ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ರಾಜಸ್ಥಾನ್ ರಾಯಲ್ಸ್ Vs ಆರ್‌ಸಿಬಿ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ವಿವರ

IPL 2024 Latest Updates: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ವಿವರ

Indian Premier League 2024 Updates: ಐಪಿಎಲ್‌ 2024ರ ಆವೃತ್ತಿಯ 19ನೇ ಪಂದ್ಯದಲ್ಲಿ ಏಪ್ರಿಲ್ 6ರಂದು ಆರ್‌ಸಿಬಿ ಪಂದ್ಯ ನಡೆಯುತ್ತಿದೆ. ಜೈಪುರದಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲೊಡ್ಡುತ್ತಿದೆ. ಪಂದ್ಯದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಪಂದ್ಯದ ಲೇಟೆಸ್ಟ್ ಅಪ್ಡೇಟ್
ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಐಪಿಎಲ್‌ 17ನೇ (IPL 2024) ಆವೃತ್ತಿಯ 19ನೇ ಪಂದ್ಯದಲ್ಲಿ ಏಪ್ರಿಲ್ 6ರ ಶನಿವಾರ ಒಂದು ಪಂದ್ಯ ನಡೆಯುತ್ತಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಫಾಫ್‌ ಡುಪ್ಲೆಸಿಸ್‌ ನೇತೃತ್ವದ ಆರ್‌ಸಿಬಿ ಹಾಗೂ ಸಂಜು ಸ್ಯಾಮ್ಸನ್‌ ನೇತೃತ್ವದ ಆರ್‌ಆರ್‌ (Rajasthan Royals vs Royal Challengers Bengaluru) ತಂಡಗಳು ಎದುರಾಗುತ್ತಿವೆ. ರಾಜಸ್ಥಾನ್‌ ರಾಯಲ್ಸ್‌ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬೀಗುತ್ತಿದ್ದು, ಅತ್ತ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸತತ ಸೋಲುಗಳಿಂದ ಕಂಗೆಟ್ಟಿದೆ. ಬೆಂಗಳೂರು ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಸ್ಯಾಮ್ಸನ್‌ ಪಡೆಯನ್ನು ಅವರದ್ದೇ ತವರಲ್ಲಿ ಮಣಿಸಬೇಕಾದ ಒತ್ತಡವೂ ಇದೆ. ಪಂದ್ಯದ ಸಂಪೂರ್ಣ ಅಪ್ಡೇಟ್‌ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್‌ ಆಯ್ಕೆ; ಬೆಂಗಳೂರು ತಂಡದಲ್ಲಿ ಅಚ್ಚರಿಯ ಬದಲಾವಣೆ

ಐಪಿಎಲ್‌ 2024ರ ಆವೃತ್ತಿಯ 19ನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡಾ ಆಡುತ್ತಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ವಿರಾಟ್ ಆ ಒಂದು ಬದಲಾವಣೆ ಮಾಡ್ಬೇಕು; ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ

ರಾಜಸ್ಥಾನ್ ರಾಯಲ್ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ತಂಡದಲ್ಲಿ ಬದಲಾವಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಎರಡು ಪಂದ್ಯಗಳಲ್ಲಿ ತವರಿನಲ್ಲೇ ಎದುರಾಳಿಗೆ ಶರಣಾಗಿರುವ ಆರ್​ಸಿಬಿ, ಈಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆದೆ. ಉಭಯ ತಂಡಗಳು ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್ಸಿಂಗ್​ ಸ್ಟೇಡಿಯಂನಲ್ಲಿ ಸೆಣಸಾಟಕ್ಕೆ ರೆಡಿಯಾಗಿವೆ. ಈ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ.

ರಾಜಸ್ಥಾನ vs ಬೆಂಗಳೂರು ಪಂದ್ಯಕ್ಕೆ ಮಳೆ ಆತಂಕ ಇಲ್ಲ; ಆಟಗಾರರಿಗೆ ಚಿಂತೆ ಇದರದ್ದು!

ಇಂದಿನ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.  ರಾಜಸ್ಥಾನ ತಂಡವು 3 ಪಂದ್ಯಗಳಿಂದ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್‌ಸಿಬಿ ತಂಡವು 4 ಪಂದ್ಯಗಳಿಂದ ಒಂದರಲ್ಲಿ ಮಾತ್ರ ಗೆದ್ದು 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಜೈಪುರದಲ್ಲಿ ನಡೆಯಲಿರುವ ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ. ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಆರ್​ಸಿಬಿ ಸಂಭಾವ್ಯ ತಂಡ

ಫಾಫ್‌ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸುಯೇಶ್ ಪ್ರಭುದೇಸಾಯಿ, ದಿನೇಶ್‌ ಕಾರ್ತಿಕ್‌, ಮಹಿಪಾಲ್ ಲೊಮ್ರರ್, ವಿಲ್‌ ಜ್ಯಾಕ್ಸ್​, ವೈಶಾಖ್ ವಿಜಯ್‌ಕುಮಾರ್‌, ಲಾಕಿ ಫರ್ಗ್ಯುಸನ್, ಮೊಹಮ್ಮದ್‌ ಸಿರಾಜ್‌, ಮಯಾಂಕ್ ಡಾಗರ್.

IPL_Entry_Point