ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಆರ್‌ಬಿಐ ನಿರ್ಧಾರ, ಅಮೆರಿಕ ಹಣದುಬ್ಬರದ ಮೇಲೆ ಕಣ್ಣು, ಭಾರತದ ಷೇರುಗಳು ಮಂದಗತಿಯ ಆರಂಭ ನಿರೀಕ್ಷೆ, ಈ ಷೇರುಗಳನ್ನು ಗಮನಿಸಿ

Opening Bell: ಆರ್‌ಬಿಐ ನಿರ್ಧಾರ, ಅಮೆರಿಕ ಹಣದುಬ್ಬರದ ಮೇಲೆ ಕಣ್ಣು, ಭಾರತದ ಷೇರುಗಳು ಮಂದಗತಿಯ ಆರಂಭ ನಿರೀಕ್ಷೆ, ಈ ಷೇರುಗಳನ್ನು ಗಮನಿಸಿ

Praveen Chandra B HT Kannada

Aug 08, 2023 09:31 AM IST

Opening Bell: ಭಾರತದ ಷೇರುಗಳು ಮಂದಗತಿಯ ಆರಂಭ ನಿರೀಕ್ಷೆ

  • ಅಮೆರಿಕದ ಅರ್ಥವ್ಯವಸ್ಥೆಯ ಹಣದುಬ್ಬರ ದರ ಪ್ರಕಟವಾಗಲಿರುವುದು ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಣಕಾಸು ನೀತಿಯು ಈ ವಾರದ ಬಳಿಕ ಪ್ರಕಟಗೊಳ್ಳಲಿರುವುದು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಲಿದೆ.

Opening Bell: ಭಾರತದ ಷೇರುಗಳು ಮಂದಗತಿಯ ಆರಂಭ ನಿರೀಕ್ಷೆ
Opening Bell: ಭಾರತದ ಷೇರುಗಳು ಮಂದಗತಿಯ ಆರಂಭ ನಿರೀಕ್ಷೆ

ಬೆಂಗಳೂರು: ಭಾರತದ ಷೇರುಪೇಟೆ ಇಂದು ಮಂದಗತಿಯಲ್ಲಿ ಆರಂಭವಾಗುವ ಸೂಚನೆಯಿದೆ. ಅಮೆರಿಕದ ಅರ್ಥವ್ಯವಸ್ಥೆಯ ಹಣದುಬ್ಬರ ದರ ಪ್ರಕಟವಾಗಲಿರುವುದು ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಣಕಾಸು ನೀತಿಯು ಈ ವಾರದ ಬಳಿಕ ಪ್ರಕಟಗೊಳ್ಳಲಿರುವುದು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಲಿದೆ. ಇದೇ ಸಮಯದಲ್ಲಿ ದೇಶದ ಷೇರು ಖರೀದಿಸುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತುಸು ಬದಲಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಇಂದು ಬೆಳಗ್ಗೆ 8:19 ಗಂಟೆಗೆ ಎನ್‌ಎಸ್‌ಇ ಇಂಟರ್‌ನ್ಯಾಷನಲ್‌ ಎಕ್ಸ್‌ಚೇಂಜ್‌ನಲ್ಲಿ ಭಾರತದ ಗಿಫ್ಟ್‌ ನಿಫ್ಟಿಯು ಶೇಕಡ 0.18ರಷ್ಟು ಇಳಿಕೆ ಕಂಡು 19,646.50ಕ್ಕೆ ತಲುಪಿದೆ.

ವಿಶಾಲವಾದ ಏಷ್ಯಾ ಷೇರುಗಳು ಕೂಡ ಇಳಿಮುಖವಾಗಿವೆ. ಎಂಎಸ್‌ಸಿಐ ಏಷ್ಯಾ ಎಕ್ಸ್‌ ಜಪಾನ್‌ ಷೇರುಗಳು ಶೇಕಡ 0.89ರಷ್ಟು ಇಳಿಕೆ ಕಂಡಿದೆ. ಚೀನಾ ಮತ್ತು ಅಮೆರಿಕದ ಹಣದುಬ್ಬರ ವರದಿಗೆ ಹೂಡಿಕೆದಾರರು ಕಾಯುತ್ತಿದ್ದಾರೆ. ಆದರೆ, ನಿನ್ನೆ ರಾತ್ರಿ ವಾಲ್‌ ಸ್ಟ್ರೀಟ್‌ ಷೇರುಗಳು ಏರಿಕೆ ಕಂಡು ವಹಿವಾಟು ಮುಗಿಸಿದೆ. ವಿವಿಧ ಕಂಪನಿಗಳ ಫಲಿತಾಂಶದಲ್ಲಿ ಹೆಚ್ಚಳ ಕಂಡಿರುವುದು ವಾಲ್‌ ಸ್ಟ್ರೀಟ್‌ ಷೇರುಗಳ ಏರಿಕೆಗೆ ಕಾರಣವಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ತನ್ನ ಹಣಕಾಸು ನೀತಿಯನ್ನು ಗುರುವಾರ ಪ್ರಕಟಿಸಲಿದೆ. ಏಪ್ರಿಲ್‌ನಲ್ಲಿ ಆರ್‌ಬಿಐಯು ದರವನ್ನು ಬದಲಾಯಿಸಿರಲಿಲ್ಲ. ಜೂನ್‌ ತಿಂಗಳಲ್ಲಿಯೂ ಯಾವುದೇ ಬದಲಾವಣೆ ಮಾಡಿರಲಿಲ್ಲ. 2023ರ ಆರ್ಥಿಕ ವರ್ಷದಲ್ಲಿ ಆರ್‌ಬಿಐಯು ಬ್ಯಾಂಕ್‌ ಬಡ್ಡಿದರವನ್ನು 250 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು.

ಅಮೆರಿಕದ ಹಣದುಬ್ಬರ ವರದಿ ಮತ್ತು ಆರ್‌ಬಿಐ ನೀತಿ ಪ್ರಕಟದ ಕಾರಣದಿಂದ ಮುಂದಿನ ಹಲವು ಅವಧಿಗಳಲ್ಲಿ ಬೆಂಚ್‌ಮಾರ್ಕ್‌ ಸೂಚ್ಯಂಕಗಳು ತುಸು ಹಿಂಜರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಸೋಮವಾರ ನಿಫ್ಟಿ 50 ಮತ್ತು ಸೆನ್ಸೆಕ್ಸ್‌ ಸೂಚ್ಯಂಕಗಳು ಏರಿಕೆ ಕಂಡಿದ್ದವು. ಫಾರ್ಮಾ, ಮಾಹಿತಿ ತಂತ್ರಜ್ಞಾನ ಷೇರುಗಳ ಖರೀದಿ ಹೆಚ್ಚಾಗಿರುವುದು ಸೆನ್ಸೆಕ್ಸ್‌ ಮತ್ತು ನಿಫ್ಟಿಯ ಏರಿಕೆಗೆ ಬೆಂಬಲ ನೀಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ಸತತ ಏಳನೇ ಅವಧಿಗೆ ಭಾರತೀಯ ಷೇರುಗಳಲ್ಲಿ ನಿವ್ವಳ ಮಾರಾಟಗಾರರಾಗಿದ್ದಾರೆ. ಇವರು 18.93 ಶತಕೋಟಿ ರೂಪಾಯಿಗಳ (228.52 ದಶಲಕ್ಷ ಡಾಲರ್‌) ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.

ಇಂದು ಗಮನಿಸಬಹುದಾದ ಷೇರುಗಳು

ಗೋಡ್ರೇಜ್‌ ಕನ್ಸೂಮರ್‌ ಪ್ರಾಡಕ್ಟ್ಸ್‌: ಕಂಪನಿಯು ಅಧಿಕ ವೆಚ್ಚದ ಕಾರಣದಿಂದ ಜೂನ್‌ ತ್ರೈಮಾಸಿಕದ ಲಾಭವನ್ನು ಕಳೆದುಕೊಂಡಿದೆ.

ಟೊರೆಂಟ್‌ ಫಾರ್ಮಾಸ್ಯುಟಿಕಲ್ಸ್‌: ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಹೆಚ್ಚಾಗಿದೆ.

ಗ್ಲಾಂಡ್‌ ಫಾರ್ಮಾ: ಕಂಪನಿಯ ಜೂನ್‌ ತ್ರೈಮಾಸಿಕದ ಆದಾಯ ಶೇಕಡ 41ರಷ್ಟು ಏರಿಕೆ ಕಂಡಿದೆ.

ಇಂದಿನ ಪ್ರಮುಖ ಗಳಿಕೆಗಳು: ಹಿಂಡಾಲ್ಕೊ ಇಂಡಸ್ಟ್ರೀಸ್‌, ಕೋಲ್‌ ಇಂಡಿಯಾ, ಅದಾನಿ ಪೋರ್ಟ್ಸ್‌.

ಕರೆನ್ಸಿ ಮೌಲ್ಯ: 1 ಡಾಲರ್‌= 82.8380 ಭಾರತೀಯ ರೂಪಾಯಿ.

ಮೂಲ ವರದಿ: ರಾಯಿಟರ್ಸ್‌, ಕನ್ನಡಕ್ಕೆ: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ