ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಅಮೆರಿಕದ ಆರ್ಥಿಕ ಅಂಕಿಅಂಶ ದುರ್ಬಲ, ಭಾರತದ ಷೇರುಪೇಟೆ ಮಂದಗತಿಯ ಆರಂಭ ನಿರೀಕ್ಷೆ, ಇಂದು ಈ ಷೇರುಗಳ ಮೇಲೆ ಕಣ್ಣಿಟ್ಟಿರಿ

Opening Bell: ಅಮೆರಿಕದ ಆರ್ಥಿಕ ಅಂಕಿಅಂಶ ದುರ್ಬಲ, ಭಾರತದ ಷೇರುಪೇಟೆ ಮಂದಗತಿಯ ಆರಂಭ ನಿರೀಕ್ಷೆ, ಇಂದು ಈ ಷೇರುಗಳ ಮೇಲೆ ಕಣ್ಣಿಟ್ಟಿರಿ

Praveen Chandra B HT Kannada

Aug 02, 2023 09:29 AM IST

ಭಾರತದ ಷೇರುಪೇಟೆ ಮಂದಗತಿಯ ಆರಂಭ ನಿರೀಕ್ಷೆ, ಇಂದು ಈ ಷೇರುಗಳ ಮೇಲೆ ಕಣ್ಣಿಟ್ಟಿರಿ

  • Stock Market Open: ಇಂದು ಬೆಳಗ್ಗೆ 8.22 ಗಂಟೆಗೆ ಎನ್‌ಎಸ್‌ಇ ಇಂಟರ್‌ನ್ಯಾಷನಲ್‌ ಎಕ್ಸ್‌ಚೇಂಜ್‌ನಲ್ಲಿ ಭಾರತದ ಗಿಫ್ಟ್‌ ನಿಫ್ಟಿಯು ಶೇಕಡ 0.27 ಇಳಿಕೆ ಕಂಡು 19,748.5ಕ್ಕೆ ವಹಿವಾಟು ಮುಗಿಸಿದೆ. ಎನ್‌ಎಸ್‌ಇ ಮತ್ತು ಬಿಎಸ್‌ಇ ಷೇರುಗಳು ಇಂದು ಮಂದಗತಿಯಲ್ಲಿ ವಹಿವಾಟು ಆರಂಭಿಸುವ ಸೂಚನೆಯಿದೆ.

ಭಾರತದ ಷೇರುಪೇಟೆ ಮಂದಗತಿಯ ಆರಂಭ ನಿರೀಕ್ಷೆ, ಇಂದು ಈ ಷೇರುಗಳ ಮೇಲೆ ಕಣ್ಣಿಟ್ಟಿರಿ
ಭಾರತದ ಷೇರುಪೇಟೆ ಮಂದಗತಿಯ ಆರಂಭ ನಿರೀಕ್ಷೆ, ಇಂದು ಈ ಷೇರುಗಳ ಮೇಲೆ ಕಣ್ಣಿಟ್ಟಿರಿ

ಬೆಂಗಳೂರು: ಜಾಗತಿಕ ಸ್ನೇಹಿತರ ಪ್ರಭಾವದಿಂದ ಭಾರತದ ಷೇರುಪೇಟೆ ಇಂದು ಮಂದಗತಿಯಲ್ಲಿ ವಹಿವಾಟು ಆರಂಭಿಸುವ ಸೂಚನೆಯಿದೆ. ಅಮೆರಿಕದ ಆರ್ಥಿಕ ಅಂಕಿಅಂಶಗಳು ದುರ್ಬಲವಾಗಿರುವುದು, ಯುರೋ ಝೋನ್‌ ಮತ್ತು ಚೀನಾದ ಮಾರುಕಟ್ಟೆಗಳ ಆತಂಕ ಇತ್ಯಾದಿಗಳು ರಿಸ್ಕ್‌ ಸೆಂಟಿಮೆಂಟ್‌ ಹೆಚ್ಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಇಂದು ಬೆಳಗ್ಗೆ 8.22 ಗಂಟೆಗೆ ಎನ್‌ಎಸ್‌ಇ ಇಂಟರ್‌ನ್ಯಾಷನಲ್‌ ಎಕ್ಸ್‌ಚೇಂಜ್‌ನಲ್ಲಿ ಭಾರತದ ಗಿಫ್ಟ್‌ ನಿಫ್ಟಿಯು ಶೇಕಡ 0.27 ಇಳಿಕೆ ಕಂಡು 19,748.5ಕ್ಕೆ ವಹಿವಾಟು ಮುಗಿಸಿದೆ.

ನಿನ್ನೆ ರಾತ್ರಿ ವಾಲ್‌ ಸ್ಟ್ರೀಟ್‌ ಷೇರುಗಳು ಇಳಿಕೆ ಕಂಡಿರುವುದರಿಂದ ಬುಧವಾರ ಏಷ್ಯಾ ಷೇರುಗಳು ಸಪ್ಪೆಯಾಗಿವೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ದರ ಹೆಚ್ಚಿಸಬಹುದು, ಕಾರ್ಮಿಕ ಮಾರುಕಟ್ಟೆಗೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಆತಂಕವೇ ಏಷ್ಯಾ ಷೇರುಗಳ ನೀರಸ ಆರಂಭಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಬಡ್ಡಿದರ ಹೆಚ್ಚಿಸಬಹುದು ಎಂದು ಅಮೆರಿಕದ ಕೇಂದ್ರ ಬ್ಯಾಂಕ್‌ನ ಮಾಹಿತಿಯು ಷೇರುಪೇಟೆಯ ಭಾವನೆ ಮೇಲೆ ಪರಿಣಾಮ ಬೀರಿದೆ. ಕಳೆದ ತಿಂಗಳು ಫೆಡರಲ್‌ ರಿಸರ್ವ್‌ ಬ್ಯಾಂಕ್‌ನ ಸಭೆಯ ಬಳಿಕವೇ ಸಾಕಷ್ಟು ಜನರಿಗೆ ಬಡ್ಡಿದರ ಹೆಚ್ಚಳದ ಮುನ್ಸೂಚನೆ ದೊರಕಿತ್ತು.

ರೇಟಿಂಗ್‌ ಏಜೆನ್ಸಿಯು ಅಮೆರಿಕದ ದೀರ್ಘಕಾಲದ ಸಾಲದ ರೇಟಿಂಗ್‌ ಅನ್ನು ತಗ್ಗಿಸಿದೆ. ಅಂದರೆ, ಎಎಎಯಿಂದ ಎಎ ಗೆ ಡೌನ್‌ಗ್ರೇಡ್‌ ಮಾಡಿದೆ. ಮುಂಬರುವ ಮೂರು ವರ್ಷಗಳಲ್ಲಿ ಹಣಕಾಸು ಸ್ಥಿತಿ ಕ್ಷೀಣಿಸುವ ಮುನ್ಸೂಚನೆ ಇದಾಗಿದೆ.

ಚೀನಾ ಮತ್ತು ಯುರೋ ಝೋನ್‌ನ ಫ್ಯಾಕ್ಟರಿ ಚಟುವಟಿಕೆಗಳ ಮಂದಗತಿಯ ಅಂಕಿಅಂಶಗಳು ಕೂಡ ಷೇರುಪೇಟೆಯ ಭಾವನೆ ಮೇಲೆ ಪರಿಣಾಮ ಬೀರಿದೆ.

ಮಂಗಳವಾರ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 68.36 ಅಂಕ ಇಳಿಕೆ ಕಂಡು 66,459.31ಕ್ಕೆ ತಲುಪಿದೆ. ಇದೇ ಸಮಯದಲ್ಲಿ 20.25 ಅಂಕ ಇಳಿಕೆ ಕಂಡು 19,733.55ಕ್ಕೆ ವಹಿವಾಟು ಮುಗಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ ನಿವ್ವಳ ಆಧಾರದ ಮೇಲೆ 928.5 ದಶಲಕ್ಷ ರೂಪಾಯಿ (11.28 ದಶಲಕ್ಷ ಡಾಲರ್‌) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 10.36 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇಂದು ಗಮನಿಸಬಹುದಾದ ಷೇರುಗಳು

ಡಿಎಲ್‌ಎಫ್‌: ಡಿಎಲ್‌ಎಫ್‌ ಕಂಪನಿಯ ಪ್ರಮುಖ ಷೇರುದಾರರೊಬ್ಬರಾದ ಕುಶಾಲ್‌ ಪಾಲ್‌ ಸಿಂಗ್‌ ಅವರು ತನ್ನಲ್ಲಿರುವ ಎಲ್ಲಾ ಷೇರುಗಳನ್ನು ಅಂದರೆ 14.5 ದಶಲಕ್ಷ ಷೇರುಗಳನ್ನು (ಕಂಪನಿಯ ಶೇಕಡ 0.59) ಸರಾಸರಿ 504.21 ದರದಂತೆ (ಪ್ರತಿಷೇರಿಗೆ) ಮಾರಾಟ ಮಾಡಿದ್ದಾರೆ.

ಅಶೋಕ್‌ ಲೇಲ್ಯಾಂಡ್‌: ಕಂಪನಿಯು ಜುಲೈ ತಿಂಗಳಲ್ಲಿ 9,571 ಮಧ್ಯಮ ಮತ್ತು ಹೆವಿ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ 8148 ವಾಹನ ಮಾರಾಟ ಮಾಡಿತ್ತು.

ಅಂಬುಜಾ ಸಿಮೆಂಟ್ಸ್‌: ಕಂಪನಿಯು ಸಾಂಘಿ ಇಂಡಸ್ಟ್ರೀಯ ಬಹುತೇಕ ಷೇರುಗಳನ್ನು ಖರೀದಿಸುವ ಡೀಲ್‌ಗೆ ಹತ್ತಿರದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಟಿವಿಎಸ್‌ ಮೋಟಾರ್‌ ಕಂಪನಿ: ಜುಲೈನಲ್ಲಿ ತನ್ನ ವಾಹನ ಮಾರಾಟವನ್ನು ಶೇಕಡ 4ರಷ್ಟು ಹೆಚ್ಚಿಸಿಕೊಂಡಿದೆ.

ಬುಧವಾರದ ಪ್ರಮುಖ ಗಳಿಕೆಗಳು: ಟೈಟಾನ್‌ ಕಂಪನಿ, ಇಂಟರ್‌ಗ್ಲೋಬ್‌ ಏವಿಯೇಷನ್‌, ಗುಜರಾತ್‌ ಗ್ಯಾಸ್‌, ಗೋಡ್ರೇಜ್‌ ಪ್ರಾಪರ್ಟಿಸ್‌.

ಇಂದಿನ ಕರೆನ್ಸಿ ಮೌಲ್ಯ: 1 ಡಾಲರ್‌= 82.3150 ಭಾರತೀಯ ರೂಪಾಯಿ

ಮೂಲ ವರದಿ: ರಾಯಿಟರ್ಸ್‌: ಕನ್ನಡಕ್ಕೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ