌ ಅನ್ನು ಕೆಳಮಟ್ಟಕ್ಕೆ ಇಳಿಸಿದೆ.
Morgan Stanley: ಚೀನಾವನ್ನು ಕೆಳಮಟ್ಟಕ್ಕೆ ಇಳಿಸಿ ಭಾರತದ ರೇಟಿಂಗ್‌ ಹೆಚ್ಚಿಸಿದ ಮೋರ್ಗಾನ್ ಸ್ಟಾನ್ಲಿ
Morgan Stanley: ಚೀನಾವನ್ನು ಕೆಳಮಟ್ಟಕ್ಕೆ ಇಳಿಸಿ ಭಾರತದ ರೇಟಿಂಗ್‌ ಹೆಚ್ಚಿಸಿದ ಮೋರ್ಗಾನ್ ಸ್ಟಾನ್ಲಿ

ನವದೆಹಲಿ: ಭಾರತದ ಸ್ಥಿತಿಯನ್ನು ಅತಿತೂಕ ಅಥವಾ ಓವರ್‌ವೈಟ್‌ ಎಂದು ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟಾನ್ಲಿಯು ಬದಲಾಯಿಸಿದೆ. ಭಾರತವು ಹೊಂದಿರುವ ರಾಷ್ಟ್ರ ಸುಧಾರಣೆ ಮತ್ತು ಮ್ಯಾಕ್ರೋ-ಸ್ಟೆಬಿಲಿಟಿ ಅಜೆಂಡಾವು ಕ್ಯಾಪೆಕ್ಸ್ ಮತ್ತು ಲಾಭದ ದೃಷ್ಟಿಕೋನಕ್ಕೆ ಪೂರಕ ಎಂದು ಮೋರ್ಗಾನ್ ಸ್ಟಾನ್ಲಿ ಅಭಿಪ್ರಾಯಪಟ್ಟಿದೆ. ಅಮೆರಿಕವು ಎಎಎ ಸ್ಥಾನಮಾನವನ್ನು ಕಳೆದುಕೊಂಡಿರುವ ನಡುವೆಯೇ ಚೀನಾದ ಆರ್ಥಿಕ ಸ್ಟೇಟಸ್‌ ಅನ್ನು ಇಳಿಕೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ಭಾರತದ ಮ್ಯಾಕ್ರೋ ಸೂಚಕಗಳು ಚೇತರಿಸಿಕೊಳ್ಳುತ್ತವೆ. ಜಿಡಿಪಿಯು ಶೇಕಡ 6.2ಕ್ಕೆ ತಲುಪುವ ಹಾದಿಯಲ್ಲಿದೆ ಎಂದು ಮೋರ್ಗಾನ್ ಸ್ಟಾನ್ಲಿ ತಿಳಿಸಿದೆ. ನಮ್ಮ ಪ್ರಕ್ರಿಯೆಯಲ್ಲಿ ಭಾರತದ ಸ್ಥಿತಿಯು 6ರಿಂದ 1ಕ್ಕೆ ಏರಿದೆ. ಮಲ್ಟಿಪೋಲಾರ್ ವರ್ಲ್ಡ್ ಡೈನಾಮಿಕ್ಸ್ ಅನ್ನು ನಿಯಂತ್ರಿಸುವ ಭಾರತದ ಸಾಮರ್ಥ್ಯವು ಗಮನಾರ್ಹ ಪ್ರಯೋಜನವಾಗಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ತಿಳಿಸಿದೆ.

"ಭಾರತವು ಈಗ ಉದಯೋನ್ಮುಖ ಮಾರುಕಟ್ಟೆಗಳಲ್ಲಿ (ಎಮರ್ಜಿಂಗ್‌ ಮಾರ್ಕೆಟ್ಸ್‌) ಅಗ್ರ ಶ್ರೇಯಾಂಕದ ಮಾರುಕಟ್ಟೆಯಾಗಿದೆ. ವಿದೇಶಿ ಒಳಹರಿವು, ಸ್ಥೂಲ ಸ್ಥಿರತೆ ಮತ್ತು ಸಕಾರಾತ್ಮಕ ಗಳಿಕೆಯ ದೃಷ್ಟಿಕೋನದಿಂದಾಗಿ ಭಾರತವನ್ನು ಆರನೇ ಸ್ಥಾನದಿಂದ ಅಗ್ರ ಶ್ರೇಯಾಂಕಕ್ಕೆ ಏರಿಸಲಾಗಿದೆ" ಎಂದು ಮೋರ್ಗಾನ್‌ ಸ್ಟ್ಯಾನ್ಲಿ ತಿಳಿಸಿದೆ.

ಇತರೆ ಪ್ರಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತವು ಪ್ರತಿ ಷೇರಿಗೆ (ಇಪಿಎಸ್‌) ಉತ್ತಮವಾದ ನಿರಂತರ ಡಾಲರ್‌ ಗಳಿಕೆ ಸಾಮರ್ಥ್ಯ ಹೊಂದಿದೆ ಎಂದು ವರದಿಯು ತೋರಿಸಿದೆ. ಭಾರತದ ಯುವ ಜನಸಂಖ್ಯೆಯಿಂದ ಈ ಸಾಮರ್ಥ್ಯ ಹೆಚ್ಚಾಗಿದೆ. ಇದು ಈಕ್ವಿಟಿ ಒಳಹರಿವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಇದಲ್ಲದೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಪೋರ್ಟ್‌ಫೋಲಿಯೊ ವಿಷಯಗಳಲ್ಲಿ ಭಾರತವು ಸಕಾರಾತ್ಮಕ ಪ್ರವೃತ್ತಿ ಹೊಂದಿರುವುದನ್ನು ಮೋರ್ಗಾನ್ ಸ್ಟಾನ್ಲಿ ಗಮನಿಸಿದೆ. ಭಾರತವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿದೆ ಎಂದು ವರದಿ ತಿಳಿಸಿದೆ.

ಇದೇ ಸಮಯದಲ್ಲಿ ಚೀನಾದ ರೇಟಿಂಗ್‌ ಅನ್ನು ಸಮಾನ ತೂಕಕ್ಕೆ ಕಡಿತಗೊಳಿಸಿದೆ. ಹೂಡಿಕೆದಾರರು ಲಾಭವನ್ನು ಪಡೆಯಲು ಸರಕಾರದ ಉತ್ತೇಜನಕ ನೀತಿಗಳಿಂದ ಉಂಟಾಗುವ ರಾಲಿಗಳಿಂದ ಲಾಭ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ಇತ್ತೀಚೆಗೆ ಚೀನಾವು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಮತ್ತು ಖಾಸಗಿ ವಲಯದ ಪುನಶ್ಚೇತನಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಆದರೆ, ಸರಕಾರವು ಹಂತಹಂತದಲ್ಲಿ ಈ ಕ್ರಮಗಳನ್ನು ಜಾರಿಗೊಳಿಸುವ ಸೂಚನೆಯಿದೆ.

ಅಮೆರಿಕದ ಆರ್ಥಿಕತೆಯ ಕುರಿತು ರೇಟಿಂಗ್‌ ಸಂಸ್ಥೆಯೊಂದು ನೀಡಿದ ವರದಿಯು ಜಾಗತಿಕ ಷೇರುಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿದೆ. ಫಿಚರ್‌ ರೇಟಿಂಗ್‌ ಅಮೆರಿಕದ ಹಣಕಾಸು ಸ್ಥಿತಿಯ ಕುರಿತು ರೇಟಿಂಗ್‌ ಕಡಿಮೆ ಮಾಡಿರುವುದು ಭಾರತದ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಅಮೆರಿಕದ ಸಾವರಿನ್‌ ಕ್ರೆಡಿಟ್‌ ಗ್ರೇಡ್‌ ಅನ್ನು ಫಿಚ್‌ ರೇಟಿಂಗ್‌ ಎಎಎಯಿಂದ ಎಎಪ್ಲಸ್‌ಗೆ ಇಳಿಕೆ ಮಾಡಿದೆ. ಇದರಿಂದ ಮುಂದಿನ ಮೂರು ವರ್ಷದಲ್ಲಿ ಅಮೆರಿಕಕ್ಕೆ ಹಣಕಾಸು ತೊಂದರೆ ಉಂಟಾಗಬಹುದು ಎಂದು ಸೂಚನೆ ನೀಡಿದೆ. 2021ರಲ್ಲೂ ಹೀಗೆಯೇ ಆಗಿತ್ತು. ಆಗ ಸ್ಟಾಂಡರ್ಡ್‌ ಆಂಡ್‌ ಪೂವರ್‌ ರೇಟಿಂಗ್‌ ಡೌನ್‌ಗ್ರೇಡ್‌ ಮಾಡಲಾಗಿತ್ತು. ಸರಕಾರದ ಸಾಲ ತೆಗೆದುಕೊಳ್ಳುವ ಮಿತಿ ಕಡಿಮೆಯಾದ ಪರಿಣಾಮ ಈ ರೀತಿ ಡೌನ್‌ ಗ್ರೇಡ್‌ ಮಾಡಲಾಗಿತ್ತು.

ಮೋರ್ಗಾನ್ ಸ್ಟಾನ್ಲಿಯು ಅಮೇರಿಕನ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿಯಾಗಿದ್ದು, ನ್ಯೂಯಾರ್ಕ್ ನಗರದ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ 1585 ಬ್ರಾಡ್‌ವೇನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 41 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ