ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah: ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಈಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿ Photos

Siddaramaiah: ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಈಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿ PHOTOS

May 18, 2023 11:09 AM IST

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್​ ಐದು ದಿನಗಳ ಬಳಿಕ ಸಿಎಂ ಆಯ್ಕೆ ಅಂತಿಮಗೊಳಿಸಿದೆ. ಸಿದ್ದರಾಮಯ್ಯ ಅವರನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ 2ನೇ ಬಾರಿ ಕರ್ನಾಟಕದ ಸಿಎಂ ಆಗುತ್ತಿದ್ದು, ಅವರು ನಡೆದು ಬಂದ ರಾಜಕೀಯ ಹಾದಿ ಹೀಗಿದೆ.

  • ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್​ ಐದು ದಿನಗಳ ಬಳಿಕ ಸಿಎಂ ಆಯ್ಕೆ ಅಂತಿಮಗೊಳಿಸಿದೆ. ಸಿದ್ದರಾಮಯ್ಯ ಅವರನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ 2ನೇ ಬಾರಿ ಕರ್ನಾಟಕದ ಸಿಎಂ ಆಗುತ್ತಿದ್ದು, ಅವರು ನಡೆದು ಬಂದ ರಾಜಕೀಯ ಹಾದಿ ಹೀಗಿದೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿಯ ವಿ ಸೋಮಣ್ಣ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಸಿದ್ದರಾಮಯ್ಯ ಅವರೇ ಸಿಎಂ ಎಂಬುದು ಅಂತಿಮವಾಗಿದೆ. 
(1 / 7)

ಅಧಿಕಾರ ಹಂಚಿಕೆ ಮಾಡಲಾಗಿದ್ದು, 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಸಿಎಂ ಆಗಿ ಅಧಿಕಾರ ಅನುಭವಿಸಲಿದ್ದಾರೆ. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಲಿದ್ದಾರೆ. ಎರಡನೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 
(2 / 7)

1999ರ ವೇಳೆಗೆ ಜೆಡಿಎಸ್‌ ಸೇರಿದ್ದ ಸಿದ್ದರಾಮಯ್ಯ ಅವರು 2004 -2005ರ ತನಕ ಜೆಡಿಎಸ್‌ನಲ್ಲಿದ್ದರು. 1996ರಿಂದ 1999ರ ತನಕ ಜನತಾದಳ ಸರ್ಕಾರ ಇದ್ದಾಗ, ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ತರುವಾಯ, 2004ರ ಮೇ 28ರಿಂದ 2005 ಆಗಸ್ಟ್‌ 5ರ ತನಕ ಧರಂ ಸಿಂಗ್‌ ನೇತೃತ್ವದ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಇದುವರೆಗೆ ಒಟ್ಟು 10 ಚುನಾವಣೆ ಎದುರಿಸಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರರಾಗಿ ನಿಂತು ಗೆಲುವು ಕಂಡವರು. 1985ರ ಚುನಾವಣೆಯಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಚಾಮುಂಡೇಶ್ವರಿಯಲ್ಲಿ ಒಟ್ಟು ಎಂಟು ಸಲ ಸ್ಪರ್ಧಿಸಿದ್ದು, ಆ ಪೈಕಿ ಮೂರು ಬಾರಿ ಸೋಲು ಅನುಭವಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತದ್ದು ಸಹ ಚಾಮುಂಡೇಶ್ವರಿಯಲ್ಲೇ ಆಗಿತ್ತು. ಆದರೆ, ಬಾದಾಮಿಯಲ್ಲಿ 1,696 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.
(3 / 7)

ಅದು 2004-05ರ ಕಾಲಘಟ್ಟ. ಆ ಸಂದರ್ಭದಲ್ಲಿ ರಾಜ್ಯದ ಮತದಾರರಲ್ಲಿ ಅಹಿಂದ ಭಾವ ಜಾಗೃತಗೊಳಿಸುವ ಸಮಾವೇಶ ನಡೆಸಲು ಸಿದ್ದರಾಮಯ್ಯ ಮುಂದಾದರು. ಇದಕ್ಕೆ ಜೆಡಿಎಸ್‌ ವರಿಷ್ಠರಾದ ಎಚ್.ಡಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಹೊರಬಂದರು. ಆಲ್‌ ಇಂಡಿಯಾ ಪ್ರೋಗ್ರೆಸಿವ್‌ ಜನತಾ ದಳ ಸೇರಿದ್ದರು. ಅಲ್ಲಿ ಒಂದು ವರ್ಷ ಇದ್ದರು. ಬಳಿಕ ಕಾಂಗ್ರೆಸ್‌ ಪಕ್ಷ ಸೇರಿದರು. 
(4 / 7)

ಕಾಂಗ್ರೆಸ್​ ಸೇರಿದ ಬಳಿಕ ಅಹಿಂದ ಸಮಾವೇಶಗಳನ್ನು ಮಾಡುತ್ತ ಮಾಸ್‌ ಲೀಡರ್‌ ಆಗಿ ಗುರುತಿಸಿಕೊಂಡರು. ಇದರ ಫಲ 2013ರಲ್ಲಿ ಅವರಿಗೆ ಸಿಕ್ಕಿತು. ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಿತು. ಆಗ ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾದರು.
(5 / 7)

ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಲೇ ಅನ್ನ ಭಾಗ್ಯ ಯೋಜನೆ ಘೋಷಿಸಿದರು. ನಂತರ ಶಾದಿ ಭಾಗ್ಯ ಸೇರಿ ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ ಈ ಯೋಜನೆಗಳಾವುದೂ 2018ರ ಚುನಾವಣೆಯಲ್ಲಿ ಅವರ ಕೈ ಹಿಡಿಯಲಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಬಲ 79ಕ್ಕೆ ಕುಸಿಯಿತು. ಇಷ್ಟಾಗ್ಯೂ, ಜೆಡಿಎಸ್‌ ಜತೆಗೆ ಮೈತ್ರಿ ಸರ್ಕಾರ ರಚನೆ ಆಯಿತು. ಆಗ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗುವುದು ಸಾಧ್ಯವಾಗಲಿಲ್ಲ. ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 
(6 / 7)

ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ವಾಗ್ಮಿ ಎಂದು ಗುರುತಿಸಿಕೊಂಡ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಅವರ ಮಾತಿನಲ್ಲಿ ಅಂತಹ ಗಾಂಭೀರ್ಯ ಇರುತ್ತದೆ. ಕೆಲವೊಮ್ಮೆ ಹಾಸ್ಯ ಚಟಾಕಿಯನ್ನೂ ಹಾರಿಸುತ್ತಾರೆ. 
(7 / 7)

    ಹಂಚಿಕೊಳ್ಳಲು ಲೇಖನಗಳು