logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ; ಇಂಥ ಕೋಳಿ ತಿನ್ನೋದು ಅಪಾಯ, ವೆಂಕೀಸ್‌ ಚಿಕನ್ ಕುರಿತು ಟಿಬಿಐಜೆ ವರದಿ

ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ; ಇಂಥ ಕೋಳಿ ತಿನ್ನೋದು ಅಪಾಯ, ವೆಂಕೀಸ್‌ ಚಿಕನ್ ಕುರಿತು ಟಿಬಿಐಜೆ ವರದಿ

Umesh Kumar S HT Kannada

Apr 23, 2024 03:55 PM IST

google News

ವೆಂಕೀಸ್ ಚಿಕನ್ ವೆಬ್‌ಸೈಟ್‌ನಲ್ಲಿ ಆಂಟಿಬಯೋಟಿಕ್ಸ್‌ (ಎಡಚಿತ್ರ); ಚಿಕನ್ ಫಾರ್ಮ್ (ಬಲಚಿತ್ರ). ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ ಮಾಡುತ್ತಿದ್ದು, ಇಂಥ ಕೋಳಿ ತಿನ್ನೋದು ಅಪಾಯ ಎಂಬುದರ ಕಡೆಗೆ ವರದಿ ಗಮನಸೆಳೆದಿದೆ.

  • ದಕ್ಷಿಣ ಭಾರತದ ಮಟ್ಟಿಗೆ ವೆಂಕೀಸ್ ಚಿಕನ್‌ ಬಹಳ ಜನಪ್ರಿಯ. ಭಾರತದ ಪ್ರಮುಖ ಚಿಕನ್ ಮಾರಾಟ ಕಂಪನಿ ವೆಂಕೀಸ್‌, ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ ಮಾಡುತ್ತಿರುವುದಾಗಿ ಟಿಬಿಐಜೆ ವರದಿ ಮಾಡಿದೆ. ಇಂಥ ಕೋಳಿ ತಿನ್ನೋದು ಅಪಾಯ. ಈ ವರದಿಯ ವಿವರ ಇಲ್ಲಿದೆ. 

ವೆಂಕೀಸ್ ಚಿಕನ್ ವೆಬ್‌ಸೈಟ್‌ನಲ್ಲಿ ಆಂಟಿಬಯೋಟಿಕ್ಸ್‌ (ಎಡಚಿತ್ರ); ಚಿಕನ್ ಫಾರ್ಮ್ (ಬಲಚಿತ್ರ). ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ ಮಾಡುತ್ತಿದ್ದು, ಇಂಥ ಕೋಳಿ ತಿನ್ನೋದು ಅಪಾಯ ಎಂಬುದರ ಕಡೆಗೆ ವರದಿ ಗಮನಸೆಳೆದಿದೆ.
ವೆಂಕೀಸ್ ಚಿಕನ್ ವೆಬ್‌ಸೈಟ್‌ನಲ್ಲಿ ಆಂಟಿಬಯೋಟಿಕ್ಸ್‌ (ಎಡಚಿತ್ರ); ಚಿಕನ್ ಫಾರ್ಮ್ (ಬಲಚಿತ್ರ). ಕೋಳಿಗಳು ಬೇಗ ಬೆಳೆಯಲೆಂದು ಆಂಟಿಬಯೋಟಿಕ್ಸ್ ಬಳಕೆ ಮಾಡುತ್ತಿದ್ದು, ಇಂಥ ಕೋಳಿ ತಿನ್ನೋದು ಅಪಾಯ ಎಂಬುದರ ಕಡೆಗೆ ವರದಿ ಗಮನಸೆಳೆದಿದೆ. (venkys)

ಬೆಂಗಳೂರು: ಭಾರತದ ಪ್ರಮುಖ ಕೋಳಿ ಉತ್ಪಾದಕ ಕಂಪನಿ ವೆಂಕೀಸ್ (Venky’s), ಕೋಳಿ ಉತ್ಪಾದನೆಯಲ್ಲಿ ಪ್ರತಿಜೀವಕ (antibiotics) ಅನ್ನು ಬಳಸುತ್ತಿದೆ. ಔಷಧ ನಿರೋಧಕ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಬಳಸಿ ಎಂದು ಕೋಳಿ ಸಾಕಣಿಕೆದಾರರಿಗೆ ವಿತರಿಸುತ್ತಿದೆ ಎಂಬ ವಿಷಯದ ಮೇಲೆ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ (The Bureau of Investigative Journalism -TBIJ) ವರದಿ ಬೆಳಕು ಚೆಲ್ಲಿದೆ.

ಕೋಳಿಗಳ ಬೆಳವಣಿಗೆಗೆ ವೇಗ ನೀಡುವ ಉದ್ದೇಶದೊಂದಿಗೆ ಕಂಪನಿಯು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ಔಷಧಗಳನ್ನು ಮಾರಾಟ ಮಾಡುತ್ತಿದೆ. ಬಹಳ ನಿರ್ಣಾಯಕವೆನಿಸುವ ಈ ಪ್ರತಿಜೀವಕಗಳನ್ನು ಸೋಂಕು “ತಡಗಟ್ಟುವ ಬಳಕೆ” (preventative use) ಯ ಹಣೆಪಟ್ಟಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ದಿನದ ಕೋಳಿ ಮರಿಗೆ ರೋಗ ಸಾಧ್ಯತೆ ಕಡಿಮೆ ಮಾಡುವುದಕ್ಕೆ ಈ ಪ್ರತಿಜೀವಕವನ್ನು ನೀಡಲು ಸಲಹೆ ನೀಡಲಾಗುತ್ತಿದೆ. ಕಂಪನಿಯ ಈ ನಡೆಯು ವಿವಾದಾತ್ಮಕವಾದ ಅಭ್ಯಾಸ ಎಂದು ವರದಿ ವ್ಯಾಖ್ಯಾನಿಸಿದೆ.

ದಕ್ಷಿಣ ಭಾರತದ ಕೋಳಿ ಸಾಕಣೆ ಕೇಂದ್ರಗಳು ವೆಂಕೀಸ್ ವೆಬ್‌ಸೈಟ್‌ನಲ್ಲಿ ಶಿಫಾರಸು ಮಾಡಿದಂತೆ ಔಷಧಗಳನ್ನು ಬಳಸುತ್ತಿವೆ. ಕೋಳಿ ಸಾಕಣೆ ಕೇಂದ್ರಗಳಿಗೆ ಹಲವು ಸಲ ಭೇಟಿ ನೀಡಿ ವೆಂಕೀಸ್ ಶಿಫಾರಸಿನಂತೆ ಔಷಧ ಬಳಸುತ್ತಿರುವುದನ್ನು ತನಿಖಾ ಪತ್ರಿಕೋದ್ಯಮ ತಂಡ ಖಾತರಿಪಡಿಸಿಕೊಂಡಿದೆ ಎಂದು ವರದಿ ಹೇಳಿದೆ.

ಪ್ರತಿಜೀವಕ ಬಳಸಿದರೆ ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ

ಪ್ರತಿಜೀವಕಗಳ ಬಳಕೆಯನ್ನು ಉತ್ತೇಜಿಸಬಾರದು ಎಂದು ಯುರೋಪ್ ಒಕ್ಕೂಟ, ಅಮೆರಿ ನಿಷೇಧ ಹೇರಿದೆ. ಅನಿವಾರ್ಯ ಕಾರಣದ ಹೊರತು ತಡೆಗಟ್ಟುವ ಬಳಕೆಗೂ ಪ್ರತಿಜೀವಕ ಬಳಸಬಾರದು ಎಂದು ಯುರೋಪ್ ಒಕ್ಕೂಟ ನಿರ್ದೇಶಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಎರಡೂ ಅಭ್ಯಾಸಗಳನ್ನು ವಿರೋಧಿಸಿದ್ದು, ಈ ರೀತಿ ಮಾಡುವುದರಿಂದ ಮನುಷ್ಯರಿಗೆ ಸೋಂಕು ಉಂಟಾದಾಗ ಅವರ ಚಿಕಿತ್ಸೆಯಲ್ಲಿ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿರಬಹುದು ಎಂದು ಎಚ್ಚರಿಸಿದೆ.

ವೆಂಕೀಸ್ ಕಂಪನಿಯು ಈ ರೀತಿ ಪ್ರತಿಜೀವಕ ಬಳಸುವುದು ಇದೇ ಮೊದಲಲ್ಲ. 2018ರಲ್ಲೇ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ, ವೆಂಕೀಸ್ ಕಂಪನಿಯು ಕೋಳಿಗಳ ಬೆಳವಣಿಗೆ ಉತ್ತೇಜಿಸಲು ಕೊಲಿಸ್ಟಿನ್ ಎಂಬ ಪ್ರತಿಜೀವಕವನ್ನು ಮಾರಾಟ ಮಾಡುತ್ತಿದೆ ಎಂಬುದರ ಕಡೆಗೆ ಬೆಳಕು ಚೆಲ್ಲಿತ್ತು. ಈ ಕೊಲಿಸ್ಟಿನ್ ಪ್ರತಿಜೀವಕವನ್ನು ಅಂತಿಮ ಪರಿಹಾರೋಪಾಯವಾಗಿ ಮನುಷ್ಯರ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಬಹಿರಂಗಗೊಂಡ ಬಳಿಕ, ಭಾರತ ಸರ್ಕಾರ ಈ ಪ್ರತಿಜೀವಕದ ಇತರೆ ಬಳಕೆಯನ್ನು ನಿಷೇಧಿಸಿತು ಎಂದು ವರದಿ ವಿವರಿಸಿದೆ.

ಟಿಬಿಐಜೆ ವರದಿ ಬಗ್ಗೆ ವೆಂಕೀಸ್ ಪ್ರತಿಕ್ರಿಯೆ ಏನು

ಟಿಬಿಐಜೆ ವರದಿ ಕುರಿತು ವೆಂಕೀಸ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತನಿಖಾ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ವೆಂಕೀಸ್‌ ತಮ್ಮ ಸ್ವಂತ ಫಾರ್ಮ್‌ಗಳಲ್ಲಿ ಮತ್ತು ಅವರ ಗುತ್ತಿಗೆದಾರರ ಫಾರ್ಮ್‌ಗಳಲ್ಲಿ , "ಆಂಟಿಬಯೋಟಿಕ್‌ಗಳನ್ನು ಚಿಕಿತ್ಸಕ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ" ಎಂದು ಹೇಳಿತ್ತು. ಆದರೆ, ವೆಂಕೀಸ್‌ ವೆಬ್‌ಸೈಟ್‌ನಲ್ಲಿ ತಡೆಗಟ್ಟುವ ಮತ್ತು ಬೆಳವಣಿಗೆಗೆ ವಿವಿಧ ಔಷಧಗಳನ್ನು ಪ್ರಮೋಟ್ ಮಾಡಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಈ ವರದಿ ಪ್ರಕಟವಾದ ಬಳಿಕ ಕೋಳಿಗಳ ಬೆಳವಣಿಗೆಗೆ ಪ್ರತಿಜೀವಕ ಬಳಕೆ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಇಂತಹ ಚಿಕನ್ ತಿನ್ನುವುದರಿಂದ ಮನುಷ್ಯರ ಆರೋಗ್ಯದ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ವಿವಿಧ ಮಾಧ್ಯಮಗಳಲ್ಲಿ ಈ ಆಂಟಿಬಯಾಟಿಕ್ ಚಿಕನ್‌ ಕುರಿತು ವಿಸ್ತೃತ ಚರ್ಚೆ ನಡೆಯುತ್ತಿದೆ. ಕಳಪೆ, ಕಲಬೆರಕೆ, ಔಷಧ ಪ್ರಯೋಗದ ಆಹಾರ ವಸ್ತುಗಳ ವಿಚಾರ ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವುದು ಚಿಂತನೆಗೆ ಅರ್ಹ ವಿಷಯವಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ