ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಾಲ್​​ಬಾಗ್ ಫ್ಲವರ್ ಶೋಗೆ ಇನ್ನೂ ಹೋಗಿಲ್ವಾ? ಜ 28ರ ವರೆಗಿದೆ ಅವಕಾಶ Photos

ಲಾಲ್​​ಬಾಗ್ ಫ್ಲವರ್ ಶೋಗೆ ಇನ್ನೂ ಹೋಗಿಲ್ವಾ? ಜ 28ರ ವರೆಗಿದೆ ಅವಕಾಶ PHOTOS

Jan 25, 2024 12:16 PM IST

ಗಣರಾಜ್ಯೋತ್ಸವ ಪ್ರಯುಕ್ತ ಸಸ್ಯಕಾಶಿ ಲಾಲ್​​ಬಾಗ್​​ನಲ್ಲಿ 12ನೇ ಶತಮಾನದ ಅನುಭವ ಮಂಟಪವು ಪುಷ್ಪಗಳಲ್ಲಿ ಕಂಗೊಳಿಸುತ್ತಿದೆ. ಫ್ಲವರ್ ಶೋ ವೀಕ್ಷಣೆಗೆ ಜನವರಿ 28ರವರೆಗೆ ಅವಕಾಶ ಇದ್ದು, ಇನ್ನೂ ಭೇಟಿ ನೀಡದವರು ಹೋಗಿ ಕಣ್ತುಂಬಿಕೊಳ್ಳಬಹುದು.

  • ಗಣರಾಜ್ಯೋತ್ಸವ ಪ್ರಯುಕ್ತ ಸಸ್ಯಕಾಶಿ ಲಾಲ್​​ಬಾಗ್​​ನಲ್ಲಿ 12ನೇ ಶತಮಾನದ ಅನುಭವ ಮಂಟಪವು ಪುಷ್ಪಗಳಲ್ಲಿ ಕಂಗೊಳಿಸುತ್ತಿದೆ. ಫ್ಲವರ್ ಶೋ ವೀಕ್ಷಣೆಗೆ ಜನವರಿ 28ರವರೆಗೆ ಅವಕಾಶ ಇದ್ದು, ಇನ್ನೂ ಭೇಟಿ ನೀಡದವರು ಹೋಗಿ ಕಣ್ತುಂಬಿಕೊಳ್ಳಬಹುದು.
ಜಗತ್ತಿನ ಮೊದಲ ಸಂಸತ್ ಕಲ್ಪನೆ ಮೂಡಿದ್ದು 12ನೇ ಶತಮಾನದಲ್ಲಿ. ವಚನಕಾರರ ಅನುಭವದಿಂದ ಮೂಡಿದ್ದೇ ಅನುಭವ ಮಂಟಪ. ಇಂತಹ ಅನುಭವ ಮಂಟಪ ಪುಷ್ಪಗಳಲ್ಲಿ ಅರಳಿ ನಿಂತಿದೆ.
(1 / 7)

ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್​​ಬಾಗ್​ನಲ್ಲಿ ಜನವರಿ 18 ರಿಂದ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಜನವರಿ 28ರವರೆಗೆ ಅವಕಾಶ ಇರಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದಾಗಿದೆ.
(2 / 7)

ಈ ಬಾರಿ ಫ್ಲವರ್ ಶೋನಲ್ಲಿ 68 ಬಗೆಯ 32 ಲಕ್ಷ ಹೂವುಗಳ ಬಳಕೆ ಮಾಡಲಾಗಿದೆ. ವಿದೇಶದ ವಿಶೇಷ ಆರ್ಕೆಸ್ಟ್ರಾಗಳಾದ ವ್ಯಾನ್ಸ್, ಪ್ಯಾಲನೋಪ್ಸ್, ಲ್ಯಾಡ್ಸ್, ಮಕರ, ಕ್ಯಾಟ್ಲಿಯಾ ಹೂಗಳನ್ನು ಬಳಸಲಾಗಿದೆ.
(3 / 7)

ವಿಶ್ವ ಗುರು ಬಸವಣ್ಣ ಮತ್ತು ಅವರ ವಚನ ಸಾಹಿತ್ಯವನ್ನು ಆಧರಿಸಿದ ಪ್ರದರ್ಶನ ಇದಾಗಿದೆ. ಶರಣರ ಪ್ರತಿಮೆಗಳ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನ ಕಂಗೊಳಿಸುತ್ತಿದೆ. 
(4 / 7)

ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಸಮಗಾರ ಹರಳಯ್ಯ ಕುಂಬಾರ ಗುಂಡಯ್ಯ ಅವರ ಪ್ರತಿಮೆಗಳನ್ನು ಪೀಠದ ಮೇಲಿಟ್ಟು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. 
(5 / 7)

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಮತ್ತು ಸಾಣೆ ಹಳ್ಳಿಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದರು.
(6 / 7)

ಈ ಪ್ರದರ್ಶನ ಕೇವಲ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ, ಒಂದು ಕಾಲದ ವಚನ ಸಾಹಿತ್ಯದ ಪರಿಚಯ ಮಾಡಿಕೊಡುತ್ತದೆ, ಓದಿಗೆ ಪ್ರೇರೇಪಣೆ ನೀಡುತ್ತದೆ. (ವರದಿ: ಎಚ್. ಮಾರುತಿ) 
(7 / 7)

    ಹಂಚಿಕೊಳ್ಳಲು ಲೇಖನಗಳು