ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಆರ್‌ಬಿಐ ಹಣಕಾಸು ನೀತಿ ಕುರಿತು ಆತಂಕ, ಷೇರುಪೇಟೆ ಮಂದಗತಿಯಲ್ಲಿ ಆರಂಭ, ಷೇರು ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

Opening Bell: ಆರ್‌ಬಿಐ ಹಣಕಾಸು ನೀತಿ ಕುರಿತು ಆತಂಕ, ಷೇರುಪೇಟೆ ಮಂದಗತಿಯಲ್ಲಿ ಆರಂಭ, ಷೇರು ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

Praveen Chandra B HT Kannada

Aug 10, 2023 09:32 AM IST

ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟವಾಗಲಿರುವುದರಿಂದ ಷೇರುಪೇಟೆ ಮಂದಗತಿಯ ಆರಂಭಕ್ಕೆ ಮುಂದಾಗಿದೆ.

    • Stock Market Opening Bell: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು2024ರ ಹಣಕಾಸು ವರ್ಷದ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದಾರೆ. ಭಾರತದ ಷೇರುಪೇಟೆ ಇಂದು ಮಂದಗತಿಯಲ್ಲಿ ವಹಿವಾಟು ಆರಂಭಿಸುತ್ತಿದೆ.
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟವಾಗಲಿರುವುದರಿಂದ ಷೇರುಪೇಟೆ ಮಂದಗತಿಯ ಆರಂಭಕ್ಕೆ ಮುಂದಾಗಿದೆ.
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟವಾಗಲಿರುವುದರಿಂದ ಷೇರುಪೇಟೆ ಮಂದಗತಿಯ ಆರಂಭಕ್ಕೆ ಮುಂದಾಗಿದೆ. (AFP)

ಬೆಂಗಳೂರು: ಇಂದು (ಗುರುವಾರ) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು2024ರ ಹಣಕಾಸು ವರ್ಷದ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದಾರೆ. ಆಗಸ್ಟ್‌ 8ರಂದು ಆರಂಭವಾದ ಆರ್‌ಬಿಐ ಸಭೆಯು ಇಂದು ಕೊನೆಗೊಳ್ಳಲಿದೆ. ಹಣದುಬ್ಬರ ಆತಂಕಗಳ ನಡುವೆ ಆರ್‌ಬಿಐಯು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವ ನಿರೀಕ್ಷೆಯಿದೆ. ಹೀಗಿದ್ದರೂ, ಭಾರತದ ಷೇರುಪೇಟೆ ಇಂದು ಮಂದಗತಿಯಲ್ಲಿ ವಹಿವಾಟು ಆರಂಭಿಸುತ್ತಿದೆ. ಆರ್‌ಬಿಐ ಬಡ್ಡಿದರ ಬದಲಾಯಿಸಬಹುದೇ ಇತ್ಯಾದಿ ಆತಂಕವು ಈ ಟ್ರೆಂಡ್‌ಗೆ ಪ್ರಮುಖ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

PM Narendra Modi Interview: ನಮಗೆ ಜನಪ್ರಿಯತೆ ಅಗತ್ಯವಿಲ್ಲ, ನಮ್ಮ ಕೆಲಸದ ವೇಗವನ್ನು ಜನ ನೋಡಿದ್ದಾರೆ; ಪ್ರಧಾನಿ ಮೋದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಷೇರುಪೇಟೆ ಇಂದು ಆರಂಭದಲ್ಲಿ ಇಳಿಮುಖ ಟ್ರೆಂಡ್‌ ಅನುಸರಿಸಿದೆ. ಸೆನ್ಸೆಕ್ಸ್ 64.43 ಪಾಯಿಂಟ್ ಅಥವಾ 0.10 ರಷ್ಟು ಕುಸಿದು 65,931.38 ಕ್ಕೆ ತಲುಪಿದೆ. ನಿಫ್ಟಿ 49.30 ಪಾಯಿಂಟ್ ಅಥವಾ 0.25 ರಷ್ಟು ಕುಸಿದು 19,583.20 ಕ್ಕೆ ತಲುಪಿದೆ.

ಆರ್‌ಬಿಐ ಹಣಕಾಸು ನೀತಿ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು2024ರ ಹಣಕಾಸು ವರ್ಷದ ದ್ವೈಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಲಿದ್ದು, ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಕಾಣುವ ಸಾಧ್ಯತೆಗಳು ಇಲ್ಲ.

ಕರೆನ್ಸಿ ಮೌಲ್ಯ

ಹಿಂದಿನ 82.83 ರೂಪಾಯಿಗೆ ಹೋಲಿಸಿದದರೆ ಇಂದು ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 82.81 ರೂ.ನಲ್ಲಿದ್ದು ಸ್ಥಿರವಾಗಿದೆ.

ಟಿವಿಎಸ್‌ ಸಪ್ಲೈ ಚೈನ್‌ ಐಪಿಒ

ಇಂದಿನಿಂದ ಟಿವಿಎಸ್‌ ಸಪ್ಲೈ ಚೈನ್‌ ಸೊಲ್ಯುಷನ್ಸ್‌ನ ಆರಂಭಿಕ ಷೇರು ವಿತರಣೆ ಆರಂಭವಾಗಲಿದೆ. ಈ ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ಆಗಸ್ಟ್‌ 24ರಂದು ಪ್ರವೇಶಿಸಲಿದೆ.

ಝಿ ಸೋನಿ ಮರ್ಜರ್‌ ಕುರಿತು ಎನ್‌ಸಿಎಲ್‌ಟಿಯ ನಿರ್ಧಾರ ಇಂದು ಪ್ರಕಟವಾಗಲಿದೆ. ನ್ಯಾಷನಲ್‌ ಕಂಪೆನಿ ಲಾ ಟ್ರಿಬ್ಯುನಲ್‌ ಝೀ-ಸೋನಿ ವಿಲೀನ ಪ್ರಕರಣದ ಕುರಿತು ತನ್ನ ನಿರ್ಧಾರವನ್ನು ಇಂದು ಪ್ರಕಟಿಸಲಿದೆ.

ಆರಂಭಿಕ ಷೇರು ವಿತರಣೆ ಅಥವಾ ಪಬ್ಲಿಕ್‌ ಇಶ್ಯು ಮುಕ್ತಾಯವಾದ ನಂತರ ಸೆಕ್ಯುರಿಟೀಸ್‌ ಲಿಸ್ಟ್‌ ಮಾಡುವ ಅವಧಿಯನ್ನು ಮೂರು ದಿನಕ್ಕೆ ಸೆಬಿ ಕಡಿಮೆ ಮಾಡಿದೆ. ಈಗ ಆರು ದಿನಗಳ ಅವಧಿಯಿದೆ. ಇದನ್ನು ಮೂರು ದಿನಕ್ಕೆ ಡಿಸೆಂಬರ್‌ 1ರಿಂದ ಇಳಿಸಲಿದೆ.

ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಅಂಡ್ ಟೆಕ್ನಾಲಜೀಸ್ ಲಿಮಿಟೆಡ್ ಇದೀಗ ಶೇಕಡ 100 ಅಂಗಸಂಸ್ಥೆ ಕಂಪನಿಯನ್ನು ಸಂಯೋಜಿಸಿದೆ. "ಅಥರ್ವ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಟೆಕ್ನಾಲಜೀಸ್ ಲಿಮಿಟೆಡ್ (AASTL) ಎಂಬ ಕಂಪನಿಯನ್ನು ಆರಂಭಿಸಲಾಗಿದೆ.

ಮುಂಬೈ ಷೇರುಪೇಟೆ ಅಥವಾ ಬಿಎಸ್‌ಇಯು ತನ್ನ ಜೂನ್‌ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ಜೂನ್ ತ್ರೈಮಾಸಿಕದಲ್ಲಿ ಬಿಎಸ್‌ಇ ನಿವ್ವಳ ಲಾಭದಲ್ಲಿ ಶೇಕಡಾ 71 ರಷ್ಟು ಏರಿಕೆ ಕಂಡಿದ್ದು 75.1 ಕೋಟಿ ರೂ.ಗೆ ತಲುಪಿದೆ. ಒಟ್ಟು ಆದಾಯವು ಹಿಂದಿನ ವರ್ಷದ ಇದೇ ತ್ರೈಮಾಸಿಕದ 197.7 ಕೋಟಿ ರೂಗೆ ಹೋಲಿಸಿದರೆ ಈ ಜೂನ್‌ ತ್ರೈಮಾಆಸಿಕದಲ್ಲಿ 271.2 ಕೋಟಿ ರೂಗೆ ತಲುಪಿ ಶೇಕಡ 37 ಏರಿಕೆಯಾಗಿದೆ.

ಬುಧವಾರದ ವಹಿವಾಟಿನಲ್ಲಿ ನಿಫ್ಟಿಯು 19,600 ಅಂಕ ತಲುಪಿದೆ. ಸೆನ್ಸೆಕ್ಸ್‌ ಸೂಚ್ಯಂಕವು 149.31 ಅಂಕ ಏರಿಕೆ ಕಂಡು 65,995.81ಕ್ಕೆ ತಲುಪಿದೆ. ಇದೇ ಸಮಯದಲ್ಲಿ ನಿಫ್ಟಿಯು 61.70 ಅಂಕ ಏರಿಕೆ ಕಂಡು 19,632.50ಕ್ಕೆ ತಲುಪಿದೆ. "ಮಾರ್ಚ್ ಮತ್ತು ಜುಲೈ ನಡುವೆ ಮಾರುಕಟ್ಟೆಗಳು ಶೇಕಡ 14ರಷ್ಟು ಏರಿಕೆ ಕಂಡಿವೆ. ಸದ್ಯ ಆರ್‌ಬಿಐ ನೀತಿ ನಿರ್ಧಾರ ಮತ್ತು ಅಮೆರಿಕದ ಹಣದುಬ್ಬರದ ಕುರಿತು ಎಚ್ಚರಿಕೆಯು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ" ಎಂದು ತಜ್ಞರು ಹೇಳಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ