logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah: ಬಸವಕಲ್ಯಾಣದಲ್ಲಿ ಬಸವಣ್ಣನಾದ ಸಿದ್ದರಾಮಣ್ಣ, ಹೀಗಿತ್ತು ಸಿಎಂ ಸನ್ಮಾನದ ಕ್ಷಣ Photos

Siddaramaiah: ಬಸವಕಲ್ಯಾಣದಲ್ಲಿ ಬಸವಣ್ಣನಾದ ಸಿದ್ದರಾಮಣ್ಣ, ಹೀಗಿತ್ತು ಸಿಎಂ ಸನ್ಮಾನದ ಕ್ಷಣ photos

Mar 07, 2024 08:12 PM IST

ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಹಲವೆಡೆ ಸನ್ಮಾನಗಳು ಆಗುತ್ತಿವೆ. ಅದರಲ್ಲೂ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾ, ವಿವಿಧ ಮಠಾಧೀಶರು ಸನ್ಮಾನಿಸುತ್ತಿದ್ದು. ಬಸವಕಲ್ಯಾಣದಲ್ಲೂ ಗುರುವಾರ ವಿಶೇಷ ಕಾರ್ಯಕ್ರಮವಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ವಿಭೂತಿ ಹಚ್ಚಿಕೊಂಡು ಕಂಡಿದ್ದು ಹೀಗಿತ್ತು.

  • ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಹಲವೆಡೆ ಸನ್ಮಾನಗಳು ಆಗುತ್ತಿವೆ. ಅದರಲ್ಲೂ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾ, ವಿವಿಧ ಮಠಾಧೀಶರು ಸನ್ಮಾನಿಸುತ್ತಿದ್ದು. ಬಸವಕಲ್ಯಾಣದಲ್ಲೂ ಗುರುವಾರ ವಿಶೇಷ ಕಾರ್ಯಕ್ರಮವಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ವಿಭೂತಿ ಹಚ್ಚಿಕೊಂಡು ಕಂಡಿದ್ದು ಹೀಗಿತ್ತು.
ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ - ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಸನ್ಮಾನ ಕಾರ್ಯಕ್ರಮದಲ್ಲಿ ಕೈ ಮುಗಿದ ಸಿಎಂ ಸಿದ್ದರಾಮಯ್ಯ
(1 / 8)

ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿ ಗುರುವಾರ ನಡೆದ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕಾಣಿಸಿಕೊಂಡಿದ್ದು ಹೀಗೆ.
(2 / 8)

ಬಸವಕಲ್ಯಾಣ ಸಮಾವೇಶಕ್ಕೆ ಆಗಮಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಗೋ.ರೂ.ಚ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾದರು,
(3 / 8)

ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ - ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ  ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಬಸವಣ್ಣನವರ ಪ್ರತಿಮೆಗೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು.
(4 / 8)

ವಿಶ್ವಬಸವ ಧರ್ಮ ಟ್ರಸ್ಟ್‍ನ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ವೈಭವದ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಲ್ಪಟ್ಟರು. ಈ ವೇಳೆ ಸಿದ್ದರಾಮಯ್ಯ ವಿಭೂತಿ ಧರಿಸಿ ಗಮನ ಸೆಳದರು. 
(5 / 8)

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶ ಸಮುದಾಯದಿಂದ ಸಿದ್ದರಾಮಯ್ಯ ಬಸವ ಕಲ್ಯಾಣದಲ್ಲಿ ಸನ್ಮಾನ ಸ್ವೀಕರಿಸಿದರು. 
(6 / 8)

ಬೀದರ್‌ ಜಿಲ್ಲೆಯ ನಾನಾ ಮಠಾಧೀಶರು ಸಿಎಂ ಅವರಿಗೆ ಭಾವಚಿತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು
(7 / 8)

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕರಾದಡಾ. ಶಾಮನೂರು ಶಿವಶಂಕರಪ್ಪ, ಸಚಿವರಾದ ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ ಅವರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
(8 / 8)

    ಹಂಚಿಕೊಳ್ಳಲು ಲೇಖನಗಳು